ಅಪೊಲೊ ಕ್ಲೀನಿಕ್ಸ್ ನಿಂದ ವಿಶೇಷ ಜ್ವರ ಚಿಕಿತ್ಸಾಲಯ

  • ಅಪೊಲೊ ಕ್ಲೀನಿಕ್ಸ್  ನಿಂದ ಡೈಯಾಗ್ನೋಸಿಸ್ ಮತ್ತು ಜ್ವರಗಳ (ಫೀವರ್)  ನಿರ್ವಹಣೆಗಾಗಿ ವಿಶೇಷವಾದ ಚಿಕಿತ್ಸಾಲಯಗಳನ್ನು ಪ್ರಾರಂಭಿಸಿದೆ.
  • ಅಪೊಲೊ ಚಿಕಿತ್ಸಾಲಯದ  ಈ ಜ್ವರ ಚಿಕಿತ್ಸಾಲಯಗಳು COVID-19 ಗೆ ಸಂಬಂಧಿಸಿವೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ರೋಗಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನುತಿಳಿಸುತ್ತವೆ

 ಬೆಂಗಳೂರು ಏಪ್ರಿಲ್ 5, 2020: ಅಪೊಲೊ ಆಸ್ಪತ್ರೆಗಳ ಸಮೂಹದ ವಿಭಾಗವಾದ ಅಪೊಲೊ ಕ್ಲೀನಿಕ್ಸ್   ವಿಶೇಷ ಜ್ವರ ಚಿಕಿತ್ಸಾಲಯಗಳನ್ನು ಪ್ರಾರಂಭಿಸಿದೆ. Apollo-hospital-logo  ಪ್ರಸ್ತುತ ನಡೆಯುತ್ತಿರುವ COVID-19 ಸಾಂಕ್ರಾಮಿಕ ರೋಗದದ ಹಿನ್ನೆಲೆಯಲ್ಲಿ ಜ್ವರ ಮತ್ತು ಸಂಬಂಧಿತ ರೋಗಲಕ್ಷಣಗಳ ಬಗ್ಗೆ ಸಾರ್ವಜನಿಕರ ಕಳವಳವನ್ನು ಪರಿಹರಿಸಲು ಈ ಕ್ಲೀನಿಕ್ಸ್  ಗಳ ಪ್ರಾರಂಭವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ, ಕರೋನವೈರಸ್ ಸೋಂಕಿನ ಬಗ್ಗೆ ಜನರು ಭಯಭೀತರಾಗಿದ್ದೂ, ಜ್ವರ ಬಂದಾಗ ಅದು COVID-19 ಗೆ ಸಂಬಂಧಿಸಿರಬಹುದೇ ಅಥವಾ ಇಲ್ಲವೇ ಮುಂತಾದ   ಕಳವಳವನ್ನು ಪರಿಹರಿಸಲು, ಅಪೊಲೊ ಫೀವರ್  ಕ್ಲಿನಿಕ್,  ಜ್ವರದ ಸರಿಯಾದ ರೋಗನಿರ್ಣಯ ಮತ್ತು ನಿರ್ವಹಣೆಯನ್ನು ಒದಗಿಸುತ್ತದೆ.

ಅಪೊಲೊ ಜ್ವರ ಚಿಕಿತ್ಸಾಲಯಗಳು/ ಫೀವರ್ ಕ್ಲಿನಿಕ್ ಎನ್ನುವುದು ಅಪೊಲೊ ಕ್ಲಿನಿಕ್ನಲ್ಲಿ ಸ್ಥಾಪಿಸಲಾದ ವಿಶೇಷ ಸೇವೆಯಾಗಿದೆ. ಇದರಲ್ಲಿ ರೋಗಿಗಳು ಜ್ವರ ಅಥವಾ ಜ್ವರ-ಸಂಬಂಧಿತ ಸಮಸ್ಯೆಗಳೊಂದಿಗೆ ಬರಬಹುದು. ವೈದ್ಯರು ಮೌಲ್ಯಮಾಪನ ಮಾಡಿ, ರೋಗನಿರ್ಣಯ ಮಾಡುತ್ತಾರೆ ಮತ್ತು ಸೂಕ್ತ ಚಿಕಿತ್ಸೆ ನೀಡುತ್ತಾರೆ. ಎಲ್ಲಾ ರೋಗಿಗಳನ್ನು ಮೊದಲಿಗೆ ಐಸಿಎಂಆರ್ ಮಾರ್ಗಸೂಚಿಗಳ ಪ್ರಕಾರ ತಪಾಸಣೆ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸೌಲಭ್ಯವನ್ನು ಬೇರ್ಪಡಿಸಲಾಗಿದೆ ಮತ್ತು COVID-19 ನ ಲಕ್ಷಣಗಳು ಕಂಡುಬರುವವರಿಗೆ ಸರ್ಕಾರ ಮತ್ತು ಐಸಿಎಂಆರ್ ಮಾರ್ಗಸೂಚಿಗಳ ಪ್ರಕಾರ ತಮ್ಮ ಚಿಕಿತ್ಸೆಯನ್ನು ಮುಂದುವರಿಸಲು ಮಾರ್ಗದರ್ಶನ ನೀಡಲಾಗುತ್ತದೆ. ಯಾವುದೇ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಾದ ಸೋಂಕು ನಿಯಂತ್ರಣ ಮತ್ತು ಸ್ವಚ್ಚತೆ ಗೊಳಿಸುವ ಶಿಷ್ಟಾಚಾರ ನಿಯಮಾವಳಿ/ಪ್ರೋಟೋಕಾಲ್‌ಗಳನ್ನು ಬಳಸಿಕೊಂಡು ರೋಗಿಯ, ವೈದ್ಯರ ಮತ್ತು ಸಿಬ್ಬಂದಿಯ ಸಂಪೂರ್ಣ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ. ಇದು ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಮಾತ್ರ ಅನ್ವಯವಾಗುತ್ತದೆ ವಿನಹ ರೋಗಲಕ್ಷಣವಿಲ್ಲದವರಿಗೆ ಅಲ್ಲ.

pratap-reddy-apollo-hospitals-chairman.ಅಪೊಲೊ ಹಾಸ್ಪಿಟಲ್ಸ್ ಗ್ರೂಪ್ನ ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ,  “ಫೀವರ್ (ಜ್ವರ) ಕ್ಲಿನಿಕ್ ಉಪಕ್ರಮವು ಗ್ರಾಹಕರ ಪ್ರತಿಕ್ರಿಯೆಗಳ ಮೇರೆಗೆ ಪ್ರಾರಂಭವಾಗಿದೆ. ಇದು ಜ್ವರ ಲಕ್ಷಣಗಳನ್ನು ಹೊಂದಿರುವ ಗ್ರಾಹಕರು ತಮ್ಮ ಜ್ವರವು COVID-19 ನಿಂದ ಉಂಟಾಗಿದೆಯೇ  ಅಥವಾ ಇಲ್ಲವೇ ಎಂಬ ಬಗ್ಗೆ ತಿಳಿಸುತ್ತದೆ. ಇಂದು COVID-19 ವಿರುದ್ಧದ  ಯುದ್ಧದಲ್ಲಿ ದೇಶವು ದೊಡ್ಡ ರೀತಿಯಲ್ಲಿ ಹೋರಾಡುತ್ತಿರುವಾಗ, ಗ್ರಾಹಕರು ತಮ್ಮ ರೋಗಲಕ್ಷಣಗಳನ್ನು ಮತ್ತು ಅವರ ಕಾಳಜಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು ಮತ್ತು ಸುರಕ್ಷಿತ ವಾತಾವರಣದಲ್ಲಿ ಸೂಕ್ತ ಚಿಕಿತ್ಸೆಯನ್ನು ಮತ್ತು ಪಡೆಯಲು ಅವರಿಗೆ ಸಹಾಯ ಮಾಡುವುದು ಮುಖ್ಯ. ಆದ್ದರಿಂದ, ಅಪೊಲೊ ಕ್ಲೀನಿಕ್/ಚಿಕಿತ್ಸಾಲಯಗಳ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಲು ನಾವು ನಿರ್ಧರಿಸಿದ್ದೇವೆ”ಎಂದರು.

ಅಪೊಲೊ ಆಸ್ಪತ್ರೆಗಳ ಸಮೂಹದ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಅಪೊಲೊ ಹೆಲ್ತ್ ಮತ್ತು ಲೈಫ್‌ಸ್ಟೈಲ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗಿತಾ ರೆಡ್ಡಿ ಅವರು ಮಾತನಾಡಿ, “ನಮ್ಮ ವಿಶಾಲ ಶಕ್ತಿಶಾಲಿ ವಿತರಣಾ ಜಾಲದ ಕಾರಣದಿಂದಾಗಿ ದೊಡ್ಡ ಜನಸಂಖ್ಯೆಗೆ ಪ್ರಾಥಮಿಕ ಆರೈಕೆಯನ್ನು ನೀಡುವ ವಿಶಿಷ್ಟ ಸ್ಥಾನದಲ್ಲಿದೆ. ಇದರಿಂದಾಗಿ ಅಪೊಲೊ ಚಿಕಿತ್ಸಾಲಯಗಳು ಜ್ವರದ ಕಾರಣದ ಬಗೆಗಿನ ಕಳವಳಗಳನ್ನು ಪರಿಹರಿಸಲು ಮತ್ತು ರೋಗಿಗಳಿಗೆ ಅನುಕೂಲಕರ, ಗುಣಮಟ್ಟದ ಆರೈಕೆಯನ್ನು ಒದಗಿಸಲು ಸಾಧ್ಯವಾಗುತ್ತದೆ.  ಈ ಪ್ರಕ್ರಿಯೆಯಲ್ಲಿ ಸಧೃಡವಾದ ನಮ್ಮ ಕ್ಲಿನಿಕಲ್ ಮಾರ್ಗದ ಬೆಂಬಲದೊಂದಿಗೆ ಸರಿಯಾದ ರೋಗನಿರ್ಣಯ ಮತ್ತು ರೋಗ ಪರಿಹಾರಕ ನಿರ್ವಹಣೆಯನ್ನು ಒದಗಿಸುವ ಮೂಲಕ ರೋಗಿಗಳ ಕುಟುಂಬಗಳಿಗೆ ಧೈರ್ಯ ತುಂಬುತ್ತೇವೆ. 1 ನೇ ಹಂತದಲ್ಲಿ ಚೆನ್ನೈ ಬೆಂಗಳೂರು ಮತ್ತು ಹೈದರಾಬಾದ್‌ನಾದ್ಯಂತ 21 ಚಿಕಿತ್ಸಾಲಯಗಳನ್ನು ಪ್ರಾರಂಭಿಸಲು ನಾವು ಯೋಜಿಸಿದ್ದೇವೆ ಮತ್ತು ಮುಂದಿನ ವಾರದಲ್ಲಿ ಅದನ್ನು 50 ಜ್ವರ ಚಿಕಿತ್ಸಾಲಯಗಳಿಗೆ ವಿಸ್ತರಿಸುತ್ತೇವೆ. ” ಎಂದರು.

ಫೀವರ್ ಕ್ಲಿನಿಕ್ ಸೇವೆ 2020 ರ ಏಪ್ರಿಲ್ 1 ರಿಂದ ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನ ಅಪೊಲೊ ಕ್ಲಿನಿಕ್‌ಗಳಲ್ಲಿ ಲಭ್ಯವಿರುತ್ತದೆ ಮತ್ತು ಈ ಸೇವೆಗಾಗಿ ನೇಮಕಾತಿಗಳನ್ನು www.apolloclinic.com ಗೆ ಲಾಗ್ ಇನ್ ಮಾಡುವ ಮೂಲಕ ಅಥವಾ ಸಹಾಯವಾಣಿ 1860 500 7788 ಅನ್ನು ಡಯಲ್ ಮಾಡುವ ಮೂಲಕ ಮಾಡಬಹುದು.

https://www.apolloclinic.com/about-apollo-clinic

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!