ಫಾಲೂನ್ ದಾಫ ಆಧ್ಯಾತ್ಮಿಕ ಸಾದನಾಭ್ಯಾಸವನ್ನು ಜುಲೈ 20, 1999 ರ ರಾತ್ರಿ ಚೀನಾದ್ಯಂತ ನಿಷೇಧಿಸಿತು. ಕೊರೋನಾ ವೈರಸ್ ಉಲ್ಬಣಗೊಂಡಿದ್ದರೂ ಸಹ ಹಿಂಸೆ ಇಂದಿಗೂ ಅಬಾಧಿತವಾಗಿ ನಡೆಯುತ್ತಿದೆ.ಜುಲೈ 20 ರಂದು ಭಾರತ ಮತ್ತು ವಿಶ್ವದಾದ್ಯಂತ ಫಾಲುನ್ ದಫಾ ಅಭ್ಯಾಸಿಗರು “ಪ್ರತಿಭಟನಾ ದಿನ” ವನ್ನು ಆಚರಿಸುತ್ತಾರೆ.
ಜುಲೈ 20, 1999 ರ ಮಧ್ಯರಾತ್ರಿ ಯಲ್ಲಿ ಚೀನಾದಲ್ಲಿ ನಡೆದ ಘಟನೆಯ ನೆನಪು ಮತ್ತು ಆ ಆಘಾತವನ್ನು ಈ 21 ವರ್ಷಗಳು ಅಳಿಸಲು ಸಾಧ್ಯವಿಲ್ಲ. ಕತ್ತಲೆಯ ಮುಸುಕಿನಡಿಯಲ್ಲಿ ಪೋಲೀಸ್ ಮತ್ತು ಭದ್ರ ತೆಯವರು ನೂರಾರು ಜನ ಮುಗ್ದರನ್ನು ಅವರ ಮನೆಗಳಿಂದ ಎಳೆದೊಯ್ದು ಅವರನ್ನು ಕಾರಾಗೃಹ ಮತ್ತು ಬಂಧನ ಕೇಂದ್ರ ಗಳಿಗೆ ಬಲವಂತವಾಗಿ ನೂಕಿದ್ದರು. ಚೀನಾದ್ಯಂತ ಕೊರೋನಾ ವೈರಸ್ ಉಲ್ಬಣಗೊಂಡಿದ್ದರೂ ಸಹ ಈ ಹಿಂಸೆ ಇಂದಿಗೂ ಅಬಾಧಿತವಾಗಿ ನಡೆಯುತ್ತಿದೆ. ಫಾಲೂನ್ ದಾಫ ಆಧ್ಯಾತ್ಮಿಕ ಸಾದನಾಭ್ಯಾಸವನ್ನು ಅಭ್ಯಸಿಸುತ್ತಿರುವ ಜನರು ಇಂದು ಚೀನೀ ಕಮ್ಯುನಿಸ್ಟ ಪಕ್ಷ (ಸಿಸಿಪಿ)ದ ಲಕ್ಷ್ಯವಾಗಿದ್ದಾರೆ.
ಜನರು ಮಾಡಿರುವ ತಪ್ಪಾದರೂ ಏನು?
ಉನ್ನತ ಹಂತದ ನೈತಿಕತೆಯನ್ನು ಬೆಳೆಸಲು ಒತ್ತುನೀಡುವ, ಮನಸ್ಸು ಮತ್ತು ದೇಹದ ಶಾಂತಿಯುತ ಆಧ್ಯಾತ್ಮಿಕ ಅಭ್ಯಾಸವಾದ ಫಾಲೂನ್ ಗಾಂಗ್ ಅಥವ ಫಾಲೂನ್ ದಾಫಾವನ್ನು ಈ ಜನರು ಅಭ್ಯಾಸ ಮಾಡುತ್ತಾರೆ. ಇದನ್ನು ಹೊರತುಪಡಿಸಿ ಬೇರೇನಿಲ್ಲ! ಸ್ವಯಂ ಚೀನೀ ಸರ್ಕಾರದ ಖುದ್ದು ಅಧ್ಯಯನದಂತೆ-ಪಾಲೂನ್ ದಾಫಾವು ಸುಮಾರು 7 ಕೋಟಿಗಿಂತಲೂ ಅಧಿಕ ಜನರು ಅಭ್ಯಸಿಸಿತ್ತಿರುವ ಅತ್ಯಂತ ಜನಪ್ರಿಯ ಹಾಗೂ ಸರ್ಕಾರಕ್ಕೆ ಆಸ್ಪತ್ರೆ ಯ ಖರ್ಚಿಲ್ಲದೆ ಲಕ್ಷಾಂತರ ಹಣವನ್ನು ಉಳಿಸುವ ಒಂದು ನಿರುಪದ್ರವಿ ಅಭ್ಯಾಸವೆಂದು ತಿಳಿದಿದ್ದರೂ ಸಹ ಸಿಸಿಪಿಯು ಈ ಸಾಧನೆಯನ್ನು ಒಂದು ಕೆಟ್ಟ ಅಭ್ಯಾಸವೆಂದು ಪರಿಗಣಿಸಿರುವುದು ದುರದೃಷ್ಟಕರ. ಕಮ್ಯುನಿಸ್ಟ ಆಢಳಿತದ ಉನ್ನತ ಮಿಲಿಟರಿ ಅಧಿಕಾರಿಗಳು ಸಹ ಈ ಅಭ್ಯಾಸವನ್ನು ಕೈಗೆತ್ತಿಕೊಂಡಿರುವುದು ಒಂದು ಆಶ್ಚರ್ಯದ ಸಂಗತಿಯೇ ಸರಿ.
ಆದರೆ ಈ ಅಭ್ಯಾಸವನ್ನು ಏಕೆ ನಿಷೇಧಿಸಲಾಯಿತು?
ಈ ಅಭ್ಯಾಸದ ಜನಪ್ರಿ ಯತೆಯ ನಿರಂತರತೆಯು ಕಮ್ಯುನಿಸ್ಟ ಆಡಳಿತಕ್ಕೆ ನುಂಗಲಾರದ ತುತ್ತಾಗಿ ಪರಿಗಣಿತವಾಗಿತ್ತು. ಜನರಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ನಿರಾಕರಿಸುವುದು ಹಾಗೂ ಮನಸ್ಸು ಮತ್ತು ಚೈತನ್ಯವನ್ನು ನಿಯಂತ್ರಿ ಸುವುದು ಚೀನೀ ಆಡಳಿತದ ಒಂದು ಸ್ವರೂಪ. ಅಲ್ಲದೆ ಬಲವಾದ ನೈತಿಕ ಸ್ವಭಾವವನ್ನು ಹುಟ್ಟುಹಾಕುವ ಒಂದು ನೀತಿವಂತ ಅಭ್ಯಾಸವು ಸರ್ಕಾರದ ಭ್ರಷ್ಟಾಚಾರ ಮತ್ತು ತಪ್ಪಾದ ನೀತಿಗಳನ್ನು ಪ್ರಶ್ನಿಸಿ ಅವನ್ನು ಬಹಿರಂಗಪಡಿಸುವುದೆಂಬ ಭಯ ಸರ್ಕಾರಕ್ಕಿರುವುದು.
ಆದ್ದರಿಂದ 1999 ಜುಲೈ 20ರಂದು ಫಾಲೂನ್ ಗಾಂಗ್‍ನ್ನು ಸಿಸಿಪಿಯು ಔಪಚಾರಿಕವಾಗಿ ದೇಶಾದ್ಯಂತ ನಿಷೇಧಿಸಿತು. ಇದು ಈ 21 ವರ್ಷಗಳ ದಿರ್ಘಾವಧಿಯಲ್ಲಿ ಸರ್ಕಾರವೇ ರೂಪಿಸಿ ಆಯೋಜಿಸಿರುವ ಅಧಿಕೃತವಾದ ಒಂದು ದ್ವೇಷಾಭಿಯಾನವಾಗಿದೆ. ಚೀನಾದ ಮಾಜಿ ಅಧ್ಯಕ್ಷ ಜಿಯಾಂಗ್ ಜೆಮಿನ್‍ರವರಿಂದ ರೂಪಿತವಾದ ಈ ಕಿರುಕುಳವು ಸಿಸಿಪಿನ ಮೋಸಗೊಳಿಸುವ ಮತ್ತು ವೈರಾಣು ಸ್ವಭಾವಿ ನೀತಿಗೆ ಒಂದು ಅಭೂತಪೂರ್ವ ನಿದರ್ಶನ.
ಜನರ ನಿಜವಾದ ಶತ್ರು ಯಾರು?
ಅಂತರಾಷ್ಟ್ರೀಯ ಹಕ್ಕುಗಳ ಒಡಂಬಡಿಕೆಗೆ ಸರ್ಕಾರವೇ ಸಹಿ ಮಾಡಿ ತಾನೇ ನೇರವಾಗಿ ಉಲ್ಲಂಘನೆ ಮಾಡಿರುವುದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಸಿಸಿಪಿಯು ಫಾಲೂನ್ ದಾಫಾವನ್ನು ಮುಂಚಿನಿಂದಲೂ ನಿಗ್ರಹಿಸಿರುವುದು. ಫಾಲೂನ್ ಗಾಂಗ್‍ನ್ನು ನಿರ್ಮೂಲನೆಗೊಳಿಸುವ ಹೀನಾಯ ಮತ್ತು ಅತಿಕೆಟ್ಟ ಮನಸ್ಥಿತಿಯ ಉನ್ನತ ಆದೇಶಗಳು “ಯಾವುದೇ ಅತಿಯಾದ ವಿಧಾನವನ್ನೂ ಬಿಟ್ಟಿಲ್ಲ” ಪೋಲಿಸ್ ಮತ್ತು ಹಿಂಸೆ ನೀಡುವ ಶಿಬಿರದ ಅಧಿಕಾರಿಗಳು “ರೂಪಾಂತರಿಸುವ” ಅಭ್ಯಾಸಿಗರ ಸಂಖ್ಯೆಯ ಕೋಟಾವನ್ನು ಪೂರೈಸಬೇಕು. ಇದಕ್ಕಾಗಿ ಜೈಲುಶಿಕ್ಷೆ, ಚಿತ್ರ ಹಿಂಸೆ, ಮತ್ತು ಹತ್ಯೆಯನ್ನು ಒಳಗೊಂಡಿರುವ ಯಾವುದೇ ವಿಧಾನಗಳನ್ನು ಬಳಸಲು ಇವರು ಸ್ವತಂತ್ರರು. ಕೋಟಾ ಪೂರ್ಣಗೊಳಿಸುವ ಪೋಲೀಸರಿಗೆ ಬೋನಸ್ ಅಥವ ಬಡ್ತಿ ಸಿಗುವುದು ಪೂರ್ಣಗೊಳಿಸದವರು ವಜಾಗೊಳ್ಳಬಹುದು.
ಸಾಕ್ಷ್ಯಗಳನ್ನು ಮುಚ್ಚಿಡಲು ಆದೇಶಿಸಲಾಗಿದ್ದು “ಎಲ್ಲಾ ಸಾವುಗಳನ್ನು ಆತ್ಮಹತ್ಯೆ” ಎಂದು ವರದಿ ಮಾಡಲಾಗುತ್ತಿದೆ ಹಾಗೂ ಶವಗಳನ್ನು ತಕ್ಷಣವೇ ಅಂತ್ಯಕ್ರಿ ಯೆ ಮಾಡಲಾಗುತ್ತಿದೆ. ಕುಟುಂಬಗಳನ್ನು ಛಿದ್ರ ಗೊಳಿಸಲಾಗಿದೆ, ಮನೆಗಳನ್ನು ದರೋಡೆ ಮಾಡಿ ನಾಶಪಡಿಸಲಾಗಿದೆ. ಹತ್ತಾರು ಕೋಟಿ ಅಭ್ಯಾಸಿಗರ ಕುಟುಂಬಸ್ಥರು, ಸ್ನೇಹಿತರು ಮತ್ತು ಸಹೋದ್ಯೋಗಿಗಳು ಈ ಹತ್ಯೆಗಳಿಂದ ಹಾನಿಗೊಳಗಾಗಿದ್ದಾರೆ. ತೆರಿಗೆ ಪಾವತಿದಾರರಿಂದ ಸಂಗ್ರ ಹಗೊಂಡ ಹಣವನ್ನು ಸರ್ಕಾರವು ಈ ನಿಷೇಧ ಕಾರ್ಯಕ್ಕೆ ಬಳಸುತ್ತಿದೆ. ದೇಶದ ಆರ್ಥಿಕ ಸಂಪನ್ಮೂಲದ ಕಾಲು ಭಾಗದಷ್ಟು ಹಣವನ್ನು ಈ ಶೋಷಣಾತ್ಮಕ ಕ್ರಿ ಯೆಯ ಸುಸ್ಥಿರತೆಗೆ ಬಳಸಲಾಗುತ್ತಿದೆ. ಫಾಲೂನ್ ದಾಫಾ ಅಭ್ಯಾಸಿಗರನ್ನು ಚೈನಾದಲ್ಲಿ ಅವರ ಅಂಗಾಂಗಗಳಿಗಾಗಿಯೂ ಅತ್ಯಂತ ವ್ಯವಸ್ಥಿತವಾಗಿ ಕೊಲೆ ಮಾಡಲಾಗುತ್ತಿದೆ. ಕಾನೂನು ಬಾಹಿರವಾದ ಈ ಅಂಗಾಂಗ ಕೃಷಿ ಉಧ್ಯಮವು ಸರ್ಕಾರಿ ಬೆಂಬಲಿತವಾಗಿದ್ದು ಸರ್ಕಾರವು ಕೋಟಿಗಟ್ಟಲೆ ಹಣವನ್ನು ಬಾಚುತ್ತಿದೆ.
ಇಷ್ದೊಂದು ಹಿಂಸೆ ಮತ್ತು ಕ್ರೌರ್ಯತೆಯನ್ನು ತಡೆದುಕೊಳ್ಳುವ ಶಕ್ತಿ ಫಾಲೂನ್ ದಾಫಾ ಅಭ್ಯಾಸಿಗರಿಗೆ ಬಂದಿರುವುದು ಹೇಗೆ?
ಶಾಂತಿಯುತ ಪ್ರ ತಿರೊದವು ಫಾಲೂನ್ ದಾಫಾ ಸಾಧಕರ ವಿಶಿಷ್ಟ ಲಕ್ಷಣವಾಗಿದೆ. ಸಾಧಕರ ಅಹಿಂಸಾತ್ಮಕ ಪ್ರತಿಕ್ರಿಯೆಯನ್ನು ಹೆಚ್ಚಾಗಿ ಮಹಾತ್ಮಾ ಗಾಂಧೀಜಿ ಮತ್ತು ಡಾ. ಮಾರ್ಟಿನ್ ಲೂಥರ್ ಕಿಂಗ್‍ರವರೊಂದಿಗೆ ಹೋಲಿಸಲಾಗಿದೆ. ಸತ್ಯ, ಕರುಣೆ ಮತ್ತು ತಾಳ್ಮೆಗಳ ಮನ್ನಣೆಯಿಂದ ಸಾಧಕರ ಜೀವನವು ದುಷ್ಕರ್ಮಿಗಳನ್ನು ವಿನಮ್ರ ಗೊಳಿಸುತ್ತಿದೆ ಮತ್ತು ನೈತಿಕವಾಗಿ ಅವರನ್ನು ದುರ್ಬಲಗೊಳಿಸುತ್ತಿದೆ. ಈ ಕಾರಣಕ್ಕಾಗಿಯೇ ಫಾಲೂನ್ ದಾಫಾದ ನಿಷ್ಟಾವಂತ ಸಾಧಕರು ಸುದೀರ್ಘ 21 ವರ್ಷಗಳಿಂದಲೂ ಚೀನಾದ ಅಸಾಧಾರಣ ಭದ್ರತಾ ತಂತ್ರಗಳು ಮತ್ತು ಸಾಧನಗಳ ಭಾರವನ್ನು ಸಹಿಸಿ ನಿಂತಿರುವುದು. ಇದು 70 ಬೆಸ ವರ್ಷಗಳ ಕಮ್ಯುನಿಸ್ಟ ಆಡಳಿತಕ್ಕೆ ನಿರಂತರ ಮತ್ತು ಕಠಿಣ ಸವಾಲು ಎಂದು ಪರಿಗಣಿತವಾಗಿದೆ.
ಕಳೆದ 21 ವರ್ಷಗಳಲ್ಲಿ ಪಾಲೂನ್ ದಾಫಾ ಸಾಧಕರು ಪ್ರ ಪಂಚದಾದ್ಯಂತ ಅಭೂತಪೂರ್ವ ಅಭಿಯಾನವನ್ನು ಮುಂದುವರೆಸಿದ್ದಾರೆ. ಇದು ಕಟ್ಟುನಿಟ್ಟಾಗಿ ಅಹಿಂಸಾತ್ಮಕ ಮತ್ತು ರಾಜಕೀಯೇತರವಾಗಿದ್ದು ಅಂತರ್ಜಾಲ ಮತ್ತು ವೆಬ್ ಸೈಟುಗಳ ಮೂಲಕ ವಿಶ್ವವ್ಯಾಪಿ ಸಂಪರ್ಕವನ್ನು ನಿರ್ಮಿಸಲಾಗಿದೆ. ಮಾನವ ಹಕ್ಕುಗಳ ಸಂಘಟನೆಗಳು, ಪ್ರಮುಖ ಸರ್ಕಾರೇತರ ಸಂಸ್ಥೆಗಳು, ರಾಜಕಾರಣಿಗಳು ಮತ್ತು ವಿವಿದ ಸರ್ಕಾರಗಳ ನಾಯಕರುಗಳು ಅಭ್ಯಾಸಿಗರ ದನಿಗಳಿಗೆ ತಮ್ಮ ಕೋರಸ್ ಸೇರಿಸಿ ಪಾಲೂನ್ ದಾಫಾ ನಿಷೇಧಕ್ಕೆ ಚೀನೀ ಕಮ್ಯುನಿಸ್ಟ ಪಕ್ಷವನ್ನು ಖಂಡಿಸುತ್ತಿದ್ದಾರೆ. ಅವರ ಏಕೈಕ ಉದ್ದೇಶವೆಂದರೆ ಪಾಲೂನ್ ಗಾಂಗ್ ಅಭ್ಯಾಸಿಗರು ತಮ್ಮ ನಂಬಿಕೆಗಳನ್ನು ಮುಕ್ತವಾಗಿ ಅಭ್ಯಾಸ ಮಾಡಲು ಅವರ ಮೂಲಭೂತ ಮಾನವ ಹಕ್ಕುಗಳನ್ನು ಮರುಸ್ಥಾಪಿಸುವುದು.
ಈ ಕರೋನಾ ಮಹಾಮಾರಿಯ ಸಮಯದಲ್ಲಿ ಚೈನಾದಲ್ಲಿ ಅನೇಕ ಫಾಲೂನ್ ದಾಫಾ ಅಭ್ಯಾಸಿಗರು-ಅಲ್ಲಿನ ಸಾರ್ವಜನಿಕರು ತಮ್ಮ ಆರೋಗ್ಯವನ್ನು ಮರಳಿ ಪಡೆಯಲು ಹಾಗೂ ಅವರ ಉತ್ತಮ ಭವಿಷ್ಯಕ್ಕಾಗಿ ಚೀನೀ ಕಮ್ಯುನಿಸ್ಟ ಪಕ್ಷವನ್ನು ತೊರೆಯಲು ಸಹಾಯ ಮಾಡಿದ್ದಾರೆ ಎಂಬುವುದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ ವಿಚಾರ. 2004ರಲ್ಲಿ ಆರಂಭವಾದ ಚೀನೀ ಕಮ್ಯುನಿಸ್ಟ ಪಕ್ಷವನ್ನು ತೊರೆಯುವ ಆಂಧೋಲನದಲ್ಲಿ ಸುಮಾರು 30 ಕೋಟಿಗಿಂತಲೂ ಅಧಿಕ ಜನರು ಸಹಿ ಮಾಡಿರುತ್ತಾರೆ. ಈ ಮೂಲಕ ಪಕ್ಷದ ವಿಪತ್ತುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ.
ಈ ಸಕಾರಾತ್ಮಕ ಟಿಪ್ಪಣಿಯ ಮುಕ್ತಾಯ: ಜುಲೈ 20 ರಂದು ಭಾರತ ಮತ್ತು ವಿಶ್ವದಾದ್ಯಂತ ಫಾಲುನ್ ದಫಾ ಅಭ್ಯಾಸಿಗರು “ಪ್ರತಿಭಟನಾ ದಿನ” ವನ್ನು ಆಚರಿಸುತ್ತಾರೆ. ಈ ದಿನವು ಈ ಹಿಂಸಾತ್ಮಕ ಅಭಿಯಾನದ ವಾರ್ಷಿಕ ದಿನ ಹಾಗೂ ಅನಾವಶ್ಯಕವಾಗಿ ಹಾನಿಗೊಳಗಾದ ಲಕ್ಷಾಂತರ ಜನರ ಸ್ಮರಣೆಯ ಸಮಯ ಎಂದು ಪಾಲೂನ್ ದಾಫಾ ಮಾಹಿತಿ ಕೇಂದ್ರದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀ ಲೆವಿ ಬ್ರೌಡ್ ಹೇಳುತ್ತಾರೆ. ಇದು ಭರವಸೆಯ ಸಮಯವೂ ಹೌದು. ಸಿಸಿಪಿಯು ಪಾಲೂನ್ ದಾಫಾ ಸಾಧಕರನ್ನು ಮೂರು ತಿಂಗಳಲ್ಲಿ ದಮನಗೊಳಿಸಲು ಯತ್ನಿಸಿತ್ತು ಇಪ್ಪತ್ತು ವರ್ಷಗಳ ನಂತರವೂ ಅಸಂಖ್ಯಾತ ಚೀನೀ ನಾಗರಿಕರು ಈ ಅಭ್ಯಾಸದ ಮೂಲಕ ಶಾಂತಿ ಮತ್ತು ಆಧ್ಯಾತ್ಮಿಕ ಪೂರೈಕೆಯ ಕಂಡುಕೊಳ್ಳುವಿಕೆಯನ್ನು ಮುಂದುವರೆದಿದ್ದಾರೆ ಮತ್ತು ಅನೇಕಾನೇಕ ಜನರು ಇದನ್ನು ಮಾಡಲು ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಎದ್ದು ನಿಂತಿದ್ದಾರೆ.