ಆರೋಗ್ಯ ವೃದ್ಧಿಗೆ ಪಂಚತಂತ್ರಗಳು- ರೋಗ ರಹಿತ ಜೀವನಕ್ಕೆ ಸರಳ ಸೂತ್ರ

ಆರೋಗ್ಯ ವೃದ್ಧಿಗೆ ಪಂಚತಂತ್ರಗಳು – ಪ್ರಕೃತಿ ಚಿಕಿತ್ಸೆಯನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಿದ ದಿ. ಡಾ: ವೆಂಕಟರಾವ್ ದಿನನಿತ್ಯ ಪಾಲಿಸುವುದಕ್ಕೆ ಕೊಟ್ಟ ಸರಳ ಸೂತ್ರ. ತನ್ನ ದೈನಂದಿನ ಜೀವನದಲ್ಲಿ ಕೇವಲ ಕೆಲವು ಬದಲಾವಣೆಗಳನ್ನು ಮಾಡಿದರೆ ಪ್ರತಿಯೊಬ್ಬನು ರೋಗ ರಹಿತ ಜೀವನವನ್ನು ನಡೆಸಬಹುದು.

ಆರೋಗ್ಯ ವೃದ್ಧಿಗೆ ಪಂಚತಂತ್ರಗಳು- ರೋಗ ರಹಿತ ಜೀವನಕ್ಕೆ ಸರಳ ಸೂತ್ರಹುಟ್ಟಿದ ನಂತರ ಆರೋಗ್ಯದಿಂದ ಜೀವನವನ್ನು ನಡೆಸುವುದು ಪ್ರತಿಯೊಬ್ಬ ಮಾನವನ ಹಕ್ಕು. ಆದರೆ ದುರಾದೃಷ್ಠವಶಾತ್, ಎಷ್ಟೋ ಜನರಿಗೆ ಈ ಸುಖ ದೊರಕುವುದಿಲ್ಲ. ಇದು ತಮ್ಮ ಕೆಟ್ಟ ಚಟಗಳಿಂದ ಇರಬಹುದು, ಕೃತ್ರಿಮ ಜೀವನಶೈಲಿಯಿಂದಿರಬಹುದಾದ, ಅಥವಾ ಸರಿಯಾದ ಆಹಾರ ಕರಮವನ್ನು ಪಾಲಿಸದೇ ಇರಬಹುದು. ಈ ಕಾರಣಗಳಿಂದ ಮನುಷ್ಯ ರೋಗಗಳನ್ನು ತನ್ನ ಕಡೆಗೆ ಆಹ್ವಾನಿಸುತ್ತಿದ್ದಾನೆ.

ತನ್ನ ದೈನಂದಿನ ಜೀವನದಲ್ಲಿ ಕೇವಲ ಕೆಲವು ಬದಲಾವಣೆಗಳನ್ನು ಮಾಡಿದರೆ ಪ್ರತಿಯೊಬ್ಬನು ರೋಗ ರಹಿತ ಜೀವನವನ್ನು ನಡೆಸಬಹುದು. ದಿ. ಡಾ: ವೆಂಕಟರಾವ್ ಅವರು ದಿನನಿತ್ಯ ಪಾಲಿಸುವುದಕ್ಕೆ ಸರಳ ಸೂತ್ರಗಳನ್ನು ಕೊಟ್ಟಿದ್ದಾರೆ. ಇದನ್ನು ಪಂಚತಂತ್ರಗಳೆಂದು ಕರೆದಿದ್ದಾರೆ. ಮಹಾತ್ಮಾಗಾಂಧಿಜೀಯವರ ನಂತರ ಪ್ರಕೃತಿ ಚಿಕಿತ್ಸೆಯನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಿದ ಹಿರಿಯರಲ್ಲಿ ಇವರೊಬ್ಬರು.

ಪಂಚತಂತ್ರಗಳು ಆರೋಗ್ಯ ವೃದ್ಧಿಗೆ ಸರಳ ಸೂತ್ರ:

1- ಪ್ರತಿ ನಿತ್ಯ ಕನಿಷ್ಠ 3-4 ಲೀಟರಿನಷ್ಟು ನೀರು ಸೇವಿಸಿ: ನಮ್ಮ ದೇಹ 7ಂ- 8ಂ ರಷ್ಟು ನೀರಿನಿಂದ ಕೂಡಿದೆ. ನೀರನ್ನು ಹೆಚ್ಚು ಸೇವಿಸುವುದರಿಂದ ಹೊಟ್ಟೆ ಹುರಿ, ಹೈಪರ್ ಎಸಿಡಿಟಿ, ಮಲಬದ್ಧತೆ, ಮೂಲವ್ಯಾಧಿ, ಮೂತ್ರಕೋಶದ ಕಲ್ಲು ಮುಂತಾದ ತೊಂದರೆಗಳನ್ನು ತಡೆಗಟ್ಟಬಹುದು, ಹಾಗೂ ಬಂದ ತೊಂದರೆಯನ್ನು ನಿವಾರಿಸಬಹುದು. ಅನೇಕರ ವಿವಿಧ ರೀತಿಯ ತಲೆನೋವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ತಂಬಿಗೆ ನೀರು ಕುಡಿಯುವುದರಿಂದ ನಿವಾರಣೆಯಾಗಿರುವುದನ್ನು ನೀವು ಕೇಳಿರಬಹುದು.

ಹೆಚ್ಚು ನೀರಿನ ಸೇವನೆ ಎಲ್ಲ ರೋಗಗಳಿಗೂ ಉತ್ತಮ. ಮುನ್ನೆಚ್ಚರಿಕೆ -ಊಟದ ನಡುವೆ ಅತಿಯಾದ ನೀರಿನ ಸೇವನೆ ಒಳ್ಳೆಯದಲ್ಲ. ಊಟದ ಮಧ್ಯ ಹೆಚ್ಚು ನೀರು ಸೇವಿಸುವುದು ಜೀರ್ಣಕ್ರಿಯೆಗೆ ತೊಂದರೆ ಮಾಡುತ್ತದೆ. ಊಟದ ಒಂದು ಗಂಟೆಯ ನಂತರ ಹಾಗೂ ಮೊದಲು ಯಥೇಚ್ಛವಾಗಿ ನೀರು ಸೇವಿಸಬಹುದು.

2- ದಿನಕ್ಕೆ ಕೇವಲ ಮೂರು ಬಾರಿ ಮಾತ್ರ ಆಹಾರ ಸೇವಿಸಿ : ಪಂಚತಂತ್ರದಲ್ಲಿ ಕೇವಲ ಎರಡು ಬಾರಿ ಮಾತ್ರ ಆಹಾರ ಸೇವಿಸಿ ಎಂದಿದ್ದಾರೆ. ಅದನ್ನೇ ಪ್ರಕೃತಿ ಚಿಕಿತ್ಸೆಗಳಲ್ಲಿ ಪಾಲಿಸುತ್ತಾರೆ. ದಿನನಿತ್ಯದ ಜೀವನದಲ್ಲಿ ಎರಡು ಬಾರಿ ಕಷ್ಟಸಾಧ್ಯವಾದ ಕಾರಣ ಮೂರು ಬಾರಿ ಮಾತ್ರ ಆಹಾರ ಸೇವಿಸಿದರೆ ಸಾಕು. ನಮ್ಮಲ್ಲಿ ಅನೇಕರು 5-6 ಬಾರಿ ಆಹಾರ ಸೇವಿಸುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಬೆಡ್ ಕಾಫಿ, ನಂತರ ತಿಂಡಿ, 1ಂ:30ಕ್ಕೆ ಲಘು ಆಹಾರ ಹಾಗೂ 1-30ಕ್ಕೆ ಊಟ, 2-30 ಟೀ, 5-3ಂಕ್ಕೆ ತಿಂಡಿ ಹಾಗೂ ಕಾಫಿ, ರಾತ್ರಿ 1ಂ:30ಕ್ಕೆ ಭರ್ಜರಿ ಭೋಜನ ಹಾಗೂ ನಿದ್ರೆ.

ಆದರೆ ನಾವೆಂದೂ ನಾವೆಷ್ಟು ಬಾರಿ ಮಲವಿಸರ್ಜನೆ ಮಾಡುತ್ತೇವೆಂದು ಯೋಚಿಸುವುದಿಲ್ಲ. ಕೆಲವರು ಕಷ್ಟಪಟ್ಟು ದಿನಕ್ಕೆ ಒಂದು ಬಾರಿ ಮಲವಿಸರ್ಜಿಸುತ್ತಾರೆ. ಇನ್ನೂ ಕೆಲವರು ಅದೂ ಇಲ್ಲ. ಹೀಗಾದಲ್ಲಿ ನಮ್ಮ ದೇಹದಲ್ಲಿ ಅಜೀರ್ಣವಾದ, ತ್ಯಾಜ್ಯ ವಸ್ತುಗಳ ಶೇಖರಣೆ ಎಷ್ಟಾಗುತ್ತದೆ ಎಂಬುದನ್ನು ಯೋಚಿಸಿ ನೋಡಿ. ನಮಗೆ ಜೀರ್ಣ ಸರಿಯಾಗಿ ಆಗಬೇಕಾದಲ್ಲಿ ನಾವು ದಿನಕ್ಕೆ ಕೇವಲ ಮೂರು ಬಾರಿ ಮಾತ್ರ ಆಹಾರ ಸೇವಿಸಬೇಕು. ಮಧ್ಯದಲ್ಲಿ ರಸಾಹಾರ (ಜ್ಯೂಸ್), ಕಷಾಯ ಅಥವಾ ಹಣ್ಣುಗಳನ್ನು ಸೇವಿಸಬಹುದು.

3- ಪ್ರತಿನಿತ್ಯ ಕನಿಷ್ಟ ಎರಡು ಬಾರಿ ಪ್ರಾರ್ಥಿಸಿ: ನಾವು ಅನೇಕರು ಪ್ರತಿನಿತ್ಯ ಪೂಜೆ ಮಾಡುತ್ತೇವೆ. ಪೂಜೆ ಮಾಡುವಾಗ ಮಾತನಾಡುತ್ತ, ಏನೆಲ್ಲಾ ಯೋಚಿಸುತ್ತಾ ಪೂಜೆ ಮಾಡಬೇಕಲ್ಲ ಎನ್ನುವ ದೃಷ್ಠಿಯಿಂದ ಮಾಡುತ್ತಿರುತ್ತೇವೆ. ಅದರ ಬದಲಿಗೆ ಭಕ್ತಿಯಿಂದ, ಶ್ರದ್ಧೆಯಿಂದ 15 ನಿಮಿಷಗಳ ಕಾಲ ಪೂಜೆ ಮಾಡಿದರೆ ನಮ್ಮ ಮನಸ್ಸಿಗೆ ಶಾಂತತೆ ದೊರೆತು ಉದ್ವೇಗ, ಒತ್ತಡ ಶಮನವಾಗುತ್ತದೆ.

ಬೆಳಿಗ್ಗೆ ಎದ್ದ ಕೂಡಲೇ ಆ ಭಗವಂತನಲ್ಲಿ ಈ ರಾತ್ರಿ ನಿನ್ನ ದಯೆಯಿಂದ ಒಳ್ಳೆಯ ನಿದ್ರೆ ಬರುವಂತೆ ಮಾಡಿದೆ. ನಿನಗೆ ನಮಸ್ಕಾರ. ದೈನಂದಿನ ಜೀವನಕ್ಕೆ ನಾನು ಪ್ರವೇಶಿಸುತ್ತಿದ್ದೇನೆ. ನನ್ನ ಕೆಲಸ ಕಾರ್ಯಗಳನ್ನು ಹೆಚ್ಚಿನ ಕಾರ್ಯಕ್ಷಮತೆಯಿಂದ ಮಾಡುವ ಶಕ್ತಿಯನ್ನು ಕೊಡು ಎಂದು ಭಗವಂತನ ನಾಮಾವಳಿಯನ್ನು ಜಪಿಸಿ ಅಥವಾ ಇನ್ನಾವುದೋ ವಿಧದಿಂದ ಪ್ರಾರ್ಥಸಿದಲ್ಲಿ ಜೀವನದಲ್ಲಿ ಅನೇಕ ಬದಲಾವಣೆಗಳು ಸಾಧ್ಯ.

4- ವಾರಕ್ಕೆ ಒಂದು ದಿನ ಉಪವಾಸ ಮಾಡಿ: ಅನೇಕರು ಉಪವಾಸವನ್ನು ವಾರದಲ್ಲಿ 2-3 ದಿನ ಮಾಡುತ್ತಾರೆ. ಅವರ ಉಪವಾಸವೆಂದರೆ- ಅಕ್ಕಿಯಿಂದ ಮಾಡಿದ ಪದಾರ್ಥ (ಅನ್ನ, ದೋಸೆ, ಮುಂತಾದವು) ಬಿಟ್ಟು ಉಳಿದುದನ್ನೆಲ್ಲ ತಿಂದು ಮೇಲಿಂದ ಹಣ್ಣುಗಳನ್ನು ಸೇವಿಸುವುದು. ಆರೋಗ್ಯದ ದೃಷ್ಟಿಯಿಂದ ನಾವು ಉಪವಾಸವನ್ನು ಮಾಡಿದಾಗ ನಮ್ಮ ಜೀರ್ಣಾಂಗವ್ಯೂಹಕ್ಕೆ ವಾರಕ್ಕೆ ಒಂದು ದಿನ ವಿಶ್ರಾಂತಿ ಸಿಕ್ಕಿ ತ್ಯಾಜ್ಯ ವಸ್ತುಗಳನ್ನು ವಿಸರ್ಜನಾಂಗಗಳ ಮೂಲಕ ಹೊರ ಹಾಕಲು ಪ್ರಚೋದನೆ ಸಿಗುತ್ತದೆ. ಪ್ರಕೃತಿ ಚಿಕಿತ್ಸಾಲಯಗಳಲ್ಲಿ ಉಪವಾಸವನ್ನು ಕೇವಲ ದ್ರವಾಹಾರ ಮಾತ್ರ ನೀಡುವುದರೊಂದಿಗೆ ಮಾಡಿಸುತ್ತಾರೆ.

ದೈನಂದಿನ ಜೀವನದಲ್ಲಿ ಅದು ಕಷ್ಟವಾಗಬಹುದ್ದಾದರಿಂದ ಹಣ್ಣುಗಳನ್ನು ಜ್ಯೂಸ್‍ನ್ನು, ಹಸಿ ತರಕಾರಿಯನ್ನು ಸೇವಿಸಿ ಉಪವಾಸ ಮಾಡಬಹುದು. ಆಗ ಜೀರ್ಣ ಕ್ರಿಯೆ ಸುಲಭವಾಗಿ ನಡೆದು ಮರುದಿನ ಮಲವಿಸರ್ಜನೆ ಸರಿಯಾಗಿ ನಡೆಯುತ್ತದೆ. ಜೊತೆಗೆ ಹಣ್ಣು ತರಕಾರಿಗಳಲ್ಲಿನ ಪೋಷಕಾಂಶಗಳು ನಮಗೆ ದೊರೆತಂತಾಗುತ್ತದೆ. ಉಪವಾಸ ಮಾಡಿದಾಗ ಜೀರ್ಣಾಂಗವ್ಯೂಹಕ್ಕೆ ರಕ್ತ ಸಂಚಾರ ಕಡಿಮೆಯಾಗಿ ದೇಹದ ಉಳಿದ ಭಾಗಕ್ಕೆ ರಕ್ತ ಸಂಚಾರ ಅಧಿಕವಾಗಿ ಅಲ್ಲಿಯ ತೊಂದರೆ ನಿವಾರಣೆಯಾಗಲು ಸಹಾಯವಾಗುತ್ತದೆ. ನಿಮಗಿಷ್ಟವಾದ ಯಾವುದಾದರೊಂದು ದಿನ ಉಪವಾಸದ ಅಭ್ಯಾಸ ಮಾಡಿ, ಆರೋಗ್ಯ ವರ್ಧಿಸಿಕೊಳ್ಳಿ.

5- ಪ್ರತಿನಿತ್ಯ ಒಂದು ಗಂಟೆಯ ವ್ಯಾಯಾಮ (ಯೋಗ ಅತ್ಯಂತ ಒಳ್ಳೆಯದು): ನಮ್ಮಲ್ಲಿ ಅನೇಕರು ಒಂದು ಗಂಟೆ ಯೋಗ ಮಾಡಬೇಕಾ? ನಾನು ತುಂಬಾ ಬ್ಯೂಜಿ. ಟೈಂ ಇಲ್ಲ ಎನ್ನುವ ಸಿದ್ಧ ಉತ್ತರ ನೀಡುವವರಿದ್ದಾರೆ. ಶರೀರ ಮಾಧ್ಯಮಮ್ ಖಲು ಧರ್ಮ ಸಾಧನಮ್ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ನಮ್ಮ ಶರೀರ ರೋಗದಿಂದ ಕೂಡಿದ್ದರೆ ಯಾವುದೇ ಸುಖವನ್ನು ಅನುಭವಿಸಲು ಸಾಧ್ಯವಿಲ್ಲ. ಎಷ್ಟೇ ಹಣ ಇದ್ದರೂ ಆರೋಗ್ಯ, ಮನ:ಶಾಂತಿ ಇಲ್ಲದಿದ್ದರೆ ಅದು ನಿಷ್ಪ್ರಯೋಜಕ. ಇಷ್ಟೊಂದು ಪ್ರಮುಖವಾದ ನಮ್ಮ ಆರೋಗ್ಯಕ್ಕಾಗಿ ದಿನದ ಕೇವಲ ಒಂದು ಗಂಟೆಯನ್ನು ಮೀಸಲಿಡುವುದರಲ್ಲಿ ತಪ್ಪಿಲ್ಲ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!