ಮಧ್ಯಮ ವಯಸ್ಸಿನವರ ಆಹಾರ : ಕೆಲವು ವಿಚಾರಗಳು

  ನಮ್ಮ ವಯಸ್ಸು ಹೆಚ್ಚಿದಂತೆ ಪೌಷ್ಠಿಕ ಆಹಾರದ ನಿಯಮಗಳು ಬದಲಾಗುತ್ತವೆ. ಕಾಲ ಕಳೆದಂತೆ ಬಿ12 ಜೀವಸತ್ವ ಬಹಳ ಮಹತ್ವದ್ದು. ನಾವು ಯಾವ ವಯಸ್ಸಿನಲ್ಲಿ ಈ ಬದಲಾವಣೆಗಳನ್ನು ಮಾಡುವ ಆವಶ್ಯಕತೆಯಿದೆ?

ಬಿ12 ಜೀವಸತ್ವ ಹುಡುಕಿರಿ:

ರಕ್ತ ಕೋಶಗಳನ್ನು ತಯಾರಿಸಲು, ಸಂವೇದನೆ ಸುಧಾರಿಸಲು ಬಿ12 ಬೇಕೇ ಬೇಕು. ಪ್ರಾಣಿಜನ್ಯ ಸಸಾರಜನಕವಾದ ಮೊಟ್ಟೆ ಹಾಗೂ ಮಾಂಸಗಳಿಂದ, ಇದು ದೇಹದೊಳಗೆ ಹೊಕ್ಕುತ್ತದೆ. ಸಸ್ಯಾಹಾರಿಗಳಲ್ಲದ ಯುವಜನರಿಗೆ, ಇದು ಅವರ ಆಹಾರದಲ್ಲಿ ಸುಲಭವಾಗಿ ಸಿಗುತ್ತದೆ. ಆದರೆ ದೇಹ ಬಿ12, ಬಳಸಬೇಕಾದರೆ, ಸಸಾರಜನಕದಿಂದ ಬಿ12ನ್ನು ಬೇರೆ ಮಾಡಿ ಕರಗಿಸಬೇಕು. ವಯಸ್ಸಾದಂತೆ ಹೊಟ್ಟೆಯಲ್ಲಿ ಆಮ್ಲ ಕಡಿಮೆಯಾದಾಗ ಇದು ಒಂದು ಸವಾಲಾಗುತ್ತದೆ. ಸಸಾರಜನಕಕ್ಕೆ ಅಂಟಿಕೊಂಡಿರದ ಬಿ12 ಪುಷ್ಠಿಗೊಳಿಸಿದ ಮೊಳಕೆ ಹೊಂದಿದ ಧಾನ್ಯಗಳು ಹಾಗೂ ಪೂರಕ ಆಹಾರಗಳಲ್ಲಿದ್ದು ಇದನ್ನು ದೇಹ ಸುಲಭವಾಗಿ ಹೀರಿಕೊಳ್ಳಲು ಸಿದ್ಧವಾಗಿರುತ್ತದೆ. 50 ನೇ ವಯಸ್ಸಿನಿಂದ ಈ ರೀತಿಯೇ ಬಿ12 ಪಡೆಯಬೇಕು.

ಬಾಳೆಹಣ್ಣು ಹೆಚ್ಚು ತಿನ್ನಿರಿ:

ವಯಸ್ಸಾದಂತೆ ರಕ್ತದ ಒತ್ಡಡ ಏರುತ್ತದೆ. ಈ ಸಮಸ್ಯೆ ನಿವಾರಣೆಗೆ, ಕೆಳಭಾಗದ ಪಾಶ್ರ್ವವಾಯು ಹಾಗೂ ಹೃದಯಾಘಾತ ಅಪಾಯಗಳನ್ನು ತಡೆಯಲು, ಕಡಿಮೆ ಉಪ್ಪು ಹಾಗೂ ಹೆಚ್ಚು ಪೊಟ್ಯಾಶಿಯಂ ತಿನ್ನಬೇಕು. ಏರುರಕ್ತ ಒತ್ತಡ ನಿಯಂತ್ರಣದ ಔಷದೋಪಚಾರ, ಮೂತ್ರವರ್ಧಕ ಪರಿಣಾಮ ಬೀರಿ, ದೇಹದಲ್ಲಿಯ ಉಪ್ಪು ಹಾಗೂ ಪೊಟ್ಯಾಶಿಯಂ ಮಟ್ಟಗಳನ್ನು ಇಳಿಸುತ್ತದೆ. ಒಂದು ಪ್ರಮಾಣದಲ್ಲಿ ಈ ಎರಡೂ ವಿದ್ಯುತ್‍ವಿಚ್ಛೇದಗಳು ಬಹಳ ಮುಖ್ಯ. ಅದರಲ್ಲೂ ಉಪ್ಪಿಗಿಂತ ಪೊಟ್ಯಾಶಿಯಂ ಹೆಚ್ಚು ಬೇಕು. ಪೊಟ್ಯಾಶಿಯಂಗಾಗಿ ಮರುಪೂರಣ ಹಣ್ಣುಗಳು ತರಕಾರಿಗಳತ್ತ ಗಮನಿಸಿ. ಬಾಳೆºಣ್ಣು, ಬ್ರೋಕೋಲಿ, ಸಿಪ್ಪೆಯೊಂದಿಗೆ ಬೇಯಿಸಿದ ಆಲೂಗಡ್ಡೆ, ಉತ್ತಮ ಆಯ್ಕೆಗಳು. ವಯಸ್ಸಾದಂತೆ ಲಾಲಾರಸ ಹಾಗೂ ರುಚಿಗ್ರಾಹಕ ಶಕ್ತಿ ಕಡಿಮೆಯಾಗಿ, ಸ್ಟ್ರಾಂಗ್ ಇಲ್ಲದ ಆಹಾರ ತ್ಯಜಿಸುತ್ತೀರಿ. ಇದಕ್ಕಾಗಿ ರುಚಿಗಾಗಿ ಹೆಚ್ಚು ಉಪ್ಪು ತಿನ್ನಬೇಡಿ. ಉಪ್ಪಿಲ್ಲದ ಅನೇಕ ಮಸಾಲೆ ಪದಾರ್ಥಗಳನ್ನು ಬಳಸಿ. ಹೊಸ ಆಹಾರ ಪರಿಮಳಗಳನ್ನು, ಹಾಗೂ ವಿನ್ಯಾಸಗಳನ್ನು ಬಳಸಿ. ಸುವಾಸನೆ ಕಳೆದುಕೊಳ್ಳುವಂತೆ ಹೆಚ್ಚು ಬೇಯಿಸಬೇಡಿ ಎನ್ನುತ್ತಾರೆ ತಜ್ಞರು, ಇಷ್ಟವಾದರೆ ಮೆಣಸು ಹಾಗೂ ಮೇಲೋಗರ ಬಳಸಿ. ಇವು ನಿಮ್ಮನ್ನು ಹೆಚ್ಚು ನೀರು ಅಥವಾ ಹಾಲು ಕುಡಿಯುವಂತೆ ಮಾಡುವುದು.

ಹೆಚ್ಚು ನೀರು ಕುಡಿಯಿರಿ:

ವಯಸ್ಸಾದಂತೆ ರುಚಿಯ ಸ್ಷರ್ಶ ಜ್ಞಾನ ಕಡಿಮೆಯಾದಂತೆ, ನಿಮ್ಮ ಬಾಯಾರಿಕೆ ಸಹ ಕಡಿಮೆಯಾಗುತ್ತದೆ. ಅಲರ್ಜಿ ಹೋಗಲಾಡಿಸಲು ಬಳಸುವ ಔಷಧಿಗಳು ಹಾಗೂ ರಕ್ತದ ಒತ್ತಡದ ಔಷಧಗಳು ನಿಮ್ಮನ್ನು ನಿರ್ಜಲೀಕರಣದತ್ತ ದೂಡಬಹುದು. ಆಗ ನೀವು ಸಾಕಷ್ಟು ದ್ರವ ಪದಾರ್ಥ ಸ್ವೀಕರಿಸಲೇಬೇಕು. ವಯಸ್ಸಾದವರು ಆಸ್ಪತ್ರೆಗೆ ಬರುವುದು ಹಾಗೂ ಅಂತ್ಯ ಕಾಣುವುದು – ಈ ಕಾರಣದಿಂದಲೇ ಹೆಚ್ಚಂತೆ. ಹೀಗಾಗಿ ಪ್ರತಿದಿನ ಮಹಿಳೆಯರು 2.2 ಲೀಟರ್ ಅಥವಾ 9ಕಪ್ ನೀರು ಕುಡಿಯಲೇಬೇಕು. ಪುರುಷರು ಪ್ರತೀದಿನ 3 ಲೀಟರ್ ಅಥವಾ 13 ಲೋಟ ನೀರು ಕುಡಿಯಬೇಕು. ಕಾಫಿ, ಟೀ, ಮದ್ಯ ಕಡಿಮೆ ಮಾಡಿ. ಕೆಫಿನ್ ಹಾಗೂ ಮದ್ಯ ಎರಡೂ ಮೂತ್ರವರ್ಧಕ ಗುಣ ಹೊಂದಿದ್ದು, ಇವು ನಿಮ್ಮನ್ನು ನಿರ್ಜಲೀಕರಣದ ಅಪಾಯಕ್ಕೆ ತಳ್ಳುತ್ತವೆ.

ಹೆಚ್ಚು ಕ್ಯಾಲ್ಸಿಯಂ ಪಡೆಯಿರಿ:

ಇದು ನಿಮ್ಮ ಮೂಳೆಗೆ ಒಳ್ಳೆಯದು. ಹೈನುಗಾರಿಕೆ ಉತ್ಪಾದನೆಗಳು ಹಾಗೂ ಇತರ ಆಹಾರದಿಂದ ಇದನ್ನು ಪಡೆಯಬಹುದು. ಆದರೆ ರಾಸ್‍ಮುಸ್ಸೇನ್ ಹೇಳುವಂತೆ, ಜನಕ್ಕೆ ಇದು ಸಾಕಷ್ಟು ದೊರೆಯುವುದಿಲ್ಲ ವಯಸ್ಸಾದಂತೆ ಹಾಲಿನಲ್ಲಿಯ ಹಾಲ್ಸಕ್ಕರೆಯ ಅಸಹನೆಯೇ ಒಂದು ಕಾರಣ. ಪ್ರತಿದಿನ ವಯಸ್ಕರು 1000ಮಿಲಿಗ್ರ್ತಾಂ ಕ್ಯಾಲ್ಲಿಯಂ ಪಡೆಯಬೇಕು. 70 ವರ್ಷ ದಾಟಿದ ಪುರುಷರು ಹಾಗೂ 50 ವರ್ಷ ದಾಟಿದ ಮಹಿಳೆಯರು ಪ್ರತಿದಿನ 1200ಮಿಲಿಗ್ರ್ಯಾಂ ಕ್ಯಾಲ್ಸಿಯಂ ಪಡೆಯಬೇಕು. ತಜ್ಞರು ಹೇಳುವಂತೆ, ನಿಮ್ಮ ಆಹಾರದಿಂದ ಸಿಗುವ ಕ್ಯಾಲಿಯಂ ಸಾಲದಿದ್ದರೆ, ವಯಸ್ಕರು ಪೂರಕ ಆಹಾರದಿಂದ ಪ್ರತಿದಿನ 2500 ಮಿಲಿಗ್ರ್ಯಾಂ ಕ್ಯಾಲ್ಸಿಯಂ ಪಡೆಯಬೇಕು. ನೀವು 50 ವಯಸ್ಸಿನ ಮೇಲಿದ್ದರೆ, 2000 ಮಿಲಿಗ್ರ್ಯಾಂ ಸಾಕು. ಇದಕ್ಕಿಂತ ಹೆಚ್ಚಾದರೆ, ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆ ಹಾಗೂ ಇತರ ಸಮಸ್ಯೆಗಳು ಉಂಟಾಗಬಹುದು.

ಡಿಜೀವಸತ್ವ ಹೆಚ್ಚು ಪಡೆಯಿರಿ:

ಕ್ಯಾಲ್ಸಿಯಂ ಹೀರಿಕೊಳ್ಳಲು ಹಾಗೂ ಸರಿಯಾಗಿ ಬಳಸಿಕೊಳ್ಳಲು, ನಿಮ್ಮ ದೇಹಕ್ಕೆ ಡಿಜೀವಸತ್ವ ಬೇಕು. ದುರದೃಷ್ಟವಶಾತ್ ಈ ಜೀವಸತ್ವ ಸ್ವಾಭಾವಿಕವಾಗಿ ಸೂರ್ಯನಿಂದಲೇ ಪಡಯಬೇಕು. ನೀವು ವರ್ಷದ ಯಾವ ಕಾಲದಲ್ಲಿ ಎಲ್ಲಿ ಬಾಳುತ್ತಿದ್ದೀರಿ ಹಾಗೂ ಏನು ತಿನ್ನುತ್ತಿದ್ದೀರಿ, ಇದರಿಂದ ಇದನ್ನು ಪಡೆಯಲು ಕಷ್ಟ. ಮೊಳಕೆ ಧಾನ್ಯಗಳು ನೆರವು ನೀಡಬಲ್ಲವಾದರೂ ಅದು ಸಾಲದು. ಕೊಬ್ಬಿನಲ್ಲಿ ಡಿ.ಜೀವಸತ್ವ ಕರುಗುತ್ತದೆ. ಕಡಿಮೆ ಕೊಬ್ಬಿನ ಹಾಲಿನಲ್ಲಿ ಇದು ಜಾಸ್ತಿ ಸಿಕ್ಕದು. ಪ್ರತಿದಿನ 600 ಅಂತರ್‍ರಾಷ್ಟ್ರೀಯ ಘಟಕಗಳನ್ನು ಪಡೆಯಲು ಯತ್ನಿಸಿ. 70 ವಯಸ್ಸಿನ ನಂತರ ಇದನ್ನು 800 ಘಟಕಗಳಿಗೆ ಹೆಚ್ಚಿಸಿ. ಸ್ವಷ್ಟತೆಗಾಗಿ ಮೊಟ್ಟೆಯ ಹಳದಿ ಲೋಳೆ ಬೇಕು. ಬಹಳಷ್ಟು ವೃದ್ಧರಿಗೆ ಪ್ರಪಂಚ ಮಸುಕು ಮಸುಕಾಗಿ ಕಾಣುತ್ತದೆ. ವೃದ್ಧಾಪ್ಯಕ್ಕೆ ಸಂಬಂಧಿಸಿದ ಅಕ್ಷಿಪಟಲದ ಅವನತಿ ಅಥವಾ ಕಣ್ಣಿನ ಪೊರೆ ತಡೆಯಲು, ಮಧ್ಯವಯಸ್ಸಿನಿಂದಲೇ ಲ್ಯೂಟೆನ್ ಹೆಚ್ಚು ತಿನ್ನಿರಿ, ಇದು ಬೀಟಾ ಕೆರೋಟಿನ್ ಹಾಗೂ ಎ ಜೀವಸತ್ವಗಳಿಗೆ ಸಂಬಂಧಿಸಿದೆ. ಸಂವೇದನೆ ಕಡಿಮೆಯಾಗದಂತೆ ಸಹ ಇವು ತಡೆಯಬಲ್ಲದು. ಇದಕ್ಕಾಗಿ ಹೆಚ್ಚು ಹೆಚ್ಚು ಹಸಿರು ಕಾಯಿಪಲ್ಯ, ಸೊಪ್ಪು, ಪಾಲಾಕ್, ಬ್ರೋಕೋಲಿ ತಿನ್ನಿರಿ. ದ್ರಾಕ್ಷಿ, ಮೋಸಂಬಿ, ಮೊಟ್ಟೆಯ ಹಳದಿ ಭಾಗ ತಿನ್ನಿ.

ನಾರಿನಂಶದ ಮೇಲೇ ಕೇಂದ್ರೀಕರಿಸಿ:

ಬಾಡಿದ ಹಣ್ಣುಗಳಲ್ಲಿಯ ನಾರಿನಂಶ, ಜೀರ್ಣಾಂಗ ವ್ಯವಸ್ಥೆ ಸುರಳಿತ ಕೆಲಸ ಮಾಡಲು ನೆರವಾಗುತ್ತದೆ. ಸಾಮಾನ್ಯ ಮಲವಿಸರ್ಜನೆ ಕ್ರಿಯೆಗೆ ನಾರಿನಂಶ ಬಹು ಮುಖ್ಯ. ಇದು ಕೊಲೆಸ್ಟರಾಲ್ ಕಡಿಮೆ ಮಾಡುತ್ತದೆ. ತಿಂದ ತಕ್ಷಣ ರಕ್ತದಲ್ಲಿಯ ಸಕ್ಕರೆ ಏರದಂತೆ ತಡೆಯುತ್ತz.É ಇತರ ತರಕಾರಿಗಳು ಹಣ್ಣುಗಳು, ಒಣಹಣ್ಣುಗಳು, ಬೀಜಗಳು, ಧಾನ್ಯಗಳು ಇದನ್ನು ಪೂರೈಸುತ್ತವೆ.

ಸಂತೃಪ್ತ ಕೊಬ್ಬು ನಿಯಂತ್ರಿಸಿ:

ಜೀವನಪೂರ್ತಿ ಮುಖ್ಯ ಗುರಿಯಾಗಿ ಹೆಚ್ಚು ಸಂತೃಪ್ತ ಕೊಬ್ಬು ಹೊಂದಿರುವ ಆಹಾರ ತ್ಯಜಿಸಿರಿ. ಪೌಷ್ಠಿಕ ಆಹಾರ ಹಾಗೂ ಕ್ಯಾಲರಿ ಒಳತೆಗೆದುಕೊಳ್ಳುವಿಕೆ ಗುರಿಯನ್ನು, ಇದರಿಂದ ಸ್ಥಾಪಿಸಬಹುದು. ಕಡಿಮೆ ಕೊಬ್ಬಿನಂಶವಿರುವ ಹೈನುಗಾರಿಕೆ ಉತ್ಪಾದನೆಗಳು, ಸಸಾರಜನಕ ಹಾಗೂ ಕ್ಯಾಲ್ಸಿಯಂ ಪೌಷ್ಠಿಕಾಂಶಗಳಲ್ಲಿ ಶ್ರೀಮಂತವಾಗಿವೆ. ಇದರಿಂದ ಪೂರ್ಣ ಪ್ರಮಾಣದ ಕೊಬ್ಬಿರುವ ಪದಾರ್ಥಗಳಲ್ಲಿರುವ ಕೊಬ್ಬು ಹಾಗೂ ಕೆಲರಿಗಳು ಅನಾವಶ್ಯಕ. ಹಿರಿಯರ ಆಹಾರದಲ್ಲಿರುವ ಕೊಬ್ಬು ಒಳ್ಳೆಯ ಕೊಬ್ಬೇ ಆಗಬೇಕು. ಯಾವ ಎಣ್ಣೆಯ ರಾಸಾಯನಿಕ ರಚನೆ ಸುಲಭವಾಗಿ ಕೊಲೆಸ್ಟರಾಲ್ ಆಗಿ ಬದಲಾಗುವುದಿಲ್ಲವೋ, ಆ ಬಹು ಅಪರ್ಯಾಪ್ತ ಹಾಗೂ ಏಕ ಅಪರ್ಯಾಪ್ತ ಕೊಬ್ಬು ಬೇಕು. ಇದು ಸೊಯಾಬಿನ್ ಹಾಗೂ ಕೆನೋಲಾ ಎಣ್ಣೆಯಿಂದ ದೊರಕುತ್ತದೆ. ಈ ಎಣ್ಣೆಗಳು ಇ ಹಾಗೂ ಸಿ ಜೀವಸತ್ವದ ಉತ್ತಮ ಮೂಲಗಳು.

ಕೆಲರಿಗಳನ್ನು ಕತ್ತರಿಸಿ:

ವಯಸ್ಸಾದಂತೆ ನಮ್ಮ ದೇಹದ ಚಯಾಪಚಯ ದರ ಕಡಿಮೆಯಾಗುತ್ತದೆ. ಆಗ ನಾವು ತೆಗೆದುಕೊಳ್ಳುವ ಆಹಾರದ ಕೆಲರಿಗಳು ಸಹ ಕಡಿಮೆಯಾಗಬೇಕು. ವಯಸ್ಸಾದಂತೆ ಜನರ ಓಡಾಟ ಕಡಿಮೆಯಾಗುತ್ತದೆ. ಹೆಚ್ಚಿನ ಕೆಲರಿಗಳೆಂದರೆ ದೇಹದ ತೂಕದಲ್ಲಿ ಹೆಚ್ಚು ಪೌಂಡುಗಳು ಸೇರ್ಪಡೆ ಆಗುತ್ತವೆ. ಇದರಿಂದ ಹೃದಯಬೇನೆ ಹಾಗೂ ಮಧುಮೇಹಗಳ ಅಪಾಯ ಹೆಚ್ಚುತ್ತದೆ. ಅಸ್ಥಿರಂದ್ರತೆ ಹಾಗೂ ಅಸ್ತಿ ಸಂಧೀವಾತಗಳ ಅಪಾಯ ಸಹ ಹೆಚ್ಚುತ್ತವೆ. ಪ್ರತಿ ತುತ್ತು ಚೆನ್ನಾಗಿ ಕಡಿಯುವುದರಿಂದ ಅದರಲ್ಲಿದ್ದ ಪೌಷ್ಠಿಕತೆ ಚೆನ್ನಾಗಿ ಪಡೆಯಬೇಕು.

ಅನಾರೋಗ್ಯಕರ ಪಿಷ್ಠ ಬಿಟ್ಟುಬಿಡಿ:

ಸಕ್ಕರೆ ಅಂಶ ಹೆಚ್ಚಿರುವ ಆಹಾರ ಬಿಟ್ಟುಬಿಡುವುದು ಒಳ್ಳೆಯದು. ವಯಸ್ಸಾದಂತೆ ಆರೋಗ್ಯಕರ ತೂಕ ಇಟ್ಟುಕೊಳ್ಳಲು, ಮೇದೋಜ್ಜೀರಕ ಗ್ರಂಥಿಗೆ ವಿಶ್ರಾಂತಿ ಕೊಡುವುದು ಒಳ್ಳೆಯದು. ಈ ಅಂಗವೇ ಇನ್ಸುಲಿನ್ ಮೇಲೆತ್ತುವ ಅಂಗ. ಮಧುಮೇಹದಲ್ಲಿ ಇದರ ಕೆಲಸ ವಿಪರೀತ ವಕ್ರ ಆಗುತ್ತೆ. ತಿಂದ ಪ್ರತಿ ಕ್ಯಾಲರಿಯಲ್ಲೂ ಗರಿಷ್ಠ ಆರೋಗ್ಯಕರ ಪೌಷ್ಠಿಕಾಂಶ ಪಡೆಯುವುದೇ ಮುಖ್ಯ. ಸಂಸ್ಕರಿಸಿದ ಪಿಷ್ಠ ಉದಾ: ಬಿಳಿ ಬ್ರೆಡ್ ಕಡಿಮೆ ಪೌಷ್ಠಿಕಾಂಶ ಹಾಗೂ ನಾರಿನಂಶ ಹೊಂದಿರುತ್ತದೆ. ಇಡೀ ಧಾನ್ಯಗಳು, ಉತ್ತಮ ಹಣ್ಣಿನಂತಹ ಆರೋಗ್ಯಕರ ಪಿಷ್ಟಕ್ಕೆ ಇಷ್ಟಪಡಿ. ಕೇಕ್‍ನಂತಹದ್ದು ಬೇಡ.

ಪೂರಕ ಆಹಾರ ಅರಿತು ಪಡೆಯಿರಿ:

ನಿಗದಿತ ಪ್ರಮಾಣದಲ್ಲಿ ಆವಶ್ಯಕವಿರುವ ಎಲ್ಲ ಉತ್ತಮ ಪೌಷ್ಠಿಕಾಂಶದ ಮೂಲಗಳನ್ನು, ಆಹಾರದ ಮೂಲಕವೇ ಪಡೆಯುವುದು ಕಷ್ಟ. ತಜ್ಞರು ಕ್ಯಾಲ್ಸಿಯಂ, ಬಿ12 ಜೀವಸತ್ವ ಹಾಗೂ ಡಿ ಜೀವಸತ್ವಗಳಂತಹ ಪೂರಕ ಆಹಾರ ಪಡೆಯಬೇಕೆನ್ನುತ್ತಾರೆ. ಆದರೆ ಇದರ ಹೆಚ್ಚಿನ ಬಳಕೆ ಅಪಾಯಕಾರಿ. ವೈದ್ಯರಿಗೆ ತಿಳಿಸಿ, ಅವರ ಅನುಮತಿಯೊಂದಿಗೆ ಈ ಪೂರಕ ಆಹಾರ ಪಡೆಯಬೇಕು. 30 ದಾಟಿದ ಮೇಲೆ 40ರ ಅಂಗಳದಲ್ಲಿ ಸಹಿಷ್ಣುತೆಯಲ್ಲಿ ಇಳಿತ ಗಮನಿಸುತ್ತೇವೆ. ಕಡಿತ ಮತ್ತು ಸವೆತದ ಗಾಯಗಳು, ಜೀರ್ಣಾಂಗ ವ್ಯವಸ್ಥೆಯ ಬದಲಾವಣೆಗಳು, ಇವು ಈ ಅವಧಿಯ ಸಮಸ್ಯೆಗಳು. ದೇಹದ ಮೇಲಾದ ಗಾಯಗಳು, ಇತರ ಪೆಟ್ಟುಗಳು ಗುಣವಾಗಲು ದೀರ್ಘ ಕಾಲ ಬೇಕು. ಪೃಷ್ಠದಲ್ಲಿ ಕೊಬ್ಬಿನ ಶೇಖರಣೆಯಿಂದ, ದೇಹದ ರಚನೆಯೇ ಬದಲಾಗುತ್ತದೆ.

ಈ ಹಿನ್ನಲೆಯಲ್ಲಿ ಗಮನಿಸಬೇಕಾದ ಅಂಶಗಳು:

1. ದೇಹದ ಆರೋಗ್ಯಕರ ತೂಕ ಹಾಗೇ ಇರಿಸುವುದು. ಪೌಷ್ಠಿಕಾಂಶ ಹೆಚ್ಚಿರುವ ಆಹಾರ ಬಳಸಬೇಕು. ಮದ್ಯ ಕುಡಿಯಬಾರದು. ಧೂಮ್ರಪಾನ ಮಾಡಬಾರದು. ಪ್ರತೀ ವಾರ ಕನಿಷ್ಠ 150 ನಿಮಿಷಗಳ ಸಾಧಾರಣ ಶಾರೀರಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು.

2. ಆಹಾರ ಪ್ರಮಾಣದ ಬಗ್ಗೆ ತಜ್ಞರ ಶಿಫಾರಸ್‍ಗಳಂತೆ ಸಾಕಷ್ಟು ಶಕ್ತಿ ಬೇಕು. ಆದರೆ ಅತಿ ಹೆಚ್ಚು ಶಕ್ತಿ ಬೇಡ. ಸೂಕ್ಷ್ಮ ಪೌಷ್ಠಿಕಾಂಶಗಳು, ಜೀವಸತ್ವಗಳು, ಖನಿಜಗಳು ಬೇಕು. ದೀರ್ಘ ಆಯಸ್ಸಿಗೂ ಕಡಿಮೆ ಕೆಲರಿ ಸ್ವೀಕಾರಕ್ಕೂ, ಗಾಢ ಸಂಬಂಧವಿದೆಯಂತೆ.

3. ಪಿಷ್ಠ, ಸಸಾರಜನಕ, ಕೊಬ್ಬು, ನಾರಿನಂಶ ಹಾಗೂ ದ್ರವ ಪದಾರ್ಥಗಳು ಇವುಗಳು, ಚಿಕ್ಕಂದಿನಿಂದ ಮುಂದೆಯೂ ಹಾಗೆಯೇ ಬೇಕು. ತೂಕ ಹೆಚ್ಚಿಸುವುದನ್ನು ತಡೆಯುವುದು, ದ್ರವ್ಯ ಹಂತಗಳನ್ನು ಕಡಿಮೆ ತಿನ್ನುವುದರಿಂದ, ಹೃದಯದ ಬೇನೆ, ಮಧುಮೇಹ ಹಾಗೂ ಭೀಕರ ಪರಿಸ್ಥಿತಿಗಳನ್ನು ನಿವಾರಿಸಬಹುದು. ಆಹಾರದಲ್ಲಿ ಮೆಗ್ನೇಶಿಯಂ ಖನಿಜದ ಪ್ರಮಾಣ, ಪುರುಷರಿಗೆ ಪ್ರತಿದಿನ 420 ಮಿಲಿಗ್ರ್ಯಾಂ ಬೇಕು. ಮಹಿಳೆಯರಿಗೆ ಇದು 320 ಮಿಲಿಗ್ರ್ಯಾಂ.

4. ಕೋಶ ಬೆಳವಣಿಗೆ ಹಾಗೂ ಪುನರುತ್ಪಾದನೆಗೆ ಫಾಲಿಕ್ ಆಮ್ಲದ ಉಪ್ಪು, ಬಿ6 ಹಾಗೂ ಬಿ12 ಜೀವಸತ್ವಗಳು ಬೇಕು. ಮಾನವ ಶರೀರ ಉತ್ಪಾದಿಸುವ ಅಮೀನೋ ಆಮ್ಲ. ಹೆಚ್ಚುವುದನ್ನು ತಡೆಯಬೇಕು. ಇದು ಮಾಂಸಾಹಾರದ ಉಪಉತ್ಪನ್ನ. ಇದು ದೇಹದ ಚಯಾಪಚಾಯ ಶಕ್ತಿಯ ಉಪಉತ್ಪನ್ನ. ಇದು ಅಪಧಮನಿಗಳ ಗೋಡೆಗಳನ್ನು ನಾಶ ಮಾಡುತ್ತವೆ. ಆಗ ಹೃದಯಬೇನೆ ಬರಬಹುದು. ಗಜ್ಜರಿಯಲ್ಲಿ, ಕರಬೂಜಾದಲ್ಲಿ ಬೂದುಕುಂಬಳಕಾಯಿ ಪಲ್ಯದಲ್ಲಿ, ಕೆರೋನಾಯ್ಡ್ ಇದ್ದು, ಹೃದಯಬೇನೆಯಿಂದ ರಕ್ಷಣೆ ನೀಡುತ್ತದೆ. ಪರಿಧಮನಿಯ ಅಪಧಮನಿಯ ಕೊಬ್ಬಿನ ಉತ್ಕರ್ಷಣ ತಡೆಯಲು ಇವು ಸಹಕಾರಿ. ಕಲ್ಲಂಗಡಿ ಹಾಗೂ ಟಮೋಟೋಗಳಲ್ಲಿರುವ ಲೈಕೋಪೇನ್ ಅಂಶ, ಹೊಟ್ಟೆ, ಪುಪ್ಪಸ ಹಾಗೂ ಪ್ರಾಸ್ಟೇಟ್ ಕ್ಯಾನ್ಸರ್ ವಿರುದ್ಧ ರಕ್ಷಣೆ ಕೊಡುತ್ತದೆ. ಒಮೇಗಾ 3 ಕೊಬ್ಬಿನಾಮ್ಲ ಅಪಧಮನಿಯ ಕಾಹಿಲೆ ತಡೆಯುತ್ತದೆ.

5. ನಿಮ್ಮ ದೇಹದ ಆಹಾರದ ಬೇಡಿಕೆ ಹಾಗೂ ನೀವು ನಿಜವಾಗಿ ಸೇವಿಸುವ ಆಹಾರದ ವ್ಯತ್ಯಾಸವೇ ನಿಮ್ಮ ಸ್ಥಿತಿ. 30ರ ಹರೆಯದ ಪುರುಷರು ಹೆಚ್ಚು ಕೆಲರಿಗಳನ್ನು ಉರಿಸುತ್ತಾರೆ. ಇದಕ್ಕೆ ಕಾರಣ ಅವರ ಜೀವನ ಶೈಲಿಯ ಬೇಡಿಕೆಗಳು – ಆ ಸಮಯದಲ್ಲಿ ಒಳ್ಳೆಯ ಕೆಲಸಕ್ಕಾಗಿ ಹುಡುಕಾಟ- ಬದಲಾವಣೆ, ಕುಟುಂಬ, ಮನೆ ಕೊಳ್ಳುವುದು, ಸಿಂಗರಿಸುವುದು, ಸಾಮಾಜಿಕೀಕರಣ ಹಾಗೂ ಕಠಿಣ ಕೆಲಸ ಮಾಡುವುದು.

6. 30ರ ಪುರುಷರಿಗೆ ಹೆಚ್ಚು ಸಸಾರಜನಕ ಬೇಕು. ಆ ಸಸಾರಜನಕ ಅತ್ಯುತ್ತಮವಾಗಿರಬೇಕು. ತೆಳ್ಳನೆಯ ಸಸಾರಜನಕ ಎಂದರೆ ಕೋಳಿ, ಶೆರ್ ಮೀನು ಸಮುದ್ರದ ಆಹಾರ ಮತ್ತು ಕೊಬ್ಬಿರುವ ಮಾಂಸ ಪುರುಷರಿಗೆ ವಯಸ್ಸಾದಂತೆ ಇವು ಹೃದಯ ಬೇನೆಗಳ ಅಪಾಯ ಹೆಚ್ಚಿಸುತ್ತವೆ. ಇದರ ಜೊತೆಗೆ ಗಮನಿಸಬೇಕಾದ್ದೆಂದರೆ, ಅಕ್ಕಿ, ಓಟ್ಸ್, ಬಾರ್ಲಿ ಹಾಗೂ ಪೂರ್ಣ ಧಾನ್ಯದ ಪಾಸ್ತಾ, ಬಹು ವರ್ಣದ ಹಣ್ಣುಗಳು ಹಾಗೂ ತರಕಾರಿಗಳನ್ನು ಹೆಚ್ಚಾಗಿ ತಿನ್ನುವುದರಿಂದ, ಇದು ರೋಗ ಬರುವುದನ್ನು ವಯಸ್ಸು ಹೆಚ್ಚಾಗುವುದನ್ನು ಉರಿಯೂತ ಹಾಗೂ ತಡೆಯುತ್ತದೆ.

7. ಹೀಗಾಗಿ ಜೀವಸತ್ವಕ್ಕಾಗಿ ಕಿತ್ತಳೆ, ಲೈಸೋಪಿನ್‍ಗಳು ಟಮೋಟೋ, ಬೀಟಾ ಕೆರೋಟಿನ್‍ಗಾಗಿ ಗಜ್ಜರಿ, ಬ್ಲೂ ಬೆರ್ರಿಗಳು ಲ್ಯೂಟೆನ್ ಹಾಗೂ ಝಯಾರಾಕ್ಸಾನ್ ದಿನ್‍ಗಾಗಿ ಪಾಲಾಕ್ ಸೊಪ್ಪು ಏನನ್ನಾದರೂ ತಿನ್ನುವಾಗಿ ಔಷಧಿ ಸ್ವೀಕರಿಸುವ ಸ್ಥಿತಿ ತರಬೇಡಿ.

8. ಶೆಲ್ ಮೀನು, ಇವುಗಳು ಔಷಧ ಪಡೆಯುವ ಸ್ಥಿತಿ ಹಾಗೂ ಅಲರ್ಜಿ ನಿಮ್ಮ ಆಹಾರದಲ್ಲಿ ಬೇಡ. ಕೃತಕ ಬಣ್ಣಗಳು, ಸುವಾಸನೆಗಳು ಹಾಗೂ ಆಹಾರ ದೀರ್ಘಕಾಲ ಉಳಿಯಲು ಬಳಸುವ ವಸ್ತುಗಳು ಇವುಗಳನ್ನು ತಿನ್ನಬೇಡಿ.ಯಾವುದಾದರೂ ಶಸ್ತ್ರಚಿಕಿತ್ಸೆ ಇದ್ದಲ್ಲಿ ಈಗ ಪ್ರಸ್ತಾಪಿಸಿರುವ ಪೂರಕ ಆಹಾರಗಳನ್ನು ವರ್ಜಿಸಬೇಕೇ ಎಂದು ಶಸ್ತ್ರ ವೈದ್ಯರನ್ನು ಕೇಳಿ.

9. ನೀವೇನಾದರೂ ಪೂರಕ ಆಹಾರ ಆರಂಭಿಸಬೇಕೆಂದಿದ್ದರೆ ವೈದ್ಯರನ್ನು ವಿಚಾರಿಸಿ. ಯಾವುದಾದರೂ ಜೀವಸತ್ವ ಅಥವಾ ಪೂರಕ ಆಹಾರ ಬೇಡ ಎಂದರೆ ಅವುಗಳನ್ನು ಬಿಟ್ಟುಬಿಡಿ.

ಎನ್.ವ್ಹಿ ರಮೇಶ್,ಮೈಸೂರು ಮೊ:98455-65238

ಎನ್.ವ್ಹಿ ರಮೇಶ್,ಮೈಸೂರು
ಮೊ:98455-65238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!