ಕೊಲೆಸ್ಟ್ರಾಲ್ ಹೆಚ್ಚು ಒಳ್ಳೆಯದಲ್ಲ!

ಇತ್ತೀಚೆಗಂತೂ ಆರೋಗ್ಯದ ವಿಷಯ ಬಂದಾಗ ಫ್ಯಾಟ್ಸ್ ಮತ್ತು ಕೊಲೆಸ್ಟ್ರಾಲ್ ಎಂಬ ಈ ಎರಡೂ ಪದಗಳು ತುಂಬಾ ಮನಸ್ಸಿಗೆ ಘಾಸಿಗೊಳಿಸುತ್ತವೆ. ಅದರಲ್ಲೂ ಯೌವ್ವನದಲ್ಲೇ ಇವೆರಡೂ ಕಾಣಿಸಿಕೊಂಡು ಬಿಟ್ಟರೇ ನೆಮ್ಮದಿಯೇ ಇರುವುದಿಲ್ಲ.ಮುಖ್ಯವಾಗಿ ಫ್ಯಾಟ್ಸ್ ಮತ್ತು ಕೊಲೆಸ್ಟ್ರಾಲ್ ಎರಡೂ ದೇಹಕ್ಕೆ ಅಗತ್ಯವಾದದ್ದು. ಇವೆರಡೂ ಇಲ್ಲದಿದ್ದರೆ ಮನುಷ್ಯ ಜೀವಿಸಲಾರ. ದೇಹದ ಆರೋಗ್ಯಕ್ಕೆ ಇವು ಬೇಕೇಬೇಕು. ನಿಜ, ಆದರೆ ಯಾವುದೇ ಪದಾರ್ಥವು ಅಧಿಕವಾದರೆ ಅದು ಅಪಾಯಕಾರಿ ಅಲ್ಲವೇ?
ಸಮ ಪ್ರಮಾಣ
ಹಾಗೆಯೇ ಫ್ಯಾಟ್ಸ್ ಮತ್ತು ಕೊಲೆಸ್ಟ್ರಾಲ್‍ಗಳೂ ಅಷ್ಟೇ. ನಿಯಂತ್ರಣದಲ್ಲಿ ಇರಿಸಿಕೊಂಡರೆ ಇವುಗಳಿಂದ ಇಬ್ಬಂದಿ ಏನೂ ಇರುವುದಿಲ್ಲ. ತಿನ್ನುವ ಆಹಾರ ಪದಾರ್ಥಗಳಲ್ಲಿ ಸಕ್ಕರೆ ಪಿಷ್ಠಾದಿಗಳು, ಪ್ರೊಟೀನ್, ಜಿಡ್ಡಿನಾಂಶ ಇರುತ್ತದೆ. ಸಕ್ಕರೆ ಪಿಷ್ಠಾದಿಗಳು ಶಕ್ತಿಗಳು ಕೊಟ್ಟರೇ ಪ್ರೊಟೀನ್‍ಗಳು ದೇಹವನ್ನು ನಿರ್ಮಿಸುತ್ತವೆ.ಜಿಡ್ಡಿನಾಂಶವು ಶಕ್ತಿಯ ಪ್ರಮಾಣವನ್ನು ವೃದ್ಧಿಸುತ್ತವೆ. ಸೇವಿಸುವ ಜಿಡ್ಡಿನಾಂಶದಲ್ಲಿ ಅಲ್ಪ ಪ್ರಮಾಣವನ್ನೇ ಮಾತ್ರ ದೇಹವು ತನ್ನಲ್ಲಿ ಸಂಗ್ರಹಿಸಿಟ್ಟುಕೊಂಡಿರುತ್ತದೆ. ಭವಿಷ್ಯದಲ್ಲಿ ಏನಾದರೂ ಅಗತ್ಯವಿದ್ದಾಗ ಉಪಯೋಗಿಸಿಕೊಳ್ಳಲು ಇವು ಮುಂದೆ ಸಹಕಾರಿಯಾಗಿ ನಿಲ್ಲುವುದು. ದೇಹದಲ್ಲಿ ಸಮಪ್ರಮಾಣದಲ್ಲಿ ಫ್ಯಾಟ್ಸ್ ಇದ್ದರೆ ಅಂತಹ ತೊಂದರೆಗಳಿಲ್ಲ.
ಹಲವು ವಿಧ
ಜಿಡ್ಡಿನಾಂಶವು ದೇಹಕ್ಕೆ ಆಹಾರ ಪದಾರ್ಥಗಳ ಮೂಲಕ ಸೇರುತ್ತವೆ. ಬೆಣ್ಣೆ, ತುಪ್ಪ, ಜಾಮು, ಎಣ್ಣೆ, ಹಾಲು ಹಾಗೂ ಹಾಲಿನ ಉತ್ಪತ್ತಿಗಳಲ್ಲಿ ಹೆಚ್ಚು ಜಿಡ್ಡಿನಾಂಶಗಳು ಇರುತ್ತವೆ. ಆದರೆ ಎಣ್ಣೆಯಲ್ಲೂ ಜಿಡ್ಡಿನಾಂಶ ಇರುತ್ತದೆ. ಆದರೆ ಎಲ್ಲ ಪದಾರ್ಥಗಳಲ್ಲೂ ಇರುವ ಜಿಡ್ಡಿನಾಂಶ ಒಂದೇ ವಿಧವಾದುದ್ದಲ್ಲ.
ಇವುಗಳಲ್ಲಿ ಕೆಲವು ಒಳ್ಳೆಯದನ್ನು ಮಾಡಿದರೆ ಮತ್ತೆ ಕೆಲವು ವಿಧಗಳು ಕೇಡು ಮಾಡುತ್ತವೆ. ಅನ್‍ಸ್ಯಾಚುರೇಟೆಡ್ ಫ್ಯಾಟ್ಸ್ ಶರೀರಕ್ಕೆ ಒಳ್ಳೆಯವು. ಇವುಗಳಲ್ಲಿ ಮತ್ತೆ ಎರಡು ತರಹ ಇವೆ. ಒಂದು ಮಾನೋ ಅನ್‍ಸ್ಯಾಚುರೇಟೆಡ್, ಎರಡನೆಯದು ಪಾಲಿ ಅನ್‍ಸ್ಯಾಚುರೇಟೆಡ್. ಈ ಎರಡೂ ಜಿಡ್ಡಿನಾಂಶಗಳು ದೇಹಕ್ಕೆ ಅಗತ್ಯವಾದದ್ದವೇ.
ಮಾನೋ ಅನ್‍ಸ್ಯಾಚುರೇಟೆಡ್: ನೆಲಗಡಲೆ, ಬಾದಾಮಿ ಎಣ್ಣೆ, ಸಾಸಿವೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ವೆಜಿಟಬಲ್, ಆಯಿಲ್ ಸೋಯಾ ಎಣ್ಣೆ ಮುಂತಾದವುಗಳಲ್ಲಿ ಇರುತ್ತದೆ. ಗೋಡಂಬಿ, ಬಾದಾಮಿ, ವಾಲ್‍ನಟ್ಸ್, ಕುಂಬಳಬೀಜಗಳು, ಸಾಸಿವೆ, ಎಳ್ಳುಗಳಲ್ಲಿ ಈ ಜಿಡ್ಡಿನಾಂಶಗಳು ಲಭಿಸುತ್ತವೆ.
ಪಾಲಿ ಅನ್‍ಸ್ಯಾಚುರೇಟೆಡ್: ಇದಕ್ಕೆ ಇನ್ನೊಂದು ಹೆಸರು ಹೆಲ್ತಿ ಫ್ಯಾಟ್ಸ್. ಈ ಜಿಡ್ಡಿನಾಂಶಗಳೂ ದೇಹಕ್ಕೆ ಅಗತ್ಯ. ಇದು ವೆಜಿಟಬಲ್ ಆಯಿಲ್‍ನಲ್ಲಿ ಹೇರಳವಾಗಿರುತ್ತದೆ. ನೆಲಗಡಲೆ, ಎಳ್ಳು ಹಸಿ ಧಾನ್ಯಗಳು, ಸೊಪ್ಪು, ಹಸಿರು ತರಕಾರಿಗಳಲ್ಲಿ ಇರುತ್ತದೆ. ಪ್ರಮುಖವಾಗಿ ಸ್ಯಾಚುರೇಟೆಡ್ ಫ್ಯಾಟ್ಸ್ ತರುವಂತಹ ಪದಾರ್ಥಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.
ಒಳ್ಳೆಯದು
ಜಿಡ್ಡು, ದೇಹವು ವಿಟಮಿನ್‍ಗಳನ್ನು ಬಳಸಿಕೊಳ್ಳುವಂತೆ ಮಾಡುತ್ತದೆ. ಶರೀರಕ್ಕೆ ಅಗತ್ಯವಿರುವ ವಿಟಮಿನ್‍ಗಳು ಎ,ಡಿ. ಈ,ಕೆ. ಇಂಥವುಗಳನ್ನು ಸೇವಿಸುವ ಆಹಾರದಲ್ಲಿ ದೇಹಕ್ಕೆ ಸೇರಿಸುವಲ್ಲಿ ಪ್ಯಾಟ್ಸ್ ಸಹಾಯ ಮಾಡುತ್ತದೆ. ಮಿದುಳಿನ ರಚನೆ, ನಿರ್ಮಾಣ, ಸ್ವಾಸ್ಥ್ಯ ಕಾರ್ಯಾಚರಣೆಗೆ ಸಹಾಯ ಮಾಡುತ್ತದೆ. ಶರೀರದಲ್ಲಿ `ಶಕ್ತಿ’ ಸಂಗ್ರಹಕ್ಕೆ ಜಿಡ್ಡು ಅತ್ಯವಶ್ಯಕ.ಚರ್ಮ ರಕ್ಷಣೆಗೆ ಬೇಕೇಬೇಕು. ಜಿಡ್ಡು ಇಲ್ಲದಿದ್ದರೆ ಚರ್ಮ ಒಣಗಿದಂತಾಗುತ್ತದೆ. ಹೃದಯ, ಶ್ವಾಸಕೋಶ, ಮೂತ್ರಪಿಂಡ ಮುಂತಾದ ದೇಹದ ಅವಯವಗಳು ಅಲುಗಾಡದಂತೆ ರಕ್ಷಾಕವಚವಾಗಿ ಕೆಲಸ ಮಾಡುತ್ತದೆ.
ಎಚ್ಚರ
1.ಅಧಿಕ ಜಿಡ್ಡಿನಾಂಶ ಅಪಾಯಕಾರಿ. ಇದರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು.

2.ಕೊಬ್ಬು ಇರುವ ತಿಂಡಿ-ತಿನಿಸುಗಳು, ಆಹಾರ ಪದಾರ್ಥಗಳನ್ನು ವರ್ಜಿಸಬೇಕು.

3.ಆರು ತಿಂಗಳಿಗೊಮ್ಮೆ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಚೆಕ್ ಮಾಡಿಸಿಕೊಳ್ಳುತ್ತಿರಬೇಕು.

4.ತೂಕವನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಒಳ್ಳೆಯದು.

5.ವಿಪರೀತ ವ್ಯಾಯಾಮ ಬೇಡ. ಅಧಿಕ ಸೋಮಾರಿತನವೂ ಬೇಡ.
6.ಎಚ್ಚರ ತಪ್ಪಿದರೆ ಸ್ಥೂಲಕಾಯತ್ವ (ಒಬೆಸಿಟಿ) ಬರುತ್ತದೆ. ಹೃದ್ರೋಗ ಬರುತ್ತದೆ. ರಕ್ತ ಪರಿಚಲನೆ ಕ್ರಮವನ್ನು ಅಡ್ಡಿಪಡಿಸುತ್ತದೆ. 7.ಸೂಕ್ತ ಸಮಯದಲ್ಲೇ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!