ಆಹಾರ ಪದ್ಧತಿ ಮತ್ತು ಆರೋಗ್ಯ

 ಇಂದಿನ ಆಧುನಿಕಯುಗದಲ್ಲಿ ಮಾನವನು ಆಹಾರ ಕಡೆ ತುಂಬಾ ನಿರ್ಲಕ್ಷ್ಯ ವಹಿಸುತ್ತಿದ್ದಾನೆ ಎಂಬುದರಲ್ಲಿ ಎರಡು ಮಾತಿಲ್ಲ. ಇತ್ತಿಚೆಗಂತೂ ಮಾರುಕಟ್ಟೆಯಲ್ಲಿ ಸಿದ್ಧಪಡಿಸಲಾದ ಆಹಾರಗಳು ಲಭ್ಯ.ಇಂತಹ ಆಹಾರಗಳನ್ನು ಕೊಂಡುತಂದುರೆಫ್ರಿಜರೇಟರ್ (ತಂಗಳ ಪೆಟ್ಟಿಗೆ)ಯಲ್ಲಿ ಇಟ್ಟು ಇಡೀ ವಾರ ಅವುಗಳನ್ನೇ ಬಳಸುವುದು ರೂಢಿಗೆ ಬಂದಿದೆ. ಮೊದಲು ವಿದೇಶಿಗರು ಹೀಗೆ ಮಾಡುತ್ತಾರೆಂದು ಆಡಿಕೊಳ್ಳುತಿದ್ದ ನಾವು ಕೂಡಾ ಇಂದು ಇದನ್ನೇ ಅನುಕರಿಸುತ್ತದ್ದೇವೆ. ಹಳ್ಳಿಗಳಲ್ಲಿ ಅಲ್ಲವಾದರೂ ನಗರ ಪ್ರದೇಶಗಳ ಬಹುಪಾಲು ಜನ ಸಿದ್ಧಾಹಾರ ಸೇವೆನೆಗೆ ಬೆನ್ನು ಬಿದ್ದಿದ್ದಾರೆ.
ನಮ್ಮ ಪ್ರಾಚೀನ ಆಹಾರ ಪದ್ಧತಿಯೇ ಔಷಧಿಯಾಗಿತ್ತು. ಆದರೆ ಇಂದು ಔಷಧಿಗಳೆ ಆಹಾರವಾಗಿವೆ. ಯಾವಗಲೂ ಆಹಾರವನ್ನು ನೆಲದ ಮೇಲೆ ಕುಳಿತುಕೊಂಡು ಸಮಾಧಾನದಿಂದ ಸೇವಿಸಬೇಕು ಮತ್ತು ತಿರುಗಾಡಿ ಅಥವಾ ಓಡಾಡಿ ಮೈಮುರಿದು ಶ್ರಮವಹಿಸಿ ಕಾಯಕವನ್ನು ಮಾಡಬೇಕು. ಆದರೆ, ಇಂದು ಹೀಗಾಗದೆ ತಿರುಗಾಡುತ್ತಾ, ಓಡಾಡುತ್ತಾ ಆಹಾರವನ್ನು ಸೇವಿಸಿ ಕುಳಿತುಕೊಂಡು ಕೆಲಸವನ್ನು ಮಾಡುತ್ತದ್ದೇವೆ. ಅಲ್ಲದೇ ಮೊಬೈಲಗಳನ್ನು ಬಳಸುತ್ತಾ, ಟಿ.ವಿ.ಯನ್ನು ನೋಡುತ್ತಾ, ಅತಿಯಾಗಿ ಮಾತನಾಡುತ್ತಾ, ದುಖಃದಲ್ಲೋ ಅಥವಾ ಸಂತೋಷದಲ್ಲೊ ರಸವನ್ನು ಮತ್ತು ಕಸವನ್ನು ನಮಗೆ ಅರಿವಿಲ್ಲದೆ ತಿನ್ನುತ್ತಿದ್ದೇವೆ. ಇದು ಕಾಯಿಲೆಗಳಿಗೆ ಮೂಲ ಕಾರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ತಂದೆ-ತಾಯಿಗಳಾದ ನಾವು ನಮ್ಮ ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭೌದ್ಧಿಕವಾಗಿಯೂ ಸದೃಢರಾಗಬೇಕು, ಅಭ್ಯಾಸದಲ್ಲಿ ಮುಂಚೂಣಿಯಲ್ಲಿರಬೇಕು, ನೆನಪಿನ ಶಕ್ತಿ, ಬುದ್ಧಿ ಚುರುಕು ಇತ್ಯಾದಿಗಳ ಬಗ್ಗೆ ಕನಸು ಕಾಣುವ ನಾವು ನಮಗೆ ಅರಿವಿಲ್ಲದಂತೆ ಅವರನ್ನು ಅನಾರೋಗ್ಯದ ಗೂಡಾಗಿಸುವ ಮತ್ತು ಸಾವಿನೆಡೆಗೆ ಕೊಂಡ್ಯೊಯುವ ಆಹಾರ ಪದಾರ್ಥಗಳನ್ನು ದಿನದ ಬೆಳಿಗ್ಗೆಯಿಂದಲೇ ಕೊಡಲು ಪ್ರಾರಂಭಿಸುತ್ತಿದ್ದೇವೆ. ಅದು ನಮ್ಮ ಅರಿವಿಲ್ಲದೆಯೋ ಅಥವಾ ನಮ್ಮ ಆಲ್ಯಸವೋ ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ.

ಆಹಾರದ ಸಾಲಿಗೆ ಸೇರದ, ಆದರೂ ಹಲವರು ಮಕ್ಕಳು ಮತ್ತು ಹಿರಿಯರು ಸೇವಿಸುತ್ತಿರುವ ಕೆಲವು ಪದಾರ್ಥಗಳಿವೆ, ಅವುಗಳಿಂದ ಆದಷ್ಟುದೂರವಿರುವುದು ಮತ್ತು ಮಕ್ಕಳಿಗೆ ತಿನ್ನಲು ಕೊಡದಿರುವುದೇ ಸೂಕ್ತ. ಅವು ಹೀಗಿವೆ:
ಕಾಫಿ, ಚಹಾ (ಟೀ), ಬೆಳಿಗ್ಗೆ ಹಾಲಿನ ಜೊತೆ ಸೇರಿಸಿ ಕೂಡಿಸುವ ಅನೈಸರ್ಗಿಕ ಪಾನಿಯಗಳು, ನೈಸರ್ಗಿಕವಲ್ಲದ ತಂಪು ಪಾನಿಯಗಳು (ಕೂಲ್‍ಡ್ರಿಂಕ್ಸ್), ಫಿಜಾ, ನೂಡಲ್ಸ್, ಐಸಕ್ರೀಮ್, ಮೈದಾದಿಂದ ತಯ್ಯಾರಾದ ಬ್ರೇಡ್ಡು ಹಾಗೂ ಬಿಸ್ಕತ್ತು, ಜಾಮ್, ಚಾಕಲೇಟು, ಚಿಪ್ಸ್, ಜಂಕ್‍ದಿಂದ ಕೂಡಿದ ಪದಾರ್ಥ, ಪಾಸ್ಟ್ ಫುಡ್ ಇತ್ಯಾದಿಗಳು. ಅಲ್ಲದೆ ತಂಬಾಕು, ಬೀಡಿ, ಸಿಗರೇಟು, ಮದ್ಯಪಾನ, ಗಂಜಾ, ಮುಂತಾದವುಗಳು ಉತ್ತೇಜಕಗಳಾಗಿ ಈ ಪದಾರ್ಥಗಳು ಕೆಲಸ ಮಾಡುತ್ತವೆಯಾದರೂ ಆಹಾರ ಎಂದು ಕರೆಸಿಕೊಳ್ಳುವ ಯೋಗ್ಯತೆ ಇವಕ್ಕಿಲ್ಲ.
ದೇಹಕ್ಕಾಗಲಿ, ಮನಸ್ಸಿಗಾಗಲಿ ದಣಿವಾದಾಗ ಅವುಗಳಿಗೆ ವಿಶ್ರಾಂತಿ ಅವಶ್ಯಕ. ನಾವು ದಣಿದದೇಹಕ್ಕೆ ವಿಶ್ರಾಂತಿ ಕೊಡುವ ಬದಲು ನಮ್ಮ ದುರಾಸೆಯ ಫಲಕ್ಕಾಗಿ ಉತ್ತೇಜಕಗಳನ್ನು ಸೇವಿಸುವ ಮೂಲಕ ಇನ್ನೂ ಹೆಚ್ಚು ಕೆಲಸ ಪ್ರಾಂಭಿಸುತ್ತೇವೆ. ಇದರಿಂದ ವಿಶ್ರಾಂತಿ ಬದಲು ದೇಹಕ್ಕೆ ಇನ್ನಷ್ಟು ಪರಿಶ್ರಮ ಹೇರಿದಂತಾಗುತ್ತದೆ. ಉತ್ತೇಜಕಗಳು ಸತತಅಭ್ಯಾಸ ವ್ಯಸನವಾಗಿ ಪರಿವರ್ತನೆ ಆಗುತ್ತದೆ. ವ್ಯಸಕದ ಮಟ್ಟಕ್ಕೆ ಏರಿದಾಗ ನಾವು ಅವುಗಳ ದಾಸರಾಗಿ ಬಿಡುತ್ತೇವೆ. ಇದು ಅನೈಸರ್ಗಿಕವಾಗಿ ದೇಹ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಲ್ಪಡುತ್ತದೆ. ಹೀಗೆ ಮುಂದುವರೆಯುತ್ತಾ ಹೋದಂತೆ ದೇಹ ಮತ್ತು ಮನಸ್ಸು ಕಾಯಿಲೆಗಳ ಗೂಡಾಗುತ್ತದೆ.
ವ್ಯಕ್ತಿತ್ವವನ್ನೂ ರೂಪಿಸುವಲ್ಲಿ ಆಹಾರದ ಪಾತ್ರ ಬಹು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಆಹಾರದಲ್ಲಿ ಕೆಲವು ವೈವಿದ್ಯಗಳನ್ನಾಗಿ ಈ ಕೆಳಗಿನಂತೆ ವಿಂಗಡಣೆ ಮಾಡಲಾಗಿದೆ.

  • ಸಾತ್ತ್ವಿಕ (ಸತ್ವ)
  • ರಾಜಸಿಕ (ರಜಸ)
  • ತಾಮಸಿಕ (ತಮಸ)
ಸಾತ್ತ್ವಿಕ (ಸತ್ವ) ಆಹಾರ:
  • ಆಯುಸ್ಸತ್ವ ಬಲಾರೋಗ್ಯ ಸುಖಪ್ರೀತಿ ವಿವರ್ಧನಾಃ
  • ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾಆಹಾರಾಃ ಸಾತ್ತ್ವಿಕ ಪ್ರಿಯಾಃ
  • ಆಯಸ್ಸು, ಆರೋಗ್ಯ, ಸತ್ವ, ಬಲ, ಪ್ರೀತಿ ಮತ್ತು ಸುಖವನ್ನು ವರ್ಧಿಸುವ ರಸಯುಕ್ತವೂ, ಹೃದಯಕ್ಕೆ ಮುದ ನೀಡುವಆಹಾರವು ಸಾತ್ತ್ವಿಕ ಗುಣವುಳ್ಳ ವ್ಯಕ್ತಿಗೆ ಪ್ರಿಯವಾದುದು ಎನ್ನಲಾಗಿದೆ.
ರಾಜಸಿಕ (ರಜಸ) ಆಹಾರ:
  • ಕಟ್ಟಮಲ್ಲವಣಾತ್ಯುಷ್ಣತೀಕ್ಷ್ಣರೂಕ್ಷವಿದಾಹಿನಃ
  • ಆಹಾರಾರಾಜಸಸ್ಯೇಷ್ಟಾದುಃಖಶೋಕಾಮಯಪ್ರದಾಃ
  • ಅತಿಯಾದ ಕಹಿ, ಹುಳಿ, ಉಪ್ಪು, ಬಿಸಿ, ತೀಕ್ಷ್ಣತೆ ಮತ್ತು ಒಣ ಕಾಲು ಆಹಾರವು ರಾಜಸಗುಣದ ವ್ಯಕ್ತಿಗೆ ಪ್ರಿಯವಾದುದು. ಇಂಥ ಆಹಾರ ದುಃಖ, ಕ್ಲೇಶ ಮತ್ತು ರೋಗಗಳನ್ನು ಹುಟ್ಟಿಸುತ್ತದೆ.
ತಾಮಸಿಕ (ತಮಸ) ಆಹಾರ:

ಯಾತಯಾಮಂಗತರಸಂ ಪೂತಿ ಪರ್ಯುಷಿತಂ ಚ ಯತ್
ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂತಾಮಸ ಪ್ರಿಯಮ್
ತಿನ್ನುವುದಕ್ಕೆ ಮೂರು ಗಂಟೆಗಳಿಗೂ ಮೋದಲೇ ಸಿದ್ಧವಾದ, ರುಚಿ ಇಲ್ಲದ, ದುರ್ವಾಸನೆಯ, ಹಳಸಿದ, ಬೇರೆಯವರು ಉಂಡುಳಿಸಿದ ಮತ್ತು ಮುಟ್ಟಲೂ ಯೋಗ್ಯವಲ್ಲದ ಆಹಾರವು ತಾಮಸಗುಣ ಉಳ್ಳವನಿಗೆ ಪ್ರಿಯವಾದುದು. ಈ ಬಗೆಯ ಆಹಾರ ಸೇವನೆ ಜಡತ್ವವನ್ನು ಹೆಚ್ಚಿಸುತ್ತದೆ.
ಆಹಾರದ ವಿಚಾರದಲ್ಲಿ 12ನೆ ಶತಮಾನದ ವಚನಕಾರ್ತಿಯಾದ ಶರಣೆ ಅಕ್ಕಮಹಾದೇವಿ ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ.
“ಆಹಾರವಕಿರುದು ಮಾಡಿರಯ್ಯ
ಆಹಾರದಿಂ ವ್ಯಾಧಿ ಹಬ್ಬಿ ಬಲಿಯುವದಯ್ಯ
ಆಹಾರದಿಂ ನಿದ್ರೆ, ತಾಮಸ, ಮೈಮರೆವು
ತಾಮಸದಿಂ, ಅಜ್ಞಾನ ಹೆಚ್ಚಿಕಾಯವಿಕಾರ
ಮನೋವಿಕಾರ, ಭಾವವಿಕಾರ, ಇಂದ್ರಿಯ ವಿಕಾರ
ವಾಯುವಿಕಾರ, ಇಂಥ ಪಂಚ ವಿಕಾರಗಳನ್ನುಂಟು ಮಾಡಿ
ಸೃಷ್ಠಿಗೆ ತಮದಾದಕಾರಣಕಾಯದಅತಿ ಪೋಷಣೆ
ಮೃತ್ಯುವಾದುದು
ಜಪ, ತಪ, ಧ್ಯಾನ, ಧಾರಣ, ಪೂಜೆಗೆ ಸೂಕ್ಷ್ಮದಿಂದ
ತನು ಮಾತ್ರವಿದ್ದರೆ ಸಾಲದೆ? ತನುವ ಪೋಸಿಸುವ
ಆಸೆ ಅತೀತ್ವಕ್ಕೆ ವಿಘ್ನವೆಂಬುದು
ತನು ಪೋಷಣೆಯಿಂದ
ತಾಮಸ ಹೆಚ್ಚಿಅಜ್ಞಾನದಿಂದ ವಿರಕ್ತಿ ಹಾನಿ
ಅರಿವು ನಷ್ಟಪರವುದೂರ, ನೀರಕೆ
ನಿಲುವಿಲ್ಲದಕಾರಣಚೆನ್ನಮಲ್ಲಿಕಾರ್ಜುನನ
ಒಲಿಸ ಬಂದಕಾಯವಕೆಡಿಸದೆ ಉಳಿಸಿಕೊಳ್ಳಿರಯ್ಯ.”
ವಚನದಲ್ಲಿ ಅವರು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಎಚ್ಚರಿಸಿದ್ದಾರೆ. ಮಿತಿ ಮೀರಿತಿನ್ನುವುದು ತರವಲ್ಲ. ಈ ರೀತಿ ತಿನ್ನುವ ಹವ್ಯಾಸ ಶರೀರಕ್ಕೆ ಅಪಾಯತಂದೊಡ್ಡುವುದು.ಅತಿ ಆಹಾರದಿಂದ ನಿದ್ರೆ ಹೆಚ್ಚಾಗುವುದು, ಇದರಿಂದ ತಾಮಸ ಪ್ರವೃತ್ತಿ ವರ್ತಿಸುವುದು, ಅದರಿಂದ ಮನಸ್ಸು ವಿಕಾರಕ್ಕೆ ತಿರುಗುವವುದು, ಮೈಮರೆವು ಮತ್ತು ದೇಹದಲ್ಲಿ ಕಾಯಿಲೆಗಳು ಮನೆ ಮಾಡುವವು ಎಂದಿದ್ದಾರೆ. ಮನೋವಿಕಾರದಿಂದ ಮನೋಒತ್ತಡ ಹೆಚ್ಚಾಗುವುದು, ಸಂಧಿವಾತ, ರಕ್ತದೊತ್ತಡ, ಬೊಜ್ಜು ಶೇಖರಣೆಯಾಗುವುದು. ಹಿಗೆ ನಾನಾ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ ಆದ್ದರಿಂದ ಆಹಾರ ಅತಿಯಾಗದೆ ಮೀತಿಯರಲ್ಲಿ ಎಂದಿದ್ದಾರೆ.
ನಾವು ಸೇವಿಸುವ ಆಹಾರವು ಸಾಮಾನ್ಯವಾಗಿ ಈ ಕೆಳಗಿನಂತೆ ವರ್ಗೀಕರಣ ಮಾಡಲಾಗಿದೆ.

  • ಸ್ಥೂಲಾಂಶ
  • ಮಧ್ಯಮಾಂಶ
  • ಸೂಕ್ಷ್ಮಾಂಶ

ಸ್ಥೂಲಾಂಶ: ಆಹಾರದ ಸ್ಥೂಲಾಂಶವು ಮಲದ ಮೂಲಕ ಹೊತಕ್ಕೆ ಹೋಗುತ್ತದೆ.
ಮಧ್ಯಮಾಂಶ: ಆಹಾರದ ಮಧ್ಯಮಾಂಶವು ರಕ್ತ-ಮೌಂಸಗಳ ಕಣ-ಕಣಗಳಲ್ಲಿ ಸೇರಿ ಶಾರೀರಿಕ ಕ್ರಿಯಾಶೀಲತೆಗೆ ನೆರವಾಗುತ್ತದೆ.
ಸೂಕ್ಷ್ಮಾಂಶ: ಆಹಾರದ ಸೂಕ್ಷ್ಮಾಂಶವು ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ.
ಆದ್ದರಿಂದ ನಾವು ಸೇವಿಸುವ ಆಹಾರವು ಶುದ್ಧವಾಗಿಯೂ, ಸತ್ವಯುತವಾಗಿಯೂ ಇರಬೇಕಾದ್ದು ಅಗತ್ಯ. ಆಹಾರ ಪದಾರ್ಥಗಳಲ್ಲಿ ಇವೆರಡೂ ಇರುವುದರಿಂದ ನಾವು ಸೇವಿಸುವ ಆಹಾರ ತಾಜಾ ಮತ್ತು ಶುದ್ಧ ಆಗಿರುವುದು ಉತ್ತಮ.

ಸಸ್ಯಹಾರ ಮತ್ತು ಮಂಸಾಹಾರ:

ಮನುಷ್ಯನ ದೇಹದ ರಚನೆಯನ್ನು ನೋಡಿದರೆ ಅವನಿಗೆ ಸಸ್ಯಹಾರವೇ ಸೂಕ್ತವಾದ ಆಹಾರವಾಗಿದೆ. ಹಲವಾರು ಸಂಶೋಧನೆಗಳ ಪ್ರಕಾರ ಸಸ್ಯಹಾರವೇ ಶ್ರೇಷ್ಠ ಆಹಾರ ಎಂದು ದೃಢಪಟ್ಟಿದೆ. ಒಂದು ದೀರ್ಘಕಾಲದ ಸಂಶೋಧನೆಯಿಂದ ಸಸ್ಯಾಹಾರಿಗಳಿಗೆ ಹೋಲಿಸಿದಾಗ ಮಾಂಸಾಹಾರಿಗಳಲ್ಲಿ ರಕ್ತದೊತ್ತಡ, ಹೃದಯದ ತೊಂದರೆ, ಮಧುಮೇಹ ಇತ್ಯಾದಿ ರೋಗಗಳು ಹೆಚ್ಚಾಗಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸಸ್ಯಾಹಾರಿಗಳಲ್ಲಿ ನಮಗೆ ನೇರವಾಗಿ ಶಕ್ತಿಯು ಲಭಿಸುತ್ತದೆ. ಮತ್ತು ಸಸ್ಯಾಹಾರದ ಸೇವನೆಯಿಂದ ಜೀರ್ಣಕ್ರಿಯೆಗೆ ತಗಲುವ ಸಮಯ ಮತ್ತು ಶ್ರಮ ಬಹಳಷ್ಟು ಕಡಿಮೆಯಾಗುವುದಲ್ಲದೆ ಸಸ್ಯಾಹಾರದಲ್ಲಿನ ವಿಶೇಷ ಔಷಧೀಯ ಗುಣಗಳು ಕಾಯಿಲೆಯನ್ನು ಶೀಘ್ರ ವಾಸಿಮಾಡಬಲ್ಲದು. ಅಲ್ಲದೇ ರೋಗಿಗಳು ಮಾಂಸಾಹಾರವನ್ನು ತ್ಯಜಿಸುವುದರಿಂದ ಬಹಳ ಬೇಗ ಕಾಯಿಲೆ ಉಪಶಮನವಾಗುವುದು.
ನೈತಿಕದೃಷ್ಟಿಯಿಂದ ನೋಡಿದರೂ ಮಾಂಸಾಹಾರವು ಯೋಗ್ಯವಲ್ಲ. ನಮ್ಮ ನಾಲಗೆಯ ಚಪಲಕ್ಕಾಗಿ ಪ್ರಾಣಿಯ ಜೀವ ಹಾನಿಗೆ ನಾವು ಕಾರಣರಾಗುತ್ತೇವೆ. ಮನಃಶಾಂತಿಯನ್ನು, ಆರೋಗ್ಯವನ್ನು ಬಯಸುವವರು ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದು ಒಳ್ಳೆಯದು. ವ್ಯಕ್ತಿಯ ಗುಣಾವಾಗುಣಗಳಿಗೆ ಸೇವಿಸುವ ಆಹಾರವೂ ಕಾರಣವೆಂದು ನಂಬಲಾಗಿದೆ. ‘ತಿನ್ನುವುದು ಏನೆಂದು ನೀನು ಹೇಳು, ಎಂಥವನು ನೀನೆಂದು ನಾ ಹೇಳುವೆ’ ಎನ್ನುವ ನಾಣ್ನುಡಿ ನಮ್ಮ ನಂಬಿಕೆಯನ್ನು ದೃಢಪಡಿಸುತ್ತದೆ.

“ಒಮ್ಮೆಯುಂಡವ ತ್ಯಾಗಿ
ಇಮ್ಮೆಯುಂಡವ ಭೋಗಿ
ಬಿಮ್ಮಗುಂಡವ ನೆರೆ ರೋಗಿಯೋಗಿತಾ
ಸುಮ್ಮಗಿರುತಿಹನು ಸರ್ವಜ್ಞ”
ಹೊಟ್ಟೆ ಹಸಿದಾಗ ಮಾತ್ರ ಸೇವಿಸಬೇಕು, ಸೇವಿಸುವಾಗಿ ಸಮಾಧಾನದಿಂದಿರಬೇಕು. ಆಹಾರ ಸೇವಿಸುವಾಗ ಸೇವಿಸುವ ಆಹಾರದ ಕಡೆಗೆ ಗಮನವಿರಬೇಕು. ಬೇಕಾದ್ದನ್ನು ಮಾತ್ರ ತಿನ್ನಬೇಕು, ಬೇಡವಾದುದನ್ನು ತ್ಯಜಿಸಬೇಕು ಮತ್ತು ಆಹಾರವನ್ನು ಸೇವಿಸುವಾಗ ಮನಸ್ಸು ಶಾಂತವಾಗಿರಬೇಕು.

ಉಪವಾಸ:

ಸಾಮಾನ್ಯವಾಗಿ ನಾವು ವಾರದ ಏಳು ದಿನಗಳು ಹೊಟ್ಟೆ ತುಂಬಾ ತಿನ್ನುತಲ್ಲಿರುತ್ತೇವೆ. ಆದರೆ ವಾರದಲ್ಲಿ ಒಂದು ಅಥವಾ ತಿಂಗಳಿಗೆ ಒಂದೆರಡು ಬಾರಿಯಾದರೂ ಉಪವಾಸ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಇದರಿಂದ ಜೀರ್ಣಾಂಗಗಳಿಗೂ, ಶರೀರಕ್ಕೂ ವಿಶ್ರಾಂತಿ ದೊರಕುತ್ತದೆ. ಸಂಚಿತ ಮಲ ಹೊರದೂಡಲ್ಪಡುತ್ತದೆ, ಬೊಜ್ಜು ಕರಗುವಿಕೆಗೆ, ಮನಃ ಶಾಂತಿಗೆ, ಇಂದ್ರಿಯಗಳ ಮೇಲಿನ ಹತೋಟಿಗೆ ಇದು ನೆರವಾಗಬಲ್ಲದು. ಮತ್ತು ಉಪವಾಸದ ದಿನ ಅತ್ಯಂತ ಶ್ರಮದ ಕೆಲಸಗಳಿಂದ ದೂರವಿರುವುದು ಸೂಕ್ತ. ನೀರು ಅಥವಾ ಹಣ್ಣಿನ ರಸವನ್ನು ಸೇವಿಸಬಹುದು. ನೆನಪಿರಲಿ ಕೆಲವು ಜನ ದೇವರ ಹೆಸರಿನಲ್ಲಿ ವಾರದಲ್ಲಿ ಎರಡು ಅಥವಾ ಮೂರು ದಿನಗಳಿಗೂ ಹೆಚ್ಚು ಕಾಲ ಉಪವಾಸ ಮಾಡುವವರು ಇದ್ದಾರೆ.ಆದರೆ ಇದು ಆರೋಗ್ಯದ ವಿಷಯದಲ್ಲಿ ಒಳ್ಳೆಯದಲ್ಲ. ವಾರದಲ್ಲಿ ಒಂದು ಉಪವಾಸ ಸಾಕು.

ನಾಗರಾಜ್ ಆರ್. ಸಾಲೋಳ್ಳಿ - ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ (ರಿ.)

ನಾಗರಾಜ್ ಆರ್. ಸಾಲೋಳ್ಳಿ
ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ (ರಿ.)
#57, ಗುರುಕುಲ ಶಾಲೆ ಸಮೀಪ, ಓಂ ನಗರ,
ಸೇಡಂ ರಸ್ತೆ, ಕಲಬುರಗಿ-585 105
ದೂ. : 9972776062
ಇಮೇಲ್ : bhoomiyogafoundation2016@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!