ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ

ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ

ಕನ್ನಡ ಸಾಹಿತ್ಯದ ಮೂಲಕ ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಮಹತ್ವದ ಉದ್ದೇಶದಿಂದ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ವತಿಯಿಂದ “ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ – 2026” ಅನ್ನು ಆಯೋಜಿಸಲಾಗಿದೆ.

“ವೈದ್ಯಲೋಕ” ಆರೋಗ್ಯ ಮಾಸ ಪತ್ರಿಕೆ ಮತ್ತು ಮೀಡಿಯಾ ಐಕಾನ್ ಸಂಸ್ಥೆಗಳು ಈ ಸ್ಪರ್ಧೆಗೆ ಸಹಯೋಗ ನೀಡುತ್ತಿವೆ.

ಸ್ಪರ್ಧೆಯ ಉದ್ದೇಶ:
ಬರವಣಿಗೆಯ ಮೂಲಕ ಆರೋಗ್ಯ ಮತ್ತು ಸ್ವಾಸ್ಥ್ಯದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಧ್ವನಿಯಾಗುವುದು. ನಿಮ್ಮ ಪದಗಳು ಆರೋಗ್ಯಕರ ಭವಿಷ್ಯಕ್ಕೆ ಪ್ರೇರಣೆಯಾಗಲಿ ಎಂಬುದು ಪರಿಷತ್ತಿನ ಆಶಯ.

ಕವನ ಮತ್ತು ಕಥೆಗಳಿಗೆ ಕಡ್ಡಾಯ ಮಾರ್ಗಸೂಚಿ:

* ವಿಷಯ ಕಡ್ಡಾಯವಾಗಿ ಆರೋಗ್ಯಕ್ಕೆ ಸಂಬಂಧಿಸಿರಬೇಕು – ಮಧುಮೇಹ, ರಕ್ತದೊತ್ತಡ, ಮಾನಸಿಕ ಆರೋಗ್ಯ, ಪೋಷಣೆ, ವ್ಯಾಯಾಮ, ಸ್ವಚ್ಛತೆ, ಸಾಂಕ್ರಾಮಿಕ ರೋಗ ಜಾಗೃತಿ, ಮಹಿಳಾ ಆರೋಗ್ಯ, ವೃದ್ಧಾಪ್ಯ ಆರೈಕೆ, ಮಾದಕ ದ್ರವ್ಯ ಮುಕ್ತಿ, ಅಂಗಾಂಗ ದಾನ ಇತ್ಯಾದಿ.

*ಶಿಕ್ಷಣ + ಭಾವನೆ ಎರಡೂ ಇರಬೇಕು: ವೈಜ್ಞಾನಿಕ ಮಾಹಿತಿಯೊಂದಿಗೆ ಜನರ ಮನಸ್ಸು ಮುಟ್ಟುವ ಕಥೆ/ಕವನ.

*ಪದ ಮಿತಿ ಇಲ್ಲ: ಆಳವಾದ ಕಥೆ ಬೇಕಾದರೂ, 10 ಸಾಲಿನ ಕವನ ಬೇಕಾದರೂ ಸ್ವಾಗತ. ಸಂಕ್ಷಿಪ್ತವಾಗಿ ಸಂದೇಶ ತಲುಪಿಸುವುದು ಮುಖ್ಯ.

*ನೈಜ ಅನುಭವಕ್ಕೆ ಆದ್ಯತೆ: ರೋಗಿಯ ಕಥೆ, ಡಾಕ್ಟರ್ ಅನುಭವ, ರೋಗ ನಿವಾರಿಸಿದ ಶಿಸ್ತು – ಇಂತಹ ಬರಹಗಳಿಗೆ ಹೆಚ್ಚಿನ ಅಂಕ.

3 ವಿಭಾಗಗಳಲ್ಲಿ ಸ್ಪರ್ಧೆ:
1. ಸಾರ್ವಜನಿಕರು
2. ವೈದ್ಯರು ಮತ್ತು ಆರೋಗ್ಯ ವೃತ್ತಿಪರರು
3. ವೈದ್ಯಕೀಯ ವಿದ್ಯಾರ್ಥಿಗಳು

ಏಕೆ ಭಾಗವಹಿಸಬೇಕು?
– ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಸುವರ್ಣ ಅವಕಾಶ
– ಸಾಹಿತ್ಯದ ಮೂಲಕ ಆರೋಗ್ಯ ಜಾಗೃತಿ ಹರಡಲು ವೇದಿಕೆ
– ಆಯ್ದ ಬರಹಗಳು ‘ವೈದ್ಯಲೋಕ’ ಮಾಸಪತ್ರಿಕೆ ಹಾಗೂ ವೆಬ್‌ಸೈಟ್‌ನಲ್ಲಿ ಪ್ರಕಟ
– ಆರೋಗ್ಯ ವಿಷಯ ಲೇಖಕರಾಗಿ ಗುರುತಿಸಿಕೊಳ್ಳುವ ಅವಕಾಶ
– ವಿಜೇತರಿಗೆ ಪ್ರಶಸ್ತಿ, ಬಹುಮಾನ ಮತ್ತು ಪ್ರಮಾಣಪತ್ರ

ಆರೋಗ್ಯವೆಂಬುದು ಕೇವಲ ದೇಹದ ವಿಚಾರವಲ್ಲ, ಅದು ಸಾಮಾಜಿಕ ಜವಾಬ್ದಾರಿ ಕೂಡ. ಕವನ, ಕಥೆಗಳ ಮೂಲಕ ಜನರ ಮನಸ್ಸಿಗೆ ತಲುಪಿದರೆ ಜಾಗೃತಿ ಶಾಶ್ವತ. ಎಲ್ಲಾ ಬರಹಗಾರರು, ವೈದ್ಯರು, ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಕೈಜೋಡಿಸಿ.

ಆಯ್ದ ಉತ್ತಮ ಕಥೆ-ಕವನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಲೇಖಕರನ್ನು ಪ್ರೋತ್ಸಾಹಿಸುತ್ತೇವೆ. ಆರೋಗ್ಯ, ಚಿಕಿತ್ಸೆ ಮತ್ತು ಮಾನವತೆ ಈ ಮೂರನ್ನೂ ಬೆಸೆಯುವ ಸಾಹಿತ್ಯ ಇಂದಿನ ಅಗತ್ಯ.

ಆರೋಗ್ಯ, ಚಿಕಿತ್ಸೆ ಮತ್ತು ಮಾನವತೆ – ನಿಮ್ಮ ಪದಗಳು ಆರೋಗ್ಯಕರ ಭವಿಷ್ಯಕ್ಕೆ ಪ್ರೇರಣೆಯಾಗಲಿ!

ಕಥೆ ಮತ್ತು ಕವನ ಕಳುಹಿಸಲು ಕೊನೆಯ ದಿನಾಂಕ: ಜೂನ್ 30, 2026

ಬರಹಗಳನ್ನು ಕಳುಹಿಸಬೇಕಾದ ವಿಳಾಸ:
ಇಮೇಲ್: mediaicon@ymail.com
ವಾಟ್ಸಪ್: 81975 54373

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀಕೃಷ್ಣ ಮಾಯ್ಲೆಂಗಿ : 81975 54373
ಎನ್.ವಿ. ರಮೇಶ್: 98455 65238

 

Ārōgya jāgr̥tigāgi rājya maṭṭada kavana mattu kathā spardhe -karnataka arogya saahitya parishat #vydyaloka #healthvision

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!