ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಸುಲಭದ ಯೋಗ ಮಾಡಿ ನಿರಾಳರಾಗಿ. ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಯೋಗವನ್ನು ಪ್ರತಿಯೊಬ್ಬರು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಯೋಗ ಎನ್ನುವುದು ದೇಹ ಹಾಗೂ ಮನಸ್ಸನು ಸದಾ ಕ್ರಿಯಾಶೀಲವಾಗಿಡುವ ಮಾರ್ಗ. ಯೋಗ ನಮ್ಮಲ್ಲಿರುವ ತಾಮಸವನ್ನು ಕಡಿಮೆ ಮಾಡಿ ಬೆಳಕಿನ ಭಾವವನ್ನು ಹೆಚ್ಚಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ನಾವು ಕ್ರಿಯಾಶೀಲವಾಗಿಟ್ಟುಕೊಳ್ಳಲು, ಶಾಂತ ಮನಸ್ಸನ್ನು ಹೊಂದಲು ಯೋಗ ಅಗತ್ಯ. ಸ್ವಾಮಿ ವಿವೇಕಾನಂದರು ‘ಅಭ್ಯಾಸದಿಂದ ಯೋಗ ಸಾಧ್ಯ. ಯೋಗದಿಂದ ಜ್ಞಾನ, ಜ್ಞಾನದಿಂದ ಪ್ರೀತಿ, ಪ್ರೀತಿಯಿಂದ ಸಂತೋಷ ಪ್ರಾಪ್ತವಾಗುತ್ತದೆ’ ಎಂದಿದ್ದರು. ಅಂತಹ ಸಂತೋಷವನ್ನು ಪಡೆಯಲು ಯೋಗ ಅಗತ್ಯವಾಗಿದೆ.
ಯೋಗ ಭಾರತ ಜಗತ್ತಿಗೆ ನೀಡಿರುವ ಕೊಡುಗೆ. ಇದನ್ನು ವಿಶ್ವಸಂಸ್ಥೆಯೂ ಸಹಾ ಗುರುತಿಸಿ ಅದನ್ನು ಪ್ರಚುರಪಡಿಸಲೆಂದೇ ‘ವಿಶ್ವ ಯೋಗ ದಿನಾಚರಣೆಯನ್ನು‘ ಆಚರಿಸುವ ವ್ಯವಸ್ಥೆ ಮಾಡಿತು. 2015ರಿಂದ ಆರಂಭವಾದ ಈ ದಿನಾಚರಣೆ ಜಗತ್ತಿನ ಅನೇಕ ದೇಶಗಳಿಗೆ ಸ್ಫೂರ್ತಿ ತುಂಬಿದೆ. ಅಷ್ಟೇ ಅಲ್ಲ ಭಾರತದ ಯೋಗ ಪರಂಪರೆಯ ಹಿರಿಮೆಯ ಬಗ್ಗೆಯೂ ಕಣ್ಣೋಟ ನೀಡಿದೆ. ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಯೋಗವನ್ನು ಪ್ರತಿಯೊಬ್ಬರು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು
1. ಶವಾಸನ – ರಕ್ತದೊತ್ತಡ ಮತ್ತು ಮಾನಸಿಕ ಒತ್ತಡ ನಿವಾರಣೆಗೆ:

ಮಹಿಳೆಯರೇ ಪ್ರಮುಖವಾಗಿ ಹೆಚ್ಚಿನವರನ್ನು ಕಾಡುವ ಥೈರಾಯ್ಡ್ ಸಮಸ್ಯೆಗೆ ಸರ್ವಾಂಗಾಸನ ಉತ್ತಮ. ಕೊರಳಿನ ಭಾಗದಲ್ಲಿರುವ ಪಿಟ್ಯುಟರಿ ಗ್ರಂಥಿಯ ಪುನಶ್ಚೇತನವೇ ಸರ್ವಾಂಗಾಸನದ ಉದ್ದೇಶ. ಇಲ್ಲಿ ಕಾಲರ್ ಬೋನ್ ಸೆಳೆತಕ್ಕೆ ಒಳಗಾಗುವುದರಿಂದ ಗ್ರಂಥಿಗಳು ಸರಾಗವಾಗಿ ರಸ ಸ್ರಮಿಸತ್ತವೆ. ಕುತ್ತಿಗೆ ತಿರುಗಿಸುವ ಆಸನವೂ ಜತೆಗಿದ್ದರೆ ಉತ್ತಮ. ಪೂರಕ ಇತರೆ ಪ್ರಮುಖ ಆಸನಗಳು: ಸೇತುಬಂಧ ಸರ್ವಾಂಗಾಸನ, ಉಷ್ಟ್ರಾಸನ.