ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಸುಲಭದ ಯೋಗಾಸನಗಳು

ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಸುಲಭದ ಯೋಗ ಮಾಡಿ ನಿರಾಳರಾಗಿ. ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಯೋಗವನ್ನು ಪ್ರತಿಯೊಬ್ಬರು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಸುಲಭದ ಯೋಗಾಸನಗಳುಯೋಗ ಎನ್ನುವುದು ದೇಹ ಹಾಗೂ ಮನಸ್ಸನು ಸದಾ ಕ್ರಿಯಾಶೀಲವಾಗಿಡುವ ಮಾರ್ಗ. ಯೋಗ ನಮ್ಮಲ್ಲಿರುವ ತಾಮಸವನ್ನು ಕಡಿಮೆ ಮಾಡಿ ಬೆಳಕಿನ ಭಾವವನ್ನು ಹೆಚ್ಚಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ನಾವು ಕ್ರಿಯಾಶೀಲವಾಗಿಟ್ಟುಕೊಳ್ಳಲು, ಶಾಂತ ಮನಸ್ಸನ್ನು ಹೊಂದಲು ಯೋಗ ಅಗತ್ಯ. ಸ್ವಾಮಿ ವಿವೇಕಾನಂದರು ‘ಅಭ್ಯಾಸದಿಂದ ಯೋಗ ಸಾಧ್ಯ. ಯೋಗದಿಂದ ಜ್ಞಾನ, ಜ್ಞಾನದಿಂದ ಪ್ರೀತಿ, ಪ್ರೀತಿಯಿಂದ ಸಂತೋಷ ಪ್ರಾಪ್ತವಾಗುತ್ತದೆ’ ಎಂದಿದ್ದರು. ಅಂತಹ ಸಂತೋಷವನ್ನು ಪಡೆಯಲು ಯೋಗ ಅಗತ್ಯವಾಗಿದೆ.

ಯೋಗ ಭಾರತ ಜಗತ್ತಿಗೆ ನೀಡಿರುವ ಕೊಡುಗೆ. ಇದನ್ನು ವಿಶ್ವಸಂಸ್ಥೆಯೂ ಸಹಾ ಗುರುತಿಸಿ ಅದನ್ನು ಪ್ರಚುರಪಡಿಸಲೆಂದೇ ‘ವಿಶ್ವ ಯೋಗ ದಿನಾಚರಣೆಯನ್ನು‘ ಆಚರಿಸುವ ವ್ಯವಸ್ಥೆ ಮಾಡಿತು. 2015ರಿಂದ ಆರಂಭವಾದ ಈ ದಿನಾಚರಣೆ ಜಗತ್ತಿನ ಅನೇಕ ದೇಶಗಳಿಗೆ ಸ್ಫೂರ್ತಿ ತುಂಬಿದೆ. ಅಷ್ಟೇ ಅಲ್ಲ ಭಾರತದ ಯೋಗ ಪರಂಪರೆಯ ಹಿರಿಮೆಯ ಬಗ್ಗೆಯೂ ಕಣ್ಣೋಟ ನೀಡಿದೆ. ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಯೋಗವನ್ನು ಪ್ರತಿಯೊಬ್ಬರು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

1. ಶವಾಸನ – ರಕ್ತದೊತ್ತಡ ಮತ್ತು ಮಾನಸಿಕ ಒತ್ತಡ ನಿವಾರಣೆಗೆ:

ರಕ್ತದೊತ್ತಡ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಶವಾಸನ ಸಿದ್ದೌಷಧಿ. ಕೈಕಾಲುಗಳನ್ನು ಅಗಲಿಸಿ ಮಲಗಿ ದೇಹದ ಎಲ್ಲಾ ಅಂಗಾಗಳಿಗೆ ಮನಸಿನ ಮೂಲಕ ವಿಶ್ರಾಂತಿಯ ಸಂದೇಶವನ್ನು ನೀಡುವ ಆಸನ ಇದು. ಕೇವಲ ಉಸಿರಿನ ಮೇಲೆಯೇ ಗಮನ ಇಡುವುದರಿಂದ ರಕ್ತ ಪರಿಚಲನೆ ಸರಾಗವಾಗುತ್ತದೆ, ಮನಸು ನಿರಾಳವಾಗುತ್ತದೆ. ಇತರ ಪೂರಕ ಪ್ರಮುಖ ಆಸನಗಳು: ಪದ್ಮಾಸನ, ಹಲಾಸನ, ಪವನ ಮುಕ್ತಾಸನ, ಮಕರಾಸನ, ಪ್ರಾಣಾಯಾಮ, ಧ್ಯಾನ.
dr hegde add2. ಶಲಭಾಸನ – ಬೆನ್ನುಮೂಳೆ ಪುನಃಶ್ವೇತನ:
ದೇಹದ ಸಮಸ್ತ ಭಾರವನ್ನು ಹೊಟ್ಟೆಯ ಭಾಗದಲ್ಲಿ ಕೇಂದ್ರೀಕರಿಸಿ ಸೊಂಟ ಮತ್ತು ಬೆನ್ನನ್ನು ಸ್ಕೆಚ್ ಮಾಡುವ ವ್ಯಾಯಾಮ ಇದು. ಇದರಿಂದ ಬೆನ್ನು ಮೂಳೆ ಮತ್ತು ಆಸುಪಾಸಿನ ಹಾಗೂ ಸೊಂಟ ಭಾಗದ ಸ್ನಾಯುಗಳ ಒತ್ತಡ ನಿವಾರಣೆಯಾಗುತ್ತದೆ. ಬೆನ್ನುಮೂಳೆ ಪುನಃಶ್ವೇತನ, ಎಲ್ಲ ಕಡೆ ರಕ್ತ ಪರಿಚಲನೆ ಸರಾಗ. ಪೂರಕ ಇತರೆ ಪ್ರಮುಖ ಆಸನಗಳು: ಮಕರಾಸನ, ಸೇತುಬಂಧ ಸರ್ವಾಂಗಾಸನ, ಕಟಿ ಚಕ್ರಾಸನ, ಪೂರ್ವೋತ್ತಾಸನ.
3. ಸರ್ವಾಂಗಾಸನ – ಥೈರಾಯ್ಡ್ ಸಮಸ್ಯೆಗೆ:

ಮಹಿಳೆಯರೇ ಪ್ರಮುಖವಾಗಿ ಹೆಚ್ಚಿನವರನ್ನು ಕಾಡುವ ಥೈರಾಯ್ಡ್ ಸಮಸ್ಯೆಗೆ ಸರ್ವಾಂಗಾಸನ ಉತ್ತಮ. ಕೊರಳಿನ ಭಾಗದಲ್ಲಿರುವ ಪಿಟ್ಯುಟರಿ ಗ್ರಂಥಿಯ ಪುನಶ್ಚೇತನವೇ ಸರ್ವಾಂಗಾಸನದ ಉದ್ದೇಶ. ಇಲ್ಲಿ ಕಾಲರ್ ಬೋನ್ ಸೆಳೆತಕ್ಕೆ ಒಳಗಾಗುವುದರಿಂದ ಗ್ರಂಥಿಗಳು ಸರಾಗವಾಗಿ ರಸ ಸ್ರಮಿಸತ್ತವೆ. ಕುತ್ತಿಗೆ ತಿರುಗಿಸುವ ಆಸನವೂ ಜತೆಗಿದ್ದರೆ ಉತ್ತಮ. ಪೂರಕ ಇತರೆ ಪ್ರಮುಖ ಆಸನಗಳು: ಸೇತುಬಂಧ ಸರ್ವಾಂಗಾಸನ, ಉಷ್ಟ್ರಾಸನ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!