ಬಿ.ಪಿ

ಬಿಪಿಯ ಕೌತುಕಗಳು
ವಿಭಾಗ-2
ಭಾಗ-10
 
ಡಾ. ಡಿ.ಕೆ. ಮಹಾಬಲರಾಜು
ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು, ಸಮುದಾಯ ಆರೋಗ್ಯ ವಿಭಾಗ, ಜೆಜೆಎಂ ಮೆಡಿಕಲ್ ಕಾಲೇಜು, ದಾವಣಗೆರೆ-4
ಮೊ.: 9844063563
emಚಿiಟ: ಜಞmಚಿhಚಿbಚಿಟಡಿಚಿರಿu@gmಚಿiಟ.ಛಿom
ನಾವೀಗ ನಮ್ಮ ಸಮಾಜದಲ್ಲಿ ಸಾಕಷ್ಟು ಜನ ಬಿಪಿ ಇರುವವರನ್ನು ನೋಡುತ್ತಿದ್ದೇವೆ. ಆದರೂ ನಾವು ನೋಡುತ್ತಿರುವುದು ವಾಸ್ತವದ ಮೇಲಾಂಶ ಮಾತ್ರ.
ಜಗತ್ತಿನಲ್ಲಿ ಇರುವ ಜನರಲ್ಲಿ ಅರ್ಧದಷ್ಟು ಜನರಿಗೆ ಬಿಪಿ ಇರುತ್ತದೆ.
ಬಿಪಿ ಇರುವವರಲ್ಲಿ ಅರ್ಧದಷ್ಟು ರೋಗಿಗಳಿಗೆ ಮಾತ್ರ ಅವರ ಕಾಯಿಲೆ ಬಗ್ಗೆ ತಿಳಿದಿರುತ್ತದೆ.
ಬಿಪಿ ಇದೆ ಎಂದು ಗೊತ್ತಾಗಿರುವ ಜನರಲ್ಲಿ ಅರ್ಧದಷ್ಟು ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಲ್ಲಿ ಕೇವಲ ಅರ್ಧದಷ್ಟು ರೋಗಿಗಳು ಸರಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಅರ್ಧಬರ್ಧ ಚಿಕಿತ್ಸೆ ಪಡೆದು ನಿಲ್ಲಿಸುತ್ತಾರೆ.
ಹೀಗೆ ಬಿಪಿಯ ಬಗ್ಗೆ ಮಾನವನ ಸ್ಪಂದನ ಅಪರಿಪೂರ್ಣವಾಗಿರುವುದರಿಂದಲೇ ಬಹಳಷ್ಟು ಜನರು ಏಕಾಏಕಿ ಲಕ್ವ, ಹೃದಯಾಘಾತ, ಮೂತ್ರಪಿಂಡದ ಸೋಲು, ದೃಷ್ಟಿನಾಶ ಮುಂತಾದ ಗಂಭೀರ ತೊಂದರೆಗಳಿಗೆ ತುತ್ತಾಗುತ್ತಿದ್ದಾರೆ.
‘ಬಿಪಿ’ಯ ಬಗ್ಗೆ ಮತ್ತಷ್ಟು ವಿಸ್ಮಯದ ಸಂಗತಿಗಳು ಹೊರಬಿದ್ದಿವೆ. ಅವೇನೆಂದರೆ,
  • ಅಪ್ಪನಿಗೆ ಇಲ್ಲದ ಬಿಪಿ ಮಕ್ಕಳಿಗೆ ಇರುವುದು.
  • ಜಗತ್ತಿನ ಜಂಜಡಗಳಿಂದ ಹೊರ ಉಳಿದ ಸನ್ಯಾಸಿ ಸಾಧು ಸಂತರಿಗೂ ಬಿಪಿ ಇರುವುದು.
  • ಜಗತ್ತನ್ನೇ ಕಾಣದ ಹಸುಳೆಗೂ ಬಿಪಿ ಇರುವುದು.
  • ಹಂಚಿಕಡ್ಡಿಯಷ್ಟು ತೆಳುಮೈನವರಿಗೂ ಬಿಪಿ ಇರುವುದು.
ಹೀಗೆ ಬಿಪಿಯ ವಿಸ್ಮಯಗಳನ್ನು ವಿಶ್ಲೇಷಿಸುತ್ತಾ ಹೋದ ಹಾಗೆ ಮತ್ತಷ್ಟು ವಿಸ್ಮಯಗಳು ಎದುರು ಕಾಣುತ್ತವೆ. ಹೀಗಾಗಿ ನಾವು ಬಿಪಿ ಯಾರಿಗಾದರೂ ಯಾವ ವಯಸ್ಸಿನಲ್ಲಿಯಾದರೂ ಬರಬಹುದು ಎಂಬ ಅಂಶವನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುವುದು ಒಳ್ಳೆಯದು. ಪುರಾತನ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಮೂಲನಿವಾಸಿಗಳಲ್ಲಿ ಬಿಪಿ ಸಮಸ್ಯೆ ಬಹಳ ಕನಿಷ್ಟವಾಗಿದೆ. ತಾಂತ್ರಿಕವಾಗಿ, ವೈಜ್ಞಾನಿಕವಾಗಿ, ಔದ್ಯೋಗಿಕವಾಗಿ ಬಹಳಷ್ಟು ಮುಂದುವರೆದಿರುವ ದೇಶಗಳಲ್ಲಿ ಪ್ರತಿ ನೂರು ಜನ ವಯಸ್ಕರಲ್ಲಿ ಹತ್ತರಿಂದ ಇಪ್ಪತ್ತು ಜನರಿಗೆ ಬಿಪಿ ಇರುತ್ತದೆ. ಭಾರತದ ಪಟ್ಟಣವಾಸಿ ಪ್ರತಿ ಸಾವಿರ ಮಹಿಳೆಯರಲ್ಲಿ ಎಪ್ಪತ್ತು ಜನ ಮಹಿಳೆಯರಿಗೆ ಬಿಪಿ ಇರುತ್ತದೆ. ಗ್ರಾಮೀಣ ಪ್ರದೇಶದ ಪ್ರತಿಸಾವಿರ ಜನರಲ್ಲಿ 30-35 ಜನರಿಗೆ ಬಿಪಿ ಇರುತ್ತದೆ ಎಂದು ಅಧ್ಯಯನದಿಂದ ದೃಢಪಟ್ಟಿದೆ.
 ಅಪ್ಪನಿಗೆ ಇಲ್ಲದ ಬಿಪಿ ಮಗನಿಗಿರಬೇಕು
ಒಂದು ದಿನ ಆಸ್ಪತ್ರೆಯಲ್ಲಿ ಸುಮ್ಮನೆ ಕುಳಿತು ಪೇಪರ್ ಓದುತ್ತಿದ್ದಾಗ, ನನ್ನ ಬಾಲ್ಯಗೆಳೆಯ ಸೂರ್ಯಕಾಂತ ಅವರ ತಂದೆಯನ್ನು ಕರೆದುಕೊಂಡು ಬಂದ. ‘ಅಪ್ಪಾಜಿ ಆಗಾಗೈ ತಲೆಸುತ್ತು ಅಂತಾ ಹೇಳ್ತಾರೆ ಅದಕ್ಕೆ ಕರೆದುಕೊಂಡು ಬಂದೆ’ ಎಂದು ಹೇಳಿದ. ಬಿಪಿ ಇದ್ದರೂ ಇರಬಹುದೆಂದುಕೊಂಡು ಅವರ ಬಿಪಿಯನ್ನು ಪರೀಕ್ಷಿಸಿದೆ. ಅವರ ‘ ಬಿಪಿ ’ ಸರಿಯಾಗಿಯೇ ಇತ್ತು. ವಿವರವಾಗಿ ಪರೀಕ್ಷಿಸಿದಾಗ ಆವೃದ್ಧರಿಗೆ ರಕ್ತಹೀನತೆ ಇರುವುದು ಗೊತ್ತಾಯಿತು. ಇದರಿಂದಲೇ ಅವರಿಗೆ ತಲೆಸುತ್ತು ಬರುತ್ತಿದೆ ಎಂದು ಪತ್ತೆಹಚ್ಚಿ ಯುಕ್ತ ಔಷದಿsಯನ್ನು ಬರೆದುಕೊಟ್ಟೆ.
ಮತ್ತಾವ ರೋಗಿಗಳೂ ಇಲ್ಲದಿದ್ದರಿಂದ ಸೂರ್ಯಕಾಂತನೊಂದಿಗೆ ಹರಟೆ ಹೊಡೆಯುತ್ತಾ ಹೊಡೆಯುತ್ತಾ “ ನಿನ್ನ ಬಿಪಿಯನ್ನು ನೋಡಿಬಿಡುತ್ತೇನೆ ಬಾ ” ಎಂದು ಕರೆದೆ. ನನಗೆ ಬಿಪಿನೂ ಇಲ್ಲ ಗೀಪಿನೂ ಇಲ್ಲ ಎಂದು ನನ್ನ ಬಿಪಿ ಪರೀಕ್ಷೆಯನ್ನು ಖಡಾಖಂಡಿತವಾಗಿ ನಿರಾಕರಿಸಿಬಿಟ್ಟ. ಹಾಗೆಲ್ಲಾ ಅಲಕ್ಷ ಮಾಡಬಾರದು ವಯಸ್ಸು ನಲವತ್ತು ಆಯಿತೆಂದರೆ ಆಗಾಗ್ಗೆ ಬಿಪಿ ಪರೀಕ್ಷೆಯಾಗುವುದು ಉತ್ತಮ ಎಂದು ಪರಿಪರಿಯಾಗಿ ಹೇಳಿ ಬಲವಂತವಾಗಿ ಅವನ ತೋಳಿಗೆ ಬಿಪಿ ಉಪಕರಣದ ಪಟ್ಟಿಯನ್ನು ಕಟ್ಟೇ ಬಿಟ್ಟೆ. ಅವನ ಬಿಪಿ ಹೆಚ್ಚು ಇತ್ತು. ನಾನೇ ಚಕಿತಗೊಳ್ಳುವಷ್ಟು ಹೆಚ್ಚಾಗಿತ್ತು. ಆಗ ಅವನಿಗೆ ಅದನ್ನು ಹೇಳಲಿಲ್ಲ. ದಂಬಾಲು ಬಿದ್ದು ಅವನ ಬೆನ್ನುಹತ್ತಿ ಮತ್ತೆ ಎರಡು ಸಂದರ್ಭಗಳಲ್ಲಿ ಅವನ ತೋಳಿಗೆ ಬಿಪಿ ಉಪಕರಣದ ಪಟ್ಟಿ ಬಿಗಿದು ಅದಿsಕ ರಕ್ತದೊತ್ತಡ ಇರುವುದನ್ನು ಖಚಿತ ಮಾಡಿಕೊಂಡು, ಅವನಿಗೆ ಬಿಪಿ ಎಂಬ ವ್ಯಾದಿsಯ ಲೇಬಲ್ ಹಚ್ಚಿ ಸಲಹೆ ಚಿಕಿತ್ಸೆಯನ್ನು ಆರಂಬಿsಸಿ ಬಿಟ್ಟೆ.
ಯಾರಿಗೆ ಬಿಪಿ ಇರುವುದು ಎಂದು ಕೊಂಡಿದ್ದೇನೋ ಅವರಿಗೆ ಬಿಪಿ ಇಲ್ಲ. ಯಾರಿಗೆ ‘ಬಿ.ಪಿ’ ಇಲ್ಲದಿರಬಹುದು ಎಂದು ಕೊಂಡಿದ್ದೇನೋ ಅವರಿಗೆ ಹೆಚ್ಚು ಬಿಪಿ ಇದೆ. ವೈದ್ಯರ ಊಹೆಯನ್ನು ಉಲ್ಟಾ-ಪಲ್ಟ ಮಾಡುವ ಬಿಪಿಯ ವಿಚಿತ್ರ ಗುಟ್ಟು ಬಹಳಷ್ಟು ವೈದ್ಯರ ಅನುಭವದಲ್ಲಿ ಬೆರೆತು ಕೊಂಡಿದೆ. ಹೀಗಾಗಿ ಮುವತ್ತು ವರ್ಷಗಳಾದ ಅನಂತರ ಯಾವುದೇ ರೀತಿಯ ತೊಂದರೆ – ಅಸ್ವಸ್ಥತೆ ಇಲ್ಲದಿದ್ದರೂ ವರ್ಷಕೊಮ್ಮೆಯಾದರೂ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವೈದ್ಯರುಗಳು ಉಪದೇಶಿಸುತ್ತಿರುತ್ತಾರೆ.
ಮುಂದುವರಿಯುವುದು…
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!