ಹೂವುಗಳಿಂದ ಅದ್ಭುತ ಆರೋಗ್ಯ ಪ್ರಯೋಜನಗಳಿವೆ

ಹೂವುಗಳಿಂದ ಆರೋಗ್ಯ. ಹೂವುಗಳು – ಅದ್ಭುತ ಆರೋಗ್ಯ ಪ್ರಯೋಜನಗಳಿವೆ. ನಿಮ್ಮ ಸ್ವಲ್ಪ ಸಮಯವನ್ನು ಸಸ್ಯಗಳಿಗೆ ಕೊಡಿ,  ನಿಮ್ಮ ಮನಸ್ಸು, ದೇಹ ಮತ್ತು ಭಾವ ನೆಗಳು ನಿಮಗೆ ಧನ್ಯವಾದ ಹೇಳುತ್ತದೆ

 ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಯು ಒಂದು ಆಶ್ಚರ್ಯಕರ ಮತ್ತು ಸಂತೋಷಕರ ಸಂಗತಿಯನ್ನು ನಮ್ಮ್ಮಮುಂದೆ ಇಟ್ಟಿದೆ. ಹೌದು ,  ಹೂವುಗಳಿಗೆ ಒಂದು ವಿಶೇಷ ಶಕ್ತಿ ಇದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಹೂವುಗಳಿಂದ  ಅದ್ಭುತ ಆರೋಗ್ಯ ಪ್ರಯೋಜನಗಳಿವೆ. ವಿಶೇಷವಾಗಿ,  ಚಳಿಗಾಲದಲ್ಲಿ  ತೇವಾಂಶದ ಕೊರತೆ ಆಗುತದೆ.  ಇದು  ಕಾಲೋಚಿತ ಕಾಯಿಲೆಗೆ ಕಾರಣವಾಗುತ್ತದೆ. ಇದರಿಂದ ಬಹಳಷ್ಟು ಸೋಂಕು ಉಂಟಾಗುತ್ತದೆ.  ಆದರೆ ಹೂವುಗಳು ಗಾಳಿಯಲಿ ತೇವಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಸ್ಯಗಳು ಮತ್ತು ಹೂವುಗಳಿಂದ ನೀಡಲ್ಪಟ್ಟ ಈ ತೇವಾಂಶವು ಒಣ ಚರ್ಮ, ಒಣ ಗಂಟಲು ಮತ್ತು ಒಣ ಕೆಮ್ಮು ತಡೆಯಲು ಅಥವಾ ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಅಂದರೆ, ನಮಗೆ ಉತ್ತಮ ಆರೋಗ್ಯ ಪಡಯಲು ಸಹಾಯ ಮಾಡುತ್ತದೆ.

ಮನೋವಿಜ್ಞಾನದ ಭಾಷಯಲಿ ಮಾತನಾಡುವುದಾದರೆ – ಹೂವುಗಳು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಏಕೆಂದರೆ ಅವುಗಳು ಸುಂದರವಾಗಿ ಕಾಣುವುದಷ್ಟೇ ಅಲ್ಲದೆ ಸುವಾಸನೆ ಬೀರಿ ಭಾವನಾತ್ಮಕ ಮನೋಲ್ಲಾಸ ಮೂಡಿಸಲು  ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಸುಧಾರಿತ ಮನಸ್ಥಿತಿ ಹೆಚ್ಚಾಗಿ ಒಳ್ಳೆಯ ಆರೋಗ್ಯಕ್ಕೆ ಕಾರಣವಾಗುತ್ತದೆ. ಉತ್ತಮ ಮನಸ್ಥಿತಿಯಲ್ಲಿರುವ ಜನರು ಗಾಯ ಅಥವಾ ಅನಾರೋಗ್ಯದಿಂದ ವೇಗವಾಗಿ ಚೇತರಿಸುವ ಸಾಧ್ಯತೆಯಿದೆ.

ಜನರು ಹೆಚ್ಚಾಗಿ ಆಸ್ಪತ್ರೆಗೆ ರೋಗಿಗಳನ್ನು ನೋಡಲು ಹೋಗುವಾಗ ಹೂಗುಚ್ಛಗಳನ್ನು ಕೊಂಡುಹೋಗುತ್ತಾರೆ. ಬಹುಪಾಲು ಆಸ್ಪತ್ರೆಗಳು ಇದನ್ನು  ಸ್ವಾಗತಿಸುತ್ತವೆ ಏಕೆಂದರೆ ಇದು ರೋಗಿಗಳು ಚೇತರಿಸಲು ಸಹಾಯ ಮಾಡುತ್ತದೆ. ಹೆಚ್ಚಾಗಿ ಆಸ್ಪತ್ರೆಗಳು ಗಾರ್ಡನ್ ಜಾಗವನ್ನು ಹೊಂದಿರುತ್ತವೆ ಏಕೆಂದರೆ – ಆರೋಗ್ಯ ವೃತ್ತಿಪರರು ಸಸ್ಯಗಳು ಮತ್ತು ಹೂವುಗಳಿಗೆ ಇರುವ ಸಕಾರಾತ್ಮಕ ಪರಿಣಾಮವನ್ನು ಗುರುತಿಸಿದ್ದಾರೆ.

ಹೂವುಗಳು ನೆನಪು ಶಕ್ತಿ ಹೆಚ್ಚಿಸುತ್ತದೆಏನು? ಇದು ನಿಜವೇ ಎಂದು ಆಶ್ಚರ್ಯ ವಾಗಿದೆಯೇ? ವಿಜ್ಞಾನವು ಇದು ಸಾಧ್ಯ ಎಂದು ಹೇಳುತ್ತದೆ! ಸಸ್ಯಗಳು ಮತ್ತು ಹೂವುಗಳು ಗಾಳಿಯನ್ನು ಆಮ್ಲಜನಕಗೊಳಿಸುತ್ತವೆ, ಮೆದುಳಿನ ಕೋಶಗಳನ್ನು ಹೆಚ್ಚಿಸುತ್ತವೆ, ಇದು ನೆನಪಿನ ಶಕ್ತಿ, ಸ್ಪಷ್ಟತೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ. ಸಸ್ಯಗಳು ಮತ್ತು ಹೂವುಗಳನ್ನು ಮೆದುಳಿನ ಕೋಶಗಳಿಗೆ ಸೂಪರ್ಫುಡ್ ಎಂದು ಹೇಳಬಹುದು

ಹೂವುಗಳು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆಮನೆ ಅಥವಾ ಕಚೇರಿಯ ಸುತ್ತಲೂ ತಾಜಾ ಮತ್ತು ಪರಿಮಳ ಬೀರುವ –  ಬಣ್ಣ ಬಣ್ಣದ ಹೂವುಗಳು ಮತ್ತು ಗಿಡಗಳು ಸಕಾರಾತ್ಮಕ ಶಕ್ತಿ ಹೆಚ್ಚಿಸಲು ಸಹಾಯಮಾಡುತ್ತದೆ. ಅಷ್ಟೇ ಅಲ್ಲದೆ, ಹೂವುಗಳು ಮತ್ತು ಸಸ್ಯಗಳು ಸೃಜನಶೀಲತೆಯನ್ನು ಹೆಚ್ಚಿಸುತ್ತವೆ ಎಂಬುದು ಸಾಬೀತಾಗಿದೆ. ಸಸ್ಯಗಳು ಅಥವಾ ಹೂವುಗಳು ಇರುವ ಸ್ಥಳದಲ್ಲಿ ಕರಕುಶಲ ಮಾಡಿದರೆ ಸೃಜನಶೀಲತೆ ಹೆಚ್ಚಾಗುತ್ತದೆ.  ಒಗಟುಗಳು ಅಥವಾ ಮೆದುಳಿನ ವ್ಯಾಯಾಮಗಳನ್ನು ಮಾಡುವಾಗ ಸಸ್ಯದ  ಬಳಿ ಕುಳಿತುಕೊಳ್ಳಿ. ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ.

ಹೂವುಗಳು ಒತ್ತಡ ನಿವಾರಣೆಗೆ ಸಹಾಯ ಮಾಡುತ್ತವೆಒತ್ತಡದಲ್ಲಿರುವ ಅಥವಾ ಹತಾಶ ವ್ಯಕ್ತಿಗಳು ತೋಟಗಾರಿಕೆಯಲ್ಲಿ ತಮ್ಮನು ತಾವು ತೊಡಗಿಸಿಕೊಳ್ಳಭೇಕು. ಹೂವುಗಳ ಪರಿಮಳವು ವಿಶ್ರಾಂತಿಗೆ ಸಹಾಯ ಮಾಡುತ್ತದೆ. ನೀವು ಗಮನಿಸಿರಬಹುದು ಸ್ನಾನದ ಉತ್ಪನ್ನಗಳು ಹೆಚ್ಚಾಗಿ ಹೂವುಗಳಾಗಿವೆ. ಉದಾಹರಣೆಗೆ : ಲ್ಯಾವೆಂಡರ್-ಪರಿಮಳಯುಕ್ತ ಸ್ನಾನ ಅಥವಾ ಮೇಣದಬತ್ತಿಯನ್ನು ಯಾರು ಇಷ್ಟಪಡುವುದಿಲ್ಲ? ಜನರು ವಿಶ್ರಾಂತಿ ಪಡೆಯಲು ಉದ್ಯಾನಕ್ಕೆ ಎಷ್ಟು ಬಾರಿ ಭೇಟಿ ನೀಡುತ್ತಾರೆ ಎಂಬುದನ್ನು ಯೋಚಿಸಿ. ಇದರ ಹಿಂದಿನ ವಿಜ್ಞಾನ ನಮಗೆ ಅರ್ಥವಾಗದಿದ್ದರೂ, ಉದ್ಯಾನಗಳು ವಿಶ್ರಾಂತಿಗೆ ಸಹಾಯ ಮಾಡುತ್ತವೆ ಎಂಬುದನ್ನು ನಿರಾಕರಿಸುವುದು ಕಠಿಣವಾಗಿದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!