ಕಂಪ್ಯೂಟರ್ ವಿಷನ್ ಸಿಂಡ್ರೊಮ್- ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು

ಕಂಪ್ಯೂಟರ್ ವಿಷನ್ ಸಿಂಡ್ರೊಮ್ ಅತಿಯಾದ ಮೊಬೈಲ್ ಮತ್ತು ಕಂಪ್ಯೂಟರ್ ಸಾಧನಗಳ ಬಳಕೆಯಿಂದ ಕಾರಣವಾಗುವ ಕಣ್ಣ್ಣಿನ ಸಮಸ್ಯೆ. ಮುಂಜಾಗರೂಕತೆ ಬಳಸಿ, ದೇಹ್ಕಕೆ, ಮನಸ್ಸಿಗೆ ಮತ್ತು ಕಣ್ಣಿಗೆ ತೊಂದರೆ ಆಗದಂತೆ ಈ ಸಾಧನಗಳನ್ನು ಬಳಸುವುದರಲ್ಲಿಯೇ ಜಾಣತನ ಅಡಿಗಿದೆ. COVID ಕಾರಣದಿಂದಾಗಿ ಜನರು ಹೆಚ್ಚು ಹೆಚ್ಚು ಮೊಬೈಲ್ ಮತ್ತು ಕಂಪ್ಯೂಟರ್ ಅನ್ನು ಬಳಸುತ್ತಿದ್ದಾರೆ. ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ಇತ್ತೀಚಿನ ಆಧುನಿಕಂಪ್ಯೂಟರ್ ವಿಷನ್ ಸಿಂಡ್ರೊಮ್ಕ ಯುಗದಲ್ಲಿ ಕಂಪ್ಯೂಟರ್ ಬಳಕೆ ಮತ್ತು ಡಿಜಿಟಲ್ ಸಾಧನೆಗಳ ಬಳಕೆ ಸರ್ವೇ ಸಾಮಾನ್ಯವಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ಹಲ್ಲಿಲ್ಲದ ಮುದುಕರವರೆಗೆ ಎಲ್ಲರಿಗೂ ಮೊಬೈಲ್ ಮತ್ತು ಕಂಪ್ಯೂಟರ್ ಅನಿವಾರ್ಯ ಎಂಬ ಕಾಲಘಟ್ಟದಲ್ಲಿ ನಾವು ಇಂದು ಇದ್ದೇವೆ. ಅತಿಯಾದ ಮೊಬೈಲ್ ಮತ್ತು ಕಂಪ್ಯೂಟರ್ ಸಾಧನಗಳ ಬಳಕೆಯಿಂದ ಕಣ್ಣ್ಣಿನ ಮೇಲೆ ಒತ್ತಡ ಬಿದ್ದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದನ್ನೇ  ಡಿಜಿಟಲ್ ಐಸಿಂಡ್ರೋಮ್ ಎಂದು ಆಂಗ್ಲಭಾಷೆಯಲ್ಲಿ ಮತ್ತು ಶುದ್ಧ ಕನ್ನಡ ಭಾಷೆಯಲ್ಲಿ ಕಂಪ್ಯೂಟರ್ ವಿಷನ್ ಸಿಂಡ್ರೋಮ್‌ ಎನ್ನುತ್ತಾರೆ. ಏನಿಲ್ಲವೆಂದರೂ ಸುಮಾರು 75 ಶೇಕಡಾ ಮಂದಿ ಈ ರೀತಿಯ ಕಂಪ್ಯೂಟರ್ ವಿಷನ್ ಸಿಂಡ್ರೋಮ್‍ನಿಂದ ಬಳಲುತ್ತಿದ್ದಾರೆ.

ಕಂಪ್ಯೂಟರ್, ಲಾಪ್‍ಟಾಪ್, ಟ್ಯಾಬಲೆಟ್, ಸಾಮಾರ್ಟ್ ಫೋನ್ ಹೀಗೆ ಎಲ್ಲಾವೂ ಡಿಜಿಟಲ್ ಆಗಿ ನಮ್ಮ ಜೀವನದ ಪ್ರತಿಯೊಂದು ಕೆಲಸವು ಯಾಂತ್ರಿಕವಾಗಿ ನಡೆಯುತ್ತಿದ್ದು ಮಾನವ ಸಂಬಂಧಗಳು ಹಲಸುವ ಹಂತಕ್ಕೆ ಬಂದು ತಲುಪಿದೆ. ನಾವು ಓಡಾಡುವಾಗ ನಡೆದಾಡುವಾಗ, ಕುಂತಾಗ, ನಿಂತಾಗ ವಾಹನ ಚಲಾಯಿಸುವಾಗ, ಊಟ ಮಾಡುವಾಗ ಹೀಗೆ ಎಲ್ಲೆಂದರಲ್ಲಿ ನಮ್ಮ ಮೊಬೈಲ್ ಬಳಕೆ ಮಾಡುವುದರಿಂದ ದೈಹಿಕ ಸಮಸ್ಯೆಗಳ ಜೊತೆಗೆ ಮಾನಸಿಕ ತೊಂದರೆಗಳು ದಿನೇ ದಿನೇ ಹೆಚ್ಚಾತೊಡಗಿದೆ. ನಾವು ಎಲ್ಲರ ಜೊತೆಗಿದ್ದು ಏಕಾಂಗಿಯಾಗಿ ಕಾಲ ಕಳೆಯುವ ಹಂತಕ್ಕೆ ನಾವಿಂದು ಬಂದು ತಲುಪಿದ್ದೇವೆ. ಮೊಬೈಲ್ ಒಂದಿದ್ದರೆ ಹೊರ ಜಗತ್ತಿನ ಪರಿವೆಯೇ ಇಲ್ಲದೆ ನಾವು ನಮ್ಮನ್ನೇ ಕಳೆದುಕೊಳ್ಳುವ ಅಪಾಯಕರ ಹಂತಕ್ಕೆ ನಾವು ತಲುಪಿರುವುದು ಬಹಳ ದೌರ್ಬೌಗ್ಯದ ಸಂಗತಿ.

ತಡೆಗಟ್ಟುವುದು ಹೇಗೆ?

1.ಕಂಪ್ಯೂಟರ್ ಬಳಸುವಾಗ ನಿರಂತರವಾಗಿ ಗಂಟೆಗೊಮ್ಮೆ ಕಡ್ಡಾಯವಾಗಿ 5 ನಿಮಿಷಗಳ ವಿಶ್ರಾಂತಿ ತೆಗೆದುಕೊಳ್ಳಬೇಕು. ಕಣ್ಣನ್ನು ನೀರಿನಿಂದ ತೊಳೆಯಬಹುದು. 20-20-20ರ ನಿಯಮದಂತೆ ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕುಂಡು ವರೆಗೆ 20 ಅಡಿಗಳಷ್ಟು ದೂರ ನೋಡಬೇಕು.

2. ಸ್ಮಾರ್ಟ್ ಫೋನ್ ಬಳಸುವಾಗ ನಾವು ಕೂಡಾ ಸ್ಮಾರ್ಟ್ ಆಗಿರಬೇಕು. ಹಿತಮಿತವಾಗಿ ನಿಯಮಿತವಾಗಿ ಬಳಸಬೇಕು. ಅತೀ ಅನಿವಾರ್ಯವಾದಲ್ಲಿ ಮಾತ್ರ ಬಳಸಿ. ದಿನವಿಡೀ ಸ್ಮಾರ್ಟ್ ಫೋನ್ ಬಳಸುವುದು ಅತ್ಯಂತ ಅಪಾಯಕಾರಿ.

3. ಮಕ್ಕಳನ್ನು ವಿಡಿಯೊಗೇಮ್‍ಗಳಿಂದ ದೂರವಿಡಬೇಕು. ಮಗು ಅತ್ತಾಗ ಮಕ್ಕಳಿಗೆ ಮೊಬೈಲ್ ಕೊಟ್ಟು ಮೊಬೈಲ್ ಗೇಮ್ ಆಟ ಆಡಿಸಿ ಸುಮ್ಮನಾಗಿಸುವುದು ಮೂರ್ಖತನದ ಪರಮಾವಧಿ.

4. ದಿನವಿಡೀ ಕಂಪ್ಯೂಟರ್ ಮುಂದೆ ಕೆಲಸ ಮಾಡುವ ವೃತ್ತಿಯಾಗಿದ್ದಲ್ಲಿ ಕಂಪ್ಯೂಟರ್ ಪರದೆಯ ಮಧ್ಯಭಾಗ ಕಣ್ಣಿನ ದೃಷ್ಟಿಯ ಸಮರೇಖೆಯಿಂದ 6 ಇಂಚಿನಷ್ಟು ಕೆಳಗಿದ್ದಲ್ಲಿ ಉತ್ತಮ. ಕಂಪ್ಯೂಟರ್ ಬಳಸುವಾಗ ಆಗಾಗ ಕಣ್ಣು ಮಿಟಿಕಿಸಿದಾಗ ಕಣ್ಣಿನ ಹೊರ ಪದರ ಒದ್ದೆಯಾಗಿ ಕಣ್ಣಿಗೆ ಹಿತವೆನಿಸುತ್ತದೆ. ಕಂಪ್ಯೂಟರ್ ಬಳಸುವಾಗ ಕಂಪ್ಯೂಟರ್ ಒಳಗೆಗೇಂದೇ ದೊರಕುವ ಕನ್ನಡಕ ವೈದ್ಯರ ಸಲಹೆ ಮೇರೆಗೆ ಬಳಸಬಹುದು.

5. ಕಂಪ್ಯೂಟರ್ ಬಳಸುವ ಪರದೆ ಮೇಲೆ ಪ್ರತಿಫಲಿಸಬಾರದು. ಕಿಟಿಕಿಗಳು ಪರದೆ ಬಳಸಬೇಕು. ಬೆಳಕಿಗಾಗಿ ಬಳಸುವ ಪೈಟನ್ನು ಕಂಪ್ಯೂಟರ್ ಮೇಲ್ಭಾಗದಲ್ಲಿ ಇದ್ದರೆ ಉತ್ತಮ. ಕಂಪ್ಯೂಟರ್ ಎದುರು ಅಥವಾ ಹಿಂದೆ ಇದ್ದಲ್ಲಿ ಪ್ರತಿಫಲವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಯಾಕಾಗಿ ತೊಂದರೆ ಬರುತ್ತದೆ?

mobile-talk1. ದಿನದಲ್ಲಿ 4 ಗಂಟೆಗಳಿಗಿಂತಲೂ ಜಾಸ್ತಿ ಅವಧಿ ಕಂಪ್ಯೂಟರ್ ಬಳಕೆ ಮಾಡುವುದು.

2. ಅತಿಯಾದ ವಿಡಿಯೋಗೇಮ್ ಮಕ್ಕಳು ಆಡುವುದು.

3. ಮೊಬೈಲ್‍ನಲ್ಲಿ ದಿನ್ಕಕೆ 4 ಗಂಟೆಗಿಳಿಗಿಂತಲೂ ಜಾಸ್ತಿ ಕಾಲ ಮಕ್ಕಳ ಆಟ ಆಡುವುದು.

4. ದಿನದಲ್ಲಿ 4 ಗಂಟೆಗಳಿಗಿಂತಲೂ ಜಾಸ್ತಿ ಸ್ಮಾರ್ಟ್ ಫೋನ್ ಬಳಸುವುದು.

5. ಕಣ್ಣಿನ ದೃಷ್ಟಿ ಸಮಸ್ಯೆ ಇರುವವರು ಸರಿಯಾದ ಚಿಕಿತ್ಸೆ ಪಡೆಯದೇ ಕಂಪ್ಯೂಟರ್ ಬಳಸುವುದು.

6. 50 ವರ್ಷ ದಾಟಿದವರು ಅತಿಯಾದ ಕಂಪ್ಯೂಟರ್ ಬಳಸುವುದು.

7. ಕಂಪ್ಯೂಟರ್ ಬಳಸುವ ಸ್ಥಳ ಅದರ ಬಳಕೆಗೆ ಪೂರಕವಾಗಿಲ್ಲದಿರುವುದು.

8. ಅತಿಯಾದ ಬೆಳಕು ಕಂಪ್ಯೂಟರ್ ಪರದೆಯ ಮೇಲೆ ಬಿದ್ದಲ್ಲಿ ಅದು ಕಣ್ಣಿಗೆ ಪ್ರತಿಫಲಿಸುತ್ತದೆ. ಕಡಮೆ ಗುಣಮಟ್ಟದ ಕಂಪ್ಯೂಟರ್ ಬಳಕೆ.

ಕಂಪ್ಯೂಟರ್ ಪರದೆಯ ಮೇಲೆ ಮೂಡುವ ಅಕ್ಷರಗಳು ಸಣ್ಣ ಚುಕ್ಕೆಗಳಿಂದ ಮೂಡಲ್ಪಟ್ಟಿರುತ್ತದೆ. ಆದರೆ ಪೇಪರ್‌ನಲ್ಲಿ ಇರುವ ಅಕ್ಷರಗಳು ನಿರಂತವಾಗಿರುತ್ತದೆ. ಈ ಕಾರಣದಿಂದ ಕಂಪ್ಯೂಟರ್ ಪರದೆಯ ಮೇಲೆ ಬರೆದ ವಾಕ್ಯಗಳನ್ನು ಓದುವಾಗ ಕಣ್ನನ್ನು ನಿರಂತರವಾಗಿ ಕೇಂದ್ರಿಕರಿಸಬೇಕಾಗುತ್ತದೆ. ಹೀಗೆ ಮಾಡಿದಾಗ ಕಣ್ಣಿನ ಮೇಲೆ ನಿರಂತರ ಒತ್ತಡ ಬಿದ್ದು ಕಣ್ಣು ನೋಯುತ್ತದೆ.

ಲಕ್ಷಣಗಳು- ಮುಂಜಾಗರೂಕತೆ :

ಕಂಪ್ಯೂಟರ್ ವಿಷನ್ ಸಿಂಡ್ರೊಮ್- ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದುಕಣ್ಣು ಮಂಜಾಗುವುದು, ಕಣ್ಣಿನಲ್ಲಿ ಉರಿ, ಕಣ್ಣು ತುರಿಸುವುದು, ಕಣ್ಣಿನಲ್ಲಿ ನೀರು ಬರುವುದು, ಕಣ್ಣಿನಲ್ಲಿ ನೋವು, ಕಣ್ಣು ಕೆಂಪಾಗುವುದು, ತಲೆನೊವು, ಯಾವುದೇ ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗದಿರುವುದು, ವಸ್ತುಗಳು ಎರಡೆರಡಾಗಿ ಕಾಣುವುದು, ಕುತ್ತಿಗೆ ನೋವು, ಸುಸ್ತು ಬಂದು ಕಣ್ಣುಗಳು ಒಣಗಿದಂತಾಗುವುದು, ಏಕಾಗ್ರತೆ ಭಂಗ, ಯಾವುದೇ ವಸ್ತುವಿನ ಮೇಲೆ ಕಣ್ಣನ್ನು ಕೇಂದ್ರಿಕರಿಸಲು ಸಾಧ್ಯವಾಗದಿರುವುದು ಇತ್ಯಾದಿ. ಆಧುನಿಕ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಮತ್ತು ಡಿಜಿಟಲ್ ಸಾಧನೆಗಳು ಜೀವನ ಅವಿಬಾಜ್ಯ ಅಂಗವಾಗಿದೆ. ಇವೆಲ್ಲದೇ ನಮ್ಮ ದೈನಂದಿನ ಕಾರ್ಯಚಟುವಟಿಕೆಗಳು ಮುಂದೆ ಸಾಗದಂತಹಾ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಿರುವಾಗ ಸಾಕಷ್ಟು ಮುಂಜಾಗರೂಕತೆ ಬಳಸಿ, ದೇಹ್ಕಕೆ, ಮನಸ್ಸಿಗೆ ಮತ್ತು ಕಣ್ಣಿಗೆ ತೊಂದರೆ ಆಗದಂತೆ ಈ ಸಾಧನಗಳನ್ನು ಬಳಸುವುದರಲ್ಲಿಯೇ ಜಾಣತನ ಅಡಿಗಿದೆ. ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ ಎಂಬ ಮಾತಿನಂತೆ ಮನುಷ್ಯನ ದೇಹದ ಸರ್ವಾಂಗಗಳ ಪೈಕಿ ಕಣ್ಣುಗಳಿಗೆ ಅತೀ ಪ್ರಾಮುಖ್ಯತೆ ಇರುತ್ತದೆ.

1. ನಿರಂತರವಾಗಿ ಕಣ್ಣಿನ ವ್ಯಾಯಾಮ ಮಾಡುವುದು

2. ಕಣ್ಣಿಗೆ ಪೂರಕವಾದ ವಿಟಮಿನ್ ಎ ಜಾಸ್ತಿ ಇರುವ ಆಹಾರಗಳ ಸೇವನೆ ಮಾಡುವುದು

3. ಆದಷ್ಟು ಕಡಮೆ ಡಿಜಿಟಲ್ ಸಾಧನಗಳ ಬಳಕೆ ಮಾಡುವುದು

4. ಮುಂತಾದ ವಿಷಯಗಳ ಬಗ್ಗೆ ಹೆಚ್ಚು ಗಮನ ವಹಿಸಿದಲ್ಲಿ ನಮ್ಮ ಕಣ್ಣಿನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಬಹುದಾಗಿದೆ. ಇಲ್ಲವಾದಲ್ಲಿ ಮೊದಲೆಲ್ಲಾ 50-60ರ ಹರೆಯದಲ್ಲಿ ಬರುತ್ತಿದ್ದ ಕನ್ನಡಕಗಳು ಈಗ 20-30ರ ಹರೆಯದಲ್ಲಿಯೇ ಬಳಸಬೇಕಾದ ಅನಿವಾರ್ಯತೆ ಬರಲೂಬಹುದು.

ಡಾ| ಮುರಲೀ ಮೋಹನ್ ಚೂಂತಾರು ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787 www.surakshadental.com

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!