ಅಪೋಲೊ ಕ್ರೆಡಲ್ ನಿಂದ  “ಸುರಕ್ಷಿತ ಒಪಿಡಿ” ಪ್ರಾರಂಭ

ಅಪೋಲೊ ಕ್ರೆಡಲ್ ನಿಂದ    ತಾಯಂದಿರು ಮತ್ತು ಶಿಶುಗಳ ಸುರಕ್ಷತೆಗೆ  “ಸುರಕ್ಷಿತ ಒಪಿಡಿ”  (ಹೊರ ರೋಗಿ ವಿಭಾಗ) ಪ್ರಾರಂಭವಾಗಿದೆ. ಸೋಂಕು ಹರಡುವಿಕೆಯ ಭೀತಿಯನ್ನು ಕಡಿಮೆ ಮಾಡಿ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಮನಸ್ಸಿನಲ್ಲಿ ಮೂಡುವ ಆತಂಕವನ್ನು ಹೋಗಲಾಡಿಸುವ ಉದ್ದೇಶದಿಂದ ಅಪೋಲೊ ಕ್ರೆಡಲ್ ಸುರಕ್ಷತೆಯ ನಿಯಮಗಳೊಂದಿಗೆ “ಸುರಕ್ಷಿತ ಒಪಿಡಿ”ಪ್ರಾರಂಭಿಸಿದೆ.

ಅಪೋಲೊ ಕ್ರೆಡಲ್ ನಿಂದ  “ಸುರಕ್ಷಿತ ಒಪಿಡಿ”ಬೆಂಗಳೂರು, 22 ಜೂನ್, 2020: ಸಮಾಲೋಚನೆ ಉದ್ದೇಶಗಳಿಗಾಗಿ ಭೇಟಿ ನೀಡುವ ತಾಯಂದಿರಿಗೆ ಮತ್ತು ನವಜಾತ  ಶಿಶುಗಳಿಗೆ ಸುರಕ್ಷಿತ ಆಸ್ಪತ್ರೆಯ ಅನುಭವವನ್ನು ಒದಗಿಸುವ ಬದ್ಧತೆಯನ್ನು ಬಲಪಡಿಸಲಾಗಿದೆ. ಅಪೋಲೊ  ಹೆಲ್ತ್ & ಲೈಫ್‌ಸ್ಟೈಲ್ ಲಿಮಿಟೆಡ್ (ಎಎಚ್‌ಎಲ್‌ಎಲ್) ನಡೆಸುತ್ತಿರುವ ತನ್ನ ಸರಪಳಿಯ multi-specialty birthing center (ಬಹು-ವಿಶೇಷ ಜನನ ಕೇಂದ್ರ) ಅಪೊಲೊ ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆ   “ಸುರಕ್ಷಿತ ಒಪಿಡಿಗಳ” ನ್ನು (ಹೊರ ರೋಗಿ ವಿಭಾಗ) ಘೋಷಿಸಿದೆ.

ಸಮಾಲೋಚನೆ ಉದ್ದೇಶಗಳಿಗಾಗಿ ತನ್ನ ಕ್ರೆಡಲ್ ವಿಭಾಗಕ್ಕೆ ಭೇಟಿ ನೀಡುವ ಸಾರ್ವಜನಿಕರು, ರೋಗಿಗಳ ಸುರಕ್ಷತೆಯು ಮುಖ್ಯವಾಗಿದ್ದು,   ದೇಶಾದ್ಯಂತ COVID ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರವಾಗಿ ಹೆಚ್ಚಾಗುತ್ತಿದ್ದು,  ವೈರಸ್ ಹರಡುವ ಭೀತಿಯಿಂದಾಗಿ ತಪಾಸಣೆ ಮತ್ತು ಸಮಾಲೋಚನೆಗಾಗಿ  ತಾಯಂದಿರು ತಮ್ಮ ಶಿಶುಗಳೊಂದಿಗೆ ಆಸ್ಪತ್ರೆಗಳಿಗೆ ಭೇಟಿ ನೀಡುವುದೆ ಒಂದು ಸಮಸ್ಯೆಯಾಗಿತ್ತು,  ಈಗ “ಸುರಕ್ಷಿತ ಒಪಿಡಿ” ಪ್ರಾರಂಭದಿಂದಾಗಿ ರೋಗಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಮೊದಲ ಆದ್ಯತೆಯಾಗಿರುವುದು  ಅಪೋಲೊ ಸಮೂಹಕ್ಕಿರುವ ಕಾಳಜಿಯನ್ನು ಒತ್ತಿಹೇಳುತ್ತದೆ. ವೈದ್ಯರ ಸಲಹೆಯ ಮೇರೆಗೆ, ಕ್ರೆಡೆಲ್  ಕೇಂದ್ರಗಳಿಗೆ ಅಥವಾ ಇನ್ನಾವುದೇ ಸಮಾಲೋಚನಾ ವಿಭಾಗಕ್ಕೆ ಭೇಟಿ ನೀಡುವ ಕಾಯಿಲೆಯ ಚಿಕಿತ್ಸೆ ಮತ್ತು ರೋಗನಿರ್ಣಯವನ್ನು ಒಪಿಡಿ ವಿಭಾಗದಿಂದಲೇ  ಪ್ರಕರಣಗಳು ಸೂಚಿತವಾಗುತ್ತದೆ.

“ಸುರಕ್ಷಿತ ಒಪಿಡಿ” ಉಪಕ್ರಮದ ಕುರಿತು ಮಾತನಾಡಿದ ಅಪೋಲೊ  ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ನಿರ್ದೇಶಕ ಡಾ.ಅಜಯ್ ಹೆಚ್ ಗಂಗೋಲಿ, “ಗುಣಾತ್ಮಕ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಅಪೋಲೊ  ಸಮೂಹ  ಯಾವಾಗಲೂ ಮುಂಚೂಣಿಯಲ್ಲಿದೆ. ಸುರಕ್ಷಿತ ಒಪಿಡಿಯು, ಸಮಾಲೋಚನೆ ಮತ್ತು ಪರೀಕ್ಷೆಗಳಿಗಾಗಿ ನಮ್ಮ ಕೇಂದ್ರಗಳಿಗೆ ಭೇಟಿ ನೀಡುವವರಿಗೆ, ಅತ್ಯುನ್ನತ ಅನುಭವ ನೀಡಲು  ಮತ್ತು ನಮ್ಮ ಆವರಣದ ಸುರಕ್ಷತೆಯ ಬಗ್ಗೆ ಧೈರ್ಯ ತುಂಬುವ ಮತ್ತೊಂದು ಹೆಜ್ಜೆಯಾಗಿದೆ. ಸೋಂಕು ಹರಡುವಿಕೆಯ ಭೀತಿಯನ್ನು ಕಡಿಮೆ ಮಾಡಿ ನಮ್ಮ ಕೇಂದ್ರಗಳಿಗೆ ಭೇಟಿ ನೀಡುವವರ ಮನಸ್ಸಿನಲ್ಲಿ ಮೂಡುವ ಆತಂಕವನ್ನು ಹೋಗಲಾಡಿಸುವ ಉದ್ದೇಶದಿಂದ ನಾವು ವಿಸ್ತಾರವಾದ ಕ್ರಮಗಳನ್ನು ಕೈಗೊಂಡಿದ್ದೇವೆ ” ಎಂದರು.

Apollo-Cradle-OPD-pictures“ಸುರಕ್ಷಿತ ಒಪಿಡಿಯ” ಕ್ರಮಗಳು ಐಸಿಎಂಆರ್ ಮಾರ್ಗಸೂಚಿಗಳ ಪ್ರಕಾರ ರೋಗಿಗಳ ತಾಪಮಾನ  ಕಡ್ಡಾಯವಾಗಿದ್ದು, ಸಾಮಾಜಿಕ ಅಂತರವನ್ನು  ಕಾಪಾಡಿಕೊಳ್ಳಲು ವಿಶ್ರಾಂತಿ  ಕೋಣೆಯಲ್ಲಿ ಆಸನ ವ್ಯವಸ್ಥೆ; ಚಿಕಿತ್ಸಾಲಯಗಳು, ವೈದ್ಯರು, ದಾದಿಯರು ಮತ್ತು ಶುಚಿಗೊಳಿಸುವ ಸಿಬ್ಬಂದಿಯಾದ್ಯಂತ ಅನೇಕ ಹಂತಗಳಲ್ಲಿ ಸ್ಯಾನಿಟೈಜರ್ ಲಭ್ಯತೆಯನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ. ಎಲ್ಲಾ ಅಪೋಲೊ  ಕ್ರೆಡೆಲ್  ಮತ್ತು ಮಕ್ಕಳ ಆಸ್ಪತ್ರೆಗಳು ಯಾವುದೇ ಸೋಂಕುಗಳನ್ನು ತಡೆಗಟ್ಟಲು ನಿಯಮಿತವಾಗಿ ಸ್ವಚ್ಚ ಗೊಳಿಸಲಾಗಿತ್ತಿದೆ. ಈ ಎಲ್ಲ ವೈದ್ಯರ ಜೊತೆಗೆ, ದಾದಿಯರು ಮತ್ತು ಸ್ವಚ್ಚತಾ ಸಿಬ್ಬಂದಿಗಳಿಗೆ ಕನ್ನಡಕಗಳು, ಮುಖ ಕವಚ, ಮುಖಗವಸು, ಕೈಗವಸುಗಳು, ಕವರಲ್ / ನಿಲುವಂಗಿಗಳು ಮತ್ತು ತಲೆ ಮತ್ತು ಶೂ ಕವರ್ ಒಳಗೊಂಡಿರುವ ಪಿಪಿಇ ಕಿಟ್‌ಗಳನ್ನು ನೀಡಲಾಗುತ್ತಿದೆ. ಅಪೋಲೊ  ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆ ತನ್ನ ಎಲ್ಲಾ ಸಿಬ್ಬಂದಿಗಳು ಕ್ಲೀನಿಕ್ ನ ಆವರಣದಲ್ಲಿದ್ದಾಗ ಎಲ್ಲಾ ಸಮಯದಲ್ಲೂ ಪಿಪಿಇ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಅಪೋಲೊ ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆ ಪ್ರಸವಪೂರ್ವ ಸಮಾಲೋಚನೆಗಳಿಗೆ ವಾಸ್ತವ ಪರಿಹಾರಗಳನ್ನು ಒದಗಿಸುವ ಸೇವೆ ಈಗಾಗಲೇ ಸುರಕ್ಷತೆಯ ನಿಯಮಗಳೊಂದಿಗೆ ಪ್ರಾರಂಭಿಸಿದೆ.

ಸುರಕ್ಷಿತ ಒಪಿಡಿಯ ಸೇವೆಯು ಹೈದರಾಬಾದ್, ಮತ್ತು ಬೆಂಗಳೂರು, ದೆಹಲಿ ಮತ್ತು ಅಮೃತಸರದಲ್ಲಿನ ಅಪೋಲೊ  ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಯಾವುದೇ ಸೇವೆಗೆ ಪೂರ್ವಾನುಮತಿಗಳನ್ನು www.apollocradle.com ಗೆ ಲಾಗ್ ಇನ್ ಮಾಡುವ ಮೂಲಕ ಅಥವಾ ಸಹಾಯವಾಣಿ 1860 500 4424 ಅನ್ನು ಡಯಲ್ ಮಾಡುವ ಮೂಲಕ ಪಡೆಯ ಬಹುದು. ಅಪೋಲೊ ವಾಸ್ತವ  ಸಮಾಲೋಚನೆಗಾಗಿ ಅಥವಾ ಆನ್‌ಲೈನ್‌ನಲ್ಲಿ ಔಷಧಿಯನ್ನು ಪಡೆಯಲು 24/7 ಅಪ್ಲಿಕೇಶನ್ ಅನ್ನು ಗ್ರಾಹಕರು ಡೌನ್‌ಲೋಡ್ ಮಾಡಬಹುದು.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!