ಆಹಾರವೇ ಔಷಧಿ-ಮಹಾನಸ ಆಯುರ್ವೇದ ಆರೋಗ್ಯ ಬುತ್ತಿ

ಆಹಾರವೇ ಔಷಧಿ ಎನ್ನುವುದನ್ನು ನಾವು ಈಗಾಗಲೇ ಎಲ್ಲಾ ರಾಷ್ಟ್ರಗಳಿಗೆ ಸಾರಿದ್ದೇವೆ. ಇನ್ನು ನಾವು ಅದನ್ನು ಮತ್ತಷ್ಟು ಹೆಚ್ಚಾಗಿ ಪಾಲಿಸಬೇಕು.ರೋಗನಿರೋಧಕ ಶಕ್ತಿ  ಹೆಚ್ಚಿಸುವಂತಹ ಆಹಾರ ತೆಗೆದುಕೊಳ್ಳಬೇಕು.

Arogya-Kit from Mahanasa ayurveda ಆಹಾರವೇ ಔಷಧಿ“ಆರೋಗ್ಯವೇ ಭಾಗ್ಯ”, ಈ ಮಾತು ಎಷ್ಟು ಸತ್ಯ ಎಂದು ಈಗ ಎಲ್ಲರಿಗೂ ಅರಿವಾಗಿದೆ. ಎಲ್ಲರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ, ಯಾವುದೇ ಖಾಯಿಲೆ ನಮಗೆ ಬರದಂತೆ ತಡೆಗಟ್ಟುವುದು ಹೇಗೆ ಎಂದು ತಿಳಿಯುವ ಕುತೂಹಲದಲ್ಲಿದ್ದಾರೆ. ಕೊರೊನ ವೈರಸ್ ಸಾಂಕ್ರಾಮಿಕ ರೋಗವಾಗಿರುವುದರಿಂದ ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆದ್ದರಿಂದ ಈಗ ನಾವು ನಮ್ಮ ಮನೆಯವರ ಆರೋಗ್ಯ, ಸುತ್ತಮುತ್ತಲಿನ ಜನರ ಆರೋಗ್ಯ ಹಾಗೂ  ಸಮಾಜದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ರೋಗನಿರೋಧಕ ಶಕ್ತಿ  ಹೆಚ್ಚಿಸುವಂತಹ ಆಹಾರ ತೆಗೆದುಕೊಳ್ಳಬೇಕು:

“ಊಟ ಬಲ್ಲವನಿಗೆ ರೋಗವಿಲ್ಲ”, ಎಂಬ ಗಾದೆ ಮಾತನ್ನು ಕೇಳಿರುತ್ತೀರ. ಆದರೆ ಈಗ ಅದನ್ನು ಪಾಲಿಸುವ ಸಮಯ. ನಿಮ್ಮ ಆರೋಗ್ಯವನ್ನು ಈಗ ನೀವು ತೆಗೆದುಕೊಳ್ಳುವ ಆಹಾರದಿಂದ ಹಾಗೂ ನಿಮ್ಮ ಜೀವನ ಶೈಲಿಯಿಂದ ಮಾತ್ರ ಕಾಪಾಡಿಕೊಳ್ಳಲು ಸಾಧ್ಯ.”ಆಹಾರವೇ ಔಷಧಿ” ಎಂಬ ಮಾತು ನಿಮಗೆ ತಿಳಿದಿದೆ.ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಈ ಸಮಯದಲ್ಲಿ ಮಾತ್ರ ಅಲ್ಲ ನಮ್ಮನ್ನು ಸದಾ ಕಾಲ ಕಾಪಾಡುತ್ತದೆ. ಇದಕ್ಕೆ ಸಾಕ್ಷಿಯಾಗಿ ಇಡೀ ವಿಶ್ವದ ಮುಂದೆ ನಮ್ಮ ಭಾರತ ಕೊರೊನ ವೈರಸ್ ಮಧ್ಯೆ ನಿಂತಿದೆ.

ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದ್ದರೂ ಸಹ ಇತರೆ ರಾಷ್ಟ್ರಗಳಿಗೆ ಹೋಲಿಸಿದಾಗ ನಮ್ಮಲ್ಲಿ ಅತಿ ಹೆಚ್ಚು ರೋಗನಿರೋಧಕ ಶಕ್ತಿ ಇರುವುದು ಎಲ್ಲರಿಗೂ ತಿಳಿಯುತ್ತಿದೆ. ಇದಕ್ಕೆ ಕಾರಣ ನಮ್ಮ ಪೂರ್ವಜರು ನಮಗೆ ಬಿಟ್ಟ ನಮ್ಮ ಭಾರತೀಯ ಸಂಪ್ರದಾಯದ ಅಡುಗೆಗಳು ಹಾಗೂ ಅದನ್ನು ಪಾಲಿಸುತ್ತಿರುವ ಸಾಕಷ್ಟು ಜನರು. ಆಹಾರವೇ ಔಷಧಿ ಎನ್ನುವುದನ್ನು ನಾವು ಈಗಾಗಲೇ ಎಲ್ಲಾ ರಾಷ್ಟ್ರಗಳಿಗೆ ಸಾರಿದ್ದೇವೆ. ಇನ್ನು ನಾವು ಅದನ್ನು ಮತ್ತಷ್ಟು ಹೆಚ್ಚಾಗಿ ಪಾಲಿಸಬೇಕು. ನಾವು ನಮ್ಮ ಮುಂದಿನ ಜನಾಂಗಕ್ಕೆ ಕೊಡುವ ಉಡುಗೊರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು, ಅದರ ಬಗ್ಗೆ ಮಾಹಿತಿಗಳು ಮತ್ತು ಅದನ್ನು ಮಾಡುಹಾಗೂ ಉಪಯೋಗಿಸುವ ಕ್ರಮಗಳು.

1.ರೋಗನಿರೋಧಕ ಶಕ್ತಿ  ಹೆಚ್ಚಿಸುವಂತಹ ಆಹಾರ ತೆಗೆದುಕೊಳ್ಳಬೇಕು. ಕ್ರಮವಾದ ದಿನಚರಿ, ಋತುಚರ್ಯಗಳನ್ನು ಪಾಲಿಸುವಂತಹ ಜೀವನ ಶೈಲಿಯಾಗಿರಬೇಕು.

2.ಆಯುಷ್ ಇಲಾಖೆ ಪ್ರಕಟಿಸಿರುವಂತೆ ಬಿಸಿ ನೀರು ಕುಡಿಯುವುದು, ಯೋಗಾಸನ, ಪ್ರಾಣಾಯಾಮ ಮಾಡುವುದು, ಅಡುಗೆಯಲ್ಲಿ ಅರಿಶಿನ, ಜೀರಿಗೆ, ಬೆಳ್ಳುಳ್ಳಿ, ದನಿಯ ಬಳಸುವುದು, ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ.

3.ಪಿಜ್ಜಾ, ಬಿಸ್ಕತ್, ಕೇಕು, ಚಾಕಲೇಟ್, ಚಿಪ್ಸ್, ಐಸ್ ಕ್ರೀಮ್ ಈ ರೀತಿಯ ಯಾವುದೇ ಜಂಕ್ ಪದಾರ್ಥಗಳನ್ನ ತಿನ್ನಬೇಡಿ ಮತ್ತು ಮಕ್ಕಳಿಗೂ ಕೊಡಬೇಡಿ. ಮನೆಯಲ್ಲಿ lockdown ಆಗಿರುವುದರಿಂದ  stress, depression ಈ ರೀತಿಯ ಸಮಸ್ಯೆಗಳಿಂದ ಜಂಕ್ ತಿನ್ನಬೇಕೆಂಬ ಹಂಬಲ ಹೆಚ್ಚುತ್ತದೆ, ಆದರೆ ಈ ಜಂಕ್ ನಿಮ್ಮ ಇಮ್ಮ್ಯೂನಿಟಿ ಕಡಿಮೆ ಮಾಡುತ್ತದೆ ಹಾಗೂ ಖಾಯಿಲೆ ತಂದುಕೊಡುತ್ತದೆ.

4. ಸ್ಟ್ರೆಸ್, ಡಿಪ್ರೆಶನ್ ನನ್ನು ನಿಯಂತ್ರಣದಲ್ಲಿಡಲು ಯೋಗ, ಮೆಡಿಟೇಶನ್, ಸ್ತೋತ್ರ ಪಠನ ಈ ರೀತಿಯ ಮೊರೆಹೋಗಬೇಕು, ಬದಲಾಗಿ ಆರೋಗ್ಯ ಹಾಳು ಮಾಡುವ ಆಹಾರಗಳ ಕಡೆ ಅಲ್ಲ.

ಮಹಾನಸ ಆಯುರ್ವೇದದಿಂದ ಆರೋಗ್ಯ ಬುತ್ತಿ :

ಈ ನಿಟ್ಟಿನಲ್ಲಿ ಮಹಾನಸ ಆಯುರ್ವೇದ ಆರೋಗ್ಯ ಬುತ್ತಿ (Arogya Kit)ಎಂಬ ಆರು ತರಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉತ್ಪನ್ನಗಳನ್ನ ತಂದಿದೆ. ಇದರಲ್ಲಿ ಕಷಾಯದ ಪುಡಿ, ಸ್ವಸ್ಥ ಟೀ, ಹರ್ಬಲ್ ಟೀ, ಗಂಟಲು ಕಿರಿಕಿರಿಗೆ  ಪುಡಿ, ಬಾಯಿಯ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎಣ್ಣೆ, ಹಾಗೂ ಮೂಗಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಬೆಯ ಪುಡಿ ಹೀಗೆ ಆಹಾರದಲ್ಲಿ ಹೆಚ್ಚಾಗಿ ಬಳಸಬೇಕಾದ ಅರಿಶಿನ, ದನಿಯ, ಜೀರಿಗೆ, ಲವಂಗ ಮುಂತಾದ ಮಸಾಲೆ ಪುಡಿಗಳನ್ನು ಅದರ ಔಷಧ ಗುಣಕ್ಕೆ ಅನುಗುಣವಾಗಿ ಬೆರೆಸಿ ಆಹಾರವನ್ನು ಔಷಧಿ ರೂಪದಲ್ಲಿ ಉಪಯೋಗಿಸುವಂತೆ ಮಾಡಲಾಗಿದೆ.

 ಆರೋಗ್ಯ ಕಾಪಾಡುವುದು ನಾವು ತೆಗೆದುಕೊಳ್ಳುವ ಆಹಾರ ಮತ್ತು ನಮ್ಮ ಕಟ್ಟುನಿಟ್ಟಾದ ಜೀವನ ಶೈಲಿಯ ಮೇಲೆ ಅವಲಂಭಿಸಿರುತ್ತದೆ. ಆರೋಗ್ಯ ಬುತ್ತಿಯನ್ನು ಉಪಯೋಗಿಸುವುದರಿಂದ ಮತ್ತು ಪ್ರತಿನಿತ್ಯ ಯೋಗಾಭ್ಯಾಸ, ಪ್ರಾಣಾಯಾಮ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಮಹಾನಸ ತಂಡವು ಅವರ ಟ್ರಸ್ಟ್ ಮುಖಾಂತರ ಇಂತಹ ಆರೋಗ್ಯ ಬುತ್ತಿಯನ್ನು ನಮ್ಮ ಸುತ್ತಲಿನ ಸಮುದಾಯವನ್ನು ರಕ್ಷಿಸುತ್ತಿರುವಂತಹ ಸೇವಕರಿಗೆ ಅಂದರೆ ಪೊಲೀಸರಿಗೆ, ಆರೋಗ್ಯ ಸೇವೆ ಸಲ್ಲಿಸುತ್ತಿರುವವರಿಗೆ, ಕಸದ ಕೆಲಸ ಮಾಡುತ್ತಿರುವವರಿಗೆ ದಾನದ ರೂಪದಲ್ಲಿ ಹಣ ಸಂಗ್ರಹಿಸಿ ಉಚಿತವಾಗಿ ನೀಡುತ್ತಿದ್ದಾರೆ.

ಈ ಆರೋಗ್ಯ ಬುತ್ತಿಯನ್ನು ಪಡೆಯಲು ಅಥವಾ ಬೇರೆಯವರಿಗೆ ದಾನವಾಗಿ ನೀಡಲು ನೀವು ಮಹಾನಸ ತಂಡವನ್ನು (ಮಹಾನಸ ನಿರ್ದೇಶಕಿಯರಾದ ಡಾ|| ಅರ್ಚನ ಮತ್ತು ಡಾ|| ರೇಖ) ಸಂಪರ್ಕಿಸಬಹುದು.

ಮಹಾನಾಸಆಯುರ್ವೇದ Mob:9620580101

Email:info@mahanasaayurveda.com

www.mahanasaayurveda.com

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!