ವಾಯುದೋಷಕ್ಕೆ ಮನೆಮದ್ದುಗಳು ಯಾವುವು?

ಬಹಳ ಜನರು ವಾಯುದೋಷದಿಂದ ನರಳೋದು, ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗೋದು ಸಾಮಾನ್ಯ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೇನೋ, ದೇಹದ ಗುದದ್ವಾರದಿಂದ ಹೊರಬರುವ ಶಬ್ದಸಹಿತ-ಶಬ್ದರಹಿತ, ವಾಸನೆಯುಕ್ತ-ವಾಸನೆ ಇರದ ಅಪಾನವಾಯು ಬಹಳ ಜನರಿಗೆ ಬಹಳ ಬಾರಿ ಕಾಡುವ ಸಮಸ್ಯೆ. ಬಂದಾಗ ತಡೆದುಕೊಳ್ಳಲೂ ಆಗದೇ, ಕಷ್ಟಪಟ್ಟು ಕೆಲಕಾಲ ತಡೆದರೂ, ಹೆಚ್ಚು ಒತ್ತಡದಿಂದ ಅದು ಬೇಗ ಹೊರಬರುತ್ತದೆ.ಕರುಳುಗಳಲ್ಲಿ ಹುದುಗಿರುವ ವಾಯು ಅಹಿತಕರ ಅನುಭವ ನೀಡುತ್ತದೆ. ಇದರಿಂದ ತೀವ್ರ ನೋವು, ಸೆಡೆತ, ವಾತ, ಬಿಗಿತ, ಉಬ್ಬರ ಉಂಟಾಗಬಹುದು. ಬಹಳ ಜನ ಪ್ರತಿದಿನ 13ರಿಂದ 21 ಸಲ ಅಪಾನ ವಾಯು ಹೊರಬಿಡುತ್ತಾರೆ. ಅದನ್ನು ಕಷ್ಟಪಟ್ಟು ಒಳಗೇ ತಡೆದರೆ ಅದು ಹೊರಹೋಗದಿದ್ದರೆ ಭೇದಿ ಅಥವಾ ಮಲಬದ್ಧತೆ ಆಗಬಹುದು.ವಾಯುವಿನಿಂದಾಗುವ ನೋವು ಎಷ್ಟು ಹೆಚ್ಚಿರುತ್ತದೆಯೆಂದರೆ, ವೈದ್ಯರು ಇದರ ಮೂಲಕಾರಣವನ್ನು ಕರುಳುವಾಳ (ಅಪೆಂಡಿಸೈಟಿಸ್), ಪಿತ್ತಗಲ್ಲುಗಳು ಅಥವಾ ಹೃದಯ ಕಾಹಿಲೆ ಎಂದು ತಪ್ಪಾಗಿ ಗ್ರಹಿಸುತ್ತಾರೆ.
ಅನೇಕ ಮನೆ ಪರಿಹಾರಗಳು ಈ ವಾಯು ಬಿಡುಗಡೆಗೆ ಅಥವಾ ಅದು ಹೆಚ್ಚಾಗುವುದನ್ನು ತಡೆಯಲು ನೆರವು ನೀಡಬಲ್ಲವು.

  • ಅದು ಹೊರಗೆ ಹೋಗಲು ಬಿಡಿ: ವಾಯು ತಡೆದರೆ ಉಬ್ಬರ, ಅನಾನುಕೂಲ ಹಾಗೂ ನೋವು ಉಂಟಾಗಬಹುದು. ಸುಲಭವಾದ ವಿಧಾನ ವಾಯುವನ್ನು ಹೊರ ಹೋಗಲು ಬಿಟ್ಟುಬಿಡಿ.
  • ಮಲವಿಸರ್ಜನೆ ಮಾಡಿ: ಮಲವಿಸರ್ಜನೆಯಾದಾಗ, ಮಲದ ಚಲನೆಯಿಂದ ವಾಯು ಬಿಡುಗಡೆಯಾಗುತ್ತದೆ. ಕರುಳುಗಳಲ್ಲಿ ಹುದುಗಿದ ವಾಯು ಸಾಮಾನ್ಯವಾಗಿ ಬಿಡುಗಡೆಯಾಗುತ್ತದೆ.
  • ನಿಧಾನವಾಗಿ ತಿನ್ನಿ: ಅತಿವೇಗದಿಂದ ತಿನ್ನುವುದು ಚಲನೆಯಲ್ಲಿ ತಿನ್ನುವುದರಿಂದ ಆಹಾರದೊಂದಿಗೆ ವ್ಯಕ್ತಿ ಆಹಾರದಷ್ಠೆ ಗಾಳಿ ಸ್ವೀಕರಿಸಿ ವಾಯು ಸಂಬಂಧಿ ನೋವಿಗೆ ಕಾರಣೀಭೂತನಾಗುತ್ತಾನೆ.ಆಹಾರದ ಪ್ರತಿ ಅಂಗುಳನ್ನೂ ಅಗಿಯುವ ಮೂಲಕ ತಿನ್ನುವುದರಿಂದ, ವೇಗವಾಗಿ ತಿನ್ನುವವರು ನಿಧಾನ ಮಾಡುತ್ತಾರೆ. ಆಹಾರವನ್ನು ಈ ರೀತಿ ಚೆನ್ನಾಗಿ ಸುರಿಸುವುದರಿಂದ ಜೀರ್ಣತೆಗೆ ಸಹಾಯಕಾರಿ. ಅಲ್ಲದೇ ಉಬ್ಬರ, ಹಾಗೂ ಅಜೀರ್ಣಗಳಂತಹ ಅನೇಕ ಸಮಸ್ಯೆಗಳನ್ನು ತಡೆಯಬಹುದು.
  • ಮೆಲ್ಲುವ ಅಂಟಿನ ಪದಾರ್ಥ ಬೇಡ: ಚ್ಯೂಯಿಂಗ್ ಗಮ್ ತಿನ್ನುವಾಗ ಗಾಳಿಯನ್ನು ನುಂಗುವುದರಿಂದ ಗಾಳಿ ಹಾಗೂ ವಾಯು ನೋವು ಹೆಚ್ಚಾಗುತ್ತದೆ. ಸಕ್ಕರೆಯಿಂದ ಗಮ್‍ನಲ್ಲಿ, ಕೃತಕ ಸಿಹಿ ಪದಾರ್ಥಗಳಿದ್ದು ಅವು ಉಬ್ಬರ ಹಾಗೂ ವಾಯು ಹೆಚ್ಚಿಸುತ್ತವೆ.
  • ಹೀರು ಕಡ್ಡಿ ಬಿಡಿ: ಹೀರು ಕಡ್ಡಿ ಮೂಲಕ ಯಾವುದೇ ಪೇಯ -ಪಾನೀಯ ಕುಡಿಯುವುದರಿಂದ ವ್ಯಕ್ತಿ ಗಾಳಿ ನುಂಗುತ್ತಾನೆ. ಹೀಗಾಗಿ ಬಾಟಲಿಯಿಂದ ನೇರವಾಗಿ ಕುಡಿಯುವುದರಿಂದ ಇದನ್ನು ತಪ್ಪಿಸಬಹುದು.
  • ಧೂಮ್ರಪಾನ ಬಿಡಿ: ಸಾಂಪ್ರದಾಯಿಕ ಅಥವಾ ವಿದ್ಯುತ್ ಚಾಲಿತ ಸಿಗರೇಟ್‍ಗಳ ಧೂಮ್ರಪಾನ ಮಾಡುವುದರಿಂದ ಗಾಳಿ ಜೀರ್ಣಾಂಗ ಮಾರ್ಗ ಹೆಚ್ಚುತ್ತದೆ. ಧೂಮ್ರಪಾನದ ಆರೋಗ್ಯ ಸಮಸ್ಯೆಗಳಿಂದ ಅದನ್ನು ಬಿಡುವುದೇ ಉತ್ತಮ.
  • ಇಂಗಾಲಾಮ್ಲ ಇರದ ಪೇಯಗಳನ್ನು ಆಯ್ದುಕೊಳ್ಳಿ: ಇಂಗಾಲಾಮ್ಲ ಇರುವ ಪೇಯಗಳು, ಸೋಡಾಗಳು, ನೊರೆ ಎಬ್ಬಿಸುವ ನೀರು ಹೊಟ್ಟೆಗೆ ಹೆಚ್ಚು ವಾಯು ಕಳಿಸುತ್ತದೆ. ಹೀಗಾಗಿ ಉಬ್ಬರ-ನೋವು ಉಂಟಾಗುತ್ತದೆ.
  • ಸಮಸ್ಯಾತ್ಮಕ ಆಹಾರಗಳನ್ನು ತ್ಯಜಿಸಿ: ವಿವಿಧ ವ್ಯಕ್ತಿಗಳಿಗೆ ವಿವಿಧ ಆಹಾರಗಳು ಸಮಸ್ಯಾತ್ಮಕ ಆಗಬಹುದು. Àಆಹಾರ ಪದಾರ್ಥಗಳು ಪದೇ ಪದೇ ವಾಯು ಹೆಚ್ಚಿಸುತ್ತವೆ. ಯಾವುದು ವಾಯು ಹೆಚ್ಚಿಸುತ್ತವೋ, ಅವುಗಳನ್ನು ಸರಿಯಾಗಿ ಗುರುತಿಸಲು, ತಿನ್ನುವ ಆಹಾರದ ಬಗ್ಗೆ ಒಂದು ಡೈರಿ ಇಟ್ಟುಕೊಳ್ಳಿ.
  • ಮಸಾಲೆ ಪದಾರ್ಥಗಳು: ಕೃತಕ ಸಿಹಿ ಪದಾರ್ಥಗಳು, ತರಕಾರಿಗಳು, ಅನೇಕ ಆರೋಗ್ಯ ಲಾಭಗಳನ್ನು ಒದಗಿಸುತ್ತದೆ. ಇವುಗಳನ್ನು ಸಂಪೂರ್ಣವಾಗಿ ತ್ಯಜಿಸದೇ, ಇವುಗಳನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಅಥವಾ ಇವುಗಳನ್ನು ಬಳಸಿ ವಿಭಿನ್ನ ರೀತಿಯಲ್ಲಿ ಆಹಾರ ತಯಾರಿಸಿ. ಬ್ರೊಕೋಲಿ (ಒಂದು ರೀತಿಯ ಕೋಸು ಗಡ್ಡೆ) ಕೋಸು, ಹೂಕೋಸು, ಹೈನುಗಾರಿಕೆ ಉತ್ಪಾದನೆಗಳು, ನಾರು ಪೂರೈಸುವ ಪೇಯಗಳು ಹಾಗೂ ಉತ್ಪಾದನೆಗಳು, ಕರಿದ ಪದಾರ್ಥಗಳು, ಬೆಳ್ಳುಳ್ಳಿ, ಅತಿ ಹೆಚ್ಚು ಕೊಬ್ಬಿನ ಪದಾರ್ಥಗಳು, ಹುರುಳೀಕಾಯಿ ಹಾಗೂ ಮಸೂರ ಅವರೆ ಒಳಗೊಂಡ ದ್ವಿದಳ ಧಾನ್ಯಗಳ ಗುಂಪು, ಒಣದ್ರಾಕ್ಷಿ ಹಾಗೂ ಒಣದ್ರಾಕ್ಷಿರಸ. ರಕ್ತಹೀನತೆ ಇರುವವರು, ಕಬ್ಬಿಣದ ಅಂಶ ಇರುವ ಬೆಂಬಲ ತgಕಾರಿಗಳೊಂದಿಗೆ ಇದನ್ನು ತೆಗೆದುಕೊಳ್ಳಬೇಡಿ.
  • ಚಹಾ ಕುಡಿಯಿರಿ: ಕೆಲವು ಔಷಧೀಯ ಸಸ್ಯಗಳ ಚಹಾ ಜೀರ್ಣಶಕ್ತಿ ವೃದ್ಧಿಸಿ, ವಾಯು ನೋವನ್ನು ಕಡಿಮೆ ಮಾಡುತ್ತವೆ. ಅವೇ ಸೋಂಪು, ಚಾಮೋಮೈಲ್, ಶುಂಠಿ, ಪುದೀನ. ಸೋಂಪು ಮಲವಿಸರ್ಜನೆ ಉತ್ತೇಜಿಸುವ ಮೃದು ಔಷಧಿ. ವಾಯುವಿನೊಂದಿಗೆ ಭೇಧಿ ಇದ್ದಾಗ ಇದು ಬೇಡ. ಆದರೆ ಮಲಬದ್ಧತೆ ಇದ್ದರೆ ಇದು ಅನುಕೂಲಕಾರಿ.
  • ಬಡೇಸೊಪ್ಪು: ಒಂದು ಚಮಚ ಬಡೇಸೊಪ್ಪು ಅಗಿಯುವುದು ಜನಪ್ರಿಯ ಸ್ವಾಭಾವಿಕ ಪರಿಹಾರ. ಆದರೆ ಗರ್ಭಿಣಿಯರು ಹಾಗೂ ಹಾಲೂಡಿಸುವ ತಾಯಂದಿರು ಇದ್ನನು ಬಳಸಬಾರದು.
  • ಪುದೀನಾ ಎಣ್ಣೆ ಬೆಂಬಲ: ಪುದೀನಾ ಎಣ್ಣೆ, ಉಬ್ಬರ, ಮಲಬದ್ಧತೆ ಹಾಗೂ ವಾಯುವಿಗೆ ಪರಿಹಾರದಮೆಂತೆ ಪೆಪ್ಪರ್‍ಮೆಂಟ್ ಇರುವ ಮುಚ್ಚಿಡದ ಮಾತ್ರೆಗಳು, ಜೀರ್ಣಾಂಗ ವ್ಯವಸ್ಥೆಯಲ್ಲಿ ಬೇಗ ಕರುಗುವುದರಿಂದ ಹೃದಯ ಉರಿ ಆಗಬಹುದು.
  • ಲವಂಗದ ಎಣ್ಣೆ: ಜೀರ್ಣತೆ ಸಮಸ್ಯೆಗಳಿಗೆ ಸಾಂಪ್ರದಾಯಿಕವಾಗಿ ಲವಂಗದ ಎಣ್ಣೆ ಬಳಸುತ್ತಾರೆ.ಇದು ಉಬ್ಬರ, ವಾಯು ಹಾಗೂ ಅಜೀರ್ಣ ಪರಿಹರಿಸಲು ಉಪಕಾರಿ. ಒಳ ಹುಣ್ಣುಗಳ ವಿರುದ್ಧವೂ ಇದು ಹೋರಾಡುತ್ತದೆ. ಊಟದ ನಂತರ ಲವಂಗದ ಎಣ್ಣೆ ಸೇವಿಸಿದರೆ ಜೀರ್ಣಕಾರಿ ರಸಗಳನ್ನು ಹೆಚ್ಚಿಸಿ, ಕರುಳುಗಳಲ್ಲಿಯ ವಾಯು ಕಡಿಮೆ ಮಾಡುತ್ತದೆ.
  • ಶಾಖ ಬಳಸಿ: ವಾಯು ನೋವು ಬಂದಾಗ ಹೊಟ್ಟೆ ಮೇಲೆ ಬಿಸಿನೀರಿರುವ ಬಾಟಲಿ ಅಥವಾ ಶಾಖದ ಪ್ಯಾಡ್ ಇಡಿ, ಈ ಬಿಸಿ ಹೊಟ್ಟೆಯ ಸ್ನಾಯುಗಳಿಗೆ ಆರಾಮ ನೀಡಿ ಕರುಳೂಗಳ ಮೂಲಕ ವಾಯು ಚಲಿಸಲು ನೆರವು ನೀಡುತ್ತದಲ್ಲದೇ, ನೋವಿನ ಅರಿವು ಕಡಿಮೆ ಮಾಡುತ್ತದೆ
  • ಜೀರ್ಣತೆ ವಿಷಯಗಳನ್ನು ಗಮನಿಸಿ: ತೀವ್ರ ಹೊಟ್ಟೆ ನೋವಿನ ಮಲವಿಸರ್ಜನೆಯ ವಿಶಿಷ್ಟ ಲಕ್ಷಣ ಇದ್ದವರು ವಾಯು ಸಮಸ್ಯೆ ಎದುರಿಸುತ್ತಾರೆ. ಇವರು ಜೀವನ ಶೈಲಿ ಬದಲಾವಣೆಗಳು ಹಾಗೂ ಧ್ಯಾನದಿಂದ ಬಾಳಿನ ಗುಣಮಟ್ಟ ಸುಧಾರಿಸಬಹುದು.
  • ಹಾಲ್ಸಕ್ಕರೆಗೆ ಸಹನೆ ಇಲ್ಲದವರು: ಕೆಲವರಿಗೆ ಹಾಲಿನಲ್ಲಿಯ ಲ್ಯಾಕ್ಟೋಸ್ ಅಂಶ ಜೀರ್ಣವಾಗುವುದಿಲ್ಲ. ಅವರಿಗೆ ವಾಯು ನೋವು ಪದೇ ಪದೇ ಬರುತ್ತದೆ. ಅವರು ಲ್ಯಾಕ್ಟೋಸ್ ಬಳಸಬಾರದು.
  • ಸೇಬು ರಸ ಹಾಗೂ ಹುಳಿನೀರನ್ನು ಬೆರಸಿ: ಇದರ ಬಳಕೆ ಹೊಟ್ಟೆಯಲ್ಲಿ ಆಮ್ಲ ಹಾಗೂ ಜೀರ್ಣಕಾರಿ ರಸಗಳ ಉತ್ಪಾದನೆಗೆ ನೆರವು ನೀಡುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚ ವಿನಗರ್ ಹಾಕಿ ಊಟಕ್ಕೆ ಮೊದಲು ಕುಡಿದರೆ ಒಳ್ಳೆಯದು. ಆದರೆ ನಂತರ ನೀರಿನಿಂದ ಬಾಯಿ ಚೆನ್ನಾಗಿ ತೊಳೆಯಬೇಕು. ಇಲ್ಲದಿದ್ದರೆ ವಿನಿಗರ್‍ದಿಂದ ಹಲ್ಲಿನ ಮೇಲಿನ ಪದರು ನಾಶವಾಗುತ್ತದೆ.
  • ಕ್ರಿಯಾತ್ಮಕ ಇದ್ದಿಲನ್ನು ಬಳಸಿ: ಆರೋಗ್ಯ ಆಹಾರ ಅಂಗಡಿಗಳು ಅಥವಾ ಔಷಧಾಲಯಗಳಲ್ಲಿ ಕ್ರಿಯಾತ್ಮಕ ಎಂಬ ಸ್ವಾಭಾವಿಕ ಉತ್ಪನ್ನ ಸಿಗುತ್ತದೆ. ಇದು ಮಲವನ್ನು ಕಪ್ಪು ಬಣ್ಣಕ್ಕೆ ತಿರುಗಿಸಿದರೂ ಚಿಂತಿಸಬೇಡಿ.
  • ಏಕಾಣು ಜೀವಿ (probiotics) ಲಾಭಕಾರಿ: ಆರೋಗ್ಯವಂತ ಸಸ್ತನಿಗಳ ಕರುಳಿನ ಭಾಗದಲ್ಲಿ ಕಂಡು ಬರುವ ಲಾಭಕಾರಿ ಏಕಾಣು ಜೀವಿ (probiotics) ತೆಗೆದುಕೊಳ್ಳಿ.ಇದು ಹೊಟ್ಟೆಗೆ ಉಪಕಾರಿ ಹಾಗೂ ಲಾಭಕಾರಿ. ಬ್ಯಾಕ್ಟೀರಿಯಾಗಳನ್ನು ಸೇರಿಸುತ್ತದೆ. ಇದು ಸೋಂಕಿನ ಭೇದಿಯೊಂದಿಗೆ ಇತರ ಜೀರ್ಣವ್ಯವಸ್ಥೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ.
  • ವ್ಯಾಯಾಮ: ಸರಳ ವ್ಯಾಯಾಮಗಳು ಹೊಟ್ಟೆಯ ಸ್ನಾಯುಗಳಿಗೆ ವಿರಾಮ ಕೊಡುತ್ತದಲ್ಲದೇ, ಜೀರ್ಣಾಂಗ ವ್ಯವಸ್ಥೆ ಮೂಲಕ ವಾಯು ಚಲಿಸಲು ನೆರವು ನೀಡುತ್ತದೆ. ಊಟದ ನಂತರದ ನಡಿಗೆ, ಯೋಗಾ ಭಂಗಿಗಳು ಲಾಭಕಾರಕ.
  • ಆಳವಾಗಿ ಉಸಿರಾಡಿ: ಎಲ್ಲರಿಗೂ ಇದಲ್ಲವಾದರೂ, ಹಲವರಿಗೆ ಆಳವಾದ ಉಸಿರಾಟ ಲಾಭಕಾರಿ. ಇದು ನೋವು ಹಾಗೂ ಅನಾನುಕೂಲ ದೂರ ಮಾಡುತ್ತದೆ
  • ಪ್ರತಿರೋಧದ ಪರಿಹಾರ: ಕೆಲವು ಉತ್ಪಾದನೆಗಳು ವಾಯುವಿನ ನೋವಿನಿಂದ ಶೀಘ್ರ ಪರಿಹಾರ ನೀಡುತ್ತದೆ. ಸಿಮಿಥಿಕೇನ್ ಎಂಬುದೇ ಅದು.
  • ಎಲ್ಲಕ್ಕಿಂತ ಮುಖ್ಯ ಸಮಸ್ಯೆಯಿಂದ ಅಂತಿಮ ಪರಿಹಾರಕ್ಕೆ ತಜ್ಞ ವೈದ್ಯರನ್ನೇ ಭೇಟಿಯಾಗಿ, ಅವರು ಹೇಳಿದಂತೆಯೇ ಕೇಳಿ, ಸೂಕ್ತ ಔಷದೋಪಚಾರ ಪಡೆಯಿರಿ.

ನನ್ನ ಅನುಭವದಲ್ಲಿ, ಯಾರಿಗೋ, ಎಂದೋ, ಒಬ್ಬ ವೈದ್ಯರು ಸೂಚಿಸಿದ, ಒಂದು ನಿಗದಿತ ಔಷಧಿ- ಮಾತ್ರೆ- ಕ್ಯಾಪ್ಸೂಲನ್ನು ಮತ್ಯಾರೋ ಮತ್ತೆಂದೋ ಎಂದೂ ತೆಗೆದುಕೊಳ್ಳಬಾರದು. ತಜ್ಞ ವೈದ್ಯರು ಹೇಳಿದಂತೆ ಪ್ರತಿ ವ್ಯಕ್ತಿಯ ದೇಹ ರಚನೆ, ಅವರ ವಯಸ್ಸು, ಅವರ ಆರೋಗ್ಯ -ಅನಾರೋಗ್ಯದ ಹಿನ್ನೆಲೆ, ಅವರ ಜೀವನ ಶೈಲಿ, ಅವರ ಚಟಗಳು ಪದ್ಧತಿಗಳು, ಆಹಾರ-ವಿಶ್ರಾಂತಿ ಇವುಗಳನ್ನು ಆಧರಿಸಿ. ಅವರ ವ್ಯಕ್ತಿಗತ ವಿವರಗಳನ್ನು ಗಮನಿಸಿ, ಪ್ರತಿ ರೋಗಿಯ ವೈಯಕ್ತಿಕ ಪರಿಶೀಲನೆ ನಡೆಸಿ, ವೈದ್ಯರು ಔಷಧಿ ಸೂಚಿಸುತ್ತಾರೆ. ನಿಗದಿತ ಮಾತ್ರೆಗಳು, ಅದರ ಪ್ರಮಾಣ, ತೆಗೆದುಕೊಳ್ಳಬೇಕಾದ ಅವಧಿ, ಹೇಳಿರುತ್ತಾರೆ. ಇದು ವ್ಯಕ್ತಿ-ಕಾಲ-ಸ್ಥಳ- ಹವಾಮಾನ ಆಧರಿಸಿರುತ್ತದೆ. ಯಾರೋ ಒಬ್ಬರಿಗೆ ಎಂದೋ ಒಬ್ಬ ವೈದ್ಯರು ಹೇಳಿದ ಔಷಧಿಗಳನ್ನು ಎಲ್ಲರೂ ಅಥವಾ ಬೇರಾರೋ ಇನ್ನೆಂದೋ ಕಣ್ಣು ಮುಚ್ಚಿ ಹಾಗೇ ಬಳಸಬಾರದು.

ಎನ್.ವ್ಹಿ ರಮೇಶ್
ಮೊ:98455-65238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!