ಮಾನವನ ದೇಹವು ನೂರಾರು ವಿಧ ವಿಧವಾದ ಜೀವಕೋಶಗಳಿಂದ ರೂಪುಗೊಂಡಿರುತ್ತದೆ. ಈ ಜೀವಕೋಶಗಳ ಬೆಳವಣಿಗೆಯಲ್ಲಿ ಉತ್ಪಾದನಾ ಶಕ್ತಿ ಸ್ವಲ್ಪ ಏರುಪೇರಾದರೂ ಒಂದಲ್ಲಾ ಒಂದು ಸಮಸ್ಯೆ ಕಂಡು ಬರುತ್ತದೆ. ಹೀಗೆ ಜೀವಕೋಶಗಳ ಏರುಪೇರಿನಿಂದ ಉಂಟಾಗುವ ರೋಗಗಳಲ್ಲಿ ಅರ್ಬುದ (ಕ್ಯಾನ್ಸರ್) ರೋಗವು ಒಂದು. ಇದೊಂದು
ಬಾಯಿ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಹೆಚ್ಚಿನ ಬಾಯಿ ಕ್ಯಾನ್ಸರಿಗೆ ತಂಬಾಕು ಮತ್ತು ತಂಬಾಕು ಉತ್ಪನ್ನಗಳು, ಮದ್ಯಪಾನ ಮತ್ತು ಧೂಮಪಾನ ಪರೋಕ್ಷವಾಗಿ ಕಾರಣವಾಗುತ್ತದೆ ಎಂದು ಅಂಕಿಅಂಶಗಳಿಂದ ಮತ್ತು ಸಂಶೋಧನೆಗಳಿಂದ ತಿಳಿದುಬಂದಿದೆ. ನಮ್ಮ ದೇಹದಲ್ಲಿನ ಜೀವಕೋಶಗಳು ನಿಯಂತ್ರಣ ತಪ್ಪಿ ಅನಿಯಂತ್ರಿತವಾಗಿ
ವಿಶ್ವ ತಂಬಾಕು ರಹಿತ ದಿನ – ಮೇ 31. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ರೋಗರುಜಿನ, ಸಾವು ನೋವು, ದುಗುಡ ದುಮ್ಮಾನಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಜನರಲ್ಲಿ ಜಾಗೃತಿ ಮೂಡಿಸವ ಸದುದ್ದೇಶದಿಂದಲೇ ಈ ಆಚರಣೆಯನ್ನು ಜಾರಿಗೆ ತಂದಿದೆ.
ಗರ್ಭಗೊರಳು ಮಹಿಳೆಯ ಪುನರುತ್ಪತ್ತಿ ಅಂಗಾಂಗಗಳಲ್ಲಿ ಒಂದಾಗಿದ್ದು ಗರ್ಭಕೋಶದ ಕೆಳಗಿನ ಸಂಕುಚಿತ ಭಾಗ. ಗರ್ಭಗೊರಳು ಗರ್ಭಕೋಶವನ್ನು ಯೋನಿಯೊಂದಿಗೆ ಸಂಪರ್ಕಿಸುತ್ತದೆ. ಯೋನಿ ದೇಹದ ಹೊರಭಾಗದ ಅಂಗಾಂಗ. ಮಹಿಳೆಯ ಋತುಸ್ರಾವದ ಸಮಯದಲ್ಲಿ, ರಕ್ತವು ಗರ್ಭಕೋಶದಿಂದ ಗರ್ಭಗೊರಳಿನ ಮೂಲಕ ಹೊರಗೆ ಹರಿದುಬರುತ್ತದೆ. ಸಂಭೋಗ ಸಮಯದಲ್ಲಿ ವೀರ್ಯಾಣು ಯೋನಿಯಿಂದ
ರಕ್ತದ ಕ್ಯಾನ್ಸರ್ ಎಂದ ಕೂಡಲೇ ವ್ಯಕ್ತಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗಿ ಭಯಾನಕ ಸಂಕಟವನ್ನು ಅನುಭವಿಸುವುದಂತೂ ಸತ್ಯವಾದ ಮಾತು.ನಾವು ತಿನ್ನುವ ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ ಎಲ್ಲವೂ ಕಲ್ಮಶ ಮತ್ತು ರಾಸಾಯನಿಕಪೂರಿತವಾಗಿರುವುದರಿಂದ ಅದಷ್ಟು ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳಿ.
ದೊಡ್ಡ ಕರುಳಿನ ಕ್ಯಾನ್ಸರ್ ಮೂಲತಃ ಆಹಾರಕ್ಕೆ ಸಂಬಂಧಿಸಿದ ಕಾಯಿಲೆ. ನಿಮ್ಮಲ್ಲಿ ಆರೋಗ್ಯಕರವಾದ ಆಹಾರವನ್ನು ಸೇವಿಸುವ ಅಭ್ಯಾಸವಿದ್ದಲ್ಲಿ ಈ ರೋಗವನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ಹಾನಿಕಾರಕ ಆಹಾರ ಸೇವನೆಯನ್ನು ಬಿಡಿ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿರಿ. ಕ್ಯಾನ್ಸರ್ ಎಂದರೆ ಬಹಳಷ್ಟು ಜನರ ದೃಷ್ಟಿಯಲ್ಲಿ