ಬೊಜ್ಜು ಒಂದು ದೀರ್ಘಾವಧಿ ಕಾಯಿಲೆ; ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಅಗತ್ಯ. ಬೊಜ್ಜು ಒಂದು ದೀರ್ಘಾವಧಿ ಕಾಯಿಲೆ; ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಅಗತ್ಯ. ಬೊಜ್ಜು ಜೀವನದ ಗುಣಮಟ್ಟದ ಮೇಲೆ ನೇರವಾದ ಪ್ರಭಾವ ಬೀರಿ, ಹೃದ್ರೋಗಗಳು, ಏರುರಕ್ತದೊತ್ತಡ ಮತ್ತು ಇನ್ನೂ ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಪರಿಸ್ಥಿತಿಯಾಗಿದೆ.
ಬೊಜ್ಜು ಅತಿಯಾದ ತಿನ್ನುವ ಅಭ್ಯಾಸ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಏರ್ಪಡುವ ಒಂದು ಜೀವನಶೈಲಿ ಸಮಸ್ಯೆ. ಅನೇಕ ವೇಳೆ ಜನರು ಬೊಜ್ಜನ್ನು ಅತಿಯಾಗಿ ತೂಕ ಹೊಂದಿರುವುದು ಎಂದು ಭಾವಿಸುತ್ತಾರಾದರೂ ಇದು ಅದಕ್ಕಿಂತ ಅತಿ ಸಂಕೀರ್ಣವಾದ ಸ್ಥಿತಿ. ಬೊಜ್ಜು ಜೀವನದ ಗುಣಮಟ್ಟದ ಜೊತೆಗೆ ಹೃದ್ರೋಗಗಳು, ಏರುರಕ್ತದೊತ್ತಡ ಮತ್ತು ಇನ್ನೂ ಇತರ ಅನೇಕ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಪರಿಸ್ಥಿತಿಯಾಗಿದೆ.
ಬೊಜ್ಜಿಗೆ ಆಯುರ್ವೇದ ಚಿಕಿತ್ಸೆ ರಾಮಬಾಣ
ಬೊಜ್ಜಿಗೆ ಆಯುರ್ವೇದ ಚಿಕಿತ್ಸೆ ಅತ್ಯಂತ ಉಪಯುಕ್ತ. ಕೊಬ್ಬಿನ ಅಂಶ ದೇಹದಲ್ಲಿ ಹೆಚ್ಚಾದರೆ ವಯಸ್ಸಿನ ವ್ಯತಿರಿಕ್ತತೆ ತಲೆದೋರುತ್ತದೆ. ಅಷ್ಟೇ ಅಲ್ಲ ನಿತ್ಯದ ಕೆಲಸ ಕಾರ್ಯಗಳಲ್ಲೂ ಇದು ಅಡ್ಡಿಯಾಗುತ್ತದೆ. ಜೊತೆಗೆ ಆರೋಗ್ಯದ ಮೇಲೆ ಅಡ್ಡಪರಿಣಾಮಗಳಿಗೂ ಅವಕಾಶವಾಗುತ್ತದೆ. ಒತ್ತಡದ ಜೀವನ ಶೈಲಿಯಲ್ಲಿ ಅಸ್ತವ್ಯಸ್ತವಾಗಿರುವ ಆಹಾರ ಪದ್ದತಿಯೇ ಇದಕ್ಕೆ ಮೂಲ ಕಾರಣ. ಪರಿಸರ ಮಾಲಿನ್ಯ ಮತ್ತು ವ್ಯಾಯಾಮ ರಹಿತ ಬದುಕು ಕೂಡಾ ಕಾರಣವಾಗಬಹುದು.
ಕೊಬ್ಬಿನ ಅಂಶ ದೇಹದಲ್ಲಿ ಹೆಚ್ಚಾದರೆ ವಯಸ್ಸಿನ ವ್ಯತಿರಿಕ್ತತೆ ತಲೆದೋರುತ್ತದೆ. ಅಷ್ಟೇ ಅಲ್ಲ ನಿತ್ಯದ ಕೆಲಸ ಕಾರ್ಯಗಳಲ್ಲೂ ಅಡ್ಡಿಯಾಗುತ್ತದೆ. ಜೊತೆಗೆ ಆರೋಗ್ಯದ ಮೇಲೆ ಅಡ್ಡಪರಿಣಾಮಗಳಿಗೂ ಅವಕಾಶವಾಗುತ್ತದೆ. ಅತಿಯಾದ ತೂಕವನ್ನು ನಿಯಂತ್ರಸುವ ಆಯುರ್ವೇದ ಕ್ರಮವು ಆರೋಗ್ಯಕರ ಜೀವನಶೈಲಿಯೊಂದಿಗೆ ಆರಂಭವಾಗುತ್ತದೆ. ಇದಕ್ಕಾಗಿ ಮುಂಜಾನೆ ಬೇಗನೆ ಏಳಬೇಕು ಮತ್ತು ಮಲಗಬೇಕು. ಆರೋಗ್ಯಕರ ಜೀವನಶೈಲಿಯಲ್ಲಿ ಆಹಾರ ಕ್ರಮವೂ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕ ಆಹಾರ ಮತ್ತು ಪೋಷಕಾಂಶಗಳು ಅಧಿಕವಾಗಿರುವ ಹಣ್ಣು-ತರಕಾರಿಗಳನ್ನು ಹೆಚ್ಚು ಸೇವಿಸಿ.
ಬೊಜ್ಜು ಕರಗಿಸೋದು ಹೇಗೆ ಗೊತ್ತಾ?
ಇಂದಿನ ಆಧುನಿಕ ಯುಗದಲ್ಲಿ ಜನತೆ ಅತೀ ಪ್ರಾಮುಖ್ಯತೆ ಕೊಡುತ್ತಿರುವದು ಸೌಂದರ್ಯಕ್ಕೆ ಎಂಬುದು ಎಲ್ಲಾರಿಗೂ ಗೊತ್ತಿರುವ ವಿಷಯ. ಹಾಗೆಯೇ ಎಲ್ಲರೂ ಸ್ಲಿಮ್ ಆಗಿ ಸುಂದರವಾಗಿ ಕಾಣಿಸಬೇಕು ಎಂದು ಹಲವಾರು ಚಿಕಿತ್ಸೆಗಳಿಗೆ ಮಾರುಹೋಗುತ್ತಾರೆ. ಸರ್ಜರಿ ಹಾಗು ಕೆಮಿಕಲ್ಸ್ ಯುಕ್ತ ಔಷದಗಳ ಸೇವನೆಯಿಂದ ಪ್ರತಿಕೂಲ ಪರಿಣಾಮ ಉಂಟಾಗಿ, ಎಸ್ಟೋ ಬಾರಿ ಜೀವಕ್ಕೇ ಅಪಾಯ ಆಗುತ್ತದೆ . ಕೀಟೊ ಡಯಟ್ ಹೆಸರಲ್ಲಿ ಆರೋಗ್ಯವನ್ನು ಹಾಳುಮಾಡಿಕೊಳ್ಳುವವರೂ ಇದ್ದಾರೆ.
ದಿನನಿತ್ಯ ಸೇವಿಸುವ ಆಹಾರದಲ್ಲಿ ವ್ಯತ್ಯಾಸವಾದರೆ ದೇಹವು ದೈತ್ಯಾಕಾರವಾಗಿ ಬೆಳೆದು ತೂಕವು ಹೆಚ್ಚುವುದು ಇದರಿಂದ ಅಲಸ್ಯತನ, ಮಾನಸಿಕ ತೊಂದರೆ, ದೈಹಿಕ ಆಯಾಸ, ಮಾನಸಿಕವಾಗಿ ಖಿನ್ನರಾಗುವ ಸಾದ್ಯತೆ ಹೆಚ್ಚು. ಅದಕ್ಕಾಗಿ ಮಿತವಾದ ಆಹಾರ ತಿನ್ನುವುದು ಆರೋಗಕ್ಕೆ ಉತ್ತಮ. ಪ್ರತಿದಿನ ನಿಯಮಿತ ಆಹಾರ ಪದ್ದತಿಯನ್ನು ರೂಢಿಸಿಕೊಂಡು ಹೆಚ್ಚಿನ ಬೇಡವಾದ ಕ್ಯಾಲರಿಯನ್ನು ಬರ್ನ್ ಮಾಡಿ ಅದರೊಂದಿಗೆ ವಿವಿಧ ವ್ಯಾಯಾಮ, ನಡಿಗೆ, ಯೋಗ ಮಾಡಿದರೆ ದೇಹದ ತೂಕವು ಕಡಿಮೆಯಗುವು ದಲ್ಲದೆ ಮುಖದ ಸೌಂದರ್ಯವು ಹೆಚ್ಚುವುದು. ಜೊತೆಗೆ ಸ್ಲಿಮ್ ಆಗಿ ಆಕರ್ಷಕವಾಗಿ ಸುಂದರವಾಗಿ ಕಾಣಬಹುದು.
ಬೊಜ್ಜು ನಿವಾರಣೆಗೆ ಸಲಹೆಗಳು
• ತಾಜಾ ಹಣ್ಣುಗಳ ಸೇವನೆ ಉತ್ತಮ.
• ಜೀವನದಲ್ಲಿ ಎಷ್ಟೇ ಒತ್ತಡಗಳಿದ್ದರೂ ದಿನಕ್ಕೆ ಕನಿಷ್ಟ 8 ಗಂಟೆ ನಿದ್ರಿಸಿ.
• ಸಂಸ್ಕರಿಸಿದ ಜಂಕ್ ಫುಡ್ ಗಳನ್ನು ದೂರವಿಡಿ.
• ಮೊಳಕೆ ಬರಿಸಿದ ಕಾಳುಗಳು ಮತ್ತು ನಾರಿನ ಅಂಶ ಹೆಚ್ಚಿರುವ ತರಕಾರಿ ಅಥವಾ ಧಾನ್ಯಗಳನ್ನು ಬಳಸಬಹುದು. ಜೊತೆಗೆ ಸೊಪ್ಪಿನ ಉತ್ಪನ್ನಗಳು ಹೆಚ್ಚಿರಲಿ.
• ಅಲಸ್ಯತನವನ್ನು ಬಿಟ್ಟು ಚಟುವಟಿಕೆಯಿಂದ ಸದಾ ಯಾವುದಾದರು ಕೆಲಸದಲ್ಲಿ ತೊಡಗಿಸಿಕೊಳ್ಳಿ.
• ಹಸಿವಾದಾಗ ಮಾತ್ರ ಮಿತವಾಗಿ ಊಟ ಮಾಡುವುದು ಉತ್ತಮ.
• ಯೋಗ, ಧ್ಯಾನ ಮಾಡುವುದು ಸೂಕ್ತ.
• ಮಂದ ಹಾಲನ್ನು ಸೇವಿಸಬಾರದು.
• ಸಂಬಾರ ಪದಾರ್ಥಗಳಾದ ತಾಜಾ ಅರಿಶಿನ, ಶುಂಠಿ, ಬೆಳ್ಳುಳ್ಳಿ, ಜೀರಿಗೆ ಮತ್ತು ಕರಿಮೆಣಸನ್ನು ಆಹಾರದಲ್ಲಿ ಹೆಚ್ಚು ಬಳಸಿ .
• ಮದ್ಯಪಾನ ಮತ್ತು ಧೂಮಪಾನವನ್ನು ತ್ಯಜಿಸುವುದು ಒಳ್ಳೆಯದು
• ಹೆಚ್ಚು ಉಪ್ಪಿನಂಶವಿರುವ ಆಹಾರ ಸೇವನೆ ಬೇಡವೇ ಬೇಡ. ಇದು ಮೂಳೆಯ ಮೇಲೆ ಪರಿಣಾಮ ಉಂಟುಮಾಡುವುದರಿದ ಬೊಜ್ಜು ಬೆಳೆಯಲು ಪರೋಕ್ಷ ಕಾರಣವಾಗುತ್ತದೆ. ಜೊತೆಗೆ ಹೆಚ್ಚು ಉಪ್ಪು ಸೇವನೆ ಕಣ್ಣಿನ ತೊಂದರೆಗೂ ಕಾರಣ
• ಸಕ್ಕರೆಯ ಸೇವನೆ ಒಳ್ಳೆಯದಲ್ಲ ಬದಲಿಗೆ ಬೆಲ್ಲ ಅಥವಾ ಓಲೆಬೆಲ್ಲ ಬಳಸುವುದು ಉತ್ತಮ.
• ಟೊಮೆಟೊ, ಹಾಗಲಕಾಯಿ ಮತ್ತು ಕ್ಯಾರೆಟ್ಅನ್ನು ನಿತ್ಯ ಬಳಸಿದರೆ ಕೊಬ್ಬು ಸಂಗ್ರಹವನ್ನು ನಿಗ್ರಹಿಸಲು ಸಾಧ್ಯವಿದೆ. ಜೊತೆಗೆ ತರಕಾರಿಯಿಂದ ತಯಾರಿಸಿದ ಸೂಪ್ ಕೂಡಾ ಕೊಲೆಸ್ಟ್ರಾಲ್ ತಡೆಗೆ ಸಹಕಾರಿ.
ಆಯುರ್ವೇದ ಔಷಧಿಗಳ ಪ್ರಯೋಜನಗಳು
ಆಯುರ್ವೇದದ ವಿಶೇಷವೆಂದರೆ ಕೇವಲ ರೋಗಲಕ್ಷಣಗಳನ್ನು ನಿವಾರಿಸುವುದು ಮಾತ್ರವಲ್ಲದೆ, ಸಮಸ್ಯೆಗಳ ಮೂಲ ಕಾರಣಗಳನ್ನು ನಿವಾರಿಸುತ್ತದೆ. ಸ್ಥೂಲಕಾಯ ನಿವಾರಿಸಲು ಆಯುರ್ವೇದ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ತೂಕ ಕಡಿಮೆಯಾಗುವುದಷ್ಟೇ ಅಲ್ಲದೆ ಜೀರ್ಣಕ್ರಿಯೆಗೂ ಸಹಕಾರಿ. ಇದಲ್ಲದೆ ಮಾನಸಿಕ ಆರೋಗ್ಯ, ರೋಗ ನಿರೋಧಕ ಶಕ್ತಿ ಮತ್ತು ದೈಹಿಕ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
ತಕ್ಷಣ ಆಯುರ್ವೇದ ಆಸ್ಪತ್ರೆಯ ಬೊಜ್ಜು ಕರಗಿಸುವ ಪದ್ಧತಿ
ತಕ್ಷಣ ಆಯುರ್ವೇದ ಆಸ್ಪತ್ರೆಯು ಬೊಜ್ಜಿನ ಸಮಸ್ಯೆಗೆ ಸಮಗ್ರ, ನೈಸರ್ಗಿಕ ಮತ್ತು ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ. ತಕ್ಷಣ ಆಸ್ಪತ್ರೆಯ ತಜ್ಞ ವೈದ್ಯರು ರೂಪಿಸಿರುವ ಈ ವಿಶೇಷ ಚಿಕಿತ್ಸಾ ಪದ್ದತಿ 10 ದಿನಗಳಲ್ಲಿ ಸುಮಾರು 5 ರಿಂದ 7 ಕೆಜಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಯಾವುದೇ ಅಡ್ಡ ಪರಿಣಾಮ ಇಲ್ಲ. ಈ ವಿಶಿಷ್ಟ ಚಿಕಿತ್ಸೆಯು ಆಯುರ್ವೇದದ ತತ್ವಗಳ ಆಧಾರದ ಮೇಲೆ ದೇಹ, ಮನಸ್ಸು ಮತ್ತು ಆತ್ಮವನ್ನು ಸಮನ್ವಯಗೊಳಿಸುತ್ತದೆ. ತತ್ಕ್ಷಣ ಆಯುರ್ವೇದದ ಚಿಕಿತ್ಸೆಯು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಆರೋಗ್ಯವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ
ಡಾ.ಆಶಾಕಿರಣ್ ಮತ್ತು ಡಾ-ಮಾನಸ-ಭಟ್
ತಕ್ಷಣ ಆಯುರ್ವೇದ
2 ನೇ ಕ್ರಾಸ್, ಮಾರಪ್ಪನಪಾಳ್ಯ, B/W ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮತ್ತು ಗೋವರ್ಧನ್ ಬಸ್-ಸ್ಟಾಪ್
ಯಶವಂತಪುರ, ಬೆಂಗಳೂರು – 560022
ಫೋ : 77605 75333 / 87220 34900