ಕ್ಯಾನ್ಸರ್ ಗೆ ಬೆಂಗಳೂರು ಮೂಲದ ನ್ಯೂಮೆಡ್ ಡಯಾಗ್ನೋಸ್ಟಿಕ್ಸ್ ಚಿಕಿತ್ಸಾ ಕೇಂದ್ರವು ಕ್ಯಾನ್ಸರ್ ಗೆ ಡಯಾಗ್ನೋಸ್ಟಿಕ್ಸ್ ನೀಡುವ ಉತ್ತಮ ಡಯಾಗ್ನೋಸ್ಟಿಕ್ಸ್ ಗಳಲ್ಲಿ ಒಂದಾಗಿದೆ. ರೋಗ ಪತ್ತೆ ಮಾಡಲು ಮತ್ತು ರೋಗದ ಹಂತ ತಿಳಿಯಲು ಅತ್ಯಾಧುನಿಕ ಉಪಕರಣ ಗಳನ್ನು ಬಳಸುವುದು ಇಲ್ಲಿನ ವೈಶಿಷ್ಟ್ಯ. ಇಲ್ಲಿಗೆ ಚಿಕಿತ್ಸೆ ಗೆ ವಿದೇಶಗಳಿಂದಲೂ ರೋಗಿಗಳು ಬರುತ್ತಾರೆ.
ఐಸಿಎಂಆರ್ ವರದಿಯ ಪ್ರಕಾರ ಭಾರತವು 17.34 ಲಕ್ಷ ಕ್ಯಾನ್ಸರ್ ಪ್ರಕರಣಗಳನ್ನು ಹೊಂದಲಿದ್ದು, ಅದರಲ್ಲಿ 8.8 ಲಕ್ಷ ಜನರು ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಅದೇ ಅಂದಾಜಿನಲ್ಲಿ ದೇಶದ ಒಟ್ಟು ಜನಸಂಖ್ಯೆಯ ಪೈಕಿ ಎಂಟರಲ್ಲಿ ಒಬ್ಬರು ಕ್ಯಾನ್ಸರ್ಗೆ ತುತ್ತಾಗಬಹುದು. ಬೆಂಗಳೂರು ಮೂಲದ ನ್ಯೂಮೆಡ್ ಡಯಾಗೋಸ್ಟಿಕ್ಸ್, ಭವಿಷ್ಯದ ಸಂಶೋಧನೆಯ ದಿಕ್ಕು ಮತ್ತು ಕ್ಯಾನ್ಸರ್ ವಿರುದ್ಧದ ಸವಾಲುಗಳನ್ನು ಎದುರಿಸಲು ಸಿದ್ಧತೆ ಮಾಡಿಟ್ಟುಕೊಂಡಿದೆ.
ದೇಶದ ಮೊದಲ ಆಸ್ಪತ್ರೆ
2015ರಲ್ಲಿ ನ್ಯೂಮೆಡ್ ಸಂಸ್ಥೆಯು ಆರಂಭವಾಯಿತು. ನ್ಯೂಕ್ಲಿಯರ್ ಮೆಡಿಸಿನ್, ಮಾಲಿಕ್ಯುಲರ್ ಇಮೇಜಿಂಗ್ ಮತ್ತು ರೇಡಿಯೊನ್ಯೂಕ್ಲೈಡ್ ಡಯಾಗ್ನೋಸ್ಟಿಕ್ಸ್ ಕೇಂದ್ರ ಹೊಂದಿರುವ ದೇಶದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಯೊಂದಿಗೆ ಇದು ಆರಂಭವಾಯಿತು. ಆಮದು ಮಾಡಿಕೊಂಡ SPECT gamma ಕ್ಯಾಮೆರಾ, ಸೈಲೈಟ್ ಅಂಬಿಯೆನ್ಸ್ ಇರುವ 16 ಸೈಸ್ ಡಿಸ್ಕವರಿ ಐಕ್ಯೂ ಪಿಇಟಿಸಿಟಿ ಮತ್ತು ಹೈಡೋಸ್ ರೇಡಿಯೊನ್ಯೂಕ್ಲೈಡ್ ಥೆರಪಿಯ ಎರಡು ವಾರ್ಡ್ ಗಳೊಂದಿಗೆ ಅದು ಕೆಲಸ ಆರಂಭಿಸಿತು. ಸಿಟಿ ಸ್ಕ್ಯಾನ್ ಮತ್ತು ಎಂಆರ್ಐ ಸ್ಯಾನ್ಗಳಿಗೆ ಪರ್ಯಾಯವಾಗಿ ಬಳಸಲಾಗುವ ನ್ಯೂಕ್ಲಿಯರ್ ಮೆಡಿಸಿನ್ ಸ್ಕ್ಯಾನ್, ವಿವಿಧ ಅಂಗಗಳು ಮತ್ತು ಕಾಯಿಲೆಗಳ ಕೆಲಸದ ಬಗ್ಗೆ ಮಾಹಿತಿ ನೀಡುತ್ತದೆ. ಪಿಇಟಿಸಿಟಿ ಸ್ಕ್ಯಾನ್ ರಚನಾತ್ಮಕ ಮತ್ತು ಕ್ರಿಯಾತ್ಮಕ ಮಾಹಿತಿಯನ್ನು ನೀಡುತ್ತದೆ. ಇದು ಹಲವು ರೀತಿಯ ಕ್ಯಾನ್ಸರ್ ಗುರುತಿಸಲು ಸೂಕ್ತವಾಗಿದೆ.
ಪಿಇಟಿಸಿಟಿಯನ್ನು ರೋಗ ಗುರುತಿಸಲು, ರೋಗದ ಹಂತ ಗುರುತಿಸಲು, ಚಿಕಿತ್ಸೆಗೆ ರೋಗಿಯಿಂದ ಸಿಗುವ ಸ್ಪಂದನೆಯನ್ನು ಪರಿಶೀಲಿಸಲು ಮತ್ತು ರೋಗಿಯ ಮೇಲೆ ಕಣ್ಗಾವಲು ಇಡಲು ಬಳಸಲಾಗುತ್ತದೆ. ಪಿಇಟಿ ಇಮೇಜಿಂಗ್ಗೆ ಸಾಮಾನ್ಯವಾಗಿ ಬಳಸುವ ಎಫ್-18 ಎಎಫ್ಡಿ ಐಸೋಟೋಪ್ ಜೊತೆಗೆ ನ್ಯೂಮೆಡ್ ಸಂಸ್ಥೆಯು ಜಿಎ68 ಪಿಎಸ್ ಎಮ್ ಜಿಎ68 – ಡಿಟಿಎಎನ್ ಒಸಿ ಟ್ರೇಸರ್ಗಳನ್ನೂ ಬಳಸಿತು. ಈ ಬಗೆಯ ಪ್ರಯೋಗ ಮಾಡಿದ ಮೊದಲ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಿದು.
ಮೂತ್ರಪಿಂಡ, ಥೈರಾಯ್ಡ್, ಪ್ಯಾರಾಥೈರಾಯ್ಡ್, ಹೃದಯ, ಯಕೃತ್, ಮೆದುಳು ಮತ್ತಿತರ ಅಂಗಾಂಗಗಳಲ್ಲಿ ಕಾಯಿಲೆಯನ್ನು ಮೌಲ್ಯಮಾಪನ ಮಾಡಲು ಗಾಮಾ ಕ್ಯಾಮೆರಾವನ್ನು ಬಳಸಲಾಗುತ್ತದೆ. ಥೈರಾಯ್ಡ್ ಕ್ಯಾನ್ಸರ್ ಮತ್ತು ಹೈಪರ್ ಥೈರಾಯ್ಡಿಸಮ್ ನಂಥ ಕಾಯಿಲೆಗಳ ಚಿಕಿತ್ಸೆಗೆ ವಿಶೇಷ ರೇಡಿಯೊ ಐಸೊಟೋಪ್ಸ್ ಆಗಿರುವ ರೇಡಿಯೋ ಅಯೋಡಿನ್ ಬಳಸಲಾಗುತ್ತದೆ. ಬೇರೆಲ್ಲೂ ಇಲ್ಲದ ಸೌಲಭ್ಯ ಸದ್ಯದ ಮಟ್ಟಿಗೆ ಬೆಂಗಳೂರಿನಲ್ಲಿ 100 ಕ್ಕೂ ಅಧಿಕ ರೋಗನಿರ್ಣಯ ಕೇಂದ್ರಗಳಿವೆ ಮತ್ತು ಹಲವು ಸಣ್ಣ ಲ್ಯಾಬ್ ಗಳಿವೆ. ಅದರಲ್ಲಿ ಕೆಲವೇ ಕೆಲವು ಕೇಂದ್ರಗಳು ಮಾತ್ರ ರೇಡಿಯೋ ನ್ಯೂಕ್ಲಿಯರ್ ಇಮೇಜಿಂಗ್, ರೋಗನಿರ್ಣಯ ಮತ್ತು ಥೆರಪಿ ಬಳಸುತ್ತಿವೆ. ಹಾಗಾಗಿ, ನ್ಯೂಮೆಡ್ ಸೇತುವೆ ರೀತಿಯಲ್ಲಿಕೆಲಸ ಮಾಡುತ್ತಿದೆ. ಸಂಸ್ಥೆಯು ಕೆಲವು ಬಗೆಯ ಕ್ಯಾನರ್ಗಳ ಇಮೇಜಿಂಗ್ ಮತ್ತು ಥೆರಪಿಗೆ ಬಳಸುವ ಗ್ಯಾಲಿಯಂ 68 ಎಂಡಿನ್, ಲುಟೆಟಿಯಂ 177, ಆಯಕ್ಖಿನಿಯಂ 225 ಥೆರಪಿಗಳಂತಹ ರೇಡಿಯೋ ಐಸೋಟೋಪ್ಗಳನ್ನು ನಗರದಲ್ಲಿ ಮೊದಲ ಬಾರಿಗೆ ಪರಿಚಯಿಸಿತು. ಹಲವಾರು ಖಾಸಗಿ ಆಸ್ಪತ್ರೆಗಳು, ಯಾವುದೇ ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿ ಈ ಸೌಲಭ್ಯ ಲಭ್ಯವಿಲ್ಲ. ಸರ್ಕಾರಿ ಸಂಸ್ಥೆಗಳು, ಚಾರಿಟೇಬಲ್ ಟ್ರಸ್ಟಿಗಳ ಸಹಕಾರದೊಂದಿಗೆ ನ್ಯೂಮೆಡ್ ಅತ್ಯಂತ ಕಡಿಮೆ ದರದಲ್ಲಿ ಕ್ಯಾನ್ಸರ್ ಗೆ ಡಯಾಗ್ನೋಸ್ಟಿಕ್ಸ್ ನೀಡುತ್ತಿದೆ.
ವಿದೇಶಗಳಿಂದಲೂ ಬರುತ್ತಾರೆ
ಈಗ, ದೇಶದಲ್ಲಿ ಅತಿ ಹೆಚ್ಚು ಸ್ಕ್ಯಾನ್ ಮಾಡಿದ ಮತ್ತು ಅತಿ ವೇಗದಲ್ಲಿ ವರದಿ ನೀಡುವ ಅಗ್ರ ಸಂಸ್ಥೆಯಾಗಿ ನ್ಯೂಮೆಡ್ ನಿಂತಿದೆ. ಹಾಗೆಯೇ ಇದು ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದಾದ್ಯಂತ ಇರುವ ಸ್ಪೆಷಲಿಸ್ಟ್ ಮತ್ತು ಸೂಪರ್ ಸ್ಪೆಷಲಿಸ್ಟ್ ವೈದ್ಯರಿಗೆ ಅತ್ಯಂತ ಪರಿಚಯದ ಕೇಂದ್ರವಾಗಿದೆ. ನೆರೆಯ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ರೋಗಿಗಳಿಗೂ ನ್ಯೂಮೆಡ್ ಕೇಂದ್ರದಲ್ಲಿ ಸ್ಕ್ಯಾನ್ ಮಾಡಿಸಲು ಸೂಚಿಸಲಾ ಗುತ್ತಿದೆ. ಅಷ್ಟೇ ಅಲ್ಲದೆ ಪಶ್ಚಿಮ ಬಂಗಾಳ, ಒಡಿಶಾ, ಬಾಂಗ್ಲಾದೇಶ ಮತ್ತು ಆಫ್ರಿಕನ್ ರಾಷ್ಟ್ರಗಳ ರೋಗಿಗಳೂ ಇಲ್ಲಿ ಸ್ಕ್ಯಾನ್ ಮಾಡಿಸಲು ಬರುತ್ತಿದ್ದಾರೆ. ನ್ಯೂಕ್ಲಿಯ ಮೆಡಿಸಿನ್ ಮತ್ತು ಪಿಇಟಿಸಿಟಿ ಟೆಕ್ನಾಲಜಿ ಯಂತ್ರಗಳಿಗೆ ಹೆಚ್ಚಿನ ಬೆಲೆಯಿದ್ದು, ಅದರ ನಿರ್ವಹಣೆಗೂ ಹೆಚ್ಚು ವೆಚ್ಚ ತಗಲುತ್ತದೆ.
ಓದಿನಲ್ಲಿ ಟಾಪರ್ ವಿದ್ಯಾರ್ಥಿ
ನ್ಯೂಮೆಡ್‌ನ ಸಂಸ್ಥಾಪಕಾ ನಿರ್ದೇಶಕರು, ಮುಖ್ಯ ಸಲಹೆಗಾರರು ಮತ್ತು ಸಿಇಒ ಆಗಿರುವ ಡಾ. ಮುರಳಿ ಆರ್. ನಾಡಿಗ್ ಅವರು ಮೈಸೂರು ಮೆಡಿಕಲ್ ಕಾಲೇಜಿನ 2000ನೇ ಬ್ಯಾಚ್ನ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದು 7ನೇ ಸ್ಥಾನ ಪಡೆದವರಾಗಿದ್ದಾರೆ. ದೇಶದ ಪ್ರತಿಷ್ಟಿತ ವೈದ್ಯಕೀಯ ಸಂಸ್ಥೆಯಾದ ಐಐಎಂಎಸಿ ಯಿ೦ದ 2004ರಲ್ಲಿ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಪಿಇಟಿಸಿಟಿ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂಡಿ) ಪಡೆದಿದ್ದಾರೆ. ಅವರ ಅನೇಕ ಸ್ನೇಹಿತರು ವೈದ್ಯರಾಗಿ ಸೇವೆ ಸಲ್ಲಿಸಲು ವಿದೇಶಗಳಿಗೆ ತೆರಳಿದರೂ ಮುರಳಿಯವರು ಮಾತ್ರ ಭಾರತದಲ್ಲೇ ಕೆಲಸ ಮಾಡಲು ನಿರ್ಧರಿಸಿದರು. ಹಾಗೂ ಈ ವಿಚಾರದಲ್ಲಿ ಬೆಂಗಳೂರಿನಲ್ಲಿ ಎಂಡಿ ಮಾಡಿರುವ ಮೊದಲ ವೈದ್ಯರಾಗಿ ಹೊರಹೊಮ್ಮಿದರು.
ಮಧ್ಯಮ ವರ್ಗದ ಕುಟುಂಬದವ ರಾಗಿದ್ದ ಮುರಳಿ ಅವರಿಗೆ 2008ರಲ್ಲಿ ಉದ್ಯಮ ಆರಂಭಿಸುವುದು ಸವಾಲಿನ ಕೆಲಸ ವಾಗಿತ್ತು. ಅವರು 2008ರಲ್ಲಿ ಬೆಂಗಳೂರಿನ ಎಂ.ಎಚ್. ಮರಿಗೌಡ ರಸ್ತೆಯಲ್ಲಿ ಒಂದು ಸಿಂಗಲ್ ಹೆಡ್ ಗಾಮಾ ಕ್ಯಾಮೆರಾ, ಸಿಂಟಿಲಾನ್ ಎಸಿಪಿಇಸಿಟಿ ಸ್ಕ್ಯಾನ್ ಆರಂಭಿ ಸಿದರು. 2011ರಲ್ಲಿ ಮುರಳಿ ಅವರ ಕೇಂದ್ರವು ಮೆಡಾಲ್ ಜತೆ ಸೇರಿಕೊಂಡು, ಜಯನಗರ 3ನೇ ಬ್ಲಾಕ್ಗೆ ಸ್ಥಳಾಂತರಗೊಂಡಿತು. 2014ರವರೆಗೆ ಅವರು ಮೆಡಾಲ್ ಜೊತೆಯೇ ಕೆಲಸ ಮಾಡಿದರು. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ಪಿಇಟಿಸಿಟಿ ಸ್ಥಾಪಿಸಲು ಕನ್ಸಲ್ವೆಂಟ್ ರೀತಿಯಲ್ಲಿ ಕೆಲಸ ಮಾಡಿದರು. 2015ರಲ್ಲಿ ಶಾಂತಿನಗರದಲ್ಲಿ ನ್ಯೂಮೆಡ್ ರೋಗನಿರ್ಣಯ ಕೇಂದ್ರ ಸ್ಥಾಪಿಸಿದರು.
ಡಾ|| ಮುರಳಿ ನಾಡಿಗ್ ಅವರು ಪ್ರತಿಷ್ಠಿತ ಜರ್ನಲ್ಗಳಲ್ಲಿ ಹಲವಾರು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಹಾಗೆಯೇ ವಿವಿಧ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಲಿಸ್ಟ್ ಸಭೆ, ಕಾನ್ಸರೆನ್ಸ್ ಗಳಲ್ಲಿ ಭಾಷಣ ಮಾಡಿದ್ದಾರೆ. ಜಿಇ ಸಹಯೋಗದಲ್ಲಿ ನ್ಯೂ ಮೆಡ್ ಸಂಸ್ಥೆಯು ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬಂದಿದೆ.