ವೈದ್ಯರಿಗೆ ಟಾರ್ಗೆಟ್ ರೀಚ್ ಮಾಡುವ ಧಾವಂತವೇ?

ವೈದ್ಯರಿಗೆ ಟಾರ್ಗೆಟ್ ರೀಚ್ ಮಾಡುವ ಧಾವಂತವೇ?ಕಣ್ಣ ಮುಂದೆ ಕಾಣುವ ರೋಗ ನಿರ್ಲಕ್ಷಿಸಿ, ಇರಲಾರದ ರೋಗ ಕಂಡುಹಿಡಿಯುವುದು ಯಾವ ಮಟ್ಟದ ಪ್ರ್ಯಾಕ್ಟೀಸ್? ಗುಣಮಟ್ಟದ ಕುಸಿತವಾ? ಅಥವಾ ಟಾರ್ಗೆಟ್ ರೀಚ್ ಮಾಡುವ ಧಾವಂತದಲ್ಲಿ ವೈದ್ಯರು ಬಿಸಿನೆಸ್ ಹೆಡ್‍ಗಳ ಒತ್ತಡಕ್ಕೆ ಮಣಿಯುತ್ತಿದ್ದಾರಾ..?

ವೈದ್ಯರಿಗೆ ಟಾರ್ಗೆಟ್ ರೀಚ್ ಮಾಡುವ ಧಾವಂತವೇ?

ಭಾರತದಲ್ಲಿ ತಾತ್ಕಾಲಿಕ ಕೆಲಸಕ್ಕೆ ಬಂದ ಮೂವತ್ತು ವರ್ಷದ ವಿದೇಶಿ ಮಹಿಳೆಯೊಬ್ಬಳಿಗೆ ಕೆಲಸದೊತ್ತಡ ಹೆಚ್ಚಾಗುತ್ತದೆ. ಕಚೇರಿಯಲ್ಲಿದ್ದ ಎಲೆಕ್ಟ್ರಾನಿಕ್ ಬಿಪಿ ಉಪಕರಣದಲ್ಲಿ ರಕ್ತದೊತ್ತಡ 140/90 ತೋರಿಸುತ್ತದೆ. ಅದಕ್ಕೆ ಕೊಂಚ ಗಾಬರಿಯಾದ ಮಹಿಳೆ, ತನ್ನ ಸ್ಥಳೀಯ ವೈದ್ಯಕೀಯ ಸಲಹೆಗಾರರಿಗೆ (ನನಗೆ) ಕರೆಮಾಡಿದಾಗ ಅಂತರಾಷ್ಟ್ರೀಯ ಗುಣಮಟ್ಟದ ಪಂಚತಾರಾ ಆಸ್ಪತ್ರೆಗೆ ಹೋಗುವ ಸಲಹೆ ಕೊಡಲಾಗುತ್ತದೆ.

ಆಸ್ಪತ್ರೆ ಎಮರ್ಜೆನ್ಸಿ ಪ್ರವೇಶಿಸಿದಾಗ ಅವಳ ಬಿಪಿ ಸಹಜ ಸ್ಥಿತಿಗೆ ಮರಳಿರುತ್ತದೆ. ನಡೆಯುತ್ತ ಎಮರ್ಜೆನ್ಸಿಯ ವೈದ್ಯರು ರೋಗಿ(?)ಯ ಕೈಕಾಲುಗಳನ್ನು ಮೇಲೆತ್ತಿ ಕೆಳಗಿಳಿಸಿ, ಕತ್ತು ಅಲಾಡಿಸಿ, ಅದರ ಜೊತೆಗೆ ನೆನಪಿನ ಶಕ್ತಿಯನ್ನು ಪರೀಕ್ಷಿಸಿಲು ಪ್ರಶ್ನೆಗಳನ್ನು ಕೇಳಿ.
“ನಿನಗಿನ್ನು ಲಕ್ವಾ ಹೊಡೆದಿಲ್ಲ” ವೆಂಬಂತೆ ಮಾತನಾಡಿದಾಗ, ಅದರ ಗಂಧಗಾಳಿ ಇಲ್ಲದ ರೋಗಿಗೆ ಬಹುಶಃ ಬಿಪಿ ಮತ್ತೆ ಏರಿರಬಹುದು. ಅಷ್ಟಕ್ಕೆ ನಿಲ್ಲಿಸದ ಎಮರ್ಜೆಮನ್ಸಿಯ ವೈದ್ಯರು. ” ನೀವು ನಾಳೆ ಬರಬೇಕು, ನಿಮ್ಮ ಮಿದುಳಿನ ಎಂಆರ್ ಐ ಮಾಡಿ ನ್ಯೂರೋ ಫಜಿಷಿಯನ್ ಓಪಿನಿಯನ್ ಪಡಿಬೇಕು. ” ಎಂದು ಹೇಳುತ್ತಾರೆ.

ವೈದ್ಯರ ಪರೀಕ್ಷೆಯ ತೀವ್ರತೆ, ಪ್ರಶ್ನೆಗಳನ್ನು ಕೇಳಿ ಗಾಬರಿಯಾದ ರೋಗಿ ಆಸ್ಪತ್ರೆಯಿಂದ ಹೇಗೋ ಪಾರಾಗಿ ಹೊರಬಂದು ತನ್ನ ವೈದ್ಯಕೀಯ ಸಲಹೆಗಾರರಿಗೆ ಮತ್ತೆ ಕರೆ ಮಾಡುತ್ತಾಳೆ. “ನಡೆಯುತ್ತ ಹೋಗಿ, ನನ್ನ ತೊಂದರೆಯ, ನನ್ನ ವೈಯುಕ್ತಿಕ ವಿವರ ಕೊಟ್ಟರೂ ವಿಚಿತ್ರ ಪ್ರಶ್ನೆಗಳನ್ನು ಕೇಳಿ ನನ್ನ “ಮೆಮರಿ”ಯನ್ನು ಪರೀಕ್ಷಿಸಲಾಯಿತು. ವೈದ್ಯರ ಮುಂದೆ ನಡೆದು ಪರೀಕ್ಷಾ ಕಾಟಿನ ಮೇಲೆರಿ ಸಹಜವಾಗಿ ಮಲಗಿದರೂ “ಪ್ಯಾರಾಲೈಸಿಸ್” ಲಕ್ಷಣಗಳನ್ನು ಪರೀಕ್ಷೆ ಮಾಡಲಾಯಿತು. ಕೆಲ ರಕ್ತ ಪರಿಕ್ಷೆಗಳನ್ನು ಮಾಡಿ ಎಲ್ಲಾ ನಾರ್ಮಲ್ ಎಂದರು” ಎಂದು ಅಸಮಾಧಾನದಿಂದ ಹೇಳುತ್ತಾಳೆ. ಯಾವ ಮಾತ್ರೆ ಮದ್ದನ್ನು ನೀಡದೆ ಸಿಗದ ಲಕ್ವಾ ಹುಡುಕಾಡಲು ಎಂಆರ್‍ಐ ಮಾಡಲು ಮರುದಿನ ಬರುವ ಸಲಹೆಯನ್ನು ಇತ್ತು ಸಾವಿರಾರು ರೂಪಾಯಿಗಳನ್ನು ಕಿತ್ತುಕೊಂಡು ಕಳುಹಿಸುತ್ತಾರೆ.

ಎಂಆರ್‍ಐ, ಸ್ಟ್ರೋಕ್, ನ್ಯುರೋಫಿಜಿಯಷ್ನ್ ಹೆಸರು ಕೇಳಿದ ಮಹಿಳೆ ಭಯಕ್ಕೆ ಆ ಆಸ್ಪತ್ರೆಗೆ ಹೋಗುವ ಸಲಹೆ ಇತ್ತ ಸಲಹೆಗಾರನಿಗೆ (ನನಗೆ) ಹಲವಾರು ಪ್ರಶ್ನೆ ಕೇಳುತ್ತಾಳೆ. ಅವಳ ಆತುರ, ಕುತೂಹಲಗಳನ್ನು ಗುರುತಿಸಿದ ವೈದ್ಯರು ಅವಳಲ್ಲಿನ ಕೆಲಸದ ಒತ್ತಡವನ್ನು ಕಂಡುಹಿಡಿದು, ಕೆಲಸದ ಒತ್ತಡದ ಬಗ್ಗೆ ಕೇಳಿದಾಗ ಒಪ್ಪಿಕೊಳ್ಳುತ್ತಾಳೆ. ಅಂದಿನ ರಾತ್ರಿಗೆ ಅವಳಿಗೆ ಫೋನ್ ನಲ್ಲಿ ಕೌನ್ಸೆಲಿಂಗ್ ಇತ್ತು ಕೊಂಚ ಸಮಾಧಾನವಾದ ಮೇಲೆ, ಮರುದಿನ ಮನಃಶಾಸ್ತ್ರಜ್ಞರನ್ನು ಕಾಣಲು ಹೇಳಿದಾಗ ಸಂತೋಷದಿಂದ ಒಪ್ಪಿಕೊಂಡು, “ನನಗೆ ಇದ್ದ ಕೆಲಸದೊತ್ತಡವನ್ನು ಗುರುತಿಸಿದ ನೀವು, ಆ ಪಂಚತಾರಾ ಆಸ್ಪತ್ರೆಗೆ ಏಕೆ ರೆಫರ್ ಮಾಡಿದಿರಿ?” ಎಂದು ಕೇಳಿದಾಗ. ಸಲಹೆಗಾರ ತನ್ನ ದೇಶದ ವೈದ್ಯರ ಬಗ್ಗೆ ಏನು ಹೇಳಬೇಕೆಂದು ತಿಳಿಯದೆ ನಿರುತ್ತರನಾಗಿ, ಬೇರೆಯವರ ತಪ್ಪಿಗೆ ಕ್ಷಮೆ ಕೇಳುತ್ತಾನೆ.

ಸೋ ಕಾಲ್ಡ ಎಮರ್ಜೆನ್ಸಿ ವೈದ್ಯರು ಮಹಿಳೆಯ ಕೆಲಸದೊತ್ತಡದ ಬಗ್ಗೆ ಒಂದು ಪ್ರಶ್ನೆ ಕೇಳಿಲ್ಲ. ಕುಟುಂಬದಿಂದ ಸಾವಿರಾರು ಮೈಲಿ ದೂರವಿರುವ ಮಹಿಳೆಯ ಮಾನಸಿಕ ಒತ್ತಡವನ್ನು ಎಮರ್ಜೆನ್ಸಿ ವೈದ್ಯರಿಗೆ ಕಂಡುಹಿಡಿಯಲಾಗಲಿಲ್ಲ. ಸಾಲದೆ ರಕ್ತ ಪರೀಕ್ಷೆ, ಮರುದಿನ ಎಂಆರ್‍ಐ, ನರರೋಗ ತಜ್ಞರ ಜೊತೆ ಸಮಾಲೋಚನೆ. ಆ ಪಂಚತಾರಾ ಆಸ್ಪತ್ರೆಯ ಅಂತರಾಷ್ಟ್ರೀಯ ಗುಣಮಟ್ಟ ಕಂಡು ರೆಫರ್ ಮಾಡಿದ ನಮ್ಮಂತಹ ಸಲಹೆಗಾರರಿಗೆ ತಲೆತಗ್ಗಿಸುವಂತಹ ಪ್ರಶ್ನೆಗಳು. ಇದೆ ಮಹಿಳೆ ತನ್ನ ದೇಶದ ವೈದ್ಯರೊಂದಿಗೆ ನಡೆದ ವೃತ್ತಾಂತವನ್ನು ಹೇಳಿಯೇ ಹೇಳುತ್ತಾಳೆ. ಕೆಲಸದೊತ್ತಡವನ್ನು ಕಂಡುಹಿಡಿಯದೆ ಅನವಶ್ಯಕ ಸಲಹೆ ಇತ್ತ ವೈದ್ಯರಿಂದ ಇಡಿ ದೇಶದ ವೈದ್ಯರ ಮೇಲೆ ವಿದೇಶಿಯರು ಭರವಸೆ ಕಳೆದುಕೊಳ್ಳುತ್ತಾರೆ.

Also Read: ಒತ್ತಡ – ಆಧುನಿಕ ಜೀವನದ ದುರಂತ 

ಕೆಟ್ಟ ರೋಗವೊಂದನ್ನು ಕಂಡುಹಿಡಿಯುವುದು ಅನಿವಾರ್ಯವಾ? ಕಣ್ಣ ಮುಂದೆ ಕಾಣುವ ರೋಗ ನಿರ್ಲಕ್ಷಿಸಿ, ಇರಲಾರದ ರೋಗ ಕಂಡುಹಿಡಿಯುವುದು ಯಾವ ಮಟ್ಟದ ಪ್ರ್ಯಾಕ್ಟೀಸ್? ಗುಣಮಟ್ಟದ ಕುಸಿತವಾ? ಅಥವಾ ಟಾರ್ಗೆಟ್ ರೀಚ್ ಮಾಡುವ ಧಾವಂತದಲ್ಲಿ ವೈದ್ಯರು ಬಿಸಿನೆಸ್ ಹೆಡ್‍ಗಳ ಒತ್ತಡಕ್ಕೆ ಮಣಿಯುತ್ತಿದ್ದಾರಾ..?

-ಅಬುಯಾಹ್ಯಾ


ಡಾ. ಸಲೀಮ ನದಾಫ
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 80730 48415

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!