ಜಿಯೋ ವೆಲ್‍ನೆಸ್ ನೊಂದಿಗೆ ನಿಮ್ಮ ಜಿಯೋಪಥಿಕ್ ಒತ್ತಡವನ್ನು ನಿರ್ವಹಿಸಿ..! ಹೆಚ್ಚಿನ ಸಮಸ್ಯೆಗಳಿಗೆ – ಆರೋಗ್ಯ, ಕುಟುಂಬ ಮತ್ತು ಹಣಕಾಸು, ಜಿಯೋಪಥಿಕ್ ಒತ್ತಡವು ಒಂದು ಮುಖ್ಯ ಕಾರಣವಾಗಿದೆ. ಈ ಒತ್ತಡಕ್ಕೆ ಪರಿಹಾರವಾಗಿ ಬಂದಿದೆ-‘ಜಿಯೋವೆಲ್‍ನೆಸ್’. ಇದು ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಹಾಗೂ ನಮ್ಮ ಎಲ್ಲಾ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳಿಗೆ ಸರಳ ಪರಿಹಾರವಾಗಿದೆ. ಹಾಗೆಯೇ ವ್ಯಕ್ತಿ / ಕುಟುಂಬದ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.
ಕೋವಿಡ್ – 19 ಇಡೀ ಮಾನವಕುಲಕ್ಕೆ ಒಂದು ವಿಕ್ಷಿಪ್ತ ಹಾಗೂ ವಿಚಿತ್ರವಾದ ಸಂದರ್ಭಗಳನ್ನು ಸೃಷ್ಟಿಸಿದೆ. ಇದು ತಲ್ಲಣ, ಖಿನ್ನತೆ ಮತ್ತು ಆತಂಕವನ್ನು ಸೃಷ್ಟಿಸಿದೆ. ಕೋವಿಡ್ – 19ನ ಸಾಂಕ್ರಾಮಿಕದ ಆಟಾಟೋಪ ಇಷ್ಟಕ್ಕೇ ನಿಂತಿಲ್ಲ. ಆದ್ದರಿಂದ, ಇದರ ಜೊತೆಗೇ ಇದ್ದು ತೊಂದರೆಯಾಗದಂತೆ ಬದುಕಬೇಕಾದ ಅನಿವಾರ್ಯತೆ ಈಗಿದೆ. ಈ ಸಂದರ್ಭದಲ್ಲಿ ನಾವು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಅಗತ್ಯವಿದೆ. ಇದಕ್ಕಾಗಿ ಉತ್ತಮ ಪೌಷ್ಠಿಕಾಂಶದ ಹೊರತಾಗಿ ನಾವು ಸಕಾರಾತ್ಮಕ ಮನೋಭಾವದಿಂದ ದೃಢ ಮನಸ್ಸನ್ನು ಕೂಡಾ ಹೊಂದಿರಬೇಕು.
ಜಿಯೋಪಥಿಕ್ ಸ್ಟ್ರೆಸ್ (ಒತ್ತಡ) ಎಂದರೇನು?
ಇಂದು, ಜಿಯೋಪಥಿಕ್ ಒತ್ತಡವು ಆರೋಗ್ಯ, ಕುಟುಂಬ ಮತ್ತು ಹಣಕಾಸು ಹೆಚ್ಚಿನ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ. ಈ ಋಣಾತ್ಮಕ ಅಣುಗಳು ಹಾಸಿಗೆ, ಮುಖ್ಯ ಬಾಗಿಲು, ಸ್ಟಡಿ ಟೇಬಲ್, ಆಫೀಸ್ ಟೇಬಲ್ ಅಥವಾ ಕುರ್ಚಿ, ಒಲೆ ಇತ್ಯಾದಿಗಳ ಕೆಳಗೆ ಬಂದರೆ ಅದು ಆರೋಗ್ಯಕ್ಕೆ ಸಂಬಂಧಿಸಿದ ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಮನೆ ಅಥವಾ ಕಚೇರಿ 100% ವಾಸ್ತು ಪ್ರಕಾರವೇ ಆಗಿದ್ದರೂ, ಜಿಯೋಪಥಿಕ್ ಒತ್ತಡದ ಜಂಕ್ಷನ್‍ಗಳು (ಋಣಾತ್ಮಕ ಅಣುಗಳು) ಅದರ ಅಡಿಯಲ್ಲಿ ಬಂದರೆ, ಸಮಸ್ಯೆಗಳು ಉದ್ಭವಿಸಬಹುದು. ಈ ಸಮಸ್ಯೆಗೆ ಪರಿಹಾರವಾಗಿ, ವಿಶ್ವದ ಮೊದಲ ಜಿಯೋಪಥಿಕ್ ಸ್ಟ್ರೆಸ್ ರೆಮಿಡಿ ಪೌಡರ್ ಅನ್ನು ಬಳಸಬಹುದು, ಇದು ಜಿಯೋಪಥಿಕ್ ಒತ್ತಡ, ಎಲ್ಲಾ ರೀತಿಯ ನೆಗೆಟಿವ್ (ಋಣಾತ್ಮಕ) ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ವ್ಯಕ್ತಿ / ಕುಟುಂಬದ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.
ಭೂಮಿಯು 7.89 Hz ಆವರ್ತನವನ್ನು ಹೊಂದಿರುವ ಕಾಂತಕ್ಷೇತ್ರವಾಗಿದೆ. ಪ್ರತಿ 8 ಅಡಿ ಮ್ಯಾಗ್ನೆಟಿಕ್ ಗ್ರಿಡ್‍ಗಳು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಪ್ರತಿಯಾಗಿ ಚಲಿಸುತ್ತಿವೆ. ನೆಲದ ಕೆಳಗೆ ನೀರಿನ ಚಲನೆ, ಖನಿಜ, ಕುಹರದ, ದೋಷದ ರೇಖೆಗಳು ಅಥವಾ ಬಿರುಕುಗಳ ನಿಕ್ಷೇಪಗಳಿವೆ. ಈ ಕಾಂತ ಕ್ಷೇತ್ರದ ಆವರ್ತನವು 7.89 Hz ಗಿಂತ ಹೆಚ್ಚಾದರೆ ಮನುಷ್ಯರಿಗೆ, ಪ್ರಾಣಿಗಳಿಗೆ ಹಾಗೂ ಮರಗಿಡಗಳಿಗೂ ಅಪಾಯಕಾರಿಯಾಗಿದೆ. ಈ ಅಪಾಯಕಾರಿ ಕ್ಷೇತ್ರವು ಕಣ್ಣಿಗೆ ಕಾಣುವುದಿಲ್ಲ. ಆದರೆ ಆರೋಗ್ಯ, ಸಂಪತ್ತು, ಸಂಬಂಧ ಹಾಗೂ ಸಾಮರಸ್ಯದ ಮೇಲೆ ಪರಿಣಾಮ ಬೀರುತ್ತದೆ.
ಆಸ್ಪತ್ರೆಯಲ್ಲಿ ರೋಗಿಯ ಹಾಸಿಗೆಯ ಕೆಳಗೆ ಜಿಯೋಪಥಿಕ್ ಸ್ಟ್ರೆಸ್ ಜಂಕ್ಷನ್ ಇದ್ದರೆ ರೋಗಿಯು ಚಿಕಿತ್ಸೆಗೆ ಸ್ಪಂದಿಸುವುದಿಲ್ಲ. ಆಗ ರೋಗಿಯನ್ನು ಒಂದು ಹಾಸಿಗೆಯಿಂದ ಇನ್ನೊಂದು ಹಾಸಿಗೆಗೆ ಸ್ಥಳಾಂತರಿಸುವುದು ಉತ್ತಮ ಪರಿಹಾರ ಕ್ರಮ. ನೀವು ಗಮನಿಸಿರಬಹುದು, ಹೊಸ ಮನೆಗೆ ಸ್ಥಳಾಂತರಗೊಂಡಾಗ ಇದ್ದಕ್ಕಿದ್ದಂತೆ ಆರೋಗ್ಯ, ಸಂಬಂಧ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ನೀವು ಪ್ರವಾಸ ಅಥವಾ ರಜಾದಿನಕ್ಕೆ ಹೋದಾಗ ಇದ್ದಕ್ಕಿದ್ದಂತೆ ನಿಮ್ಮ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಸ್ವಯಂಚಾಲಿತವಾಗಿ ಪರಿಹರಿಸಲ್ಪಡುತ್ತವೆ ಎಂಬುದನ್ನು ನೀವು ಗಮನಿಸಿರಬಹುದು. ಕೆಲವರು ಇದನ್ನು ಬ್ಲ್ಯಾಕ್ ಮ್ಯಾಜಿಕ್ ಎಂದು ಭಾವಿಸುತ್ತಾರೆ, ಅದು ತಪ್ಪು.
ಜಿಯೋಪಥಿಕ್ ಒತ್ತಡದ ಪರಿಣಾಮಗಳು:
ಜಿಯೋಪಥಿಕ್ ಒತ್ತಡ ವಲಯದ ಕೆಲವು ಸೂಚಕಗಳು ಯಾವುವೆಂದರೆ ನಿದ್ರಾಹೀನತೆ, ಪ್ರಕ್ಷುಬ್ಧತೆ, ನಿದ್ರೆಯಲ್ಲಿ ನಡೆಯುವುದು, ಶೀತ, ದಣಿವು, ನಿದ್ರೆಯಲ್ಲಿ ಉಸಿರುಕಟ್ಟುವಿಕೆ, ವಾಂತಿ ಅಥವಾ ಖಿನ್ನತೆ, ವಾಕರಿಕೆ, ನರ ಮತ್ತು ಹೃದಯ ಬಡಿತ ಹೆಚ್ಚಾಗುವುದು, ಹೈಪರ್ ಆಕ್ಟಿವ್ ಇತ್ಯಾದಿಗಳು. ಜಿಯೋಪಥಿಕ್ ಒತ್ತಡದಿಂದ ಬಳಲುತ್ತಿರುವ ಶಾಲಾ ಮಕ್ಕಳು, ಕಲಿಕೆಯಲ್ಲಿ ನಿಧಾನವಾಗಿರುತ್ತಾರೆ ಅಥವಾ ಸೋಮಾರಿಯಾಗಿರಬಹುದು. ಅವರಿಗೆ ಕಲಿತದ್ದು, ಓದಿದ್ದು ಮರೆತುಹೋಗಬಹುದು, ಅಂತರ್ ಮುಖಿ ಮನಸ್ಥಿತಿ ಹೊಂದಿರಬಹುದು, ಚಡಪಡಿಕೆ ಹೆಚ್ಚಿರಬಹುದು, ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳಬಹುದು.
ಆಕ್ರಮಣಕಾರಿ ಅಥವಾ ಸಮಾಜವಿರೋಧಿ ಮತ್ತು ದೀರ್ಘಕಾಲದ ಅನಾರೋಗ್ಯದ ಕಾರಣದಿಂದಾಗಿ ಬಾಧಿತರಾಗಿರಬಹುದು.ಈ ಒತ್ತಡದ ವಲಯವು ಅವರ ಮೇಜಿನ ಮೇಲೆ ಪರಿಣಾಮ ಬೀರಿದಾಗ ಅವರು ಅಲ್ಲಿ ಕಲಿಕೆ ಮಾಡಲು ಅಸಮರ್ಥರಾಹಬಹುದು. ಹಾಗೆಯೇ ಅವರ ಶಾಲೆಯ ಮೇಜಿನಲ್ಲಿದ್ದರೆ ಅವರು ಶಾಲೆಗೆ ಹೋಗುವುದನ್ನು ದ್ವೇಷಿಸುತ್ತಾರೆ. ಕೆಲವರಲ್ಲಿ ಹೊಟ್ಟೆ ನೋವು, ತಲೆಸುತ್ತು, ವಾಂತಿ ಕಾಡಬಹುದು ಅಥವಾ ಅಂತವರು ಆಗಾಗ್ಗೆ ಕಿಟಕಿಯಿಂದ ಹೊರಗೆ ನೋಡುತ್ತಿರುತ್ತಾರೆ.
ಜಿಯೋಪಥಿಕ್ ಒತ್ತಡದ ಬಗ್ಗೆ ಸಂಶೋಧನೆ:
ಪರೀಕ್ಷೆಗಳಲ್ಲಿ ಫೇಲಾಗುವ 95% ಅಡಚಣೆಯು ಇಂತಹ ನೆಗೆಟಿವ್ ವಲಯಗಳ ಉಪಸ್ಥಿತಿಯಿಂದಾಗಿವೆ ಎಂದು ತೋರಿಸಿಕೊಟ್ಟಿವೆ ಅಧ್ಯಯನಗಳು..! ಜಿಯೋಪಥಿಕ್ ಒತ್ತಡ ವಲಯಗಳಲ್ಲಿನ ಹಾಸಿಗೆಗಳನ್ನು ಸ್ಥಳಾಂತರಿಸಿದ ನಂತರ ಮಕ್ಕಳಲ್ಲಿ ನಿದ್ರೆ, ಹಸಿವು ಹೆಚ್ಚಾಗಿ ಆರೋಗ್ಯ ಮತ್ತು ಯೋಗಕ್ಷೇಮ ಸುಧಾರಿಸಿತು. ಅಂತಹ ಮಕ್ಕಳಲ್ಲಿ ಗಮನದ ವ್ಯಾಪ್ತಿ ಮತ್ತು ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗಿ, ಚಿಂತನೆ ಮತ್ತು ಸ್ಮರಣೆ ಸುಧಾರಣೆ ಕಂಡು ಅಂತಿಮವಾಗಿ ಶಾಲೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತಾರೆ.
ಜಿಯೋಪಥಿಕ್ ಒತ್ತಡವನ್ನು ತೆಗೆದುಹಾಕುವುದು ರೋಗನಿರೋಧಕ ವ್ಯವಸ್ಥೆಗಳು ಬಲಗೊಳ್ಳಲು ಸಹಾಯ ಮಾಡುತ್ತದೆ, ರೋಗಗಳು ಅಥವಾ ಇತರ ಸಮಸ್ಯೆಗಳನ್ನು ನಿಭಾಯಿಸಲು ನಮಗೆ ಅನುವು ಮಾಡಿಕೊಡುತ್ತದೆ. 80 ವರ್ಷಗಳಿಂದ, ಜಿಯೋಪಥಿಕ್ ಒತ್ತಡದ ಬಗ್ಗೆ ಜರ್ಮನ್ ವೈದ್ಯಕೀಯ ವೃತ್ತಿಯಲ್ಲಿ ಸಂಶೋಧನೆಗಳು ನಡೆದಿವೆ, ಮತ್ತು ಇದು ಅತ್ಯಂತ ಗಂಭೀರ ಮತ್ತು ದೀರ್ಘಕಾಲೀನ ಕಾಯಿಲೆಗಳು ಮತ್ತು ಮಾನಸಿಕ ಪರಿಸ್ಥಿತಿಗಳೊಂದಿಗೆ ಸಾಮಾನ್ಯ ಅಂಶವಾಗಿ ಸಂಬಂಧಿಸಿದೆ ಎಂದು ಅಧ್ಯಯನದಿಂದ ಕಂಡುಬಂದಿದೆ. ಯು.ಕೆ.ಯ ಪ್ರಸಿದ್ಧ ಜಿಯೋಮ್ಯಾನ್ಸರ್ ಆಗಿರುವ ರೋಲ್ಫ್ ಗಾರ್ಡನ್, ದಾಖಲಿಸಿರುವಂತೆ ಜಿಯೋಪಥಿಕ್ ಒತ್ತಡದ ತಾಣಗಳಿಂದ ಕ್ಯಾನ್ಸರ್ ಪಡೆದ ರೋಗಿಗಳ ಮೇಲೆ ಹತ್ತಾರು ಪ್ರಕರಣಗಳಲ್ಲಿ ವೈದ್ಯರು ತೋರಿಸಿರುವದನ್ನು ವಿವರಿಸುತ್ತದೆ. (ಗಾರ್ಡನ್ 2017). ಎರಡು ಅಥವಾ ಹೆಚ್ಚಿನ ಜಿಯೋಪಥಿಕ್ ಒತ್ತಡದ ರೇಖೆಗಳು ದಾಟಿದಲ್ಲಿ ಕ್ಯಾನ್ಸರ್ ಗೆಡ್ಡೆಗಳು ಹೆಚ್ಚಾಗಿ ಬೆಳೆಯುತ್ತವೆ ಎಂದು ಸಹ ತಿಳಿದುಬಂದಿದೆ.
ಗೋರ್ಡಾನ್ (2017), ತನ್ನ ವ್ಯಾಪಕ ಅಧ್ಯಯನಗಳಿಂದ ಒಬ್ಬರು ಭೌಗೋಳಿಕ ಒತ್ತಡದ ಸ್ಥಳಗಳಲ್ಲಿ ಮಲಗಿದ್ದರೆ ಅಥವಾ ದೀರ್ಘಕಾಲ ಉಳಿಯದಿದ್ದರೆ ಕ್ಯಾನ್ಸರ್ ಬರುವ ಸಾಧ್ಯತೆ ಇಲ್ಲ ಎಂದು ಹೇಳುತ್ತಾರೆ. ಡಲ್ವಿಚ್ ಹೆಲ್ತ್ ಸೊಸೈಟಿಯ ಅಮೇರಿಕನ್ ವಿಜ್ಞಾನಿಗಳಿಂದ ಕೆಳಗೆ ಕೊಟ್ಟಿರುವ ಅಂಕಿ ಅಂಶಗಳು ಮೊದಲ ನೋಟದಲ್ಲಿ ಬಹಳ ಬೆರಗುಗೊಳಿಸುತ್ತದೆ. ಈ ವಿಜ್ಞಾನಿಗಳು ಅನಾರೋಗ್ಯದಿಂದ ಬಳಲುತ್ತಿರುವ 25 ಸಾವಿರಕ್ಕೂ ಹೆಚ್ಚು ಜನರ ಬಗ್ಗೆ ದೊಡ್ಡ ಅಧ್ಯಯನವನ್ನು ನಡೆಸಿದರು ಮತ್ತು ಈ ಕೆಳಗಿನ ಗುಂಪುಗಳು ಭೌಗೋಳಿಕವಾಗಿ ಒತ್ತಡಕ್ಕೊಳಗಾಗಿದ್ದಾರೆ (ಜಿಯೋಪಥಿಕಲ್ ಸ್ಟ್ರೆಸ್) ಎಂದು ತೀರ್ಮಾನಿಸಿದರು.
ಜಿಯೋಪಥಿಕಲ್ ಸ್ಟ್ರೆಸ್ ಅಧ್ಯಯನ:
1. 100% ಜನರು ಎರಡನೇ ಹಂತದ ಕ್ಯಾನ್ಸರ್ ಪಡೆಯುತ್ತಾರೆ.
2.ಜಿಯೋಪಥಿಕಲ್ ಸ್ಟ್ರೆಸ್ ಇರುವ ಸ್ಥಳದಲ್ಲಿ ನಿದ್ರಿಸುವ ಅಥವಾ ಕೆಲಸ ಮಾಡುವ ಶೇಕಡಾ 95ರಷ್ಟು ಜನರು ಕ್ಯಾನ್ಸರ್‍ಗೆ ತುತ್ತಾಗುತ್ತಾರೆ.
3. 95% ರಷ್ಟು ಮಕ್ಕಳು ಹೈಪರ್ ಆಕ್ಟಿವ್ ಆಗಿದ್ದು ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುತ್ತಾರೆ ಅಥವಾ ಅವರನ್ನು ನಿಯಂತ್ರಿಸಲು ಕಷ್ಟವಾಗುತ್ತದೆ (ಮಕ್ಕಳು ಜಿಯೋಪಥಿಕಲ್ ಸ್ಟ್ರೆಸ್‍ಗೆ ಒಳಗಾದರೆ ವಿಶೇಷವಾಗಿ ಸೂಕ್ಷ್ಮವಾಗಿರುತ್ತಾರೆ)
4. ಜಿಯೋಪಥಿಕಲ್ ಸ್ಟ್ರೆಸ್ ಪಡೆಯುವ 95% ಏಡ್ಸ್ಗೆ ತುತ್ತಾಗುತ್ತಾರೆ.
5. ಕೋಟ್ ಡೆತ್ / ಎಸ್‍ಐಡಿಎಸ್ ನಿಂದ ಮರಣ ಹೊಂದಿದ 90% ಮಕ್ಕಳು ಜಿಯೋಪಥಿಕಲ್ ಸ್ಟ್ರೆಸ್‍ನಿಂದ ಬಳಲಿದವರು.
6. ಜಿಯೋಪಥಿಕಲ್ ಸ್ಟ್ರೆಸ್‍ನಿಂದಾಗಿಯೇ 80% ಪಾಲಕರು/ ಪೋಷಕರು ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುವರು.
7. 80% ವಿಚ್ಛೆದನವು ಒಬ್ಬರು ಅಥವಾ ಇಬ್ಬರೂ ಪಾಲುದಾರರ ಜಿಯೋಪಥಿಕಲ್ ಸ್ಟ್ರೆಸ್‍ನಿಂದಾಗುತ್ತದೆ.
8. 80% ಶಿಶುಗಳನ್ನು ಹೊಂದಿರದ ದಂಪತಿಗಳಿಗೆ ಕಾರಣವಾಗಿದೆ ಜಿಯೋಪಥಿಕಲ್ ಸ್ಟ್ರೆಸ್.
9. 80% ಮಹಿಳೆಯರು ಜಿಯೋಪಥಿಕಲ್ ಸ್ಟ್ರೆಸ್‍ನಿಂದ ಗರ್ಭಪಾತ ಹೊಂದಿರುತ್ತಾರೆ.
10. ಜಿಯೋಪಥಿಕಲ್ ಸ್ಟ್ರೆಸ್‍ನಿಂದ 70% ಜನರು ವೈರಲ್ ಆಯಾಸದಿಂದ ಬಳಲುತ್ತಾರೆ.
11. 70% ಜನರು ಆಹಾರ ಅಥವಾ ಪಾನೀಯದ ಅಲರ್ಜಿಗೆ ಒಳಗಾಗಲು ಕಾರಣ ಜಿಯೋಪಥಿಕಲ್ ಸ್ಟ್ರೆಸ್.
* ಉಲ್ಲೇಖ (ಓಲ್ಸೆನ್ ಮತ್ತು ಬೆನಿಸ್ 2017).
ಜಿಯೋಪಥಿಕ್ ಸ್ಟ್ರೆಸ್ ಅಥವಾ ಒತ್ತಡದಿಂದಾಗಿ ಅನೇಕ ರೋಗಗಳು ಹಾಗೂ ಲಕ್ಷಣಗಳನ್ನು ನಾವು ಜನರಲ್ಲಿ ಕಾಣಬಹುದಾಗಿದ್ದು ಇದು ಜೀವಿಯ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ, ದೇಹದ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸದಂತೆ ತಡೆಯುತ್ತವೆ.
‘ಜಿಯೋವೆಲ್‍ನೆಸ್’- ಜಿಯೋಪಥಿಕ್ ಒತ್ತಡ ಪರಿಹಾರ ಪುಡಿ:
ಜಿಯೋಪಥಿಕ್ ಒತ್ತಡದಿಂದ ಉಂಟಾಗುವ ಎಲ್ಲಾ ಸಮಸ್ಯೆಗಳಿಗೆ ಸರಳ ಪರಿಹಾರವೆಂದರೆ ‘ಜಿಯೋವೆಲ್‍ನೆಸ್’ . ‘ಜಿಯೋ ವೆಲ್‍ನೆಸ್’ ವಿಶ್ವದ ಮೊದಲ ಜಿಯೋಪಥಿಕ್ ಸ್ಟ್ರೆಸ್ ರೆಮಿಡಿ ಪೌಡರ್ ಆಗಿದ್ದು, ಇದನ್ನು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಬಹುದು.
‘ಜಿಯೋ ವೆಲ್‍ನೆಸ್’ ಉತ್ಪನ್ನ ವಿವರಗಳಿಗಾಗಿ ಸಂಪರ್ಕಿಸಿ :
Ayush Arogya foundation : 819755 4373 / 98440 60592