ಡಾ. ಎ.ವಿ. ರವಿ ಕರ್ನಾಟಕ ಜಿಮ್ ಮತ್ತು ಫಿಟ್‌ನೆಸ್ ಮಾಲೀಕರ ಸಂಘದ ಅಧ್ಯಕ್ಷರಾಗಿ ನೇಮಕ

ಡಾ. ಎ.ವಿ. ರವಿ ಕರ್ನಾಟಕ ಜಿಮ್ ಮತ್ತು ಫಿಟ್‌ನೆಸ್ ಮಾಲೀಕರ ಸಂಘದ ಅಧ್ಯಕ್ಷರಾಗಿ ನೇಮಕಡಾ. ಎ.ವಿ. ರವಿ ಕರ್ನಾಟಕ ಜಿಮ್ ಮತ್ತು ಫಿಟ್‌ನೆಸ್ ಮಾಲೀಕರ ಸಂಘದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಬೆಂಗಳೂರು : ಅಂತರರಾಷ್ಟ್ರೀಯ ದೇಹಧಾರ್ಡ್ಯ ಪಟು ಮತ್ತು ಕೋಚ್ ಡಾ.ಎ.ವಿ.ರವಿ ಕರ್ನಾಟಕ ಜಿಮ್ ಮತ್ತು ಫಿಟ್ ನೆಸ್ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೂ ಆಗಿರುವ ರವಿ, ಕನ್ನಡ ಹಾಗೂ ತೆಲುಗು ಚಲನಚಿತ್ರಳಲ್ಲಿಯೂ ನಟಿಸಿದ್ದಾರೆ.ಬಿಗ್ ಬಾಸ್ ಸ್ಪರ್ಧಿ ಕೂಡ ಆಗಿದ್ದರು.

ಕೊರೋನಾ ಸೋಂಕು ತಡೆಗೆ ಲಾಕ್‌ಡೌನ್ ಆದಾಗಿನಿಂದಲೂ ಜಿಮ್ನಾಷಿಯಂಗಳು ಬಂದ್ ಆಗಿವೆ. ಇತ್ತೀಚೆಗೆ ಲಾಕ್‌ಡೌನ್ ಸಡಿಲವಾದಾಗ ಹಲವು ಉದ್ಯಮಗಳು, ಮಾರುಕಟ್ಟೆಗಳಿಗೆ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಆರೋಗ್ಯವರ್ಧಿಸುವ ಜಿಮ್‌ಗಳಿಗೆ ಅವಕಾಶ ಕೊಟ್ಟಿಲ್ಲ. ನಾವು ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸಲು ಸಿದ್ಧವಾಗಿದ್ದೇವೆ.

ಸರ್ಕಾರಕ್ಕೂ ಮನವಿ ಸಲ್ಲಿಸಿದ್ದೇವೆ. ಆದರೂ ಇನ್ನೂ ಅನುಮತಿ ಸಿಕ್ಕಿಲ್ಲ. ಇದರಿಂದಾಗಿ ಜಿಮ್‌ಗಳಲ್ಲಿ ಕಾರ್ಯನಿರ್ವಹಿಸುವ ನೂರಾರು ಜನರ ಜೀವನ ತೊಂದರೆಯಲ್ಲಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಪರವಾಗಿ ಕಾರ್ಯ ನಿರ್ವಹಿಸಲು ನಾನು ಬದ್ಧನಾಗಿದ್ದೇನೆ’ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!