ಶಸ್ತ್ರಚಿಕಿತ್ಸೆಯಿಲ್ಲದೆ ಮೂಲವ್ಯಾಧಿಯನ್ನು ಗುಣಪಡಿಸುವ ಸಾಧನ `ಕ್ರಯೋಕ್ಯೂರ್’

ನಮ್ಮ ಜೀವನಶೈಲಿಯಲ್ಲಿರುವ ಲೋಪದೋಷಗಳಿಂದಾಗಿ ಹಲವು ಕಾಯಿಲೆಗಳು ಬರುತ್ತಿವೆ. ಇಂಥವುಗಳಲ್ಲಿ ಇತ್ತೀಚೆಗೆ ಹೆಚ್ಚಿನವರಲ್ಲಿ ಕಂಡುಬರುತ್ತಿರುವ ಮೂಲವ್ಯಾಧಿ ಕೂಡ ಒಂದು ಎಂದು ಗುರುತಿಸಿದ್ದಾರೆ ಖ್ಯಾತ ಭಾರತೀಯ ವಿಜ್ಞಾನಿ ಮತ್ತು ಸಂಶೋಧಕ ಡಾ.ರಾಜಾ ವಿಜಯಕುಮಾರ್.

  • ಜಗತ್ತಿನಾದ್ಯಂತ 330 ದಶಲಕ್ಷ ಮತ್ತು ಭಾರತದಲ್ಲಿ 41 ದಶಲಕ್ಷ ಮಂದಿಗೆ ಮೂಲವ್ಯಾಧಿಯ ಸಮಸ್ಯೆ.
  • ಪ್ರತೀವರ್ಷ2 ದಶಲಕ್ಷ ಮಂದಿಯಲ್ಲಿ ಮೂಲವ್ಯಾಧಿ ಪತ್ತೆ
  • ಜಗತ್ತಿನೆಲ್ಲೆಡೆಯ ಗರ್ಭಿಣಿಯರಲ್ಲಿ ಶೇಕಡ 40ರಷ್ಟು ಮಹಿಳೆಯರಲ್ಲಿ ಈ ಸಮಸ್ಯೆ
  • ದಕ್ಷಿಣ ಭಾರತದಲ್ಲಿ ಶೇಕಡ 60ರಷ್ಟು ಮಂದಿಯಲ್ಲಿ ಈ ರೋಗವಿದೆ.
  • ಸುಧಾರಿತ ಕ್ರಯೋಜೆನಿಕ್ ಫಿಸಿಕ್ಸ್ ಮತ್ತು ಪಾಲಿಮಾಲಿಕ್ಯುಲರ್ ತಂತ್ರಜ್ಞಾನ ಬಳಸಲಾಗುವ ಕ್ರಯೋಕ್ಯೂರ್ ನಿಂದ ಯಾವುದೇ ಶಸ್ತ್ರಚಿಕಿತ್ಸೆಯ ರಗಳೆ ಇಲ್ಲದೆ ಕೇವಲ 15 ದಿನಗಳಲ್ಲಿ ಮೂಲವ್ಯಾಧಿ ನಿವಾರಣೆ

ಮನುಷ್ಯನ ಶರೀರದಲ್ಲಿ ಗುದದ್ವಾರ ತುಂಬಾ ಸೂಕ್ಷ್ಮವಾದ ಸ್ಥಳ. ಬೆಳಗ್ಗೆ ಎದ್ದೊಡನೆಯೇ ಅಲ್ಲಿ ಪ್ರಾಣ ಹೋಗುವಂತಹ ನೋವು ಕಾಣಿಸಿಕೊಂಡರೆ ನಿಜಕ್ಕೂ ಆ ದೇವರೇ ಬಂದು ನಮ್ಮನ್ನು ಕಾಪಾಡಬೇಕು! ಇಂತಹ ನೋವಿಗೆ ಕಾರಣವೇನೆಂದರೆ, ಮೂಲವ್ಯಾಧಿ (ಪೈಲ್ಸ್). ಆದರೆ, ಇನ್ನುಮುಂದೆ ನೀವು ಚಿಂತಿಸಬೇಕಿಲ್ಲ. ಏಕೆಂದರೆ, ಬೆಂಗಳೂರಿನಲ್ಲಿ ನೆಲೆಸಿರುವ ಹೆಸರಾಂತ ವಿಜ್ಞಾನಿ, ಸಂಶೋಧಕ, 30ಕ್ಕೂ ಹೆಚ್ಚು ಪೇಟೆಂಟ್ ಗಳನ್ನು ತಮ್ಮದಾಗಿಸಿಕೊಂಡಿರುವ ಅನ್ವೇಷಕರಾದ ಡಾ.ರಾಜಾ ವಿಜಯಕುಮಾರ್ ಇದಕ್ಕೆಂದೇ ಒಂದು ಹೊಸ ಮತ್ತು ಕೈಗೆಟುಕುವಂತಹ ವೈಜ್ಞಾನಿಕ ಸಾಧನವನ್ನು ರೂಪಿಸಿದ್ದಾರೆ. ಈ ಸಾಧನವೇ `ಕ್ರಯೋಕ್ಯೂರ್’.  ಮೂಲವ್ಯಾಧಿಯನ್ನು ಯಾವುದೇ ಶಸ್ತ್ರಚಿಕಿತ್ಸೆಯ ರಗಳೆಯಿಲ್ಲದೆ, ಕೇವಲ 15 ದಿನಗಳಲ್ಲಿ ಈ ಸಾಧನವು ಗುಣಪಡಿಸಲಿದೆ ಎನ್ನುವುದೇ ಇದರ ವೈಶಿಷ್ಟ್ಯ.

        ಡಾ.ರಾಜಾ ವಿಜಯಕುಮಾರ್ ಅವರ ಪ್ರಕಾರ “ಜೀವನಶೈಲಿಯಲ್ಲಿನ ದೋಷಗಳಿಂದಾಗಿ ಮನುಷ್ಯರಲ್ಲಿ ಹತ್ತು ಹಲವು ರೋಗಗಳು ಕಾಣಿಸಿಕೊಳ್ಳುತ್ತಿವೆ. ಇವುಗಳಲ್ಲಿ ಮೂಲವ್ಯಾಧಿ ಕೂಡ ಒಂದಾಗಿದೆ. ಇತ್ತೀಚಿನ ದಿನಗಳಲ್ಲಂತೂ ಮೂಲವ್ಯಾಧಿಯಿಂದ ಬಳಲುತ್ತಿರುವವರ ಸಂಖ್ಯೆ ವಿಪರೀತವಾಗುತ್ತಿದೆ’’.

        ಸುಧಾರಿತ ಕ್ರಯೋಜೆನಿಕ್ ಫಿಸಿಕ್ಸ್ ಮತ್ತು ಪಾಲಿಮಾಲಿಕ್ಯುಲರ್ ತಂತ್ರಜ್ಞಾನವನ್ನು ಬಳಸಿಕೊಂಡು, ಅಭಿವೃದ್ಧಿ ಪಡಿಸಲಾಗಿರುವ `ಕ್ರಯೋಕ್ಯೂರ್’ ಸಾಧನವನ್ನು ಡಾ.ರಾಜಾ ವಿಜಯಕುಮಾರ್ ಅವರು ಬೆಂಗಳೂರಿನಲ್ಲಿ  ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಈ ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದ ಡಾ.ರಾಜಾ ವಿಜಯಕುಮಾರ್ ಅವರು ಬೆಂಗಳೂರಿನಲ್ಲಿ ಕಳೆದ 25 ವರ್ಷಗಳಿಂದ ವೈಜ್ಞಾನಿಕ ಆವಿಷ್ಕಾರಗಳಲ್ಲಿ ನಿರತವಾಗಿರುವ `ಆರ್ಗನೈಸೇಷನಲ್ ಡಿ ಸ್ಕ್ಯಾಲಿನ್’ ಸಂಸ್ಥೆಯ ಜಾಗತಿಕ ಮುಖ್ಯಸ್ಥರಾಗಿದ್ದಾರೆ.

        “ಮೂಲವ್ಯಾಧಿಯು (ಪೈಲ್ಸ್/ಹೆಮರಾಯ್ಡ್ಸ್) ಮನುಕುಲವನ್ನು ಬಹಳ ಹಿಂದಿನಿಂದಲೂ ಕಾಡುತ್ತಿದೆ. ಮಹಾಭಾರತದ ಕಾಲದಲ್ಲಿ ಕೌರವರ ಸೋದರಮಾವನಾದ ಶಕುನಿಯು ಈ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗುತ್ತದೆ. ಇದೇ ರೀತಿಯಲ್ಲಿ ನೆಪೋಲಿಯನ್ ಬೋನಾಪಾರ್ಟೆಯು ವಾಟರ್ಲೂ ಕದನದಲ್ಲಿ ಸೋತು ಸುಣ್ಣವಾಗಲು ಕೂಡ ಅವನನ್ನು ಇನ್ನಿಲ್ಲದಂತೆ ಕಾಡುತ್ತಿದ್ದ ಮೂಲವ್ಯಾಧಿಯೇ ಕಾರಣವೆನ್ನುವ ಮಾತಿದೆ. ಏಕೆಂದರೆ, ಯುದ್ಧದ ನಿರ್ಣಾಯಕ ದಿನದಂದು ಬೆಳ್ಳಂಬೆಳಗ್ಗೆಯೇ ನೆಪೋಲಿಯನ್ ಮೂಲವ್ಯಾಧಿಯ ನೋವು ವಿಪರೀತವಾಗಿ, ನರಳತೊಡಗಿದನಂತೆ. ಪರಿಣಾಮವಾಗಿ ಅಂದು ಅವನು ಸೇನೆಯನ್ನು ಮುನ್ನಡೆಸಲಾಗಲಿಲ್ಲ. ಹೀಗಾಗಿ, ವಾಟರ್-ಲೂ ಕದನದಲ್ಲಿ ಅವನು ಮಣ್ಣು ಮುಕ್ಕಿದ,’’ ಎಂದು ಮೂಲವ್ಯಾಧಿಯ ಚರಿತ್ರೆಯನ್ನು ನೆನಪಿಸಿಕೊಳ್ಳುತ್ತಾರೆ ಡಾ.ರಾಜಾ ವಿಜಯಕುಮಾರ್.

        ಮುಂದುವರಿದು “ಇಂದು ಜೀವನಶೈಲಿಯಲ್ಲಿನ ದೋಷದಿಂದಾಗಿ ಅತ್ಯಂತ ವೇಗವಾಗಿ ಹಬ್ಬುತ್ತಿರುವ ರೋಗಗಳಲ್ಲಿ ಮೂಲವ್ಯಾಧಿ ಒಂದಾಗಿದ್ದು, ಜಗತ್ತಿನೆಲ್ಲೆಡೆ ಕೋಟ್ಯಂತರ ಜನರು ಇದರಿಂದ ಬಳಲುತ್ತಿದ್ದಾರೆ. ಜಗತ್ತಿನಾದ್ಯಂತ ಸದ್ಯಕ್ಕೆ 330 ದಶಲಕ್ಷ ಮಂದಿ (ಅಂದರೆ, 30.30 ಕೋಟಿ ಜನ) ಮತ್ತು ನಿರ್ದಿಷ್ಟವಾಗಿ ಭಾರತದಲ್ಲಿ 41 ದಶಲಕ್ಷ ಮಂದಿ (ಅಂದರೆ, 4.1 ಕೋಟಿ ಜನರ) ಮೂಲವ್ಯಾಧಿಗೆ ತುತ್ತಾಗಿದ್ದಾರೆ. ಇದರ ಜತೆಗೆ ಪ್ರತೀವರ್ಷ 1.2 ದಶಲಕ್ಷ (ಅಂದರೆ, 12 ಲಕ್ಷ ಜನರಲ್ಲಿ) ಮಂದಿಯಲ್ಲಿ ಹೊಸದಾಗಿ ಈ ರೋಗ ಕಂಡುಬರುತ್ತಿದೆ. ಅದರಲ್ಲೂ ಶೇಕಡ 60ರಷ್ಟು ದಕ್ಷಿಣ ಭಾರತೀಯರಲ್ಲಿ ಮೂಲವ್ಯಾಧಿ ಇದ್ದು, ಹೆಚ್ಚಿನವರು ಇದನ್ನು ಮೌನವಾಗಿ ಅನುಭವಿಸುತ್ತಿದ್ದಾರೆ,’’ ಎಂದು ಅವರು ವಿವರಿಸುತ್ತಾರೆ.

        “ಮೂಲವ್ಯಾಧಿಯು ಮೇಲ್ನೋಟಕ್ಕೆ ತುಂಬಾ ಗಂಭೀರವಾದ ಕಾಯಿಲೆಯಲ್ಲ ಎನ್ನುವ ಭಾವನೆ ಎಲ್ಲರಲ್ಲೂ ಇದೆ. ಆದರೆ, ಇದನ್ನು ಗುಣಪಡಿಸಿಕೊಳ್ಳದೆ ಹಾಗೆಯೇ ಬಿಟ್ಟರೆ ಮುಂದೊಂದು ದಿನ ತೀರಾ ಗಂಭೀರವಾದ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದನ್ನು ಗಮನಿಸಿ, ಶಸ್ತ್ರಚಿಕಿತ್ಸೆಯ ಯಾವ ಉಸಾಬರಿಯೂ ಇಲ್ಲದಂತಹ, ಕೇವಲ 15 ದಿನಗಳಲ್ಲಿ ಈ ಕಾಯಿಲೆಯನ್ನು ವಾಸಿ ಮಾಡಿಕೊಳ್ಳಬಹುದಾದಂತಹ ಕ್ರಯೋಕ್ಯೂರ್ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ. ಒಂದು ಸರಳವಾದ ನಳಿಕೆಯಂತಹ ಈ ಸಾಧನವನ್ನು ಕ್ರಯೋಜೆನಿಕ್ ಸಾಧನವನ್ನು ಬಳಸಿ, ಅಭಿವೃದ್ಧಿ ಪಡಿಸಲಾಗಿದೆ. ಜನರ ಕೈಗೆಟುಕುವಂತಹ ದರವನ್ನು ಇದಕ್ಕೆ ನಿಗದಿಪಡಿಸಲಾಗಿದ್ದು, ಇದರಿಂದ ಯಾವುದೇ ಅಡ್ಡ ಪರಿಣಾಮಗಳೂ ಇರುವುದಿಲ್ಲ,’’ ಎನ್ನುತ್ತಾರೆ ಡಾ.ರಾಜಾ ವಿಜಯಕುಮಾರ್.

        “ಗರ್ಭಿಣಿಯರು, ಮಧುಮೇಹದಿಂದ ಬಳಲುತ್ತಿರುವವರು ಮತ್ತು ಹೃದಯದ ಸಮಸ್ಯೆ ಇರುವವರು ಕೂಡ ಕ್ರಯೋಕ್ಯೂರ್ ಸಾಧನವನ್ನು ಯಾವುದೇ ಆತಂಕವಿಲ್ಲದೆ ಉಪಯೋಗಿಸಬಹುದು. ಅದರಲ್ಲೂ ಜಗತ್ತಿನಾದ್ಯಂತದ ಒಟ್ಟು ಗರ್ಭಿಣಿಯರಲ್ಲಿ ಶೇಕಡ 40ರಷ್ಟು ಮಹಿಳೆಯರು ಮೂಲವ್ಯಾಧಿಯಿಂದ ಬಳಲುತ್ತಿದ್ದಾರೆ. ಹೀಗಾಗಿಯೇ ಉತ್ತರ ಭಾರತದಲ್ಲಿ ಕ್ರಯೋಕ್ಯೂರ್ ಸಾಧನಕ್ಕೆ ಜನರಿಂದ ವ್ಯಾಪಕ ಸ್ಪಂದನ ಸಿಕ್ಕಿದೆ,’’ ಎಂದು ಅವರು ನುಡಿಯುತ್ತಾರೆ.

        “ಮುರಿದು ಹೋಗದಂತಹ, ಗಟ್ಟಿಯಾದ ವೈದ್ಯಕೀಯ ಪ್ಲಾಸ್ಟಿಕ್ ಅನ್ನು ಬಳಸಿ ಕ್ರಯೋಕ್ಯೂರ್ ಅನ್ನು ರೂಪಿಸಲಾಗಿದೆ. ಮೂಲವ್ಯಾಧಿಯಿಂದ ಬಳಲುತ್ತಿರುವವರು ಇದನ್ನು ತಾವು ಉಪಯೋಗಿಸುವ ಎರಡು ಗಂಟೆಗಳ ಕಾಲ ಮುಂಚೆ ಇದನ್ನುಐಸ್ ನಲ್ಲಿಟ್ಟು, ತಂಪು ಮಾಡಿಕೊಳ್ಳಬೇಕು. ನಂತರ ಇದನ್ನು ಕೊಬ್ಬರಿ ಎಣ್ಣೆ ಅಥವಾ ವ್ಯಾಸಲೀನ್ ನಲ್ಲಿ ಅದ್ದಬೇಕು. ಬಳಿಕ, -18 ಡಿಗ್ರಿ ಸೆಲ್ಷಿಯಸ್ ನಷ್ಟು ತಂಪಾಗಿರುವ ಕ್ರಯೋಕ್ಯೂರ್ ಸಾಧನವನ್ನು ಗುದದ್ವಾರದೊಳಕ್ಕೆ ಹಾಕಿಕೊಳ್ಳಬೇಕು. ಅಲ್ಲಿ ಇದು, ಮೂಲವ್ಯಾಧಿಗೆ ಕಾರಣವಾಗಿರುವಂತಹ ರಕ್ತಕಣಗಳನ್ನು ಒತ್ತಿ, ಅವು ಸಂಕುಚನಗೊಳ್ಳುವಂತೆ ಮಾಡುತ್ತದೆ. ಈ ಸಾಧನವನ್ನು ದಿನವೂ ಹೀಗೆ ಉಪಯೋಗಿಸುವುದರಿಂದ, ಗುದದ್ವಾರದಲ್ಲಿನ ನವೆ, ನೋವು, ಕಡಿತ, ಉರಿ ಮತ್ತು ಮಲವಿಸರ್ಜನೆಗೆ ಕೂತಾಗ ರಕ್ತ ಹೋಗುವುದು ಎಲ್ಲವೂ ನಿಂತುಹೋಗುತ್ತದೆ. ಈ ಚಿಕಿತ್ಸೆಯನ್ನು ಯಾರು ಬೇಕಾದರೂ ತಮ್ಮ ಮನೆಯಲ್ಲಿಯೇ ಆರಾಮಾಗಿ ಮಾಡಿಕೊಳ್ಳಬಹುದು,’’ ಎನ್ನುವುದು ಡಾ.ರಾಜಾ ವಿಜಯಕುಮಾರ್ ಅವರ ವಿವರಣೆಯಾಗಿದೆ.

        ಆದರೆ, ನಿಮಗೆ ಮೂಲವ್ಯಾಧಿ ಎನ್ನುವುದು ವೈದ್ಯಕೀಯ ಪರೀಕ್ಷೆಗಳಿಂದ ಖಚಿತವಾಗಿದ್ದಲ್ಲಿ ಮಾತ್ರ `ಕ್ರಯೋಕ್ಯೂರ್’ ಅನ್ನು ಉಪಯೋಗಿಸಬೇಕು. ಈ ಸಾಧನವು ಕರ್ನಾಟಕ ರಾಜ್ಯದ ಆಯ್ದ ವೈದ್ಯಕೀಯ ಮಳಿಗೆಗಳಲ್ಲಿ ಲಭ್ಯವಿದೆ. ಹೆಚ್ಚಿನ ವಿವರಗಳು/ಮಾಹಿತಿ ಬೇಕೆಂದರೆ, https://pilesfree.co.in/ ಜಾಲತಾಣವನ್ನು ನೋಡಬಹುದು.

       ಡಾ.ರಾಜಾ ವಿಜಯಕುಮಾರ್:

ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಗಳಲ್ಲಿ ಬಿ.ಎಸ್ಸಿ ಪೂರೈಸಿದ ನಂತರ ಇವರು ಮೈಕ್ರೋ ಎಲೆಕ್ಟ್ರಾನಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಇವರು ಮೆಡಿಕಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಡಾಕ್ಟರ್ ಆಫ್ ಸೈನ್ಸ್ ಅಧ್ಯಯನ ಮಾಡಿದರಲ್ಲದೆ, ಕಾರ್ಪೊರೇಟ್ ಕ್ರೈಸಿಸ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಜಗತ್ತಿನಾದ್ಯಂತ ಬಯೋಫಿಸಿಕ್ಸ್, ರೇಡಿಯೋಬಯಲಾಜಿ, ನ್ಯಾನೋ ಟೆಕ್ನಾಲಜಿ, ಸುಸ್ಥಿರ ಇಂಧನ, ಆಧುನಿಕ ದೂರಸಂಪರ್ಕ ಮತ್ತು ಜಲಸಂಪನ್ಮೂಲ ಮತ್ತು ಇದರ ಪುನಶ್ಚೇತನ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳಲ್ಲಿ ಅಗ್ರಗಣ್ಯರೆನಿಸಿಕೊಂಡಿದ್ದಾರೆ. ಇನ್ನೊಂದೆಡೆ ಡಾ.ರಾಜಾ ವಿಜಯಕುಮಾರ್ ಅವರು ಎಲೆಕ್ಟ್ರಾನಿಕ್ಸ್, ಅನ್ವಯಿಕ ರಸಾಯನಶಾಸ್ತ್ರ ಮತ್ತು ಮೆಡಿಕಲ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪರಿಣತರಾಗಿದ್ದಾರೆ. ಮೂರು ದಶಕಗಳ ಕಾಲ ಇವರು ಪುನರ್ಸೃಷ್ಟಿ ಮಾಡಬಹುದಾದ ಅಂಗಾಂಶಗಳ ಕ್ಷೇತ್ರದಲ್ಲಿ ಕೂಡ ಅಪಾರ ಕೆಲಸ ಮಾಡಿದ್ದು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ನ್ಯೂರಲ್ ನೆಟ್ವರ್ಕ್ಸ್ ಗಳಲ್ಲಿ ಕೂಡ ಛಾಪು ಮೂಡಿಸಿದ್ದಾರೆ. ಹೆಮೋಸಿಸ್ 256, ಸೈಟೋಟ್ರಾನ್, ಫೋರ್ನ್, ಸ್ಪಾರ್ಸ್, ಫಿಟ್, ಟಿಎಂಡಿಆರ್, ಅಕ್ವೇರಿಯಾ, ಅಕ್ವಾಟ್ರಾನ್ ಮುಂತಾದವು ಇವರ ಗಮನಾರ್ಹ ಸಂಶೋಧನೆಗಳಾಗಿವೆ. ತಮ್ಮ ಇಂತಹ ಸಂಶೋಧನೆಗಳಿಗಾಗಿ ಇವರು 30ಕ್ಕೂ ಹೆಚ್ಚು ಪೇಟೆಂಟ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ, ವಿಶ್ವಖ್ಯಾತಿಯ ಹತ್ತುಹಲವು ವೈದ್ಯಕೀಯ/ಎಂಜಿನಿಯರಿಂಗ್ ಪತ್ರಿಕೆಗಳಲ್ಲಿ ಇವರು ನೂರಾರು ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದಾರೆ. `ಸೈಟಾನಿಕ್ಸ್’ ಇವರ ಗಮನಾರ್ಹ ಕೃತಿಗಳಲ್ಲಿ ಒಂದಾಗಿದೆ.

        ಇವರು ಯುನೈಟೆಡ್ ಇನ್ವೆಂಟರ್ಸ್ ಅಸೋಸಿಯೇಷನ್, ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್, ಎಂಜಿನಿಯರಿಂಗ್ ಇನ್ ಮೆಡಿಸಿನ್ ಅಂಡ್ ಬಯಾಲಜಿ, ಯುನೈಟೆಡ್ ರೈಟರ್ಸ್ ಅಸೋಸಿಯೇಷನ್, ಅಮೆರಿಕನ್ ಕೆಮಿಕಲ್ ಸೊಸೈಟಿ, ಜೆನೆಟಿಕ್ ಸೊಸೈಟಿ ಆಫ್ ಅಮೆರಿಕ ಮತ್ತು ಅಸೋಸಿಯೇಷನ್ ಆಫ್ ಕಂಪ್ಯೂಟಿಂಗ್ ಮಷೀನರಿ ಮುಂತಾದ ಸಂಘಸಂಸ್ಥೆಗಳ ಸದಸ್ಯರು/ಫೆಲೋ ಆಗಿದ್ದಾರೆ.

        ಡಾ.ರಾಜಾ ವಿಜಯಕುಮಾರ್ ಅವರು `ಆರ್ಗನೈನೇಷನ್ ಡಿ ಸ್ಕ್ಯಾಲಿನ್’ನ ಜಾಗತಿಕ ಮುಖ್ಯಸ್ಥರಾಗಿದ್ದಾರೆ. ಸೆಂಟರ್ ಫಾರ್ ಅಡ್ವಾನ್ಸ್ಡ್ ರೀಸರ್ಚ್ ಅಂಡ್ ಡೆವಲಪ್ಮೆಂಟ್, ಸ್ಕ್ಯಾಲಿನ್ ಎನರ್ಜಿ ರೀಸರ್ಚ್ ಇನ್ಸ್ಟಿಟ್ಯೂಟ್, ಸ್ಕ್ಯಾಲಿನ್ ಸೈಬರ್ ನೆಟಿಕ್ಸ್ ಲಿಮಿಟೆಡ್ ಮುಂತಾದವು ಇದರ ಭಾಗಗಳಾಗಿವೆ. ಅಲ್ಲದೆ, ಇವರು ಜಾಗತಿಕ ಮಟ್ಟದ ಹಲವು ಸಂಸ್ಥೆಗಳ ಆಡಳಿತ ಮಂಡಳಿಗಳ ಅಧ್ಯಕ್ಷರಾಗಿಯೂ ಗಮನಾರ್ಹ ಸಾಧನೆ ಮಾಡಿದ್ದಾರೆ.

ಆರ್ಗನೈಸೇಷನ್ ಡಿ ಸ್ಕ್ಯಾಲಿನ್

        ಜಾಗತಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಗುರಿಯೊಂದಿಗೆ 1993ರಲ್ಲಿ ಈ ಸಂಸ್ಥೆಯನ್ನು ಆರಂಭಿಸಲಾಯಿತು. ಈ ಸಂಸ್ಥೆಯು ಇಂಧನ, ನೀರು, ಆರೋಗ್ಯಸೇವೆ, ಜೈವಿಕ ತಂತ್ರಜ್ಞಾನ, ನ್ಯಾನೊ ತಂತ್ರಜ್ಞಾನ, ದೂರಸಂಪರ್ಕ ಮತ್ತು ಮನೋರಂಜನಾ ಕ್ಷೇತ್ರಗಳಲ್ಲಿ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಒಟ್ಟು 12 ದೇಶ ಮತ್ತು 4 ಖಂಡಗಳಲ್ಲಿ `ಆರ್ಗನೈಸೇಷನ್ ಡಿ ಸ್ಕ್ಯಾಲಿನ್’ ತನ್ನ ಅಸ್ತಿತ್ವವನ್ನು ಹೊಂದಿದೆ. ಈ ಸಂಸ್ಥೆಯ ಉತ್ಪನ್ನಗಳು ಮತ್ತು ಯೋಜನೆಗಳನ್ನು ಇದುವರೆಗೆ 15 ರಾಷ್ಟ್ರಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬಿಡುಗಡೆ ಮಾಡಲಾಗಿದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!