ನೋವಿನ ಈ 10 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ನೋವಿನ ಈ 10 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.ಹೊಸ ಅಧ್ಯಯನವೊಂದು ಕೆಲವು ನೋವಿನ ಲಕ್ಷಣಗಳು ಮತ್ತು ಚಿಹ್ನೆಗಳನ್ನು ನಿರ್ಲಕ್ಷಿಸಬಾರದು. ಅವುಗಳನ್ನು ಉಪೇಕ್ಷೆ ಮಾಡಿದ್ದೇ ಆದರೆ ಮಾರಕವಾಗಿ ಪರಿಣಮಿಸುತ್ತದೆ ಎಂಬು ಗಂಭೀರ ಸಂಗತಿಯನ್ನು ತಿಳಿಸಿದೆ.

10 pains sign-dont neglect ನೋವಿನ ಈ 10 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿಜನರು ನೋವಿನ ಸಾಮಾನ್ಯ ಲಕ್ಷಣಗಳನ್ನು ಆಗಾಗ ನಿರ್ಲಕ್ಷಿಸುತ್ತಾರೆ. ಈ ನೋವಿಗಾಗಿ ವೈದ್ಯರ ಬಳಿ ಹೋಗುವ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಆದರೆ, ಹೊಸ ಅಧ್ಯಯನವೊಂದು ಕೆಲವು ನೋವಿನ ಲಕ್ಷಣಗಳು ಮತ್ತು ಚಿಹ್ನೆಗಳನ್ನು ನಿರ್ಲಕ್ಷಿಸಬಾರದು. ಅವುಗಳನ್ನು ಉಪೇಕ್ಷೆ ಮಾಡಿದ್ದೇ ಆದರೆ ಮಾರಕವಾಗಿ ಪರಿಣಮಿಸುತ್ತದೆ ಎಂಬು ಗಂಭೀರ ಸಂಗತಿಯನ್ನು ತಿಳಿಸಿದೆ.ಸಾಮಾನ್ಯವಾಗಿ ನಿರ್ಲಕ್ಷಿಸುವ 10 ನೋವಿನ ಲಕ್ಷಣಗಳ ಬಗ್ಗೆ ಉಲ್ಲೇಖಿಸಲಾಗಿದ್ದು, ಯಾವುದೇ ರೀತಿಯ ತೊಡಕುಗಳನ್ನು ತಪ್ಪಿಸಲು ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
1.ನೋಡಲು, ಮಾತನಾಡಲು ಅಥವಾ ಚಲಿಸಲು ತೊಂದರೆ : ನಿಮ್ಮ ದೇಹದ ಒಂದು ಪಾಶ್ರ್ವಕ್ಕೆ ಜೋಮು ಹಿಡಿದ್ದಿದ್ದರೆ ಅಥವಾ ಶಕ್ತಿಹೀನಗೊಂಡಿದ್ದರೆ, ಮಾತನಾಡಲು ಕಷ್ಟವಾದರೆ ಮತ್ತು ದೃಷ್ಟಿ ಮಬ್ಬಾದರೆ ಅಥವಾ ಕುಂಠಿತವಾದರೆ ಅದು ಪಾಶ್ರ್ವವಾಯು ಇಲ್ಲವೇ ಕೆಲವೊಮ್ಮೆ ಕೆಲವು ನಿಮಿಷಗಳ ಕಾಲ ಮಾತ್ರ ಕಂಡುಬರುವ ಟ್ರಾನ್‍ಸೀಂಟ್ ಇಶೇಮಿಕ್ ಅಟ್ಯಾಕ್ (ಟಿಐಎ) ಲಘು ಪಾಶ್ರ್ವವಾಯುವಿನ ಲಕ್ಷಣವಾಗಿರುತ್ತದೆ. ಜ್ಞಾನ ತಪ್ಪುವಿಕೆ, ಉಸಿರಾಟದ ತೊಂದರೆ ಅಥವಾ ಹಠಾತ್ ಮುಖದ ನೋವಿನ ಅನುಭವ, ಆಯಾಸ ಅಥವಾ ಹೃದಯ ಬಡಿತ ಹೆಚ್ಚಳ ಇವು ಕೂಡ ಪಾಶ್ರ್ವವಾಯುವಿನ ಚಿಹ್ನೆಗಳಾಗಿರುತ್ತವೆ. ಪಾಶ್ರ್ವವಾಯುವಿನ ಯಾವುದೇ ಲಕ್ಷಣ ಅಥವಾ ಚಿಹ್ನೆ ಕಂಡುಬಂದರೂ, ತಕ್ಷಣ ತುರ್ತು ವೈದ್ಯಕೀಯ ಅರೈಕೆಯ ಅಗತ್ಯವಿರುತ್ತದೆ. ತಕ್ಷಣ ಚಿಕಿತ್ಸೆ ನೀಡುವುದರಿಂದ ಮೆದುಳಿಗೆ ಅಪಾಯವಾಗುವುದನ್ನು ಅಥವಾ ಗಂಭೀರ ಸ್ವರೂಪದ ತೊಡಕುಗಳು ಆಗುವುದನ್ನು ತಪ್ಪಿಸುತ್ತದೆ.
2.ಹಠಾತ್ ಸಹಿಸಲಾಗದ ತಲೆನೋವು : ತೀವ್ರ ಬಲವಾದ, ನೋವಿನ, ಸಹಿಸಲು ಸಾಧ್ಯವಾಗದ ಯಾತನೆಯೊಂದಿಗೆ ತಲೆನೋವು ಕಾಣಿಸಿಕೊಂಡರೆ ಮೆದುಳಿನಲ್ಲಿ ರಕ್ತಸ್ರಾವ, ಪಾಶ್ರ್ವವಾಯು, ರಕ್ತನಾಳ ಉರಿ, ಮೆನಿಂಗಿಟಿಸ್ ಅಥವಾ ಮೆದುಳು ಗಡ್ಡೆ ಸಮಸ್ಯೆಗಳು ಕಾರಣವಿರಬಹುದು. ತಲೆಗೆ ಪೆಟ್ಟಾದ ನಂತರ ಅಥವಾ ಜ್ವರ, ಕತ್ತಿಗೆ ಗಡಸಾಗುವಿಕೆ, ಆತುರ, ಗೊಂದಲ, ಎರಡು ದೃಷ್ಟಿಗಳು, ದುರ್ಬಲತೆ, ಜೋಮು ಹಿಡಿಯುವಿಕೆ ಅಥವಾ ಮಾತನಾಡಲು ತೊಂದರೆಯಾದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿರುತ್ತದೆ.
3.ವಿವರಿಸಲಾಗದ ತೂಕ ಇಳಿಕೆ : ಯಾವುದೇ ಪ್ರಯತ್ನಗಳಿಲ್ಲದೇ ತೂಕ ಇಳಿಯುವುದನ್ನು ನಿರ್ಲಕ್ಷಿಸಬಾರದು. ಒಂದು ತಿಂಗಳಲ್ಲಿ ದೇಹ ತೂಕದ ಶೇ.5ರಷ್ಟು ಅಥವಾ ಆರರಿಂದ 12 ತಿಂಗಳಲ್ಲಿ ಶೇ.10ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತೂಕ ಇಳಿಕೆಯಾದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು. ಅತಿ ಚಟುವಟಿಕೆಯ ಥೈರಾಯ್ಡ್, ಲಿವರ್ ರೋಗ, ಹತಾಶೆ ಅಥವಾ ಕೆಲವು ಸ್ವರೂಪದ ಕ್ಯಾನ್ಸರ್ ಇದಕ್ಕೆ ಕಾರಣವಾಗಿರಬಹುದು.
4.ಯಾವುದೇ ಸ್ತನದಲ್ಲಿ ಬದಲಾವಣೆ : ಯಾವುದೇ ಸ್ತನದಲ್ಲಿ ಗಡ್ಡೆ, ತೊಟ್ಟಿನಿಂದ ಸೋರುವಿಕೆ ಅಥವಾ ತಿರುಚಿರುವಿಕೆ, ಕಡಿತ ಅಥವಾ ಚರ್ಮದ ಬದಲಾವಣೆಗಳು, ಮುಂದುವರೆದ ಸ್ತನ ನೋವು ಅಥವಾ ಸ್ತನದ ಗಾತ್ರ ಅಥವಾ ಆಕಾರದಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.
5.ಮುಟ್ಟು ನಿಂತ ಬಳಿಕ ಯೋನಿಯಲ್ಲಿ ರಕ್ತಸ್ರಾವ : ಮುಟ್ಟು ನಿಂತ ಬಳಿಕ ಯೋನಿಯಲ್ಲಿ ರಕ್ತಸ್ರಾವ ಅಥವಾ ರಕ್ತದ ಕಲೆಗಳು ಕಂಡುಬಂದರೆ ಯೋನಿ ಅಂಗಾಂಶದಲ್ಲಿನ ಬದಲಾವಣೆಗಳು ಇದಕ್ಕೆ ಕಾರಣವಿರಬಹುದು. ಈಸ್ಟ್ರೋಜೆನ್ ಹಾರ್ಮೋನು ಮಟ್ಟಗಳು ಕಡಿಮೆಯಾಗುವುದರಿಂದ ಇದು ತೆಳ್ಳಗಾಗಿ ಹೆಚ್ಚು ತೊಂದರೆಗೆ ಒಳಗಾಗಬಹುದು. ಆದರೆ ಕೆಲವು ಪ್ರಕರಣಗಳಲ್ಲಿ ಮಟ್ಟು ನಿಂತ ಬಳಿಕ ಕಂಡುಬರುವ ರಕ್ತಸ್ರಾವವು ಸ್ತ್ರೀರೋಗ ಕ್ಯಾನ್ಸರ್‍ನ ಲಕ್ಷಣವಾಗಿರುತ್ತದೆ. ಇದಕ್ಕೆ ವೈದ್ಯಕೀಯ ಮೌಲ್ಯಮಾಪನ ಮುಖ್ಯವಾಗಿರುತ್ತದೆ.
6.ಮಲವಿಸರ್ಜನೆ ಅಭ್ಯಾಸದಲ್ಲಿ ಬದಲಾವಣೆ : ಒಂದು ವಾರಕ್ಕಿಂತ ಹೆಚ್ಚು ಕಾಲ ಇರುವ ಲಘು ಅತಿಸಾರ, ಎರಡು ವಾರಗಳಿಗೂ ಹೆಚ್ಚು ಕಾಲ ಕಂಡುಬರುವ ಮಲಬದ್ಧತೆ ಅಥವಾ ವಿವರಿಸಲಾಗದ, ದಿಢೀರ್ ಮಲವಿಸರ್ಜಿಸಬೇಕೆಂಬ ಒತ್ತಡಗಳು ಗೋಚರಿಸಿದಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕಾಗುತ್ತದೆ. ಅತಿಸಾರ ಅಥವಾ ಮಲದಲ್ಲಿ ಕಪ್ಪು ಅಥವಾ ಡಾಂಬರ್ ಬಣ್ಣದ ರಕ್ತ ವಿಸರ್ಜನೆಯಾದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಲಕ್ಷಣಗಳು ಮತ್ತು ಚಿಹ್ನೆಗಳಿಗೆ ಸೋಂಕು, ಔಷಧಿಯ ಅಡ್ಡ ಪರಿಣಾಮಗಳು, ಜೀರ್ಣಾಂಗದ ದೋಷ ಅಥವಾ ದೊಡ್ಡ ಕರುಳಿನ ಕ್ಯಾನ್ಸರ್ ಕಾರಣವಿರಬಹುದು.
7.ಸ್ವಲ್ಪ ಆಹಾರ ಸೇವಿಸಿದ ನಂತರ ಹೊಟ್ಟೆ ತುಂಬಿದ ಅನುಭವವಾಗುವಿಕೆ: ಸಾಮಾನ್ಯ ಪ್ರಮಾಣದ ಆಹಾರ ಸೇವಿಸುವುದಕ್ಕಿಂತ ಕಡಿಮೆ ತಿಂದರೂ ಹೊಟ್ಟೆ ತುಂಬಿದ ಅನುಭವವಾದರೆ ಆಮ್ಲದಿಂದ ಉಂಟಾದ ಅಜೀರ್ಣತೆಯಿಂದ ಕೆಲವು ಕ್ಯಾನ್ಸರ್‍ಗಳ ತನಕ ಇರುವ ಶ್ರೇಣಿಯ ದೊಡ್ಡ ಕರುಳು ಸಮಸ್ಯೆಗಳ ಲಕ್ಷಣವಾಗಿರುತ್ತದೆ. ಈ ಅನುಭವ ಕೆಲವು ವಾರಗಳ ಕಾಲ ಮುಂದುವರೆದರೆ, ವಿಶೇಷವಾಗಿ ತಲೆ ಸುತ್ತುವಿಕೆ ಮತ್ತು ವಾಂತಿ, ಹೊಟ್ಟೆ ನೋವು ಅಥವಾ ಉದರ ಉಬ್ಬರ, ಜ್ವರ ಮತ್ತು ಚಳಿ ಅಥವಾ ತೂಕದಲ್ಲಿ ಬದಲಾವಣೆಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು.
8.ಮುಂದುವರೆದ ಕೆಮ್ಮು : ಒಂದು ತಿಂಗಳಿಗೂ ಹೆಚ್ಚು ಕಾಲ ಕೆಮ್ಮು ಇದ್ದರೆ, ಅದು ನಿದ್ರೆ ಮೇಲೆ ಪರಿಣಾಮ ಉಂಟು ಮಾಡಿದರೆ ಅಥವಾ ಕೆಮ್ಮಿನಲ್ಲಿ ರಕ್ತ ಕಂಡು ಬಂದರೆ ತಕ್ಷಣ ಆರೋಗ್ಯ ತಪಾಸಣೆಗೆ ಒಳಪಡಬೇಕು. ಆಸ್ತಮಾ, ಉಸಿರಾಟ ನಾಳ ಸೋಂಕಿನ ಸಮಸ್ಯೆಯಾದ ಗ್ಯಾಸ್ಟ್ರೋಎಸೊಫಾಗಿಯಲ್ ರಿಫ್ಲಕ್ಸ್ ಡಿಸೀಸ್ (ಜಿಇಆರ್‍ಡಿ), ದೀರ್ಘಕಾಲದ ಎದೆಸೋಂಕು ಅಥವಾ ಶ್ವಾಸಕೋಶದ ಕ್ಯಾನ್ಸರ್ ಈ ದೀರ್ಘಕಾಲದ ಕೆಮ್ಮಿಗೆ ಕಾರಣವಾಗಿರಬಹುದು.
9.ದು:ಖ ಅಥವಾ ಹತಾಶೆಯ ಭಾವನೆ : ವಾರಗಳು ಅಥವಾ ತಿಂಗಳುಗಳ ಕಾಲ ದು:ಖದ ಭಾವನೆ ಇದ್ದರೆ ಅದು ಹತಾಶೆ ಮತ್ತು ಖಿನ್ನತೆಯ ಲಕ್ಷಣ. ಈ ಅನಾರೋಗ್ಯಕ್ಕೆ ಖಂಡಿತ ಚಿಕಿತ್ಸೆ ನೀಡಬಹುದು. ಸಾಮಾನ್ಯ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಂಡಿರುವಿಕೆ, ಭರವಸೆ ಇಲ್ಲದಿರುವಿಕೆ, ಸುಲಭವಾಗಿ ಅಳುವಿಕೆ, ವಿಪರೀತ ಚಿಂತಿಸುವಿಕೆ. ಉದ್ದೇಶವಿಲ್ಲದ ತೂಕ ಇಳಿಕೆ ಅಥವಾ ಸಾಯಬೇಕೆಂಬ ಆಲೋಚನೆಗಳು ಈ ಸಮಸ್ಯೆಯ ಇತರ ಲಕ್ಷಣಗಳಾಗಿರುತ್ತದೆ.
10.ಮುಂದುವರೆದ ಜ್ವರ : ಕಡಿಮೆ ತಾಪಮಾನದ ಜ್ವರ ಒಂದು ವಾರಕ್ಕೂ ಹೆಚ್ಚಿನ ಕಾಲ ಮುಂದುವರೆದರೆ ವೈದ್ಯರನ್ನು ಭೇಟಿ ಮಾಡಬೇಕು. ಮೂತ್ರನಾಳ ಸೋಂಕು ಅಥವಾ ರೋಗ ಪ್ರತಿರೋಧ ಶಕ್ತಿ ದೋಷಗಳು ಅಥವಾ ಕ್ಯಾನ್ಸರ್‍ನಂಥ ಹೆಚ್ಚಿನ ಗಂಭೀರ ಅನಾರೋಗ್ಯವನ್ನು ಜ್ವರ ಸೂಚಿಸುತ್ತದೆ. 103 ಡಿಗ್ರಿ ಫ್ಯಾರನ್‍ಹೀಟ್‍ಗಿಂತ ಹೆಚ್ಚಿನ ಹಠಾತ್ ಅಧಿಕ ಜ್ವರ ಇದ್ದರೆ ತಕ್ಷಣ ಮೌಲ್ಯಮಾಪನ ಅಗತ್ಯ.

Dr-Chalapathiಡಾ. ಚಲಪತಿ ಪ್ರೊಫೆಸರ್ ಅಫ್ ಜನರಲ್ ಸರ್ಜರಿ ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು - 560066 Ph:080-28413384/82/83. Mob:9945000037

ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
Ph:080-28413384/82/83. Mob:9945000037

 www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!