ಆಯುಷ್ ಆರೋಗ್ಯ ಫೌಂಡೇಷನ್- ವೈದ್ಯರು ಮತ್ತು ಆಸ್ಪತ್ರೆಗಳಲ್ಲಿ ಮತದಾನ ಜಾಗೃತಿ ಅಭಿಯಾನ –

ಬೆಂಗಳೂರು : ರಾಜ್ಯದಲ್ಲಿ ಏಪ್ರಿಲ್ 18 ಮತ್ತು 23ರಂದು ಎರಡು ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ `ಪ್ರತಿಯೊಬ್ಬರೂ ಖಡ್ಡಾಯವಾಗಿ ಮತದಾನ ಮಾಡಿ’ ಎಂಬ ಮತದಾನ ಜಾಗೃತಿ ವಿಶೇಷ ಅಭಿಯಾನವನ್ನು ಬೆಂಗಳೂರಿನ ಆಯುಷ್ ಆರೋಗ್ಯ ಫೌಂಡೇಷನ್ ಕೈಗೊಂಡಿದೆ.
Dr Arun Kumar – Deeksha Hospital
Dr Tejaswi : Surabhi Homoeo Clinic

ಮತದಾನದ ಹಕ್ಕನ್ನು ಸಮಾಜದ ಪ್ರತಿಯೊಬ್ಬರೂ ಚಲಾಯಿಸಬೇಕು. ಆಗ ಪ್ರಜಾಪ್ರಭುತ್ವ ಮತ್ತಷ್ಟು ಬಲಿಷ್ಠಗೊಳ್ಳುತ್ತದೆ. ಉದ್ಯೋಗಸ್ಥರು ಮತ್ತು ಉತ್ತಮ ಸ್ಥಾನದಲ್ಲಿರುವವರೇ ಹೆಚ್ಚಾಗಿ ಮತ ಚಲಾಯಿಸುವುದಿಲ್ಲ. ವೈದ್ಯರು ಮತ್ತು ವೈದ್ಯಕೀಯ ವೃತ್ತಿಯಲ್ಲಿರುವ ಬಹಳಷ್ಟು ಮಂದಿ ವೃತ್ತಿಗೆ ಹೆಚ್ಚು ಪ್ರಾಶಸ್ತ್ಯ ನೀಡುವುದರಿಂದ ಮತದಾನದ ದಿನದಂದು ಮತ ಚಲಾಯಿಸಲು ಸಾಧ್ಯವಾಗದಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಆಯುಷ್ ಆರೋಗ್ಯ ಫೌಂಡೇಷನ್‍ನ ಪ್ರಧಾನ ಸಂಚಾಲಕರಾದ ಡಾ| ಶ್ರೀಕೃಷ್ಣ ಮಾಯ್ಲೆಂಗಿ ತಿಳಿಸಿದ್ದಾರೆ.

ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ರಾಜ್ಯದ ಅಸಂಖ್ಯಾತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಮತಚಲಾಯಿಸುವಂತೆ ಕರಪತ್ರ ಹಂಚಿ ಮನವಿ ಮಾಡಲಾಗಿದೆ. ಈಮೇಲ್, ವಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ಕಳುಹಿಸುವುದರ ಜೊತೆಗೆ ಕೆಲವು ಆಸ್ಪತ್ರೆಗಳಲ್ಲಿ ಈ ನಿಟ್ಟಿನಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಆಯುಷ್ ಆರೋಗ್ಯ ಫೌಂಡೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆ ಪಾರ್ಕ್, ಬಸ್ ನಿಲ್ದಾಣ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲೂ ಕರಪತ್ರ ಹಂಚಿ ಮತದಾನ ಜಾಗೃತಿಗೆ ಪ್ರಯತ್ನವನ್ನು ಮಾಡಲಾಗಿದೆ.

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!