ಅಪೌಷ್ಟಿಕತೆಗೆ ನುಗ್ಗೆ ಸೊಪ್ಪು ಸರಿಯಾದ ಮದ್ದು. ಇದರಲ್ಲಿ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.
ಅಪೌಷ್ಟಿಕತೆ ಒಂದು ಸಂಕೀರ್ಣ ಆರೋಗ್ಯ ಸಮಸ್ಯೆಯಾಗಿದೆ. ಅಪೌಷ್ಟಿಕತೆಯು ಪೌಷ್ಠಿಕಾಂಶದ ಅಸಮತೋಲನ, ಪೋಷಣೆಯ ಕೊರತೆ ಅಥವಾ ದೇಹದಲ್ಲಿನ ಹೆಚ್ಚಿನ ಪೋಷಕಾಂಶಗಳ ಸಮಸ್ಯೆಯಾಗಿದೆ. ಇದೆಲ್ಲವೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಪೌಷ್ಟಿಕತೆಯು ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು , ಇದು ಲಕ್ಷಾಂತರ ಜನರ ಮೇಲೆ, ವಿಶೇಷವಾಗಿ ದುರ್ಬಲ ಸಮುದಾಯ ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.
ಅಪೌಷ್ಟಿಕತೆಗೆ ಸರಿಯಾದ ಮದ್ದು ನುಗ್ಗೆ ಸೂಪ್ಪು. ಇದರಲ್ಲಿ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ನುಗ್ಗೆ ಸೂಪ್ಪು ವಿಟಮಿನ್ A, C ಮತ್ತು E, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಕಬ್ಬಿಣದ ಮೂಲವಾಗಿದ್ದು, ಇದು ಪೋಷಕಾಂಶಗಳ ಕೊರತೆಗೆ ಸಮಗ್ರ ಪರಿಹಾರ ನೀಡುತ್ತದೆ.
ಅಪೌಷ್ಟಿಕತೆಗೆ ನುಗ್ಗೆ ಸೊಪ್ಪು ಸರಿಯಾದ ಮದ್ದು
• ಪ್ರೋಟೀನ್ ಕೊರತೆ: ಪ್ರೋಟೀನ್ ಕೊರತೆಯು ಅಪೌಷ್ಟಿಕತೆಗೆ ಮುಖ್ಯ ಕಾರಣವಾಗಿದೆ. ನುಗ್ಗೆ ಸೂಪ್ಪು ಸಂಪೂರ್ಣ ಪ್ರೋಟೀನ್ (ಎಲ್ಲಾ ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು) ಹೊಂದಿದೆ.
• ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ A, C ಮತ್ತು E: ವಿಟಮಿನ್ A ಮತ್ತು ವಿಟಮಿನ್ C ರೋಗನಿರೋಧಕ ಶಕ್ತಿಗೆ ಪ್ರಮುಖವಾಗಿವೆ. ಸೋಂಕುಗಳು ಮತ್ತು ರೋಗಗಳನ್ನು ತಡೆಗಟ್ಟುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ನುಗ್ಗೆ ಸೂಪ್ಪಿನಲ್ಲಿ ಹೆಚ್ಚು ವಿಟಮಿನ್ ಇರುವ ಕಾರಣ ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಮಾಡುತ್ತದೆ.
• ನುಗ್ಗೆ ಸೂಪ್ಪು ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಕಬ್ಬಿಣದ ಅಂಶವನ್ನು ಹೊಂದಿದೆ. ಅಪೌಷ್ಟಿಕತೆಯು ಸಾಮಾನ್ಯವಾಗಿ ಮೂಳೆಗಳನ್ನು ದುರ್ಬಲ ಗೊಳಿಸುತ್ತದೆ ಮತ್ತು ರಕ್ತಹೀನತೆಗೆ ಕಾರಣವಾಗುತ್ತದೆ. ನುಗ್ಗೆ ಸೂಪ್ಪು ನಲ್ಲಿ ಕ್ಯಾಲ್ಸಿಯಂ ಮತ್ತು ಐರನ್ ಇರುವುದರಿಂದ ಮೂಳೆಯ ಆರೋಗ್ಯ ಮತ್ತು ರಕ್ತಹೀನತೆಯ ನಿವಾರಣೆಗೆ ಒಳ್ಳೆಯದು. ನುಗ್ಗೆ ಸೊಪ್ಪನ್ನು ಆಹಾರದಲ್ಲಿ ಸೇರಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇವು ಮೂಳೆಯ ಆರೋಗ್ಯದ ಜೊತೆಗೆ, ದ್ರವ ಸಮತೋಲನ ಮತ್ತು ರಕ್ತದಲ್ಲಿನ ಆಮ್ಲಜನಕದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.
• ಉತ್ಕರ್ಷಣ ನಿರೋಧಕಗಳು: ನುಗ್ಗೆ ಸೂಪ್ಪು ಕ್ವೆರ್ಸೆಟಿನ್(quercetin), ಕ್ಲೋರೊಜೆನಿಕ್ ಆಮ್ಲ(chlorogenic acid) ಮತ್ತು ಬೀಟಾ-ಕ್ಯಾರೋಟಿನ್(beta-carotene) ಸೇರಿದಂತೆ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಆಂಟಿಆಕ್ಸಿಡೆಂಟ್ಗಳು ದೇಹದಲ್ಲಿನ ಹಾನಿಕಾರಕ ಫ್ರೀ ರಾಡಿಕಲ್ಸ್ ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆರೋಗ್ಯವನ್ನು ಸುಧಾರಿಸುತ್ತದೆ.
ನುಗ್ಗೆಯ ಪ್ರಮುಖ ಅಂಶವೆಂದರೆ ವೈವಿಧ್ಯಮಯ ಹವಾಮಾನ ಮತ್ತು ಮಣ್ಣಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತದೆ. ಆದುದರಿಂದ ಬೆಳೆಸಲು ಸುಲಭ, ದುಬಾರಿಯೂ ಅಲ್ಲ. ನುಗ್ಗೆ ಸೂಪ್ಪು ಜಾಗತಿಕವಾಗಿ ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.