ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಆರೋಗ್ಯ ಸ್ಥಿತಿ ಗಂಭೀರ.. ಐಸಿಯುನಲ್ಲಿ ಇಸಿಎಂಒ ಚಿಕಿತ್ಸೆ..!

ಗಾಯಕ ಎಸ್ ಪಿ ಬಾಲಸುಬ್ರಮಣ್ಯಂಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೊರೋನಾ ಸೋಂಕಿನಿಂದ ಬಳಲುತ್ತಿರುವ ಎಸ್‍ಪಿಬಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಆರೋಗ್ಯದಲ್ಲಿ ಯಾವುದೇ ಗಮನಾರ್ಹ ಚೇತರಿಕೆ ಇಲ್ಲ ಎಂದುವೈದ್ಯರು ತಿಳಿಸಿದ್ದಾರೆ.

SP-Balasubramanyamಚೆನ್ನೈ:   ಗಾಯಕ, ಗಾನಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಇದೀಗ ಚಿಂತಾಜನಕವಾಗಿದೆ. ಕೊರೋನಾ ಸೋಂಕಿನಿಂದ ಬಳಲುತ್ತಿರುವ ಎಸ್‍ಪಿಬಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಜ್ಞ ವೈದ್ಯರು ಎಸ್‍ಪಿಬಿ ಆರೋಗ್ಯದ ಮೇಲೆ ತೀವ್ರ ನಿಗಾ ಇಟ್ಟಿದ್ದು, ವೆಂಟಿಲೇಟರ್ ತೆಗೆಯದೇ ಟ್ರೀಟ್ಮೆಂಟ್‍ ಮಾಡುತ್ತಿದ್ದಾರೆ. ಅಗಸ್ಟ್ 13ರಿಂದ ಎಸ್‍ಪಿಬಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕಳೆದ 7 ದಿನಗಳಿಂದ ಅವರು ಐಸಿಯುನಲ್ಲೇ ಇದ್ದಾರೆ. ಆರೋಗ್ಯದಲ್ಲಿ ಯಾವುದೇ ಗಮನಾರ್ಹ ಚೇತರಿಕೆ ಇಲ್ಲ ಎಂದುವೈದ್ಯರು ತಿಳಿಸಿದ್ದಾರೆ.

ಎಸ್‍ಪಿಬಿ ರವರ ಆರೋಗ್ಯದ ಬಗ್ಗೆ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರು ಆಂತಕಕ್ಕೊಳಗಾಗಿದ್ದಾರೆ. ತಂದೆಯ ಆರೋಗ್ಯದ ಬಗ್ಗೆ ಎಸ್‍ಪಿಬಿಪುತ್ರ ಎಸ್.ಪಿ ಚರಣ್‍ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್‍ ಮಾಡುವುದರ ಮೂಲಕ ಮಾಹಿತಿ ನೀಡುತ್ತಿದ್ದಾರೆ. ಈ ಮಧ್ಯೆ ಟಾಲಿವುಡ್‍ ಮೆಗಾಸ್ಟಾರ್ ಚಿರಂಜೀವಿ. ಸೂಪರ್‍ಸ್ಟಾರ್ ರಜನಿಕಾಂತ್‍ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಲವರು ಎಸ್‍ಪಿಬಿ ಅವ್ರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.

ಪ್ರಸ್ತುತ ಎಸ್ ಪಿ ಬಾಲಸುಬ್ರಮಣ್ಯಂ ರವರಿಗೆ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಇಸಿಎಂಒ ಚಿಕಿತ್ಸೆ ನಡೆಸಲಾಗುತ್ತಿದೆ. ಇಸಿಎಂಒ ಎಂದರೆ ಪೂರ್ಣಾರ್ಥದಲ್ಲಿ Extracorporeal membrane oxygenationECMO.  ನೋಡಲು ಥೇಟ್ ಓಪನ್ ಹಾರ್ಟ್ ಸರ್ಜರಿ ಮಾಡುವಾಗ ಉಪಯೋಗಿಸಲಾಗುವ ಹೃದಯ ಮತ್ತು ಶ್ವಾಸಕೋಶದ ಬೈಪಾಸ್ ಯಂತ್ರದಂತೆ ಕಂಡು ಬರುತ್ತದೆ. ಈ ಯಂತ್ರದ ಕೆಲಸ ಎಂದರೆ ವ್ಯಕ್ತಿಯ ದೇಹದಲ್ಲಿ ಇರುವ ಹೃದಯ ಮತ್ತು ಶ್ವಾಸಕೋಶಗಳಿಗೆ ಸಂಪೂರ್ಣವಾಗಿ ವಿಶ್ರಾಂತಿಯನ್ನು ಒದಗಿಸಿ ಆತನ ದೇಹದ ರಕ್ತವನ್ನು ದೇಹದ ಹೊರಗಿನಿಂದ ಆಮ್ಲಜನಕವನ್ನು ಪೂರೈಕೆ ಮಾಡಿ ದೇಹದ ಎಲ್ಲಾ ಭಾಗಗಳಿಗೆ ಪೂರೈಕೆ ಆಗುವಂತೆ ಪಂಪ್ ಮಾಡುತ್ತದೆ.

ತಮ್ಮ 74 ವರ್ಷದ ಸುದೀರ್ಘ ಕಲಾ ಸೇವೆಯಲ್ಲಿ ಹಾಡುಗಾರನಾಗಿ, ನಟನಾಗಿ, ಸಂಗೀತ ನಿರ್ದೇಶಕನಾಗಿ ಹಲವಾರು ಆಯಾಮಗಳಲ್ಲಿ ಕೆಲಸ ಮಾಡಿದ ಅನುಭವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗಿದೆ. ಯಾರ ಬಳಿಯೂ ಯಾವ ವಿಚಾರಕ್ಕೂ ಯಾವುದೇ ದ್ವೇಷವನ್ನು ಕಟ್ಟಿಕೊಳ್ಳದೆ ಅಜಾತ ಶತ್ರುವಾಗಿ ಬಾಳಿ ಬದುಕಿದ ಮತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಎಸ್ ಪಿ ಬಿ ಇಂದು ಕೆಟ್ಟ ಹೆಮ್ಮಾರಿಯಾದ ಕೊರೊನಾ ಹಾವಳಿಯಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇಷ್ಟು ವರ್ಷಗಳ ಕಾಲ ನಮ್ಮನ್ನೆಲ್ಲಾ ರಂಜಿಸಿದ ಎಸ್ ಪಿ ಬಾಲಸುಬ್ರಮಣ್ಯಂ ತಮಗೆ ಬಂದಿರುವ ಕೊರೋನಾ ಸಂಕಷ್ಟದಿಂದ ಬಹಳ ಬೇಗನೆ ಚೇತರಿಕೆ ಕಂಡು ಹೊರ ಬಂದು ನಮ್ಮನ್ನೆಲ್ಲಾ ಇನ್ನಷ್ಟು ಕಾಲ ತಮ್ಮ ಹಾಡುಗಾರಿಕೆಯ ಚಾತುರ್ಯದಿಂದ ರಂಜಿಸಲಿ ಎಂಬುದೇ ಪ್ರತಿಯೊಬ್ಬ ಭಾರತೀಯ ನಾಗರಿಕನ ಆಶಯ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!