ಬೊಜ್ಜಿಗೆ ಆಯುರ್ವೇದ ಚಿಕಿತ್ಸೆ ರಾಮಬಾಣ

ಬೊಜ್ಜಿಗೆ ಆಯುರ್ವೇದ ಚಿಕಿತ್ಸೆ ರಾಮಬಾಣ

ಬೊಜ್ಜಿಗೆ ಆಯುರ್ವೇದ ಚಿಕಿತ್ಸೆ ಅತ್ಯಂತ ಉಪಯುಕ್ತ. ಕೊಬ್ಬಿನ ಅಂಶ ದೇಹದಲ್ಲಿ ಹೆಚ್ಚಾದರೆ ವಯಸ್ಸಿನ ವ್ಯತಿರಿಕ್ತತೆ ತಲೆದೋರುತ್ತದೆ. ಅಷ್ಟೇ ಅಲ್ಲ ನಿತ್ಯದ ಕೆಲಸ ಕಾರ್ಯಗಳಲ್ಲೂ ಇದು ಅಡ್ಡಿಯಾಗುತ್ತದೆ. ಜೊತೆಗೆ ಆರೋಗ್ಯದ ಮೇಲೆ ಅಡ್ಡಪರಿಣಾಮಗಳಿಗೂ ಅವಕಾಶವಾಗುತ್ತದೆ.

ಬೊಜ್ಜಿಗಾಗಿ ಆಯುರ್ವೇದ ಚಿಕಿತ್ಸೆ ಪದ್ದತಿ ರಾಮಬಾಣ ಎನಿಸಿದೆ. ದೇಹದಲ್ಲಿನ ಜೀವಾಣು ವಿಷವನ್ನು ಹೊರತೆಗೆಯುವ ಈ ‘ಅಮಾ’ ಎಂದು ಕರೆಯಲ್ಪಡುವ ವಿಧಾನ ಅತ್ಯಂತ ಉಪಯುಕ್ತ ಮತ್ತು ವೆಚ್ಚದಲ್ಲಿಯೂ ಕೈಗೆಟಕುವಂತಾದ್ದು. ಒತ್ತಡದ ಜೀವನ ಶೈಲಿಯಲ್ಲಿ ಅಸ್ತವ್ಯಸ್ತವಾಗಿರುವ ಆಹಾರ ಪದ್ದತಿಯೇ ಇದಕ್ಕೆ ಮೂಲ ಕಾರಣ. ಪರಿಸರ ಮಾಲಿನ್ಯ ಮತ್ತು ವ್ಯಾಯಾಮ ರಹಿತ ಬದುಕು ಕೂಡಾ ಕಾರಣವಾಗಬಹುಇದು. ಹಾಗಾಗಿ ದೇಹದಲ್ಲಿ ವಿಷಜೀವಾಣುಗಳು ಜಾಗಪಡೆಯುತ್ತವೆ. ಈ ಅಮಾ ಪದ್ದತಿಯ ಚಿಕಿತ್ಸೆಯಿಂದ ನೀರಿನಲ್ಲಿ ಕರಗುವ ವಿಷ ಜೀವಾಣುಗಳು ಮಲ, ಮೂತ್ರ ಅಥವಾ ಬೆವರಿನ ಮೂಲಕ ದೇಹದಿಂದ ಹೊರಹಾಕಲ್ಪಡುತ್ತವೆ.

ಸಾಮಾನ್ಯ ಚಿಕಿತ್ಸೆಯಿಂದ ಇಂತಹ ವಿಷಾಣು ಹೊರಹಾಕುವುದು ಕಷ್ಟಕರ. ಸರಿಯಾದ ಪಥ್ಯಕ್ರಮ ಮತ್ತು ವ್ಯಾಯಾಮದಿಂದಲೂ ಈ ಪ್ರಕ್ರಿಯೆ ಸಾಧ್ಯವಾದರೂ ಪಾಲಿಸುವುದು ಕಷ್ಟವಾಗಬಹುದು. ಹಾಗಿದ್ದೂ ಕೊಬ್ಬಿನಲ್ಲಿ ಕರಗುವ ಜೀವಾಣು ವಿಷವನ್ನು ಸುಲಭವಾಗಿ ಹೊರತೆಗೆಯಲು ಸಾದ್ಯವಾಗದ ಕಾರಣ ಸಮಸ್ಯೆ ಉದ್ಭವಿಸುತ್ತದೆ. ಈ ಕಲ್ಮಶಗಳು ಹೊಟ್ಟೆ ,ಸೊಂಟ ಮತ್ತು ತೊಡೆಯಭಾಗದಲ್ಲಿ ಶೇಖರವಾಗಿ ಬೊಜ್ಜು ಬೆಳೆಯಲು ಕಾರಣವಾಗುತ್ತವೆ. ಆಯುರ್ವೇದದ ‘ಅಮಾ’ ಪದ್ದತಿಯಿಂದ ಜೀವಾಣು ವಿಷವನ್ನು ಸಮರ್ತವಾಗಿ ದೇಹದಿಂದ ಹೊರಹಾಕಲು ಸಾಧ್ಯವಿದೆ.

ಕೊಬ್ಬಿನ ಅಂಶ ದೇಹದಲ್ಲಿ ಹೆಚ್ಚಾದರೆ ವಯಸ್ಸಿನ ವ್ಯತಿರಿಕ್ತತೆ ತಲೆದೋರುತ್ತದೆ. ಅಷ್ಟೇ ಅಲ್ಲ ನಿತ್ಯದ ಕೆಲಸ ಕಾರ್ಯಗಳಲ್ಲೂ ಇದು ಅಡ್ಡಿಯಾಗುತ್ತದೆ. ಜೊತೆಗೆ ಆರೋಗ್ಯದ ಮೇಲೆ ಅಡ್ಡಪರಿಣಾಮಗಳಿಗೂ ಅವಕಾಶವಾಗುತ್ತದೆ. ಈ ಚಿಕಿತ್ಸಾ ಪದ್ದತಿ ಕೊಬ್ಬಿನ ಕೋಶಗಳನ್ನು ಪರಿಣಾಕಮಾರಿಯಾಗಿ ಕುಗ್ಗಿಸಿ ಅಧಿಕ ಪ್ರಮಾಣದಲ್ಲಿ ಹೊರಹಾಕುತ್ತದೆ. ಸತತ ಈ ಚಿಕಿತ್ಸೆಯಿಂದ ವಿಷಾಣುಗಳಿಂದ ಮುಕ್ತಿ ಸಿಗುವುದಲ್ಲದೆ ಣನೀಯವಾಗಿ ದೇಹದ ತೂಕವೂ ಕಡಿಮೆಯಾಗುತ್ತದೆ.

ಇದು ಸಾಮಾನ್ಯ ಎನಿಸಿದರೂ ಅತಿಯಾದ ತೂಕವನ್ನು ನಿಯಂತ್ರಸುವುದು ಆಯುರ್ವೇದ ಕ್ರಮವು ಆರೋಗ್ಯಕರ ಜೀವನಶೈಲಿಯೊಂದಿಗೆ ಆರಂಭವಾಗುತ್ತದೆ. ಇದಕ್ಕಾಗಿ ಮುಂಜಾನೆ ಬೇಗನೆ ಏಳಬೇಕು ಮತ್ತು ಮಲಗಬೇಕು. ನಮ್ಮ ದೇಹ ಕೂಡಾ ಒಮದು ಗಡಿಯಾರದಂತೆ ಕಾರ್ಯನಿರ್ವಹಿಸುವುದರಿಂದ ತೊಂದರೆಯಾದಾಗ ವ್ಯತಿರಿಕ್ತ ಪರಿಣಾಮ ಖಚಿತ. ಆರೋಗ್ಯಕರ ಜೀವನಶೈಲಿಯಲ್ಲಿ ಆಹಾರ ಕ್ರಮವೂ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಆಯುರ್ವೇದದಲ್ಲಿ ತಜ್ಞರು ಹಣ್ಣು-ತರಕಾರಿಗಳನ್ನು ಹೆಚ್ಚು ಸೇವಿಸುವಂತೆ ಸಲಹೆ ನೀಡುತ್ತಾರೆ. ನೈಸರ್ಗಿಕ ಆಹಾರ ಮತ್ತು ಪೋಷಕಾಂಶಗಳು ಅಧಿಕವಾಗಿರುವ ಹಣ್ಣುಗಳು ಮುಖ್ಯ. ಆಯುರ್ವೇದದ ಮೂಲಕ ತೂಕ ಇಳಿಸಿಕೊಳ್ಳಲು ಸಂಸ್ಕರಿಸಿದ ಮತ್ತು ಸಂರಕ್ಷಿತ ಆಹಾರ ಸೇವನೆ ಒಳ್ಳೆಯದು.

Also Read: Obesity and health complications in women 

ಅತಿಯಾದ ದೇಹತೂಕ ಇಳಿಸಿಕೊಳ್ಳಲು ಕೆಲವು ಟಿಪ್ಸ್ ಇಲ್ಲಿವೆ

1. ಜೇನುತುಪ್ಪ ಹಾಕಿದ ನಿಂಬೆರಸ ಸೇವನೆ ಮೂಲ ದಿನ ಆರಂಭಿಸಿ. ಇದು ಉತ್ತಮ ಜೀವಾಣುವಿಷ ನಿಯಂತ್ರಕ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು.

2. ತಾಜಾ ಹಣ್ಣುಗಳ ಸೇವನೆ ಉತ್ತಮ. ನಿತ್ಯ ಮೂರು ಬಾರಿ ಊಟಮಾಡುತ್ತಿದ್ದರೆ ಅದನ್ನು ಆರು ಭಾಗಗಳಾಗಿ ವಿಂಗಡಿಸಿಕೊಳ್ಳಿ. ತಿನ್ನುವುದನ್ನು ಒಮ್ಮೆಗೆ ತಿನ್ನದೆ ನಿಯಂತ್ರಿತವಾಗಿ ಸೇವಿಸಿದಲ್ಲಿ ಜೀರ್ಣಕ್ರಿಯೆಗೂ ಸಹಕಾರಿ. ಜೊತೆಗೆ ಅನಗತ್ಯ ಕೊಬ್ಬು ಸಂಗ್ರವಾಗುವುದನ್ನು ತಪ್ಪಿಸಬಹುದು.

3. ಜೀವನದಲ್ಲಿ ಎಷ್ಟೇ ಒತ್ತಡಗಳಿದ್ದರೂ ದಿನಕ್ಕೆ ಕನಿಷ್ಟ 8 ಗಂಟೆ ನಿದ್ರಿಸಲು ಯೋಜಿಸಿ. ಪ್ರತಿನಿತ್ಯ ಏಕರೀತಿಯ ಸಮಯಕ್ಕೆ ನಿದ್ರೆ ಮಾಡುವುದು ಕೂಡಾ ಧನಾತ್ಮಕ ಫಲಿತಾಂಶ ನೀಡಬಲ್ಲದು.

4. ಸಂಸ್ಕರಿಸಿದ ಜಂಕ್‍ಫುಡ್‍ಗೆ ಗುಡ್‍ಬೈ ಹೇಳಿ. ಮೊಳಕೆ ಬರಿಸಿದ ಕಾಳುಗಳು ಮತ್ತು ನಾರಿನ ಅಂಶ ಹೆಚ್ಚಿರುವ ತರಕಾರಿ ಅಥವಾ ಧಾನ್ಯಗಳನ್ನು ಬಳಸಬಹುದು. ಜೊತೆಗೆ ಸೊಪ್ಪಿನ ಉತ್ಪನ್ನಗಳು ಹೆಚ್ಚಿರಲಿ.

5. ಆಯುರ್ವೇದವು ತಾಜಾ ಅರಿಶಿನ, ಶುಂಠಿ, ಬೆಳ್ಳುಳ್ಳಿ, ಜೀರಿಗೆ ಮತ್ತು ಕರಿಮೆಣಸು ರೀತಿಯ ಗಿಡಮೂಲಿಕೆಗಳನ್ನು ಹೆಚ್ಚು ತಿನ್ನುವಂತೆ ಹೇಳುತ್ತದೆ. ಈ ಮಸಾಲೆ ಪದಾರ್ಥಗಳು ಕೆಟ್ಟ ಕೊಬ್ಬನ್ನು ಕುಂಠಿತ ಮಾಡುವುದರೊಂದಿಗೆ ಜೀರ್ಣಕ್ರಿಯೆ ವೃದ್ದಿಯಾಗಲು ಸಹಕರಿಸುತ್ತದೆ.

6. ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ಪ್ರಾಮಾಣಿಕ ಕಳಕಳಿ ಇದ್ದಲ್ಲಿ ಕೇವಲ ಪಥ್ಯಕ್ರಮಕ್ಕೆ ಮಾತ್ರ ಆದ್ಯತೆ ನೀಡದೆ ಕೆಲವೊಮದು ಸರಳ ವ್ಯಾಯಾಮವನ್ನೂ ರೂಢಿಸಿಕೊಂಡಲ್ಲಿ ನಿರೀಕ್ಷಿತ ಫಲಿತಾಂಶವನ್ನು ತುಸು ಬೇಗನೆ ಪಡೆಯಬಹುದು. ಜೊತೆಗೆ ದೇಹವು ಗಟ್ಟಿಮುಟ್ಟಾಗುತ್ತದೆ.

7. ಆಧುನಿಕ ಜೀವನಶೈಲಿಯಲ್ಲಿ ಕೆಲವು ಹೈಟೆಕ್ ಅಭ್ಯಾಸಗಳು ಅನಿವಾರ್ಯ ಎನಿಸಿವೆ. ಆದರೆ ಆಯುರ್ವೇದ ಪದ್ದತಿ ಮಾತ್ರ ಇದಕ್ಕೆ ಪೂರ್ಣವಿರಾಮ ಹೇಳಲು ಸಲಹೆ ಮಾಡುತ್ತದೆ. ಅದಾಗದಿದ್ದಲ್ಲಿ ಮದ್ಯಪಾನ ಅಥವಾ ಧೂಮಪಾನಿಗಳು ಕನಿಷ್ಟ ನಿಯಂತ್ರಣದಲ್ಲಿಟ್ಟುಕೊಂಡರೆ ಔಷಧಿಯ ಪರಿಣಾಮಕಾರಿ ಫಲ ದೊರೆಯಲಿದೆ

8. ಹೆಚ್ಚು ಉಪ್ಪಿನಂಶವಿರುವ ಆಹಾರ ಸೇವನೆ ಬೇಡವೇ ಬೇಡ. ಇದು ಮೂಳೆಯ ಮೇಲೆ ಪರಿಣಾಮ ಉಂಟುಮಾಡುವುದರಿದ ಬೊಜ್ಜು ಬೆಳೆಯಲು ಪರೋಕ್ಷ ಕಾರಣವಾಗುತ್ತದೆ. ಜೊತೆಗೆ ಹೆಚ್ಚು ಉಪ್ಪು ಸೇವನೆ ಕಣ್ಣಿನ ತೊಂದರೆಗೂ ಕಾರಣ
9. ಸಕ್ಕರೆಯ ಹೆಚ್ಚು ಸೇವನೆ ಒಳ್ಳೇಯದಲ್ಲ ಅದಕ್ಕಾಗಿಯೇ ಆಯುರ್ವೇದ ಪಂಡಿತರ ಬೆಲ್ಲ ಅಥವಾ ಓಲೆಬೆಲ್ಲ ( ಸಾವಯವ ಕೃಷಿ ಪದ್ದತಿ) ಬಳಸುವುದು ಉತ್ತಮ.

Also Read: ಸಕ್ಕರೆ ಎಂಬ ಬಿಳಿವಿಷ – ಆಧುನಿಕ ಆಹಾರದಲ್ಲಿನ ಅತ್ಯಂತ ಅಪಾಯಕಾರಿ ವಸ್ತು

10. ಟೊಮೆಟೊ, ಹಾಗಲಕಾಯಿ ಮತ್ತು ಕ್ಯಾರೆಟ್‍ಅನ್ನು ನಿತ್ಯ ಬಳಸಿದರೆ ಕೊಬ್ಬು ಸಂಗ್ರಹವನ್ನು ನಿಗ್ರಹಿಸಲು ಸಾಧ್ಯವಿದೆ. ಜೊತೆಗೆ ತರಕಾರಿಯಿಂದ ತಯಾರಿಸಿದ ಸೂಪ್ ಕೂಡಾ ಕೊಲೆಸ್ಟ್ರಾಲ್ ತಡೆಗೆ ಸಹಕಾರಿ ಎಂದರೆ ನಿಮಗೆ ಅಚ್ಚರಿಯಾಗಬಹುದು.

11. ದಿನಕ್ಕೊಂದು ಹಣ್ಣು ತಿನ್ನಿ. ವೈದ್ಯರಿಂದ ದೂರವಿರಿ. ಇದು ಯಾವುದಾದರೂ ಆಗಿರಲಿ. ಸೇಬು ಉತ್ತಮ. ದಾಳಿಂಬೆ, ಪಪ್ಪಾಯಿ ಕೂಡಾ ಪರಿಣಾಮಕಾರಿ.

ಲತಾಪರಮೇಶ್
ಸ್ನೇಹ ಬ್ಯೂಟಿಪಾರ್ಲರ್, ನಂ. 656, 8ನೇ ಅಡ್ಡರಸ್ತೆ,
1ನೇ ಮುಖ್ಯರಸ್ತೆ, ಭುವನೇಶ್ವರಿ ನಗರ,
ಆರ್.ಟಿ. ನಗರ, ಬೆಂಗಳೂರು-32
ಮೊಬೈಲ್ ; 91640 89890

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!