ಒಂದು ದೀರ್ಘಾವಧಿ ಕಾಯಿಲೆಯಾದ ಬೊಜ್ಜು ಭಾರತ ಮತ್ತು ವಿಶ್ವದೆಲ್ಲೆಡೆ ಹೆಚ್ಚಾಗುತ್ತಿದ್ದು, ಅನೇಕರು ಇದನ್ನು ವ್ಯಕ್ತಿಯ ಅತಿಯಾದ ತಿನ್ನುವ ಅಭ್ಯಾಸ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಏರ್ಪಡುವ ಒಂದು ಜೀವನಶೈಲಿ ಸಮಸ್ಯೆ ಎಂದು ಪರಿಗಣಿಸುತ್ತಾರೆ. ಅನೇಕ ವೇಳೆ ಜನರು ಬೊಜ್ಜನ್ನು ಅತಿಯಾಗಿ ತೂಕ ಹೊಂದಿರುವುದು ಎಂದು ಭಾವಿಸುತ್ತಾರಾದರೂ ಇದು ಅದಕ್ಕಿಂತ ಅತಿ ಸಂಕೀರ್ಣವಾದ ಸ್ಥಿತಿಯಾಗಿದೆ. ಬೊಜ್ಜು ಜೀವನದ ಗುಣಮಟ್ಟದ ಮೇಲೆ ನೇರವಾದ ಪ್ರಭಾವ ಬೀರಿ, ಹೃದ್ರೋಗಗಳು, ಏರುರಕ್ತದೊತ್ತಡ ಮತ್ತು ಇನ್ನೂ ಇತರ ಅನೇಕ ಗಂಭೀರ ಸಹಕಾಯಿಲೆಗಳೂ ಒಳಗೊಂಡಂತೆ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಪರಿಸ್ಥಿತಿಯಾಗಿದೆ.
ಇದು, ದೇಹವು ಕೊಬ್ಬನ್ನು ಶೇಖರಿಸಿ ಶಕ್ತಿಯನ್ನು ಬಳಸಿಕೊಳ್ಳುವ ವಿಧಾನದಲ್ಲಿ ಸಮಸ್ಯೆಗಳನ್ನುಂಟು ಮಾಡುವಂತಹ ದೇಹದ ಕೊಬ್ಬಿನಾಂಶ ವರ್ಧನೆಯ ದೀರ್ಘಾವಧಿ ಸ್ಥಿತಿಯಾಗಿದೆ. ಆದ್ದರಿಂದ ನಾವು, ತೂಕ ಹೆಚ್ಚಳಿಕೆಯ ಮೂಲ ಕಾರಣಗಳ ಮೇಲೆ ಮತ್ತು ದೀರ್ಘಾವಧಿ ಸಮಗ್ರ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದರ ಮೇಲೆ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಆದ್ದರಿಂದಲೇ ಆರೋಗ್ಯ ಶುಶ್ರೂಷಕರು ಸಾಮಾನ್ಯವಾಗಿ ದಢೂತಿಯಾಗಿರುವ ವ್ಯಕ್ತಿಗಳಿಗೆ ಕೇವಲ ಆಹಾರಕ್ರಮ ಮತ್ತು ವ್ಯಾಯಾಮ ಮಾತ್ರವಲ್ಲದೆ, ಇನ್ನೂ ಕೆಲವು ಚಿಕಿತ್ಸಾ ವಿಧಾನಗಳನ್ನು ಶಿಫಾರಸು ಮಾಡುತ್ತಾರೆ.
ಬೊಜ್ಜು ಸುತ್ತ ಸಾಮಾನ್ಯವಾಗಿ ಇರುವ ವಿವರಣೆಯು, ವೈಯಕ್ತಿಕ ಬೇಜವಾಬ್ದಾರಿತನ, ಗಟ್ಟಿಮನಸ್ಸಿನ ಕೊರತೆಯ ಮೇಲೆ ಆಧಾರಪಟ್ಟಿದ್ದು, ಅಂತಿಮವಾಗಿ, ದಪ್ಪಗಿರುವುದಕ್ಕಾಗಿ ಅಂತಹ ವ್ಯಕ್ತಿಗಳನ್ನು ಅವಮಾನಗೊಳಿಸಲಾಗುತ್ತದೆ. ಸಂಕೀರ್ಣವಾದ ಮತ್ತು ದೀರ್ಘಾವಧಿ ಸ್ಥಿತಿಯಾದ ಬೊಜ್ಜಿಗೆ ಜೀವನ ಪರ್ಯಂತದ ನಿರ್ವಹಣೆ ಅಗತ್ಯವಾಗುತ್ತದೆ. ಲಿಂಗ, ಬೊಜ್ಜಿನ ಮಟ್ಟ, ವೈಯಕ್ತಿಕ ಆರೋಗ್ಯ ಅಪಾಯಗಳು, ಮಾನಸಿಕ ನಡವಳಿಕೆ, ಜೀರ್ಣಕ್ರಿಯೆ ಗುಣವಿಶೇಷತೆಗಳು ಮತ್ತು ಈ ಹಿಂದಿನ ತೂಕ ಇಳಿಕೆ ಪ್ರಯತ್ನಗಳ ಫಲಿತಾಂಶಗಳು ಮುಂತಾದ ಅಂಶಗಳ ಮೇಲೆ ಆಧರಿಸಿ ಬೊಜ್ಜಿನ ಚಿಕಿತ್ಸೆಯನ್ನು ವೈಯಕ್ತೀಕರಣ ಗೊಳಿಸಬೇಕಾಗುತ್ತದೆ.
ತೂಕ ಇಳಿಕೆಯ ಹಾರ್ಮೋನು ಮತ್ತು ವಂಶವಾಹಿ ಅಂಶಗಳ ಮೌಲ್ಯಮಾಪನವು ಒಬ್ಬ ನಿರ್ದಿಷ್ಟವಾದ ಬೊಜ್ಜು ಹೊಂದುವಂತಹ ಅಗತ್ಯಕ್ಕೆ ತಕ್ಕ ಚಿಕಿತ್ಸೆಯನ್ನು ಯೋಜಿಸಲು ನೆರವಾಗುತ್ತದೆ. ಅನೇಕ ಮಟ್ಟದ ಬೊಜ್ಜು ನಿರ್ವಹಣಾ ಕಾರ್ಯಜಾಲದೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುವುದರಿಂದ ವೈಯಕ್ತೀಕರಣಗೊಂಡ ಚಿಕಿತ್ಸಾ ಯೋಜನೆಗಳನ್ನು ಸಾಧಿಸುವುದು ಸಾಧ್ಯವಾಗುತ್ತದೆ. ಬೊಜ್ಜು ನಿರ್ವಹಣಾ ತಂಡ ಅಥವಾ ತಜ್ಞ ತಂಡದಲ್ಲಿ ಅತ್ಯುತ್ಕೃಷ್ಟತೆ ಸಾಧಿಸಿದ ಕೇಂದ್ರಗಳು, ಪುರಾವೆ-ಆಧಾರಿತ ಔಷಧದಿಂದ ಪಡೆದುಕೊಂಡ ಬೊಜ್ಜಿನ ಚಿಕಿತ್ಸೆಗಾಗಿ ಎಲ್ಲವನ್ನೂ ಒಳಗೊಂಡ ಚಿಕಿತ್ಸಾ ಕಾರ್ಯಕ್ರಮವನ್ನು ಒದಗಿಸಬಲ್ಲವು.
ಬೊಜ್ಜು ನಿರ್ವಹಣೆಯು ವೈದ್ಯಕೀಯವಾಗಿ ತೀವ್ರವಾದ ಚಿಕಿತ್ಸಾ ಯೋಜನೆಯಾಗಿದ್ದು, ರೋಗಿಯ ಜೀವನಶೈಲಿ, ಇಚ್ಛೆಗಳು, ಮತ್ತು ಸ್ಥಿತಿಯನ್ನು ಒಟ್ಟಾಗಿ ಪರಿಗಣಿಸಿ ಅದಕ್ಕೆ ಸೂಕ್ತವಾಗಿರುವಂತೆ ಸಿದ್ಧಗೊಳಿಸಲಾಗುತ್ತದೆ. ಈ ಕಾರ್ಯಕ್ರಮವು ಔಷಧಗಳ ಮರುಪರಿಶೀಲನೆ ಮತ್ತು ಸರಿಪಡಿಸುವಿಕೆ, ಸಮಾಲೋಚನೆ ಮತ್ತು ರೋಗಿಯು ಸೂಕ್ತವಾದ ಅಭ್ಯರ್ಥಿಯಾಗಿದ್ದಲ್ಲಿ, ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯನ್ನು ಒಳಗೊಂಡಿರುತ್ತದೆ. ಬೊಜ್ಜು ಕೇವಲ ಅತಿಯಾಗಿ ತಿನ್ನುವುದರಿಂದ ಅಥವಾ ವ್ಯಾಯಾಮದ ಕೊರತೆಯಿಂದ ಮಾತ್ರ ಏರ್ಪಡುವ ಸ್ಥಿತಿಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ವಂಶವಾಹಿ ಕಾರಣಗಳು, ಪರಿಸ್ಥಿತಿ ಹಾಗು ನಡವಳಿಕೆಯಂತಹ ಅನೇಕ ಅಂಶಗಳು ಇದರಲ್ಲಿ ಒಳಗೊಂಡಿರುತ್ತವೆ. ಇದು ಏಕಾಂಗಿಯಾಗಿ ಹೋರಾಡುವುದಕ್ಕೆ ಬಹಳ ಕಠಿಣವಾದ ಪರಿಸ್ಥಿತಿ ಮತ್ತು ಒಬ್ಬ ವೈದ್ಯಕೀಯ ತಜ್ಞರ ನೆರವಿನೊಂದಿಗೆ ಇದನ್ನು ನಿರ್ವಹಿಸುವ ಅಗತ್ಯವಿದೆ.