ಮಳೆಗಾಲದಲ್ಲಿ ಹೆಚ್ಚು ಬಳಸಬಹುದಾದ 5 ಆಹಾರ ಪದಾರ್ಥಗಳು

ಮಳೆಗಾಲದಲ್ಲಿ ಹೆಚ್ಚು ಬಳಸಬಹುದಾದ, ಆರೋಗ್ಯ ಕಾಪಾಡಲು ಸಹಾಯಕವಾಗುವ 5 ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.ಮಳೆಗಾಲದಲ್ಲಿ  ವಾತ ಕಫ ದೋಷಗಳು ಹೆಚ್ಚಾಗಿ ರೋಗಗಳನ್ನು ತರುತ್ತವೆ. ಹಾಗಾಗಿ ಈ ಸಮಯದಲ್ಲಿ ಆಹಾರದ ವಿಷಯದಲ್ಲಿ ಅತ್ಯಂತ ಕಾಳಜಿ ಅವಶ್ಯ.

Malegaladalli-Aharaಹೊರಗಡೆಯ ವಾತಾವರಣದಲ್ಲಿ ಬದಲಾವಣೆಯಾಗುತ್ತಿದ್ದಂತೇ ನಮ್ಮ ದೇಹದಲ್ಲೂ ಅನೇಕ ರೀತಿಯ ಬದಲಾವಣೆಗಳಾಗುತ್ತವೆ. ಮಳೆಗಾಲದಲ್ಲಿ ನಮ್ಮ ಜೀರ್ಣಶಕ್ತಿ ತುಂಬಾ ಕಡಿಮೆಯಾಗುತ್ತದೆ. ದೇಹದಲ್ಲಿ ವಾತ ಕಫ ದೋಷಗಳು ಹೆಚ್ಚಾಗಿ ರೋಗಗಳನ್ನು ತರುತ್ತವೆ. ಹಾಗಾಗಿ ಈ ಸಮಯದಲ್ಲಿ ಆಹಾರದ ವಿಷಯದಲ್ಲಿ ಅತ್ಯಂತ ಕಾಳಜಿ ಅವಶ್ಯ. ಇಂದು ನಾವು ಈ ಸಮಯದಲ್ಲಿ ಹೆಚ್ಚಾಗಿ ತೆಗೆದುಕೊಳ್ಳಲು ಯೋಗ್ಯವಾಗಿರುವ ಮತ್ತು ಆರೋಗ್ಯ ಕಾಪಾಡಲು ಸಹಾಯಕವಾಗುವ 5 ರೀತಿಯ ಪದಾರ್ಥಗಳ ಬಗ್ಗೆ ತಿಳಿಯೋಣ.

1. ಜೇನುತುಪ್ಪ: ಉಷ್ಣ ಗುಣ ಹೊಂದಿದ್ದು, ಜೀರ್ಣಕಾರಿಯಾದ ಜೇನುತುಪ್ಪವನ್ನು ನಿತ್ಯ ಸೇವಿಸುವುದರಿಂದ ಅಜೀರ್ಣ, ಆಮಶಂಕೆ, ಅಲರ್ಜಿ, ಆಮವಾತ, ಅಸ್ತಮಾದಂತಹ ಮಳೆಗಾಲದಲ್ಲಿ ಸಾಮಾನ್ಯವಾಗಿ ಹೆಚ್ಚಾಗುವ ಸಮಸ್ಯೆಗಳನ್ನು ದೂರವಿಡಬಹುದು. ಜೇನುತುಪ್ಪವು ಮಳೆಗಾಲದಲ್ಲಿ ದೇಹದಲ್ಲಿ ಉಲ್ಬಣಗೊಳ್ಳುವ ದೋಷಗಳನ್ನು ಹತೋಟಿಯಲ್ಲಿಡುವುದರಿಂದ ಮತ್ತು ವಿಶೇಷವಾಗಿ ಕಫದೋಷವನ್ನು ನಿಯಂತ್ರಿಸುವುದರಿಂದ ಇದನ್ನು ಬಳಸಲೇಬೇಕು. ಕಂಠಶುದ್ಧಿ ಮಾಡಿ ಸ್ವರವನ್ನು ಚೆನ್ನಾಗಿರುವಂತೆ ಮಾಡುತ್ತದೆ. ಗಾಯಗಳು ಬೇಗ ಗುಣವಾಗುವಂತೆ ಮಾಡುತ್ತದೆ. ಮೇಧಾಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮರೋಗ, ಕೆಮ್ಮು, ರಕ್ತವಿಕಾರ, ಕ್ರಿಮಿರೋಗ, ಬೊಜ್ಜು, ಪದೇ ಪದೇ ಕಾಡುತ್ತಿರುವ ಭೇದಿ ಹೀಗೆ ಹಲವಾರು ಸಮಸ್ಯೆಗಳಲ್ಲಿ ಇದು ಉಪಯುಕ್ತ. ಇದಕ್ಕೆ ’ಯೋಗವಾಹಿ’ ಎಂಬ ಗುಣವಿದೆ. ಅಂದರೆ ಇದರ ಜೊತೆಗೆ ಸೇವಿಸಿದ ಆಹಾರ ಅಥವಾ ಔಷಧದ ಗುಣವನ್ನು ಹೆಚ್ಚಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಆದರೆ, ಇದಕ್ಕೆ ಉಷ್ಣ ಗುಣ ಮತ್ತು ಒಣಗಿಸುವ ಗುಣವಿರುವ ಕಾರಣ ಉಷ್ಣ ಪ್ರಕೃತಿಯವರು ಮತ್ತು ತುಂಬಾ ಕೃಶಕಾಯದವರು ಅತಿಯಾಗಿ ಬಳಸಬಾರದು.

2. ಹುಳಿ ಪದಾರ್ಥಗಳು: ನಿಂಬೆಹಣ್ಣು, ಮುರುಗಲ ಹಣ್ಣು, ಹುಣಸೆಹಣ್ಣಿನಂತಹ ಹುಳಿ ಪದಾರ್ಥಗಳಿಂದ ತಯಾರಿಸಿದ ಅಡುಗೆಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ಸೇವಿಸಬೇಕು. ವಿಶೇಷವಾಗಿ, ಇಡೀ ದಿನ ಮೋಡ ಕವಿದು ಮಳೆಯಿರುವ ದಿನ ಹೆಚ್ಚು ಹುಳಿ ಮತ್ತು ಸಾಂಬಾರ ಪದಾರ್ಥಗಳಿಂದ ಖಾರವಾಗಿರುವ ಸೂಪ್ ಗಳಿಗೆ ಸ್ವಲ್ಪ ತುಪ್ಪ ಹಾಕಿ ಸೇವಿಸಬೇಕು ಎನ್ನುತ್ತದೆ ಆಯುರ್ವೇದ. ಹುಳಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ದೇಹಕ್ಕೆ, ವಿಶೇಷವಾಗಿ ಹೃದಯಕ್ಕೆ ಬಲ ಬರುತ್ತದೆ. ಜ್ಞಾನೇಂದ್ರಿಯಗಳ ಶಕ್ತಿಯನ್ನು ಹೆಚ್ಚಿಸುವ ಮತ್ತು ಮಾನಸಿಕವಾಗಿ ಉತ್ಸಾಹವನ್ನು ಹೆಚ್ಚಿಸುವ ಗುಣ ಹುಳಿಗಿದೆ. ಬೆವರು ಮತ್ತು ಮೂತ್ರವು ಸುಲಭವಾಗಿ ಆಗುವಂತೆ ಮಾಡುತ್ತದೆ. ಆದರೆ ಅತಿ ಬಳಕೆಯಿಂದ ದೇಹದಲ್ಲಿ ಪಿತ್ತ ಹೆಚ್ಚಾಗಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿಶೇಷವಾಗಿ ಖಾಲಿಹೊಟ್ಟೆಯಲ್ಲಿ ಹುಳಿಯ ಸೇವನೆ ಮಾಡಬಾರದು.

Also Read: ಹುಣಸೆ : ಭಾರತೀಯ ಕರ್ಜೂರ

3. ಕಾಳುಮೆಣಸು: ಮಲೆನಾಡಿನಲ್ಲಿ ಮಳೆಗಾಲದಲ್ಲಿ ಖಟ್ನೆ ಎಂಬ ಒಂದು ಥರದ ಸೂಪ್ ಮಾಡಿ ಊಟದಲ್ಲಿ ಬಳಸುತ್ತಾರೆ. ಅದಕ್ಕೆ ವಿಶೇಷವಾಗಿ ಬಳಸುವುದು ಕಾಳುಮೆಣಸು. ಮಳೆಗಾಲದ ತಂಪಿನಿಂದ ಬರುವ ಹಲವು ಸಮಸ್ಯೆಗಳನ್ನು ಪ್ರತಿ ಬಾರಿ ಎದುರಿಸುವವರು ಕೇವಲ ಕಾಳುಮೆಣಸಿನ ಉಪಯೋಗದಿಂದ ಈ ಕಾಲವನ್ನು ಆರಾಮಾಗಿ ಕಳೆಯಬಹುದು. ಇದಕ್ಕೆ ವೈರಸ್ ನಿರೋಧಕ ಗುಣವು ತುಂಬಾ ಚೆನ್ನಾಗಿದೆ. ಆದರೆ ಇದು ಉಷ್ಣ ಮತ್ತು ಪಿತ್ತಕಾರಕವಾಗಿರುವುದರಿಂದ ಮಳೆಯಿಲ್ಲದೇ ಬಿಸಿಲಿರುವ ದಿನಗಳಲ್ಲಿ ಮತ್ತು ಉಷ್ಣ ಪ್ರಕೃತಿಯವರು ಅತಿಯಾಗಿ ಬಳಸಬಾರದು.dr hegde add

4. ದೊಡ್ಡಪತ್ರೆ: ಹಿತ್ತಲಿನಲ್ಲಿ ಕಳೆಯಂತೆ ಬೆಳೆದುಕೊಳ್ಳುವ ಇದನ್ನು ಮಳೆಗಾಲದಲ್ಲಿ ಸೇವಿಸಿದರೆ ಜೀರ್ಣಶಕ್ತಿ ಹೆಚ್ಚಿ ಆರೋಗ್ಯವೃದ್ಧಿಯಾಗುತ್ತದೆ. ಆಮಶಂಕೆ, ಲಿವರ್ ನ ಸಮಸ್ಯೆಗಳು, ಕ್ರಿಮಿರೋಗ, ಮೂತ್ರಪಿಂಡದ ಕಲ್ಲುಗಳು, ಸೈನಸೈಟಿಸ್, ಕಫ, ಕೆಮ್ಮು, ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸಲು ಈ ದೊಡ್ಡಪತ್ರೆ ಅಥವಾ ಸಾಂಬಾರಸೊಪ್ಪು ಪ್ರಯೋಜನಕಾರಿ. ಇದು ಹೃದಯಕ್ಕೆ ಬಲ ನೀಡುತ್ತದೆ. ಚಟ್ನಿ, ಸಾಂಬಾರ್, ಸೂಪ್, ಬಾತ್ ಗಳನ್ನು ಮಾಡಿ ಸವಿದರೆ ತುಂಬಾ ರುಚಿಯಾಗಿರುತ್ತದೆ.

5. ನುಗ್ಗೆಸೊಪ್ಪು: ದೊಡ್ಡ ಪ್ರಮಾಣದಲ್ಲಿ ಆಂಟಿಆಕ್ಸಿಡಂಟ್ ಗಳನ್ನು ಹೊಂದಿರುವ ನುಗ್ಗೆ ಸೊಪ್ಪು ಹಲವಾರು ಸಮಸ್ಯೆಗಳನ್ನು ತಡೆಯುವ ಶಕ್ತಿ ಹೊಂದಿರುವಂಥದ್ದು. ವಿಷವನ್ನು ಹೋಗಲಾಡಿಸುವ ಗುಣವಿದೆ. ಚರ್ಮರೋಗಗಳಲ್ಲಿ ಸಹಕಾರಿ. ಹಾಗಾಗಿಯೇ ಇದನ್ನು ಮಳೆಗಾಲದಲ್ಲಿ ಹೆಚ್ಚು ಸೇವಿಸಬೇಕು. ಇದು ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದರ ಎಲೆಗಳ ಪೇಸ್ಟ್ ಮಾಡಿ ಅರಿಶಿನ ಸೇರಿಸಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಫಂಗಲ್ ಚರ್ಮರೋಗದಲ್ಲಿ ಹಚ್ಚಬೇಕು. ಫೇಸ್ ಪ್ಯಾಕ್ ಕೂಡಾ ಮಾಡಿಕೊಳ್ಳಬಹುದು.

Also Reead: ಮಳೆಗಾಲದಲ್ಲಿ ಸ್ವಾಸ್ಥ್ಯರಕ್ಷಣೆ -ಯಾವ ಆಹಾರ?

Dr-Venkatramana-Hegde-nisargamane ಡಾ||ವೆಂಕಟ್ರಮಣ ಹೆಗಡೆ ನಿಸರ್ಗಮನೆ,  ಶಿರಸಿ, ಉ.ಕ. ದೂ:9448729434/9731460353 Email: drvhegde@yahoo.com; nisargamane6@gmail.com http://nisargamane.com
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
http://nisargamane.com
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!