ಭೂಮಿಯ ಮಾಲಿನ್ಯತೆ ತರುವ ಸಂಕಟ-ಪ್ಲಾಸ್ಟಿಕ್ ಬೇಡ ಎಂದು ಹೇಳಿ

ಇಂದು ಅತ್ಯಂತ ಸಕಾಲಿಕ ವಿಷಯವಾಗಿ ಭೂಮಿಯನ್ನು ಆಳುತ್ತಿರುವ ಪ್ಲಾಸ್ಟಿಕ್ ಬಗ್ಗೆ ತಜ್ಞರು ಆಧಾರ ಸಹಿತವಾಗಿ ಹೇಳುತ್ತಿರುವಂತೆ ಇದು ವಿಶ್ವದಾದ್ಯಂತ ಪಸರಿಸಿರುವ ಬೃಹತ್ ಸಮಸ್ಯೆ. ಪ್ರಿಯ ಓದುಗರೇ ಪ್ರತೀ ವರ್ಷ ಏಪ್ರಿಲ್ 22ರಂದು, ವಿಶ್ವ ಭೂಮಿ ದಿನ. ಪ್ರತಿವರ್ಷದ ಈ ಆಚರಣೆಯ ಉದ್ದೇಶ, ಜನರಿಗೆ ಪರಿಸರದ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಹಾಗೂ ಪರಿಸರ ಸುರಕ್ಷತಾ ಕ್ರಮಗಳ ಪ್ರ್ಯಾತ್ಯಕ್ಷಿಕೆ ನೀಡುವುದು. 1969ರಲ್ಲಿ ಕ್ಯಾಲಿಫೋರ್ನಿಯಾದ ಸಾಂತಾ ಬಾರ್ಬರಾದಲ್ಲಿ ನಡೆದ ಬೃಹತ್ ತೈಲ ಸೋರಿಕೆ ದುರಂತದ ಹಿನ್ನೆಲೆಯಲ್ಲಿ, ಅಮೇರಿಕಾದ ಸೆನೇಟರ್ ಗೇಲಾರ್ಡ್ ನೆಲ್ಸನ್‍ನಿಂದ ಈ ಚಟುವಟಿಕೆ ಆರಂಭವಾಯಿತು. ಈ ದುರಂತದಿಂದ ಗಾಳಿ, ನೀರು, ಹಾಗೂ ಮಣ್ಣಿನ ಮಾಲಿನ್ಯಗಳ ಕಡೆಗೆ ಜನಜಾಗೃತಿಯಾಗಬೇಕು, ಹಾಗೂ ಈ ನಿಟ್ಟಿನಲ್ಲಿ ಪರಿಸರ ರಕ್ಷಣಾ ಕ್ರಮಗಳಾಗಬೇಕು ಎಂದು ಗೇಲಾರ್ಡ್ ನೆಲ್ಸನ್ ಪ್ರಯತ್ನಿಸಿದ.

1969ರಲ್ಲಿ, ಸ್ಯಾನ್ ಫ್ಯಾನ್ಸಿಸ್‍ಕೋದ ಒಬ್ಬ ಶಾಂತಿ ಕಾರ್ಯಕರ್ತನಾದ ಜಾನ್ ಮೆಕಾನ್ನೆಲ್ ಈ ಚಟುವಟಿಕೆ ಆರಂಭಿಸಿ, ಇದಕ್ಕಾಗಿ ಒಂದು ದಿನ ಎಲ್ಲ ಒಟ್ಟುಗೂಡುವಂತೆ ಪ್ರೇರೇಪಿಸಿದ. 1970ರಲ್ಲಿ ಮೊಟ್ಟಮೊದಲ ಬಾರಿ ಈ ಆಚರಣೆ ಆರಂಭವಾಗಿ, ಪ್ರತೀವರ್ಷ192 ದೇಶಗಳು ಇದರಲ್ಲಿ ಭಾಗಿಯಾಗುತ್ತವೆ. ಸ್ವ ಜಾಗೃತಿಯಿಂದ ಜನಜಾಗೃತಿ, ಇತರ ಜೀವಿಗಳ ರಕ್ಷಣೆ, ಯುದ್ಧ ವಿರೋಧಿ ಹೋರಾಟ ಚಳುವಳಿ, ಎಲ್ಲ 1970 ರಿಂದ ನಡೆಯುತ್ತಿರುವ ಭೂಮಿ ರಕ್ಷಿಸುವ ಚಟುವಟಿಕೆಗಳ ಮುಂಚೂಣಿಯಲ್ಲಿವೆ. ಪರಿಸರ ಸಮಸ್ಯೆಗಳನ್ನು ಪರಿಹಾರ ಮಾಡಿ, ಪರಿಸರ ಸುರಕ್ಷತೆ ಬಗ್ಗೆ ಕಾಳಜಿ ಹೆಚ್ಚಿಸುವುದೇ ಇದರ ಉದ್ದೇಶ. ಈ ದಿನ ವಿಶ್ವದಾದ್ಯಂತ ವಿವಿಧ ಸ್ಥಳಗಳಲ್ಲಿ ಹೊಸ ಸಸಿಗಳನ್ನು ನೆಡುತ್ತಾರೆ. ಈ ಇಡಿ ವಾರ ಇಂಥಹುದೇ ಚಟುವಟಿಕೆಗಳು. ಇದನ್ನು ಆಧುನಿಕ ಪರಿಸರ ಚಳುವಳಿ ಎನ್ನಬಹುದು.

ಪ್ರಕೃತಿ ಹಾಗೂ ಭೂಮಿಯೊಂದಿಗೆ ಸಾಮರಸ್ಯ-ಸಾಂಗತ್ಯ ಹೊಂದಲು ಒತ್ತಾಸೆ ಕೊಡಬೇಕು. ವರ್ತಮಾನ ಹಾಗೂ ಭವಿಷ್ಯದ ಮಾನವ ತಲೆಮಾರುಗಳ ಆರ್ಥಿಕ, ಸಾಮಾಜಿಕ ಹಾಗೂ ವಾತಾವರಣದ ಆವಶ್ಯಕತೆಗಳಿಗಾಗಿ ಸಮತೋಲನ ಸಾಧಿಸಲು ನಮ್ಮೆಲ್ಲರ ಜವಾಬ್ದಾರಿ ಬಗ್ಗೆ 1992ರ ರಿಯೋ ಘೋಷಣೆ ಒತ್ತಿ ಹೇಳಿದೆ. ಪ್ರಾಕೃತಿಕ ಹಾಗೂ ಹವಾಮಾನ ಸಾಕ್ಷರತೆ ಹೊಂದಿರುವ ಹಸಿರು ಮತದಾರರನ್ನು ಸೃಷ್ಟಿಸಿ ಪರಿಸರ ಹಾಗೂ ಹವಾಮಾನದ ಕಾಯಿದೆಗಳನ್ನೂ, ನೀತಿಗಳನ್ನು ಮಾರ್ಪಡಿಸುವುದಲ್ಲದೇ, ಹಸಿರು ತಂತ್ರಜ್ಞಾನ ಹಾಗೂ ಉದ್ಯೋಗಗಳನ್ನೂ ಹೆಚ್ಚಿಸುವ ಗುರಿ ಇಲ್ಲಿದೆ.

2015ರಲ್ಲಿ ಸ್ಯಾನ್ ಫ್ರಾನ್ಸಿಸ್‍ಕೋದಲ್ಲಿ ನಡೆದ ಯುನೆಸ್ಕೋ ಸಮಾವೇಶದಲ್ಲಿ, ಭೂಮಿಯ ಗೌರವ ಹಾಗೂ ಶಾಂತಿ ರಕ್ಷಣೆಗಾಗಿ ಒಂದು ದಿನ ಆಚರಿಸಬೇಕೆಂಬ ಗೊತ್ತುವಳಿಯನ್ನು ಶಾಂತಿ ಕಾರ್ಯಕರ್ತ ಜಾನ್ ಮೆಕಾನ್ನೆಲ್ ಪ್ರಸ್ತಾಪಿಸಿದ್ದ. ಹವಾಮಾನ ರಕ್ಷಣಾ ಒಪ್ಪಂದದ ಐತಿಹಾಸಿಕ ಕರಡು ಪ್ರತಿ ಅನುಷ್ಠಾನಕ್ಕೆ ತರಲು, ಪ್ಯಾರಿಸ್‍ನಲ್ಲಿ 2015ರಲ್ಲಿ ನಡೆದ, ಅಮೇರಿಕಾ ಸಂಸ್ಥಾನದ ಹವಾಮಾನ ಬದಲಾವಣೆ ಸಮಾವೇಶದಲ್ಲಿ 195 ದೇಶಗಳು ಸಹಿ ಮಾಡಿದವು. 2016ರ ಈ ದಿನ ಪ್ಯಾರಿಸ್ ಒಪ್ಪಂದಕ್ಕೆ, ಅಮೇರಿಕಾ, ಚೀನಾ ಹಾಗೂ 120 ದೇಶಗಳು ಸಹಿ ಮಾಡಿದವು.

ಒಬ್ಬ ಪರಿಸರ ಪ್ರೇಮಿಯಾಗಿ, ನಮ್ಮ ದೇಹದಲ್ಲಿರುವ ಪಂಚ ಭೂತಗಳಲ್ಲಿ ಒಂದಾದ ಭೂತತ್ವದ ಸಾಕಾರ ಭೂಮಿಯ ಆರಾಧಕನಾಗಿ, ದೇಶದ ಶೇಕಡಾ 60 ಭಾಗ ಹಾಗೂ ಪ್ರಪಂಚದ 27 ದೇಶಗಳನ್ನು ಸುತ್ತಿರುವ ಪ್ರಕೃತಿ ಪ್ರವಾಸಿಗನಾಗಿ, ನನ್ನ ಅನುಭವಗಳನ್ನು ಬಳಸಿಕೊಂಡು, ಕವಿಯಾಗಿ, ನಾನು ಬರೆದಿರುವ ಅನೇಕ ಗೀತೆಗಳಲ್ಲಿ ಭೂಮಿಯ ಮಹತ್ವ ಹಾಗೂ ಅದರ ರಕ್ಷಣೆಯಲ್ಲಿ ನಮ್ಮ ಪಾತ್ರದ ಬಗ್ಗೆ ಅನೇಕ ಕವಿತೆಗಳನ್ನು ಬರೆದಿದ್ದೇನೆ. ಅವುಗಳ ಕೆಲವು ಸಾಲುಗಳನ್ನು ಈ ಸಂದರ್ಭದಲ್ಲಿ ನೆನೆಯೋಣ.

ಪೂಜಿಸು, ಪೂಜಿಸು ಪ್ರಕೃತಿಯ, ತಡಮಾಡದೇ ತಡೆ ವಿಕೃತಿಯ —ಅರಿತರೆ ಉಳಿವೆ, ಮರೆತರೆ ಅಳಿವೆ—ಎಲ್ಲೆಡೆ ಕಾಣುತಿದೆ ಚಿಗುರಿ ಚಿಗುರಿ ಚಿಗುರು, ಜೀವನ ಸೋಲುತಿದೆ ಬಗರಿಬಗರಿ ಉಗುರು—ಹೊಗೆಯ ಬಿಡದಿರು ಗೆಳೆಯಾ, ನಗೆಯ ಸುಡದಿರು ಇಳೆಯಾ—ಪರಿಸರ ನಾಶಮಾಡದೆ ಕೀಟಮುಕ್ತರಾಗಿ, ರಾಸಾಯನಿಕ ಬೇಡದ ಶಕ್ತರಾಗಿ– ಪ್ರಕೃತಿಯೇ ಆರಾಧ್ಯದೈವ ಸೌಂದರ್ಯದ ಮುನ್ನುಡಿ, ಶಾಂತಿ ಸಮೃದ್ಧಿಯೇ ಹಬ್ಬದಾ ಸಿರಿಮುಡಿ–ಎಚ್ಚರ ನಮ್ಮ ಭಾಗ ಮರುಭೂಮಿ ಆಗ್ತದಂತೆ, ದೇಶದಾಗ ಎರಡನೇ ಹೆಸರು ನಮ್ಮದಂತೆ–ಮರಗಿಡ ಕಡಿದುದಕ್ಕೆ ಮಳೆ ಹೋದವು, ಮಳೆನೀರು ಹರಿದು ಹೋಗೆ ಮಣ್ಣು ಕೊಚ್ಚಿದವು–ನೆಲದ ಹಸಿ ಒಣಗಿದಾಗ ನಾವು ಬೆಚ್ಚಿ ಬಿದ್ದೇವು.”

ನಮ್ಮ ಭೂಮಿ ವಿಶ್ವದಲ್ಲಿ ಇದುವರೆಗೆ, ಜೀವಿಗಳಿರುವ ಗ್ರಹವಾಗಿದೆ. ಈ ಜೀವ ಪ್ರಪಂಚ ಮುಂದುವರೆಯಲು. ಭೂಮಿಯ ಮೇಲಿನ ಎಲ್ಲ ಸ್ವಾಭಾವಿಕ ಆಸ್ತಿಗಳನ್ನು ಉಳಿಸಿ, ಕಾಪಾಡಬೇಕಾಗಿದೆ. ಭೂಮಿ ಹಾಗೂ ಅದರ ಪರಿಸರ ವ್ಯವಸ್ಥೆಗಳು ನಮಗೆ ಜೀವನ ಹಾಗೂ ಉಳಿಕೆ ಕೊಟ್ಟಿವೆ ಎಂದು ನಮಗೆ ನೆನಪಿಸಲು ಪ್ರತೀ ವರ್ಷ ವಿಶ್ವತಾಯಿ ಭೂಮಿ ದಿನಾಚರಣೆ. ವಿಶ್ವ ಕವಿ ರವೀಂದ್ರನಾಥ್ ಟಾಗೋರ್ ಹೇಳಿರುವಂತೆ ಆಲಿಸುತ್ತಿರುವ ಸ್ವರ್ಗಕ್ಕೆ, ಭೂಮಿಯ ಅಂತ್ಯರಹಿತ ಮಾತನಾಡುವ ಪ್ರಯತ್ನಗಳೇ ಮರಗಳು. ಅಮಿತ್ ರೇ ಪ್ರಕಾರ – ದೇವರು ಸ್ವರ್ಗ ಸೃಷ್ಟಿಸಬೇಕೆಂದ ಭೂಮಿಯೇ ಆ ಸ್ವರ್ಗ. ವಿಶ್ವದ ಬೇರೆಲ್ಲೂ ಇಷ್ಟು ಪ್ರೀತಿ ಜೀವ ಸೌಂದರ್ಯ ಹಾಗೂ ಶಾಂತಿ ಇಲ್ಲ. ಸಹಜೀವಿಗಳೊಂದಿಗೆ ಇಲ್ಲಿ ನಿಮ್ಮ ವಾಸವನ್ನು ಖುಷಿಯಾಗಿ ಅನುಭವಿಸಿ.ಇದುವರೆಗೆ ತಿಳಿದು ಬಂದಿರುವಂತೆ ಬ್ರಹ್ಮಾಂಡ್ಲದಲ್ಲಿ ಜೀವ ಉಳಿದು ಬಾಳುತ್ತಿರುವುದು ಭೂಮಿಯಲ್ಲಿ ಮಾತ್ರ.

ಪ್ಲಾಸ್ಟಿಕ್ ಮಾಲಿನ್ಯತೆ :

ಈ ವರ್ಷದ ಧ್ಯೇಯವಾಕ್ಯ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಮುಕ್ತಾಯ ಹೇಳಿ.ಇಂದಿನ ಪ್ಲಾಸ್ಟಿಕ್ ಬಳಕೆ ಕಡಲ ಜೀವನವನ್ನು ವಿಷಪೂರಿತ ಮಾಡಿ ಘಾಸಿಗೊಳಿಸುತ್ತಿದೆ. ಮಾನವ ನಿರ್ನಾಳ ಗ್ರಂಥಿಗಳು ಉತ್ಪಾದಿಸುವ ರಸಗಳಿಗೆ ಭಂಗ ತರುತ್ತಿದೆ. ನಮ್ಮ ಕಡಲತಡಿ ಹಾಗೂ ನೆಲನೋಟಗಳನ್ನು ಕೊಳಕು ಮಾಡಿದೆ. ನಮ್ಮ ತ್ಯಾಜ್ಯ ಹರಿಯಲು ನೆಲಭರ್ತಿಯಲ್ಲಿ ತಡೆಯುಂಟು ಮಾಡಿದೆ. ಪ್ಲಾಸ್ಟಿಕ್ಕಿನ ಘಾತೀಯ ಬೆಳವಣಿಗೆ ಈಗ ನಮ್ಮ ಗ್ರಹದ ಉಳಿಯುವಿಕೆಗೇ ಅಪಾಯ ಹೆದರಿಕೆ ಒಡ್ಡುತ್ತಿದೆ. ಈಗ ಅಂಗಡಿ, ಹೋಟೆಲ್, ಮನೆ ಎಲ್ಲ ಕಡೆ ವಸ್ತುಗಳನ್ನು ಪ್ಲಾಸ್ಕಿಕ್ ಚೀಲಗಳಲ್ಲಿ ಕಟ್ಟಿ ಕೊಡುತ್ತಿದ್ದಾರೆ. ಮೂಲಭೂತವಾಗಿ ಪ್ಲಾಸ್ಟಿಕ್ ಬಗ್ಗೆ ಮಾನವರ ಮನೋಭಾವ ಹಾಗೂ ಸ್ವಭಾವಗಳನ್ನುಬದಲಾಯಿಸಬೇಕಾಗಿದೆ.

ಪರಿಸರವನ್ನು ಕಲುಷಿತಗೊಳಿಸಿ ಹಾಳು ಮಾಡಿದ ನಂತರ, ಉಂಟಾಗುವ ಪರಿಸರದ ನೈಜ ಪರಿಣಾಮಗಳನ್ನು ಇನ್ನೂ ಅನೇಕ ಜನ ಅರಿತಿಲ್ಲ. ಪ್ಲಾಸಿಕ್ ಚೀಲಗಳ ಬಳಕೆ ಪ್ರತಿದಿನ ಹೆಚ್ಚಾಗುತ್ತಿರುವುದು, ನಾಚಿಕೆಗೇಡಿನ ವಿಷಯ. ಇದು ಕರಗದ, ಹಾಳಾಗದ ವಸ್ತು. ಶೌಚಾಲಯ ಹಾಗೂ ಒಳಚರಂಡಿ ವ್ಯವಸ್ಥೆಯಲ್ಲಿ ಉಳಿಯುವ ಶೇಷ, ಕ್ರಿಮಿನಾಶಕಗಳ ಬಳಕೆ ಹಾಗೂ ಉತ್ಪಾದನೆ ಇವೆಲ್ಲವುಗಳ ಬಗ್ಗೆ ನಾವು ಚಿಂತಿಸಬೇಕಾಗಿದೆ.ಮಾಲಿನ್ಯ ಹೆಚ್ಚಿಸುವ ಕಾರಖಾನೆಗಳು, ವಿದ್ಯುಚ್ಛಕ್ತಿ ಉತ್ಪಾದನಾ ಘಟಕಗಳು ಇವುಗಳಲ್ಲಿ, ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಪ್ರತಿದಿನ ಸಾರ್ವಜನಿಕರು, ಭೂಮಿಯ ಪರಿಸರ ಉತ್ತಮಗೊಳಿಸಲು, ಸಸಿ ನೆಡುವುದು, ರಸ್ತೆ ಬದಿ ಎಸೆದ ತ್ಯಾಜ್ಯ ಸಂಗ್ರಹಿಸುವುದು, ತ್ಯಾಜ್ಯದ ಪುನರ್ಚಕ್ರ ಬಳಕೆ, ವಿದ್ಯುಚ್ಛಕ್ತಿ ಉಳಿತಾಯಗಳತ್ತ ಹೆಚ್ಚು ಗಮನ ಹರಿಸಬೇಕು. ಈ ದಿನಾಚರಣೆಯಲ್ಲಿ ಭಾಗವಹಿಸುವವರು, ಹಸಿರು ಹಾಗೂ ನೀಲಿ ಬಣ್ಣಗಳನ್ನು ಬಳಸುವುದರ ಮೂಲಕ, ಭೂ ಗ್ರಹದ ಮಾದರಿ ರಚಿಸಿ ತೋರಿಸುವುದು, ಪ್ರಾಣಿಗಳು ಸಸ್ಯ ಹಾಗೂ ಸ್ವಾಭಾವಿಕ ಪುನರ್ ಬಳಕೆ, ಹಸಿರು ಮನೆ ಪರಿಣಾಮ ಹಾಗೂ ವಿಶ್ವದ ತಾಪಮಾನ ಪ್ರತಿನಿಧಿಸುತ್ತಾರೆ.

ಪರಿಸರ ವ್ಯವಸ್ಥೆಯಲ್ಲಿ ಪ್ರತಿ ವ್ಯಕ್ತಿಯ ಪಾತ್ರದ ಬಗ್ಗೆ ಚರ್ಚಿಸಿ. ಮಣ್ಣು ಹಾಗೂ ನೀರಿನ ಮಾಲಿನ್ಯತೆ ತಡೆಯಲು,ಪ್ಲಾಸ್ಟಿಕ್  ಚೀಲಗಳ ಬಳಕೆ ಕಡಿಮೆ ಮಾಡುವಂತೆ, ಜನರನ್ನು ಪ್ರೇರೇಪಿಸಿ. ಹಳೆ ವಸ್ತುಗಳ ಮರುಬಳಕೆ ಹಾಗೂ ಪುನರ್ ಚಕ್ರದ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿ. ರಸ್ತೆ, ಉದ್ಯಾನ ಹಾಗೂ ಇತರ ಸ್ಥಳಗಳಲ್ಲಿಯ ಕಸ ಸಂಗ್ರಹಣೆಯಲ್ಲಿ ಭಾಗವಹಿಸಿ.

ಜನ ಬೆಳೆವ ಲೆಕ್ಕಕೆ ಹೆಚ್ಚಿಸಲಾಗದು, ಇದ್ದುದ ಪೋಲು ಮಾಡುವ ಹುಚ್ಚಿರಬಾರದು —ನಿಸರ್ಗ ಚಕ್ರದಿ ಕೊಂಡಿ ಬಾಳು, ಉಳಿಸಲು ಸಸ್ಯ ಜಾಲ ನೇಯಲಿ–ಉಳಿಯಲು, ಕೊಡಲಿ ಕಡಿತದ ಗೀಳು ಮಾತ್ರ ಸಾಯಲಿ —ಬಕಾಸುರ ನೀನಾದರೆ ನರಕದರ್ಶನ ಸಾವೇ!–ಭಸ್ಮಾಸುರ ಆಗದೇ ಕಾಯಿ, ಅಮೃತ ಬಾಳ ನಾವೆ–ನಾ – ನೀ ಮಿತ್ರರಾದಾಗ ಹಕ್ಕಿ ಉಲೀತಾವ, ಕಾಲಕಾಲಕೆ ಮಳೆ ಬಂದಾಗ ಕುಟುಂಬ ನಗತಾವ, ಸಮೃದ್ಧಿ ಬಂದರೆ ಜೀವ ಗೀತ ಹಾಡ್ತಾವ, ದುರಾಸೆ ಮೆರೆದರೆ ನಾಡೆಲ್ಲ ಭೂತ ಓಡ್ತಾವ–ತಿಳಿದೂ ತಿಳಿದೂ ಸಸಿ ಕಡಿದರೆ ಸುಡತಾನೆ ಮುಕ್ಕಣ್ಣ–ಚೈತನ್ಯ ಇರದಾ ಬಾಳಾದೀತು ಕಣ್ಣೀರಿನ ಕೊಳ—ಎಲ್ಲ ಚೆನ್ನ ಇರಲಿ ಎಂಬ ಪ್ರಕೃತಿ ಮಂತ್ರ ಮೊಳಗಲಿ.

ಜನಸಂಖ್ಯಾ ಹೆಚ್ಚಳದಲ್ಲಿ, ಜನಜಂಗುಳಿಯಲ್ಲಿ, ದೇವರ ಸೃಷ್ಟಿಯಲ್ಲಿ ಅತ್ಯಂತ ಬುದ್ಧಿವಂತ ಜೀವಿ ಮಾನವ ನಿಧಾನವಾಗಿ ತನ್ನ ಮನುಷ್ಯತ್ವ ಕಳೆದುಕೊಂಡು, ತನಗೆ ಜೀವ, ಜೀವನ ಕೊಟ್ಟ ಗ್ರಹದ ಬಗೆಗೆ ತೆಗೆದುಕೊಳ್ಳಬೇಕಾದ ಕಾಳಜಿ ಮರೆತು, ಇರುವ ಸಂಪನ್ಮೂಲಗಳನ್ನು ನಿರ್ದಯವಾಗಿ ಬಳಸುತ್ತಿದ್ದಾನೆ. ಹೆಚ್ಚುತ್ತಿರುವ ಕೈಗಾರಿಕೀಕರಣ ಹಾಗೂ ಜನರ ನಿಷ್ಕಾಳಜಿ ಬಗ್ಗೆ ಗಮನಿಸಬೇಕಾಗಿದೆ. ಆರೋಗ್ಯವಾಗಿರಲು, ಜೀವಂತವಾಗಿರಲು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಬೇಕಾಗಿದೆ.

ಕೈಗಾರಿಕೆಗಳ ವಿಷಪೂರಿತ ಕಲ್ಮಷಗಳ ಮಿಶ್ರಣವಾಗಿ, ಸಾಯುತ್ತಿರುವ ನದಿಗಳು. ಇವುಗಳಿಂದ ವಿಶ್ವದ ತಾಪಮಾನ ಏರುತ್ತಿದೆ. ಹೆಚ್ಚುತ್ತಿರುವ ಕೈಗಾರಿಕೆಗಳಿಂದ, ಪ್ರತಿದಿನ ಅರಣ್ಯದ ನಾಶವಾಗುತ್ತಿದ್ದು, ಭೂಮಿಯ ತಾಪಮಾನದಲ್ಲಿ ಹೆಚ್ಚಳವಾಗುತ್ತಿದೆ. ಭೂಮಿಯ ಮೇಲಿನ ಜೀವಕ್ಕೆ ಕುತ್ತು ತರುತ್ತಿರುವ ಇವುಗಳ ಪ್ರಭಾವ ಕಡಿಮೆ ಮಾಡಲು, ಹೊಸ ಗಿಡಗಳ ನೆಡುವಿಕೆ, ಅರಣ್ಯನಾಶ ತಡೆಯುವುದು, ವಾಯುಮಾಲಿನ್ಯ ತಡೆಯಲು ವಾಹನಗಳ ಸಂಖ್ಯೆ ಮಿತಗೊಳಿಸುವುದು, ಅನಾವಶ್ಯಕ ವಿದ್ಯುಚ್ಛಕ್ತಿ ಬಳಕೆ ಕಡಿಮೆ ಮಾಡಿ, ವಿದ್ಯುಚ್ಛಕ್ತಿ ಉಳಿಸುವ ಕ್ರಿಯೆ ಹೆಚ್ಚಿಸುವುದು, ಅತ್ಯಂತ ಅವಶ್ಯವಾಗಿದೆ.

ಎನ್.ವ್ಹಿ ರಮೇಶ್,ಮೈಸೂರು
ಮೊ:98455-65238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!