ಕೋವಿಡ್-19 ಕಟು ಸತ್ಯಗಳು

ಕೋವಿಡ್ ರೋಗದ ಹರಡುವಿಕೆ ಬಗ್ಗೆ ವಿಶ್ವ ಸಂಸ್ಥೆಯ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಇದರ ಇತ್ತೀಚಿನ ಅಧ್ಯಯನಗಳ ಪ್ರಕಾರ ಕೋವಿಡ್-19 ವೈರಾಣು ರೋಗ ಸಾಂಕ್ರಾಮಿಕ ರೋಗವಾಗಿದ್ದು, ಸಾಮಾಜಿಕ ಅಂತರ, ಮುಖಕವಚ ಬಳಕೆ, ಸ್ಯಾನಿಟೈಸರ್ ಬಳಕೆ, ನಿರಂತರವಾಗಿ ಗಂಟೆಗೊಮ್ಮೆ ಸೋಪು ಬಳಸಿ ಕೈತೊಳೆಯುವುದು ಕಡ್ಡಾಯವಾಗಿ ಮಾಡಲೇ ಬೇಕು.

 Covid-19-Katu-Satyagalu

ಡಿಸೆಂಬರ್ -2019 ರಲ್ಲಿ ಚೀನಾ ದೇಶದ ಹೂವಾನ್ ನಗರದಿಂದ ಆರಂಭಗೊಂಡ ಕೋವಿಡ್-19 ವೈರಾಣು ಸಾಂಕ್ರಾಮಿಕ ರೋಗ ಈಗ ವಿಶ್ವದ ಸುಮಾರು 210ಕ್ಕೂ ಹೆಚ್ಚು ದೇಶಗಳಲ್ಲಿ ಸ್ಥಾಪಿಸಿದೆ. ಆಡು ಮುಟ್ಟದ ಸೊಪ್ಪಿಲ್ಲ, ಎಂಬಂತೆ ಕೋವಿಡ್-19 ಹರಡದ ಜಾಗವಿಲ್ಲ ಎಂಬ ಗಾದೆ ಹುಟ್ಟಿಕೊಂಡಿದೆ. ಇದೊಂದು ಹೊಸತಾದ ರೋಗವಾದ ಕಾರಣ ರೋಗದ ವರ್ತನೆ ಚಿಕಿತ್ಸೆ ಮತ್ತು ಹರಡುವಿಕೆ ವಿಚಾರದ ಬಗ್ಗೆ ಪರಿಪೂರ್ಣ ಮಾಹಿತಿ ಯಾರಿಗೂ ತಿಳಿದಿಲ್ಲ. ಈ ರೋಗ ಹುಟ್ಟಿಕೊಂಡು ಈದೀಗ ಸುಮಾರು 7 ತಿಂಗಳು ಕಳೆದಿದೆ. ವಿಶ್ವ ಸಂಸ್ಥೆಯ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಇದರ ಇತ್ತೀಚಿನ ಅಧ್ಯಯನಗಳ ಪ್ರಕಾರ ಕೋವಿಡ್-19 ರೋಗದ ಹರಡುವಿಕೆ ಬಗ್ಗೆ ಈ ವಿಶ್ವದಾದ್ಯಂತ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಕೆಳಗಿನ ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿದೆ.

1. ಒಬ್ಬ ವ್ಯಕ್ತಿಯ ಈ ವೈರಾಣು ಸೋಂಕು ಉಂಟಾಗಲು ಕನಿಷ್ಟ 1000 ವೈರಾಣುಗಳ ಅಗತ್ಯವಿರುತ್ತದೆ.

2. ಇತ್ತೀಚಿನ ಅಧ್ಯಯನಗಳ ಪ್ರಕಾರ ಈ ವೈರಾಣು ವಸ್ತುಗಳ ಮೇಲ್ಮೈ ಮತ್ತು ಹೊರಾಂಗಣ ಚಟುವಟಿಕೆಗಳಿಂದ ಹೆಚ್ಚು ಹರಡುವುದಿಲ್ಲ.

3. ಹೆಚ್ಚು ಜನರು ಸೇರಿರುವ ಒಳಾಂಗಣ ಚಟುವಟಿಕೆಗಳು, ಧಾರ್ಮಿಕ ಕೇಂದ್ರಗಳು, ಸಿನೆಮಾ ಹಾಲ್‍ಗಳು, ಮದುವೆ ಸಮಾರಂಭಗಳು, ಜಿಮ್‍ಗಳು, ವ್ಯಾಯಾಮ ಕೇಂದ್ರಗಳು, ಹವಾನಿಯಂತ್ರಿತ ಕಛೇರಿಗಳಲ್ಲಿ ವೈರಾಣು ಬಹಳ ಬೇಗ ಹರಡುತ್ತದೆ.

4. ಒಬ್ಬ ಸೋಂಕಿತ ವ್ಯಕ್ತಿ ಉಸಿರಾಡುವಾಗ ಪ್ರತಿ ಉಸಿರಿನಲ್ಲಿ ಕನಿಷ್ಟ 20 ವೈರಾಣುಕಣಗಳನ್ನು ಹೊರ ಹಾಕುತ್ತಾನೆ. ಮಾತನಾಡುವಾಗ 200 ವೈರಾಣು ಕಣಗಳನ್ನು ಬಾಯಿಂದ ಹೊರಬರುವ ಸಾಧ್ಯತೆ ಇದೆ.

5. ಒಬ್ಬ ಸೋಂಕಿತ ವ್ಯಕ್ತಿ ಸೀನಿದಾಗ 200 ಮಿಲಿಯನ್ ವೈರಾಣು ಕಣಗಳು ಗಾಳಿಯಲ್ಲಿ ಸೇರಿರುತ್ತದೆ. ಅದೇ ರೀತಿ ಸೋಂಕಿತ ವ್ಯಕ್ತಿ ಕೆಮ್ಮಿದಾಗ ಸುಮಾರು 200 ಮಿಲಿಯನ್ ವೈರಾಣು ಕಣಗಳು ದೇಹದಿಂದ ಹೊರ ಬರುತ್ತದೆ. ಒಳಾಂಗಣದಲ್ಲಿದ್ದಾಗ ಈ ವೈರಾಣು ಕಣಗಳು ರೂಮಿನೊಳಗೆ ಸುಮಾರು 2 ಗಂಟೆಗಳ ಕಾಲ ಗಾಳಿಯಲ್ಲಿ ಇರುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಒಳಾಂಗಣ ಅಥವಾ ಸರಿಯಾಗಿ ಗಾಳಿ ಇಲ್ಲದ ಕೋಣೆಗಳಲ್ಲಿ ರೋಗ ಹರಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಒಬ್ಬ ಸೋಂಕಿತ ವ್ಯಕ್ತಿಯಿಂದ ಕನಿಷ್ಟ 6 ಮೀಟರ್‍ಗಳ ಅಂತರ ಕಾಪಾಡಿಕೊಳ್ಳಬೇಕು.

6. ಒಬ್ಬ ಆರೋಗ್ಯವಂತ ವ್ಯಕ್ತಿಗೆ ವೈರಾಣು ಸೋಂಕು ತಗಲಬೇಕಾದರೆ ಆತ ನಿರಂತರವಾಗಿ ವೈರಾಣುವಿಗೆ ತೆರೆದುಕೊಂಡಲ್ಲಿ ಅಥವಾ ಹೆಚ್ಚು ಕಾಲ ಸೋಂಕಿತ ವ್ಯಕ್ತಿ ಜೊತೆ ಇದ್ದಲ್ಲಿ ಆತನಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.

7. ಒಬ್ಬ ಸೋಂಕಿತ ವ್ಯಕ್ತಿಯ ಹತ್ತಿರ 6 ಮೀ. ದೂರದ ಅಂತರ ಕಾಯ್ಸುಕೊಳ್ಳಬೇಕು. ಕನಿಷ್ಟ 45 ನಿಮಿಷಗಳ ಕಾಲ ಸೋಂಕಿತರ ಜೊತೆ ಇದ್ದರೆ ಮಾತ್ರ ರೋಗ ಬರುವ ಸಾಧ್ಯತೆ ಹೆಚ್ಚು ಇರುತ್ತದೆ.

8. ಮುಖಕವಚ ಧರಿಸಿ ಇನ್ನೊಬ್ಬ ವ್ಯಕ್ತಿಯ ಜೊತೆ ಮಾತನಾಡುವಾಗ 4 ನಿಮಿಷಕ್ಕಿಂತ ಜಾಸ್ತಿ ಮಾತನಾಡಬೇಡಿ. ಮಾತನಾಡುವ ಸಮಯ ಜಾಸ್ತಿಯಾದಷ್ಟು ರೋಗ ಬರುವ ಸಾಧ್ಯತೆ ಹೆಚ್ಚಿರುತ್ತದೆ.

9. ಸೋಂಕಿತ ಅತವಾ ಶಂಕಿತ ವ್ಯಕ್ತಿ ನಿಮ್ಮ ಪಕ್ಕದಲ್ಲಿ ಹಾದು ಹೋದಲ್ಲಿ ನಡೆದಾಡಿದಲ್ಲಿ ನಿಮಗೆ ಬರುವ ಸಾಧ್ಯತೆ ಬಹಳ ಕಡಿಮೆ.

10. ಚೆನ್ನಾಗಿ ಗಾಳಿ ಬರುವ ಭಾಗಗಳಲ್ಲಿ ಶಂಕಿತ ರೋಗಿಗಳಿಂದ ರೋಗ ಹರಡುವ ಸಾಧ್ಯತೆ ವಿರಳ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕು.

11. ಮದುವೆ ಸಮಾರಂಭ, ಪಬ್ಲಿಕ್ ಟಾಯ್ಲೆಟ್‍ಗಳು, ಹೊಟೇಲ್‍ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವೈರಾಣು ಬರುವ ಸಾಧ್ಯತೆ ಬಹಳ ಹೆಚ್ಚಾಗಿರುತ್ತದೆ.

12. ಶಾಲೆಗಳಲ್ಲಿ ಪಾರ್ಟಿ ಸಮಾರಂಭಗಳಲ್ಲಿ ಎಷ್ಟೇ ಮುಂಜಾಗ್ರತೆ ಹೆಚ್ಚಿದರೂ ವೈರಾಣು ಸೋಂಕು ಬರುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.

13. ಜನದಟ್ಟನೆ ಜಾಸ್ತಿ ಇರುವ ಮಾರುಕಟ್ಟೆಗಳು, ಪಬ್ಲಿಕ್ ಬಸ್ಸುಗಳು ಅಥವಾ ರೈಲುಗಳು ಮುಂತಾದ ಜಾಗಗಳಲ್ಲಿ ಸೋಂಕು ಹರಡುವ ಸಾಧ್ಯತೆ ಅತೀ ಹೆಚ್ಚು ಇರುತ್ತದೆ.

ಕೊನೆಮಾತು

ಕೋವಿಡ್-19 ವೈರಾಣು ರೋಗ ಸಾಂಕ್ರಾಮಿಕ ರೋಗವಾಗಿದ್ದು, ಎಷ್ಟು ಮುಂಜಾಗ್ರತೆ ವಹಿಸಿದರೂ ಒಮ್ಮೆ ಎಡವಿದರೂ ಸೊಂಕು ಬರುವುದು ನಿಶ್ಚಿತ. ಸಾಮಾಜಿಕ ಅಂತರ, ಮುಖಕವಚ ಬಳಕೆ, ಸ್ಯಾನಿಟೈಸರ್ ಬಳಕೆ, ನಿರಂತರವಾಗಿ ಗಂಟೆಗೊಮ್ಮೆ ಸೋಪು ಬಳಸಿ ಕೈತೊಳೆಯುವುದು ಕಡ್ಡಾಯವಾಗಿ ಮಾಡಲೇ ಬೇಕು. ಅತೀ ಹೆಚ್ಚು ಜನ ಸಾಂಧ್ರತೆ ಇರುವಾಗ ಒಳಾಂಗಣ ಸಮಾರಂಭಗಳಲ್ಲಿ ಅತೀ ಹೆಚ್ಚು ಸಮಯದ ಕಾಲ ಸೋಂಕಿತರಿಗೆ ಆರೋಗ್ಯವಂತ ವ್ಯಕ್ತಿ ತೆರೆದುಕೊಂಡಾಗ ಎಷ್ಟೇ ಮುಂಜಾಗ್ರತೆ ವಹಿಸಿದರೂ ವೈರಾಣು ಸೋಂಕು ಬರುವುದು ನಿಶ್ಚಿತ. ಆದರೆ ಅತೀ ಕಡಿಮೆ ಜನ ಇರುವಾಗ ಹೊರಾಂಗಣ ಸಮಾರಂಭಗಳಲ್ಲಿ ಸಾಕಷ್ಟು ಸಾಮಾಜಿಕ ಅಂತರ ಮುಂತಾದ ಮುಂಜಾಗ್ರತೆ ವಹಿಸಿದಲ್ಲಿ ವೈರಾಣು ಸೋಂಕಿನಿಂದ ಪಾರಾಗಬಹುದು ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಅದೇನೇ ಇರಲಿ, ಈಗ ತೀವ್ರವಾಗಿ ಕೋವಿಡ್-19 ರೋಗ ಸಮುದಾಯದಲ್ಲಿ ಹರಡುತ್ತಿರುವಾಗ ಮನೆಯೊಳಗೆ ಇದ್ದು, ವೈರಾಣುಗಳಿಗೆ ತೆರೆದುಕೊಳ್ಳದೆ ಇರುವುದೇ ಸೂಕ್ತ .

Dr.-Murali-Mohana-Chuntaru. ಡಾ| ಮುರಲೀ ಮೋಹನ್ ಚೂಂತಾರು ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787 www.surakshadental.com

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!