ಬೇಸಿಗೆಯ ಆರೋಗ್ಯ: ಆಹಾರದಲ್ಲಿ ಎಚ್ಚರ

 ದೇಹದಲ್ಲಿ ಸ್ಥಿರ ಆರೋಗ್ಯ, ದೃಢಕಾಯತೆ ಕಾಯ್ದುಕೊಳ್ಳಲು ಸರಿಯಾದ ಆಹಾರ ಕ್ರಮ, ವ್ಯಾಯಾಮ ಬಹುಮುಖ್ಯ. ನಾವು ಸೇವಿಸುವ ಅಹಾರದ ಮೇಲೆ ನಮ್ಮ ಆಯಸ್ಸು ಆಧಾರವಾಗಿರುತ್ತದೆ. ಅಕಾಲ ಮರಣಗಳಿಂದ ತಪ್ಪಿಸಿಕೊಳ್ಳಬೇಕಾದರೇ ಆರೋಗ್ಯಪೂರ್ಣ ಆಹಾರವನ್ನು ಸೇವಿಸುವುದು ಅತ್ಯಂತ ಅವಶ್ಯಕವೆಂದು ಆಹಾರ ತಜ್ಞರು ಸಂಶೋಧನೆಯ ಮೂಲಕ ದೃಢಪಡಿಸಿದ್ದಾರೆ.
ಒಳ್ಳೆಯ ಆಹಾರಾಭ್ಯಾಸಗಳು ಆರೋಗ್ಯವನ್ನು ಹೆಚ್ಚಿಸಬಲ್ಲವು. ಆದರೆ ಕೆಲ ಆಹಾರಗಳ ಮೂಲಕ ಶರೀರದಲ್ಲಿ ಬೇರೆ ಬೇರೆ ರೀತಿಯ ವ್ಯರ್ಥ ಪದಾರ್ಥಗಳು ಸೇರುತ್ತವೆ. ಅವು ವಿಷಕಾರಕವಾಗಿದ್ದು, ಅಂತಹವುಗಳನ್ನು ಹೊರಹಾಕಬೇಕಾಗುವುದು ಅಗತ್ಯ. ಇಲ್ಲದಿದ್ದರೆ ಅವು ದೇಹವನ್ನು ಹಾಳು ಮಾಡುತ್ತವೆ. ಹಾಗಾಗಿ ಶರೀರವನ್ನು ಶುಚಿಗೊಳಿಸುವ ವಿಧಾನಗಳನ್ನು ತಿಳಿಯುವುದು ಅತ್ಯವಶ್ಯಕ.

ಆಹಾರದಲ್ಲಿ ಎಚ್ಚರ

ಶರೀರದಲ್ಲಿ ಸೇರಿಕೊಳ್ಳುವ ಮಾಲಿನ್ಯಗಳನ್ನು ತೊಲಗಿಸುವುದು ಎಷ್ಟು ಅಗತ್ಯವೋ ಅಂತಹ ಮಾಲಿನ್ಯ ಒಟ್ಟು ಶರೀರದೊಳಗೆ ಸೇರದಂತೆ ನೋಡಿಕೊಳ್ಳುವುದು ಕೂಡಾ ಅμÉ್ಟೀ ಅಗತ್ಯ. ಆದ್ದರಿಂದ ಸೇವಿಸುವ ಆಹಾರದಲ್ಲಿ ಎಷ್ಟು ಕ್ಯಾಲರಿಗಳ ಶಕ್ತಿ ಸೇರುತ್ತದೆಯೇ ಲೆಕ್ಕ ನೋಡಿಕೊಳ್ಳಬೇಕು. ಕ್ಯಾಲರಿಗಳನ್ನು ಲೆಕ್ಕ ಹಾಕಿ ತಿನ್ನುವುದು ಸ್ವಲ್ಪ ತೊಂದರೆಯೇ ಸರಿ. ಅದೊಂದು ಅಭ್ಯಾಸವಾಗಿ ಬದಲಾದರೆ ನೋಡುಗರಿಗೆ ಹುಚ್ಚೆಂದು ಅನ್ನಿಸಬಹುದು.
ಶರೀರದಲ್ಲಿನ ಮಾಲಿನ್ಯವನ್ನು ಹೊರಗೂಡಿಸಲು ನೀರು, ನಿಂಬೆರಸದಂತಹವು ಸೇವಿಸುವುದು ಉತ್ತಮ.
ಪ್ರತಿನಿತ್ಯ ಬೆಳಿಗ್ಗೆ ಎದ್ದು ತಕ್ಷಣ ಕಾಫಿ, ಟೀ ಸೇವಿಸುವುದು ತುಂಬಾ ಜನರ ಅಭ್ಯಾಸ. ಈ ಅಭ್ಯಾಸದಿಂದ ತಪ್ಪಿಸಿಕೊಳ್ಳಲು ಬಿಸಿ ನೀರು ಕುಡಿಯುವುದು ಒಳ್ಳೆಯದು.
ಬಿಸಿನೀರಿನಲ್ಲಿ ನಿಂಬೆರಸ ಅಥವಾ ಶುಂಠಿ ಹಾಕಿಕೊಂಡು ಕುಡಿದರೆ ದೇಹದಲ್ಲಿನ ಕಲ್ಮಷಗಳು ತೊಲಗುತ್ತವೆ.
ದೇಹದಲ್ಲಿ ವ್ಯರ್ಥ ಪದಾರ್ಥಗಳನ್ನು ಹೊರಹಾಕುವುದಕ್ಕೆ ಹೆಚ್ಚೆಚ್ಚು ನೀರು ಸೇವನೆ ಮಾಡುತ್ತಿರಬೇಕು.

ಚರ್ಮ ರಕ್ಷಣೆ

ಮಾನವ ಚರ್ಮ ವಿಸರ್ಜಕ ಅಂಗ. ಶರೀರದಲ್ಲಿ ಉತ್ಪಾದನೆಯಾದ ಮಾಲಿನ್ಯಗಳನ್ನು ಚರ್ಮದ ಮೂಲಕ ಹೊರಕ್ಕೆ ಕಳುಹಿಸಲ್ಪಡುತ್ತವೆ. ಆದ್ದರಿಂದ ಬೆಳಿಗ್ಗೆ ಸ್ನಾನ ಮಾಡಲು ಸಮಯದಲ್ಲಿ ಶರೀರವನ್ನು ಬ್ರಶ್ ಮಾಡಬೇಕು. ಸ್ವಲ್ಪ ರಫ್ ಆಗಿರುವ ಪದಾರ್ಥಗಳನ್ನು ಬ್ರಶ್ ಮಾಡಿ ಮಾಲಿನ್ಯವನ್ನು ಬಿಡಿಸಿಕೊಳ್ಳಬೇಕು. ಆದರೆ ಬ್ರಶ್ ಮಾಡುವುದು ಕೂಡ ಒಂದು ಪದ್ಧತಿಯ ಪ್ರಕಾರ ನಡೆಯುವುದು ಒಳ್ಳೆಯದು. ಗಡಿಯಾರದ ಮುಳ್ಳು ತಿರುಗುವ ದಿಸೆಯಲ್ಲಿ ಬ್ರಶ್‍ನ್ನು ಆಡಿಸಬೇಕು. ಸಾಬೂನುಗಳ ಬಳಕೆಯಲ್ಲೂ ಎಚ್ಚರಿಕೆ ಅಗತ್ಯ.
ಮುಖದ ಚರ್ಮದ ಸ್ಚಚ್ಛತೆ ಕಷ್ಟ ಹೌದು. ಚರ್ಮದ ಮೇಲೆ ಸ್ವಲ್ಪ ಭಾಗ ಒಣಗಿದಂತೆ, ಮತ್ತೆ ಕೆಲಭಾಗಗಳು ತೇವ ಅಥವಾ ಜಿಡ್ಡು ಇದ್ದಂತಿರುತ್ತದೆ. ಚರ್ಮದ ಸ್ವಚ್ಛತೆಯನ್ನು ಒಣಗಿದಂತಿರುವ ಭಾಗದಿಂದ ಶುರು ಮಾಡಬೇಕು. ಬೆಚ್ಚಗಿನ ನೀರನ್ನು ಮುಖಕ್ಕೆ ಹಬೆ ಇಡುವುದು, ಕನಿಷ್ಠ ವಾರಕ್ಕೊಂದು ಬಾರಿಯಾದರೂ ಹಬೆ ಹಾಕಿಕೊಳ್ಳುವುದನ್ನು ಮರೆಯಬಾರದು. ಇದು ಮಾಲಿನ್ಯಗಳನ್ನು ತೊಲಗಿಸುವ ಉತ್ತಮ ವಿಧಾನ. ಮದ್ಯಪಾನ, ಮಾದಕ ವಸ್ತುಗಳ ಸೇವನೆಯಿಂದ ಮುಕ್ತಗೊಂಡರೆ ಮಾತ್ರ ಮುಖ ಆಕರ್ಷಿತವಾಗಿ ಕಾಂತಿಯುತಗೊಳ್ಳುವುದು.

ವ್ಯಾಯಾಮ

ಬೆಳಿಗ್ಗೆ ಎದ್ದ ನಂತರ ಒಂದೈದು ನಿಮಿಷ ಶ್ವಾಸದ ಮೇಲೆ ನಿಗಾ ಇಡಬೇಕು. ಗಾಳಿ ಗಟ್ಟಿಯಾಗಿ ಎಳೆದು ಬಿಡುವುದರಿಂದ ಎರಡು ರೀತಿಯ ಲಾಭ ದೊರೆಯುತ್ತದೆ. ಒಂದು ಶರೀರಕ್ಕೆ ಬೇಕಾದ ಆಕ್ಸಿಜನ್ ದೊರೆಯುತ್ತದೆ. ಶರೀರದಲ್ಲಿನ ವ್ಯರ್ಥಗಳು ಶ್ವಾಸಕೋಶಗಳಿಂದ ಹೊರಗೆ ತಳ್ಳಲ್ಪಡುತ್ತವೆ. ಅದೇ ಸಮಯದಲ್ಲಿ ಈ ಅಭ್ಯಾಸದ ಮೂಲಕ ಶೋಷರಸ ವ್ಯವಸ್ಥೆಯನ್ನು ವೃದ್ಧಿಗೊಳಿಸಿಕೊಳ್ಳಬಹುದು. ವ್ಯಾಯಾಯದಿಂದ ಮಾಂಸಖಂಡಗಳು ದೇಹದಲ್ಲಿರುವ ಹೆಚ್ಚು ಮೆದಸ್ಸನ್ನು ಬಳಸಿಕೊಂಡು ಗಟ್ಟಿಯಾಗುತ್ತವೆ. ವ್ಯಾಯಾಮಕ್ಕೆ ಸಂಬಂಧಿಸಿದಂತೆ ಉಪವಾಸವೂ ಕೂಡ ಒಂದು ಉಪಕ್ರಮ.
ಉಪವಾಸ ಇದ್ದಾಗ ತಕ್ಕಷ್ಟು ನಿದ್ರೆ ತಪ್ಪದೇ ಮಾಡಬೇಕು. ಸುಖನಿದ್ರೆ ದಿನವನ್ನು ಉಲ್ಲಾಸಗೊಳಿಸುತ್ತದೆ. ಆಫೀಸ್‍ಗಳಲ್ಲಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದ ನಂತರ ತಲೆಸ್ನಾನ ಮಾಡಿ ಸ್ವಲ್ಪ ಸಮಯ ಧ್ಯಾನ ಮಾಡುವುದು ಅಥವಾ ಪ್ರಶಾಂತವಾದ ವಾತಾವರಣದಲ್ಲಿ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳುವುದು. ಕೆಲಕಾಲ ಸಂಗೀತಕ್ಕೆ ಮನಸೋಲುವುದು ಒಳ್ಳೆಯದು. ನಡಿಗೆ, ಈಜು, ಸೈಕಲ್ ತುಳಿಯುವುದು ಹೆಚ್ಚು ಆರೋಗ್ಯವಂತರನ್ನಾಗಿಸುತ್ತವೆ. ಸ್ವಲ್ಪ ದೇಹದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಏರುಪೇರುಗಳಾದರೆ ಯಾವುದೇ ಕಾರಣಕ್ಕೂ ಅಸಡ್ಡೆ ತೋರಬಾರದು. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಗೆ ಮುಂದಾಗಬೇಕು.

ಡಾ. ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4      ಮೊ.: 97422 74849

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!