ಆಯತಪ್ಪಿದ ಭ್ರೂಣ

 (Ectopic Pregnancy)
ಗರ್ಭಕೋಶವು ಭ್ರೂಣ ಬೆಳವಣಿಗೆಗೆಂದೇ ಇರುವಂತಹದ್ದು ಅಥವಾ ಸೃಷ್ಠಿಯಾಗಿರುವುದು. ಗರ್ಭಕೋಶದಲ್ಲಿ ಬೆಳೆದ ಮಕ್ಕಳು ಆರೋಗ್ಯ ಪೂರ್ಣರಾಗಿದ್ದು ಪ್ರಸವ ಸಮಯದಲ್ಲಿ ಯಾವುದೇ ತೊಂದರೆಯಿಲ್ಲದೇ ಜನಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಅನುಕೂಲವಾಗುತ್ತದೆ. ಇದನ್ನು ಗರ್ಭಕೋಶದ ಒಳಗಿನ ಭ್ರೂಣ ಎಂದು ಕರೆಯುತ್ತಾರೆ.
ಕೆಲವೊಂದು ಸಾರಿ ಗರ್ಭಕೋಶದಲ್ಲಿ ಭ್ರೂಣ ಬೆಳವಣಿಗೆಯಾಗದೇ ಇತರೆಡೆಯಲ್ಲಿ ಭ್ರೂಣವು ಬೆಳೆಯುವ ಸಾಧ್ಯತೆ ಇರುತ್ತದೆ. ಇದನ್ನು “ಆಯತಪ್ಪಿದ ಬಸಿರು” (Ectopic Pregnancy) ಎಂದು ಕರೆಯುತ್ತಾರೆ. ಈ ರೀತಿ ಬೆಳವಣಿಗೆ ಶೇ. 2ರಷ್ಟು ಕಂಡುಬರುತ್ತದೆ. ಈ ರೀತಿಯ ಭ್ರೂಣ ಬೆಳವಣಿಗೆ ಗರ್ಭಕೋಶದ ಹೊರಗೆ, ಉದರದ ಯಾವ ಭಾಗದಲ್ಲಾದರೂ ಬೆಳೆಯಬಹುದು. ಮುಖ್ಯವಾಗಿ ಗರ್ಭನಾಳದಲ್ಲಿ ಭ್ರೂಣ ಬೆಳೆಯುವ ಸಾಧ್ಯತೆ ಅತ್ಯದಿಕ. ಇದು ಶೇ.95 ರಷ್ಟಿರುತ್ತದೆ. ಇದನ್ನು ಗರ್ಭನಾಳದ ಬಸಿರು (Tubal Pregnancy) ಎಂದು ಕರೆಯುತ್ತಾರೆ.
ಆಯತಪ್ಪಿದ ಗರ್ಭ
ಆಯತಪ್ಪಿದ ಗರ್ಭದ ಅಂಡನಳಿಕೆಗಳಲ್ಲಿ ಅಲ್ಲದೆ ಶರೀರದ ಬೇರೆ ಭಾಗಗಳಲ್ಲೂ ಅಂದರೆ ಅಂಡಾಶಯಗಳಲ್ಲಿ, ಕೀಳ್ಗುಳಿಯಲ್ಲಿ ಅಥವಾ ಉದರದ ಇತರ ಭಾಗದಲ್ಲಿಯೂ ಗರ್ಭವು ಕೂರಬಹುದು.

ಗರ್ಭನಾಳದ ಬಸಿರು ಆಗುವ ಬಗೆ:
ಅಂಡಾಣು ಮತ್ತು ವೀರ್ಯಾಣು ಮಿಲನವಾಗಿ ನಂತರ ಫಲಿತ ಅಂಡಾಣುವು ಗರ್ಭನಾಳದ ಮೂಲಕ ಗರ್ಭಕೋಶವನ್ನು ತಲುಪುತ್ತದೆ. ಗರ್ಭಕೋಶದಲ್ಲಿ ಭ್ರೂಣ ಬೆಳವಣಿಗೆಯಾಗುತ್ತದೆ. ಈ ಕ್ರಿಯೆ ನಡೆಯುವ ಮಧ್ಯದಲ್ಲಿ ಅಂದರೆ ಅಂಡಾಣು ಚಲನೆಯಲ್ಲಿ ದೋಷ ಉಂಟಾಗಿ ಗರ್ಭನಾಳದಲ್ಲಿಯೇ ಭ್ರೂಣವು ಬೆಳೆಯುತ್ತದೆ. ಇದರಿಂದ ಗರ್ಭನಾಳ ಮುಚ್ಚಿಹೋಗುತ್ತದೆ ಮತ್ತು ಭ್ರೂಣವು ಗರ್ಭನಾಳದಲ್ಲಿಯೇ ಬೆಳವಣಿಗೆಯಾಗುತ್ತದೆ. ಈ ರೀತಿ ಭ್ರೂಣ ಬೆಳವಣಿಗೆಯಾಗುವುದರಿಂದ ಭ್ರೂಣ ಬೆಳವಣಿಗೆಗೂ ಮತ್ತು ತಾಯಿಯ ಆರೋಗ್ಯಕ್ಕೂ ತೊಂದರೆ ಉಂಟಾಗುತ್ತದೆ.
ಗರ್ಭನಾಳದ ಬಸಿರು ಉಂಟಾಗಲು ಕಾರಣಗಳು

  • ಅಂಡನಳಿಕೆಯಲ್ಲಿ ತೊಂದರೆ, ಕಾಯಿಲೆ, ಸೋಂಕು, ಕಿರಿದಾದ ಅಂಡನಳಿಕೆ ಇತ್ಯಾದಿ ಸಮಸ್ಯೆಗಳಿದ್ದಾಗ
  • ಅಂಡನಾಳದ ಬೆಳವಣಿಗೆ ಸರಿಯಾಗಿ ಆಗದೇ ಇರುವುದು, ಅಂಡನಾಳವು ಕೊಂಕಾಗಿರುವುದು.
  • ಸಂತಾನಹರಣ ಶಸ್ತ್ರಚಿಕಿತ್ಸೆಯ ನಂತರ ಅಂಡನಳಿಕೆಗಳನ್ನು ಮರು ಜೋಡಣೆಯಾದವರಲ್ಲಿಯೂ ಸಹ ಕಂಡುಬರುತ್ತದೆ.
  • ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದರಿಂದ ಮತ್ತು ಹಾರ್ಮೋನ್‍ಗಳ ಉಪಯೋಗ ಅದರಲ್ಲೂ ಮುಖ್ಯವಾಗಿ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟಿರೋನ್ ಹಾರ್ಮೋನ್‍ಗಳನ್ನು ತೆಗೆದುಕೊಳ್ಳುವುದರಿಂದ ಅಂಡನಳಿಕೆಗಳ ಒಳಗೆ ಭ್ರೂಣ ಚಲಿಸುವಿಕೆ ನಿಧಾನವಾಗುತ್ತದೆ.
  • ಗರ್ಭನಿರೋಧಕ ವಂಕಿ ಅಳವಡಿಕೆಯನ್ನು ಉಪಯೋಗಿಸಿಯೂ ಗರ್ಭಧರಿಸಿರುವವರಲ್ಲಿ ಈ ಸಮಸ್ಯೆ ಕಂಡುಬರುತ್ತದೆ.

ಗರ್ಭನಾಳದ ಬಸಿರನ್ನು ತಿಳಿಸುವ ಸೂಚನೆಗಳು ಅಥವಾ ಲಕ್ಷಣಗಳು
ಗರ್ಭನಾಳದ ಬಸಿರನ್ನು ತಿಳಿಯಪಡಿಸುವ ಲಕ್ಷಣಗಳನ್ನು ಎರಡು ಹಂತಗಳಾಗಿ ವಿಂಗಡಿಸಬಹುದು. ಒಡೆಯದ ಭ್ರೂಣ ಮತು ಒಡೆದ ಭ್ರೂಣ. ಇವುಗಳಲ್ಲಿ ರೋಗಲಕ್ಷಣಗಳು ವಿಭಿನ್ನವಾಗಿರುತ್ತವೆ.

ಒಡೆಯದ ಭ್ರೂಣಾವಸ್ಥೆ

  • ಹೊಟ್ಟೆ ಅಥವಾ ಕೆಳಹೊಟ್ಟೆ ನೋವು ಉಂಟಾಗುತ್ತದೆ.
  • ಮುಟ್ಟು ನಿಲ್ಲುವುದು
  • ಅಸಹಜವಾಗಿ ಯೋನಿಯಲ್ಲಿ ರಕ್ತಸ್ರಾವ
  • ಸ್ತನಗಳು ಮೃದುವಾಗುವುದು
  • ವಾಂತಿಯಾಗುವುದು
  • ಸೊಂಟನೋವು ಕಂಡುಬರುತ್ತದೆ.
  • ಈ ರೀತಿಯಲ್ಲಿ ಸೂಚನೆಗಳು ಕಂಡುಬಂದರ ಗರ್ಭನಾಳದಲ್ಲಿ ಗರ್ಭಧರಿಸುವ ಸಾಧ್ಯತೆಗಳು ಇರುತ್ತವೆ.

ಒಡೆದ ಭ್ರೂಣಾವಸ್ಥೆ

  • ಅತಿಯಾದ ಹೊಟ್ಟೆನೋವು
  • ತಲೆಸುತ್ತುವಿಕೆ
  • ಭುಜಭಾಗದಲ್ಲಿ ನೋವು ಕಂಡುಬರುವುದು
  • ತಪಾಸಣಾ ವಿಧಾನಗಳು:
  • ಕೀಳ್ಗುಳಿ ಪರೀಕ್ಷೆ (Pelvic Examination) ಮತ್ತು ಬಸಿರು ಪರೀಕ್ಷೆ (Pregnancy Test)
  • ರಕ್ತ ಪರೀಕ್ಷೆ ಮತ್ತು ಮೂತ್ರ ಪರೀಕ್ಷೆ
  • ಕೀಳ್ಗುಳಿ ಸ್ಕ್ಯಾನಿಂಗ್ (Pelvic Scanning)
  • ಯೋನಿ ಮುಖಾಂತರ ಸ್ಕ್ಯಾನಿಂಗ್ (TVS)
  • ಉದರದರ್ಶಕ ಪರೀಕ್ಷೆ (Laparoscopy) ಮತ್ತು ಗರ್ಭದರ್ಶಕ ಪರೀಕ್ಷೆ (Hysteroscopy)

ಇದರಿಂದಾಗುವ ದುಷ್ಪರಿಣಾಮಗಳು

ಆಯತಪ್ಪಿದ ಬಸಿರು ಅತ್ಯಂತ ಅಪಾಯಕಾರಿಯಾದ ಸ್ಥಿತಿ. ಈ ತೊಂದರೆಯನ್ನು ತಕ್ಷಣವೇ ಗುರುತಿಸಿ ಸರಿಯಾದ ಚಿಕಿತ್ಸೆ ಮಾಡದಿದ್ದರೆ ತೀವ್ರವಾದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ಅಂಡನಳಿಕೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಇದೇ ಮುಂದೆ ಬಂಜೆತನಕ್ಕೆ ಕಾರಣವಾಗಬಹುದು. ಇದರಿಂದ ಅಂಡಾಶಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಮುಂದೆ ಇದರಿಂದ ಸಾವು ಸಹ ಸಂಭವಿಸಬಹುದು.

ಚಿಕಿತ್ಸೆಗಳು

ಗರ್ಭನಾಳದ ಬಸಿರಿಗೆ ಚಿಕಿತ್ಸೆಯು ಅವುಗಳ ಕಾರಣಗಳನ್ನು ಅವಲಂಬಿಸಿರುತ್ತದೆ.
ಮೊದಲಿಗೆ ಒಡೆಯದ ಭ್ರೂಣಾವಸ್ಥೆಗೆ ಅಲ್ಟ್ರಾಸೌಂಡ್‍ನ ಸಹಾಯದಿಂದ ಸೂಜಿಯ ಮುಖಾಂತರ ಚುಚ್ಚುಮದ್ದು ನೀಡಬಹುದು, ಉದರದರ್ಶಕ ಶಸ್ತ್ರಕ್ರಿಯೆ (ಲ್ಯಾಪ್ರೋಸ್ಕೋಪಿ) ಮತ್ತು ತೆರೆದ ಶಸ್ತ್ರಕ್ರಿಯೆಯನ್ನು ಲ್ಯಾಪ್ರೊಟೊಮಿ ಮಾಡಬೇಕಾಗುತ್ತದೆ.
ಒಡೆದ ಭ್ರೂಣಾವಸ್ಥೆ: ಈ ಹಂತವು ಮುಂದುವರೆದ ಹಂತವಾಗಿರುತ್ತದೆ ಮತ್ತು ಇದರಿಂದ ಸ್ತ್ರೀ ಮಾನಸಿಕವಾಗಿ ಧೈರ್ಯಗುಂದಿರುತ್ತಾಳೆ. ಈ ಹಂತದಲ್ಲಿ ಅವಳಿಗೆ ಮಾನಸಿಕ ಸ್ಥೈರ್ಯ ತುಂಬುವುದರ ಜೊತೆಗೆ ಉದರದರ್ಶಕ ಶಸ್ತ್ರಚಿಕಿತ್ಸೆ ಅಥವಾ ತೆರೆದ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ.
ಮುಂಜಾಗರೂಕತಾ ಕ್ರಮಗಳು
ಆಯ ತಪ್ಪಿದ ಬಸಿರು ಉಂಟಾಗದಂತೆ ನೋಡಿಕೊಳ್ಳಲು ಕೆಲವೊಂದು ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕು. ಅವುಗಳೆಂದರೆ, ಸೋಂಕುಗಳು ಉಂಟಾಗದಂತೆ ನೋಡಿಕೊಳ್ಳುವುದು. ಒಂದು ವೇಳೆ ಸೋಂಕುಗಳುಂಟಾಗಿದ್ದರೆ ಶೀಘ್ರವಾಗಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು. ಗರ್ಭವತಿಯಾದಾಗ ಕೀಳ್ಗುಳಿಯಲ್ಲಿ ನೋವು ಬಂದರೆ ತಕ್ಷಣ ಸ್ಕ್ಯಾನಿಂಗ್ ಮಾಡಿಸಿಕೊಂಡು ಗರ್ಭ ಸರಿಯಾಗಿ ಗರ್ಭಕೋಶದಲ್ಲಿ ಕುಳಿತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಆಯತಪ್ಪಿದ ಬಸಿರು ಕಂಡುಬಂದರೆ ತಕ್ಷಣವೇ ತಜ್ಞವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು
ದೇಹದ ಯಾವ ಯಾವ ಭಾಗಗಳು ಯಾವ ಯಾವ ಕೆಲಸ ನಿರ್ವಹಿಸಬೇಕೋ ಅವುಗಳನ್ನು ಮಾಡಿದರೆ ಮಾತ್ರ ದೇಹವು ಚಟುವಟಿಕೆಯಿಂದ ರೋಗಮುಕ್ತವಾಗಿರುತ್ತದೆ. ಇಲ್ಲವಾದಲ್ಲಿ ಹಲವಾರು ತೊಂದರೆಗಳಿಗೆ ಗುರಿಯಾಗಬೇಕಾಗುತ್ತದೆ. ತೊಂದರೆಗಳಿಗೆ ಎಡೆಮಾಡಿಕೊಡದಂತೆ ಮುಂಜಾಗರೂಕತೆ ವಹಿಸುವುದೇ ಜಾಣ್ಮೆ.
“ಸಮಸ್ಯೆಗಳು ತಲೆದೋರದಂತೆ ಮುಂಜಾಗರೂಕತೆ ವಹಿಸುವುದು ಅತ್ಯವಶ್ಯ”

ಡಾ|| ಸಿ. ಶರತ್ ಕುಮಾರ್
ನಿರ್ದೇಶಕರು ಮತ್ತು ಖ್ಯಾತ ಗರ್ಭಧಾರಣಾ ತಜ್ಞವೈದ್ಯರು, ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ,
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ, ಮೈಸೂರು-570 001
ದೂ. 0821-2444441, 4255019 www.mediwave.net

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!