ಗರ್ಭಿಣಿಯರು ಯೋಗ ಮಾಡಬಹುದೇ?

ಗರ್ಭಿಣಿಯರು ಯೋಗ ಮಾಡಬಹುದೇ?- ಇದು ಪ್ರತಿಯೊಬ್ಬರಿಗೂ ಇರುವ ಅನುಮಾನಗಳಲ್ಲಿ  ಒಂದು. ಸುಲಭ ಹೆರಿಗೆಗಾಗಿ ಯೋಗ ಅತ್ಯಂತ ಪರಿಣಾಮಕಾರಿ ವಿಧಾನ ಎಂಬುದನ್ನು ವೈದ್ಯರು ಮತ್ತು ಪ್ರಸೂತಿ ತಜ್ಞರು ಗುರುತಿಸಿದ್ದಾರೆ. ಆದರೆ, ಮೊದಲ ಮೂರು ತಿಂಗಳ ಅವಧಿಯಲ್ಲಿ ಯೋಗಾಸನ ಮಾಡುವಾಗ ಎಚ್ಚರ ವಹಿಸಬೇಕು. 

ಗರ್ಭಿಣಿಯರು ಯೋಗ ಮಾಡಬಹುದೇ?ಗರ್ಭಧಾರಣೆಯು ಮಹಿಳೆಯ ಬದುಕಿನಲ್ಲಿ ಅತ್ಯಂತ ಅದ್ಭುತ ಅನುಭವಗಳಲ್ಲಿ ಒಂದು.ವಿಶ್ರಾಂತಿ, ಧ್ಯಾನ ಮತ್ತು ಸರಳ ಉಸಿರಾಟದ ವ್ಯಾಯಾಮಗಳು ಗರ್ಭಿಣಿಯರಲ್ಲಿ ನಿರಂತರ ಶಕ್ತಿ ಸಂಚಯವನ್ನು ಪೂರೈಸುತ್ತದೆ. ಇದು ಬೆಳೆಯುತ್ತಿರುವ ಮಗುವಿನೊಂದಿಗೆ ಉತ್ತಮ ಬಾಂಧವ್ಯ ವರ್ಧನೆಗೂ ಸಹಕಾರಿ. ಸುಲಭ ಹೆರಿಗೆಗಾಗಿ ಯೋಗ ಅತ್ಯಂತ ಪರಿಣಾಮಕಾರಿ ವಿಧಾನ ಎಂಬುದನ್ನು ವೈದ್ಯರು ಮತ್ತು ಪ್ರಸೂತಿ ತಜ್ಞರು ಗುರುತಿಸಿದ್ದಾರೆ. ದೇಹ, ಮನಸ್ಸು ಮತ್ತು ಚೈತನ್ಯವನ್ನು ಸಂಪರ್ಕಿಸುವ ಮೂಲಕ ಯೋಗವು ಗರ್ಭಿಣಿಯರಿಗೆ ಸುಲಭ ಹೆರಿಗೆಯಾಗಲು ಸಹಾಯ ಮಾಡುತ್ತದೆ. ಇದರಿಂದ ಗರ್ಭಧಾರಣೆ ವೇಳೆ ಮಹಿಳೆಯರಿಗೆ ಆರಾಮ, ವಿಶ್ರಾಂತಿ ಮತ್ತು ಆರೋಗ್ಯಕ್ಕೆ ನೆರವಾಗುತ್ತದೆ. ಗರ್ಭಧಾರಣೆ ವೇಳೆ ಶಿಫಾರಸು ಮಾಡಿದ ಯೋಗಾಸನ ಮಾಡುವುದರಿಂದ ಭ್ರೂಣದಲ್ಲಿರುವ ಶಿಶುವಿನ ಆರೋಗ್ಯಕರ ಬೆಳವಣಿಗೆ ಮತ್ತು  ಹೆಚ್ಚು ಹೆರಿಗೆ ನೋವಿಲ್ಲದೇ ಸರಾಗವಾಗಿ ಪ್ರಸವವಾಗುತ್ತದೆ.
ಯೋಗದಿಂದ ಸಾಕಷ್ಟು ಪ್ರಯೋಜನ:
ಗರ್ಭಧಾರಣೆ ವೇಳೆ ಮಾಡುವ ಯೋಗದಿಂದ ಅನೇಕ ಪ್ರಯೋಜನಗಳಿವೆ. ಭೌತಿಕ ಮಟ್ಟದ ಮೇಲೆ ನಿರ್ದಿಷ್ಟವಾಗಿ ಅನುಸರಿಸುವ ಯೋಗ ಭಂಗಿಗಳು ದೇಹದ ಸಾಮಥ್ರ್ಯ ಹೆಚ್ಚಿಸಿ ಹೊಂದಾಣಿಕೆ ಸಾಮಥ್ರ್ಯವನ್ನು ಸೃಷ್ಟಿಸುತ್ತದೆ. ಯೋಗಾಸನಗಳು ಚೈತನ್ಯ ವೃದ್ಧಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಗರ್ಭಧಾರಣೆ ವೇಳೆ ಕಂಡುಬರುವ ಬೆನ್ನು ನೋವು ಮತ್ತು ದ್ರವ ಉಳಿಯುವಿಕೆಯಂಥ ಸಾಮಾನ್ಯ ಗರ್ಭಧಾರಣೆ ದೋಷಗಳಿಗೂ ಇದು ಉಪಶಮನ ನೀಡಲು ನೆರವಾಗುತ್ತದೆ. ಉಸಿರಾಟ ವ್ಯಾಯಾಮಗಳು ನರಮಂಡಲದ ವ್ಯವಸ್ಥೆಯನ್ನು ಉತ್ತಮಗೊಳಿಸಿ ದೇಹಕ್ಕೆ ಮತ್ತು ಹೊಟ್ಟೆಯಲ್ಲಿರು ಶಿಶುವಿಗೆ ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುತ್ತದೆ. ಪ್ರಸವ ವೇಳೆಯಲ್ಲಂತೂ ಇದು ತುಂಬಾ ಪ್ರಯೋಜನಕಾರಿ. ಹೆರಿಗೆ ಸುಗಮವಾಗಿ ಆಗಲು ಸಾಯ್ನುಗಳು ವಿಕಸನವಾಗಲು ಸಹಾಯ ಮಾಡುತ್ತದೆ.
ಯೋಗಾಸನ ಚಲನೆಗಳು ಮತ್ತು ಆಸನ-ಭಂಗಿಗಳು ಹೆರಿಗೆಯ ಪ್ರತಿ ಹಂತದಲ್ಲೂ ಗರ್ಭಿಣಿಯರಿಗೆ ಸಹಕಾರಿ. ಆದರೆ, ಮೊದಲ ಮೂರು ತಿಂಗಳ ಅವಧಿಯಲ್ಲಿ ಯೋಗಾಸನ ಮಾಡುವಾಗ ಎಚ್ಚರ ವಹಿಸಬೇಕು. ವಿಶ್ರಾಂತಿ, ಧ್ಯಾನ, ಸರಳ ಉಸಿರಾಟ ವ್ಯಾಯಾಮಗಳನ್ನು ವಿಶೇಷವಾಗಿ ಮೊದಲ ತ್ರೈಮಾಸಿಕ ಅವಧಿಯಲ್ಲಿ ಗರ್ಭಿಣಿಯರಿಗೆ ಶಿಫಾರಸು ಮಾಡಲಾಗಿದೆ. ಇವು ಗರ್ಭಧರಿಸಿದ್ದ ಸಂದರ್ಭದಲ್ಲಿ ಕಂಡುಬರುವ ಆಯಾಸ, ತಲೆ ಸುತ್ತುವಿಕೆ, ವಾಂತಿ ಮೊದಲಾದ ಸಂಭವನೀಯ ಅಡ್ಡ ಪರಿಣಾಮಗಳನ್ನು ನಿವಾರಿಸಲು ಗರ್ಭವತಿಯರಿಗೆ ಸಹಕಾರಿ.ಕೆಲ ಕಾಲದಿಂದ ಯೋಗಾಭ್ಯಾಸ ಮಾಡುತ್ತಿರುವ ಮಹಿಳೆಯರು, ತಮ್ಮ ಅಗತ್ಯತಳಿಗೆ ಅನುಗುಣವಾಗಿ ಆಸನ ಮತ್ತು ಭಂಗಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಮಾನ್ಯ ಆಸನವನ್ನು ಮುಂದುವರಿಸಬಹುದು. ಎರಡನೇ ತ್ರೈಮಾಸಿಕ ಅವಧಿಯಲ್ಲಿ, ಬಹುತೇಕ ಮಹಿಳೆಯರು ಹೊಸ ಉಲ್ಲಾಸದೊಂದಿಗೆ ಖುಷಿಯಾಗಿರುತ್ತಾರೆ.
ಯೋಗ ಮಾಡುವುದರಿಂದ ಅವರು ದೇಹದ ಸಾಮಥ್ರ್ಯ ಹೆಚ್ಚಾಗಿ ಭಂಗಿ ಮತ್ತು ಶಕ್ತಿಯನ್ನು ಸುಧಾರಿಸುತ್ತದೆ. ಕೆಲವೊಂದು ಯೋಗಾಸನಗಳನ್ನು ಗರ್ಭವತಿಯರ ಉದರ ಮತ್ತು ಹೊಟ್ಟೆಯಲ್ಲಿರುವ ಶಿಶುವಿನ ಮೇಲೆ ಒತ್ತಡ ಬೀಳದಂತೆ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಗರ್ಭಧಾರಣೆಯು ಎರಡನೇ ಮತ್ತು ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಮಹಿಳೆಯರು ಯೋಗ ಮಾಡುವಾಗ ಮೆತ್ತನೆಯ ದಿಂಬು ಅಥವಾ ಕುಷನ್‍ಗಳನ್ನು ಉಪಯೋಗಿಸುವ ಅಗತ್ಯವಿದೆ. ಇದರಿಂದ ಯೋಗಾಸನ ಮಾಡುವಾಗ ಆರಾಮವಾಗಿರುತ್ತದೆ. ಕೊನೆಯ ತ್ರೈಮಾಸಿಕ ಅವಧಿಯಲ್ಲಿ ವೈದ್ಯರು ಮತ್ತು ನುರಿತ ಯೋಗ ತಜ್ಞರ ಶಿಫಾರಸಿನ ಮೇರೆಗೆ ಯೋಗಾಸನ ಮಾಡಬೇಕಾಗುತ್ತದೆ.
ಗರ್ಭಿಣಿಯರ ನೆಮ್ಮದಿಗೆ ಯೋಗ:
ಗರ್ಭಿಣಿಯರು ಯೋಗ ಮಾಡಬಹುದೇ?ಒಂದು ರೀತಿ ಪ್ರಶಾಂತ ಮನಸ್ಸು ಮತ್ತು ಆರೋಗ್ಯಕರ ದೇಹಕ್ಕೆ ಆಧ್ಯಾತ್ಮಿಕ ಮಾರ್ಗ ಯೋಗ. ಗರ್ಭಿಣಿಯಾಗಿದ್ದಾಗ ಮಹಿಳೆಯರಲ್ಲಿ ಏರುಪೇರು ಮಟ್ಟದಲ್ಲಿ ಮಾನಸಿಕ ತೊಳಲಾಟ, ಹತಾಶೆ ಮತ್ತು ಅಸ್ವಸ್ಥತೆ, ಯಾತನಾಮಯ ಕಾಲು ಸೆಳೆತ ಹಾಗೂ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ; ಯೋಗಾಭ್ಯಾಸ, ವಿಧಾನಗಳು ಹಾಗೂ ಭಂಗಿಗಳು ಇಂಥ ಎಲ್ಲ ಸಮಸ್ಯೆಗಳನ್ನು ನಿವಾರಿಸಿ ಸುರಕ್ಷಿತವಾಗಿ ನವಮಾಸಗಳು ತುಂಬಲು ಹಾಗೂ ಸುಲಭ ಮತ್ತು ಸರಾಗ ಹೆರಿಗೆಗೆ ಸಹಕಾರಿಯಾಗುತ್ತದೆ. ದೇಹದಲ್ಲಿ ಹಾರ್ಮೋನುಗಳ ಬದಲಾವಣೆಗಳು ಕಂಡುಬರುವ ಗರ್ಭಧಾರಣೆ ಮಾಸಗಳ ವೇಳೆ, ನಿಯಮಿತವಾಗಿ ಯೋಗಾಸನ ಮಾಡುವ ಮಹಿಳೆಯರು ತಮ್ಮ ಯೋಗಾಭ್ಯಾಸದಲ್ಲಿ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಗರ್ಭಧಾರಣೆ ವೇಳೆ ಮಾಡುವ ಯೋಗವು ಕನಿಷ್ಟ ತೊಂದರೆಯೊಂದಿಗೆ ಜನಿಸದ ಶಿಶುವನ್ನು ಜಗತ್ತಿಗೆ ತರಲು ತಾಯಿಗೆ ನೆರವಾಗುವ ಮತ್ತು ಸಂಪೂರ್ಣ ಯಾವುದೇ ಆರೋಗ್ಯ ತೊಡಕುಗಳು ಇಲ್ಲದಿರುವಂತೆ ಮಾಡುವ ಗುರಿಯನ್ನು ಹೊಂದಿದೆ.
ಗರ್ಭಧಾರಣೆಯ ಮೂರು ತ್ರೈಮಾಸಿಕಗಳಲ್ಲಿ ಮಾಡುವ ಯೋಗಾಭ್ಯಾಸ ಮತ್ತು ಭಂಗಿಗಳು ಪ್ರತಿ ಹಂತದಲ್ಲೂ ವಿಭಿನ್ನತೆಯಿಂದ ಕೂಡಿರುತ್ತದೆ. ಇದು ಕೇವಲ ಯೋಗಾಸನವಲ್ಲ ; ಪರಿಣಿತರ ಉಸ್ತುವಾರಿ ಹಾಗೂ ಪೂರಕ ವಾತಾವರಣದಲ್ಲಿ ಮಾಡಬೇಕಾದ ವ್ಯಾಯಾಮವಾಗಿದೆ. ವ್ಯಾಯಾಮ ಆರಂಭಿಸುವುದಕ್ಕೂ ಮುನ್ನ ಗರ್ಭವತಿಯು ತನ್ನ ಆರೋಗ್ಯ ಹಿನ್ನೆಲೆಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಯೋಗಾಭ್ಯಾಸ ಮಾಡುವವರು ಹಾಗೂ ನಿಯಮಗಳನ್ನು ಪಾಲಿಸದೇ ಇರುವವರು ವೈದ್ಯಕೀಯ ಸಮ್ಮತಿ ಇಲ್ಲದೇ ಯೋಗಾಸನ ಮಾಡಬಾರದು. ಮೊದಲ ಮೂರು ತಿಂಗಳು ತುಂಬಾ ಮಹತ್ವದ್ದಾಗಿದ್ದು, ಗರ್ಭಪಾತ ಆಗುವ ಸಾಧ್ಯತೆಗಳು ಅಧಿಕವಾಗಿರುತ್ತದೆ ; ಅದ್ದರಿಂದ ಈ ಅವಧಿಯಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕಾದುದು ಅತಿ ಮುಖ್ಯ.ಎಲ್ಲ ನಿಯಮಗಳು ಹಾಗೂ ಆರೋಗ್ಯ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಂಡು, ತಾಯಿಯಾಗುವವರಿಗೆ ತುಂಬಾ ಸೂಕ್ತವಾದ ಹಾಗೂ ಶಿಫಾರಸ್ಸಿಗೆ ಅರ್ಹವಾದ ‘ಆಸನಗಳನ್ನು’ ಮಾತ್ರ ಮಾಡಬೇಕಾಗುತ್ತದೆ.
 ಡಾ.ದಿನಕರ್ ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,  82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066    ಫೋನ್: 080- 49069000 Extn: 1147/1366 
ಡಾ.ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
 82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066   

ಫೋನ್: 080- 49069000 Extn: 1147/1366  http://www.vims.ac.in/

ಮೊ.: 97422 74849
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!