ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ವೈದ್ಯಲೋಕ ಕಥೆ–ಕವನ ಸ್ಪರ್ಧೆ

ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ವೈದ್ಯಲೋಕ ಕಥೆ–ಕವನ ಸ್ಪರ್ಧೆ: ವಿಜೇತರ ಪಟ್ಟಿ ಪ್ರಕಟ

ಬೆಂಗಳೂರು, ಜುಲೈ 2026: ವೈದ್ಯಲೋಕ ಆರೋಗ್ಯ ಮಾಸಪತ್ರಿಕೆ ವತಿಯಿಂದ ಆಯೋಜಿಸಲಾಗಿದ್ದ ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ಕಥೆ ಮತ್ತು ಕವನ ಸ್ಪರ್ಧೆ–2026″ ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಕಥೆಗಳು ಮತ್ತು ಕವನಗಳು ಸಲ್ಲಿಕೆಯಾಗಿದ್ದು, ಸ್ಪರ್ಧೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಲೇಖಕರು, ಕವಿಗಳು, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಆಯೋಜಕರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.

ಸ್ಪರ್ಧಾ ಕೃತಿಗಳ ಪರಿಶೀಲನೆ ವೇಳೆ ಕೆಲವು ಸ್ಪರ್ಧಿಗಳು ಕಥೆಯ ಬದಲಾಗಿ ಲೇಖನಗಳನ್ನು ಕಳುಹಿಸಿರುವುದು ಹಾಗೂ ಕೆಲವು ಕಥೆ-ಕವನಗಳು ಆರೋಗ್ಯ ವಿಷಯಕ್ಕೆ ಸಂಬಂಧಿಸದಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಸ್ಪರ್ಧೆಯ ನಿಯಮಾನುಸಾರ ಅಂತಹ ಕೃತಿಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಬಾರಿ ಬಂದಿದ್ದ ಅನೇಕ ಕಥೆಗಳು ಹಾಗೂ ಕವನಗಳು ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ವಿಜೇತರನ್ನು ಆಯ್ಕೆ ಮಾಡುವುದು ತೀರ್ಪುಗಾರರಿಗೆ ಅತ್ಯಂತ ಸವಾಲಿನ ಕೆಲಸವಾಗಿತ್ತು. ಆದಾಗ್ಯೂ, ಪೂರ್ವನಿಗದಿತ ಮಾನದಂಡಗಳನ್ನು ಅನುಸರಿಸಿ ತೀರ್ಪುಗಾರರು ಅತ್ಯುತ್ತಮ ಕೃತಿಗಳನ್ನು ಆಯ್ಕೆ ಮಾಡಿದ್ದಾರೆ.

ಸ್ಪರ್ಧೆಯ ಫಲಿತಾಂಶ ಅಂತಿಮವಾಗಿದ್ದು, ತೀರ್ಪುಗಾರರ ನಿರ್ಧಾರವನ್ನು ಗೌರವದಿಂದ ಸ್ವೀಕರಿಸುವಂತೆ ಎಲ್ಲ ಸ್ಪರ್ಧಿಗಳಲ್ಲಿ ವಿನಂತಿಸಲಾಗಿದೆ.

ಕಥೆ ಸ್ಪರ್ಧೆ ವಿಜೇತರು

Karnataka Arogya Sahitya Parishat Kathe #competetion #vydyaloka #healthvision

ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ವಿಭಾಗ

ಪ್ರಥಮ: ಡಾ. ನವೀನ್ ಎಲ್ಲಂಗಳ
ದ್ವಿತೀಯ: ಡಾ. ಬಿ. ಸದಾನಂದ ನಾಯ್ಕ್
ತೃತೀಯ: ಡಾ. ಚನಗೌಡ ಎಂ. ಪಾಟೀಲ್

ಸಮಾಧಾನಕರ ಬಹುಮಾನಗಳು:

  • ಡಾ. ಛಾಯಾ ಹುಳ್ಳೇರ
  • ಡಾ. ಚಂದ್ರಶೇಖರ ಸುವರ್ಣಗಿರಿಮಠ

ಸಾರ್ವಜನಿಕರ ವಿಭಾಗ

ಪ್ರಥಮ: ಎಸ್. ರಘುನಂದನ್
ದ್ವಿತೀಯ: ರಾಘವೇಂದ್ರ ಡಿ. ಶೇಟ್
ತೃತೀಯ: ಯಶವಂತ್ ಎ.ಎಸ್. / ಅನ್ನಪೂರ್ಣ ಪದ್ಮಸಾಲಿ

ಸಮಾಧಾನಕರ ಬಹುಮಾನಗಳು:

  • ಮೋಕ್ಷಶ್ರೀನಿವಾಸ್
  • ಕೆ.ವಿ. ಅಜೇಯ ಸಿಂಹ
  • ಸುಹಾಸಿನಿ ಹೆಗಡೆ ಮೂರೂರು

ವೈದ್ಯಕೀಯ ವಿದ್ಯಾರ್ಥಿಗಳ ವಿಭಾಗ

ಪ್ರಥಮ: ಡಾ. ಭವ್ಯ ಎಲ್.
ದ್ವಿತೀಯ: ಅನುಶ್ರೀ ಮಂಜುನಾಥ ಉಲ್ಲತ್ತಿ
ತೃತೀಯ: ಅಲಿಶಾ ಕೌಸರ್

ಕವನ ಸ್ಪರ್ಧೆ ವಿಜೇತರು

Karnataka Arogya Sahitya Parishat Kavana #competetion #vydyaloka #healthvision

ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ವಿಭಾಗ

ಪ್ರಥಮ: ಡಾ. ಸುರೇಶ ನೆಗಳಗುಳಿ
ದ್ವಿತೀಯ: ಡಾ. ವಿದ್ಯಾಲಕ್ಷ್ಮಿ ವಿ. ಶೆಟ್ಟಿ
ತೃತೀಯ: ಡಾ. ಸಂಧ್ಯಾ ಐ.

ಸಮಾಧಾನಕರ ಬಹುಮಾನಗಳು:

  • ಎನ್. ಕೆ. ಪ್ರಸಾದ್
  • ಡಾ. ಸಂತೋಷ್ ನೀ. ಬೆಳವಡಿ

ಸಾರ್ವಜನಿಕರ ವಿಭಾಗ

ಪ್ರಥಮ: ಡಾ. ಕೊಳ್ಚಪ್ಪೆ ಗೋವಿಂದ ಭಟ್
ದ್ವಿತೀಯ: ಚೆನ್ನಕೇಶವ ಜಿ. ಲಾಳನಕಟ್ಟೆ
ತೃತೀಯ: ಮೈತ್ರಿ ಭಟ್ / ರಾಧಾಮಣಿ ಎಂ.

ಸಮಾಧಾನಕರ ಬಹುಮಾನಗಳು:

  • ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
  • ನಂದಾ ಪ್ರೇಮಕುಮಾರ್
  • ಪ್ರದೀಪ್ ಬೇಲೂರು

ವೈದ್ಯಕೀಯ ವಿದ್ಯಾರ್ಥಿಗಳ ವಿಭಾಗ

ಪ್ರಥಮ: ರವಿಕುಮಾರ್ ಎ.ಎಸ್.
ದ್ವಿತೀಯ: ಐಶ್ವರ್ಯ ಅಡಿವೆಪ್ಪ ಹಡಗಿನಾಳ
ತೃತೀಯ: ನಿಶಾಂತ್ ಧನವಾಡೆ

ಸಮಾಧಾನಕರ ಬಹುಮಾನಗಳು:

  • ಬಸವರಾಜ್ ಕೊಪ್ಪಳ
  • ಗೀತಾ ಬಸವರಾಜ

ಈ ಸ್ಪರ್ಧೆಯನ್ನು ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಹೆಲ್ತ್ ಫೌಂಡೇಶನ್ ಸಹಯೋಗದಲ್ಲಿ, ವೈದ್ಯಲೋಕ ಆರೋಗ್ಯ ಮಾಸಪತ್ರಿಕೆ ಮತ್ತು ಮೀಡಿಯಾ ಐಕಾನ್ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳನ್ನು ಸಲ್ಲಿಸಿರುವ ವೈದ್ಯಲೋಕ & HealthVision ವ್ಯವಸ್ಥಾಪಕ ಸಂಪಾದಕರಾದ ಶ್ರೀಕೃಷ್ಣ ಎಂ., ಮುಂದಿನ ದಿನಗಳಲ್ಲಿಯೂ ವೈದ್ಯಲೋಕ ಆಯೋಜಿಸುವ ಆರೋಗ್ಯ ಮತ್ತು ಸಾಹಿತ್ಯ ಸಂಬಂಧಿತ ಸ್ಪರ್ಧೆಗಳಲ್ಲಿ ಇದೇ ಉತ್ಸಾಹದಿಂದ ಭಾಗವಹಿಸುವಂತೆ ಕರೆ ನೀಡಿದ್ದಾರೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!