ರಕ್ತಹೀನತೆ ಮಹಿಳೆಯರಲ್ಲಿ ಹೆಚ್ಚು: ಇದು ನಾನಾ ವ್ಯಾಧಿಗಳಿಗೆ ಕಾರಣ

ರಕ್ತಹೀನತೆ ನಾನಾ ವ್ಯಾಧಿಗಳಿಗೆ ಕಾರಣ. ಕಬ್ಬಿಣಾಂಶ ಹೆಚ್ಚಾಗಿರುವಂತಹ ಆಹಾರ ಪದಾರ್ಥಗಳ ಸೇವನೆಯಿಂದ ರಕ್ತಹೀನತೆ ದೂರಮಾಡಬಹುದು. ಕಬ್ಬಿಣಾಂಶ ಅಧಿಕವಾಗಿರುವ ಹಸಿರು ತರಕಾರಿ, ಸೊಪ್ಪು, ನುಗ್ಗೆ ಸೊಪ್ಪು, ಬಾಳೆಹಣ್ಣು, ಸೇಬು, ಹಾಲು, ಒ ಣಹಣ್ಣು, ನೆಲಗಡಲೆ, ಕರಿಎಳ್ಳು, ಜೇನು, ದ್ವಿದಳ ಧಾನ್ಯ ಸೇವನೆ ಸೂಕ್ತ. ಮಾಂಸ, ಮೀನು, ಮೊಟ್ಟೆ ಸೇವನೆಯೂ ಇರಲಿ. ರಾಗಿಗಂಜಿ ಅತ್ಯುತ್ತಮ. ಕಾಫಿ, ಟೀ ಸೇವಿಸಿದರೆ ಕಬ್ಬಿಣದ ಹೀರುವಿಕೆಗೆ ತೊಂದರೆಯಾಗಬಲ್ಲದು. 

ರಕ್ತಹೀನತೆ ಮಹಿಳೆಯರಲ್ಲಿ ಹೆಚ್ಚು: ಇದು ನಾನಾ ವ್ಯಾಧಿಗಳಿಗೆ ಕಾರಣರಕ್ತ ಹೀನತೆ ಎಂದರೆ ದೇಹದಲ್ಲಿ ಹರಿಯುವ ರಕ್ತದ ಕೊರತೆ. ಇದು ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗಬಾರದು. ಹಾಗೆಯೇ ರಕ್ತದಲ್ಲಿ ಕಬ್ಬಿಣದ ಕೊರತೆ ಉಂಟಾಗಬಾರದು. ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ದೇಹಕ್ಕೆ ಅತ್ಯಾವಶ್ಯಕವಾಗಿ ಬೇಕಾಗುವ ಸತ್ವ, ಪೋಷಕಾಂಶ ಇರಬೇಕು.

ಜೊತೆಗೆ ಅಗತ್ಯ ಪ್ರಮಾಣದ ಖನಿಜಗಳು, ಅನ್ನಾಂಗಗಳು (ವಿಟಮಿನ್) ಇರಬೇಕಾಗುತ್ತದೆ. ಅದರಲ್ಲೂ ಕಬ್ಬಿಣಾಂಶ ರಕ್ತದಲ್ಲಿ ಸರಿಯಾದ ಪ್ರಮಾಣದಲ್ಲಿ ಇರಬೇಕು. ಇದರ ಕೊರತೆ ಕಾಡಿದರೆ ಜೀವಕೋಶಗಳಿಗೆ ಆಮ್ಲಜನಕ ತಲುಪುವುದಿಲ್ಲ. ದೇಹ ಮನಸ್ಸು ಸುಸ್ತಾಗುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆ ಬಲವರ್ಧನೆಗೆ ತೊಂದರೆಯಾಗುತ್ತದೆ.

ರಕ್ತಹೀನತೆಗೆ ಕಾರಣಗಳನ್ನು ನಿರ್ದಿಷ್ಟವಾಗಿ ಹೇಳಲಾಗದು. ಮುಖ್ಯವಾಗಿ ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡದಿರುವುದು. ಧೀರ್ಘಕಾಲಿನ ರೋಗ ಪೀಡಿತರು, ಅತೀ ಮಾತ್ರೆ ಸೇವನೆ ಮಾಡುವವರು, ರಕ್ತದ ಮೂಲಕ ಕಬ್ಬಿಣಾಂಶದ ನಷ್ಟ, ಕ್ಯಾನ್ಸರ್‍ಗೆ ಪಡೆಯುವ ಔಷಧಗಳಿಂದ ಕೂಡ ರಕ್ತದ ಪ್ರಮಾಣ ಕಡಿಮೆಯಾಗಲು ಕಾರಣವಾಗಬಹುದು. ಅಲ್ಲದೆ, ದೇಹದಲ್ಲಿ ರಕ್ತಕಣ ಉತ್ಪತ್ತಿ ಸರಿಯಾಗಿ ಆಗದಿರುವುದು ಕೂಡಾ. ಉದಾಹರಣೆಗೆ ಮೂಳೆರೋಗ, ವಿಟಮಿನ್ ಕೊರತೆಯೂ ಸಾಧ್ಯವಿರಬಹುದು.

ತೊಂದರೆಗಳು

ರಕ್ತಹೀನತೆ ಅನೇಕ ದೈಹಿಕ ತೊಂದರೆಗಳಿಗೆ ಅಸ್ಪದವಾಗುತ್ತದೆ. ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ, ಕಾಡುವ ಸುಸ್ತು, ಆಯಾಸ. ಮಕ್ಕಳಲ್ಲಿ ಏಕ್ರಾಗತೆ ಕೊರತೆ, ಬೆಳವಣಿಗೆ ಕುಂಠಿತ, ಚಟುವಟಿಕೆ ಇಲ್ಲದಿರುವುದು, ಆಲಸ್ಯ, ಸೋಮಾರಿತನ. ಸದಾ ಸಿಟ್ಟು ಶೀಘ್ರ ಕೋಪ.ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುವುದು. ಕೆಲವೊಮ್ಮೆ ತೀವ್ರ ಉಸಿರಾಟ, ಹೆಚ್ಚಾದ ವೇಗ. ಕ್ಷೀಣಿಸುವ ದೈಹಿಕ ಕಾರ್ಯಕ್ಷಮತೆ, ಗಮನ ಕೊರತೆ, ದೇಹದ ಅಂಗಾಂಗಗಳ ಕಾರ್ಯನಿರ್ವಹಣೆಯಲ್ಲಿ ಏರುಪೇರು. ಹಸಿವಾಗದಿರುವಿಕೆ, ದೇಹ ವ್ಯವಸ್ಥೆ ಕಾರ್ಯ ಕ್ಷೀಣ. ರೋಗ ನಿರೋಧಕ ಶಕ್ತಿ ಕುಂಠಿತ. ಭ್ರೂಣದ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ- ಇತ್ಯಾದಿ ತೊಂದರೆಗಳು ರಕ್ತಹೀನತೆ ಆದಾಗ ಸಹಜ.

ಯಾರಲ್ಲಿ ಹೆಚ್ಚು?ರಕ್ತಹೀನತೆ ಮಹಿಳೆಯರಲ್ಲಿ ಹೆಚ್ಚು: ಇದು ನಾನಾ ವ್ಯಾಧಿಗಳಿಗೆ ಕಾರಣ

ಗರ್ಭಿಣಿಯರು, ಸಾಮಾನ್ಯ ಮಹಿಳೆಯರು, ಋತುಸ್ರಾವ ಹೆಚ್ಚಿರುವವರು. ಹದಿಹರೆಯದ ಹೆಣ್ಣು ಮಕ್ಕಳು. ಶೀಘ್ರ ಬೆಳವಣಿಗೆಯ ಮಕ್ಕಳು, ಅತೀ ಒತ್ತಡದ, ಶ್ರಮದಾಯಕ ಕೆಲಸ ನಿರ್ವಹಿಸುವವರು. ವಿಶ್ರಾಂತಿ ಇಲ್ಲದೆ ಕೆಲಸ, ಧೀರ್ಘಕಾಲದ ಕಾಯಿಲೆ, ರಕ್ತದ ಕಾಯಿಲೆ ಇರುವವರು ರಕ್ತಹೀನತೆಯಿಂದ ಬಳಲುವವರ ಸಂಖ್ಯೆ ಹೆಚ್ಚು.

ರಕ್ತಹೀನತೆಯು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಎನ್ನುವುದನ್ನು ವೈದ್ಯಕೀಯ ಸಂಶೋಧನೆ ದೃಢಪಡಿಸಿದೆ. ಶೇಕಡಾ ಐವತ್ತರಿಂದ ಅರವತ್ತರಷ್ಟು ಮಹಿಳೆಯರು ಈ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ದುರದೃಷ್ಟಕರ. ಬಹಳಷ್ಟು ಮಹಿಳೆಯರಿಗೆ ಈ ಸಮಸ್ಯೆ ಇರುವುದೇ ಗೊತ್ತಿರುವುದಿಲ್ಲ. ಯಾವುದಾದರೂ ಖಾಯಿಲೆಯ ಪರೀಕ್ಷೆಗೆ ದಾಖಲಾದಾಗ ಮಾತ್ರವಷ್ಟೇ ತಿಳಿಯುತ್ತದೆ.

ಉಂಟಾಗದಂತೆ?

1. ರಕ್ತದಲ್ಲಿ ಕಬ್ಬಿಣದ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸುವುದು.

2. ನಷ್ಟಕ್ಕೆ ಪರ್ಯಾಯವಾಗಿ ಕಬ್ಬಿಣದ ಮರುಪೂರೈಕೆ.

3. ಸತ್ವಯುತ ಆಹಾರ ಸೇವನೆಯಿಂದ ಕಬ್ಬಿಣಾಂಶದ ಲಭ್ಯತೆ ಹೆಚ್ಚಿಸುವುದು.

4. ಗರ್ಭಿಣಿಯರು ಹೆಚ್ಚುವರಿ ಫೋಲಿಕ್ ಆಮ್ಲದ ಮಾತ್ರೆ ಸೇವಿಸುವುದು. ಮತ್ತಷ್ಟು ರಕ್ತನಷ್ಟಕ್ಕೆ ಪರಿಹಾರ ಪಡೆಯಬೇಕು.

5. ಸಸ್ಯಹಾರದ ಜೊತೆಗೆ ಮಾಂಸಹಾರವೂ ಒಳಿತು.

6. ಒತ್ತಡಮುಕ್ತ ಜೀವನ ಒಳ್ಳೆಯದು.

Dr._B_Ramesh-Director-Altius_Hospital_Pvt._Ltd.

ಡಾ. ಬಿ. ರಮೇಶ್- ಆಲ್ಟಿಯಸ್ ಹಾಸ್ಪಿಟಲ್
ಶಾಖೆ: ರಾಜಾಜಿನಗರ: 6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
Ph: 9900031842/ 080-23151873

ಶಾಖೆ:ರಾಜರಾಜೇಶ್ವರಿನಗರ : 915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು-560098.

Ph:o80-28606789/9663311128

E-mail : endoram2006@yahoo.co.in , altiushospital@yahoo.com

www.altiushospital.com

 

 

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!