ಉಸಿರಾಟದ ತೊಂದರೆಗಳ ಪರಿಹಾರೋಪಾಯಗಳು ಬಹಳ ಮುಖ್ಯ. ಕಲುಷಿತವಾದ ಗಾಳಿಯನ್ನು ಸೇವಿಸುವುದರಿಂದಾಗಿ ನಗರಗಳಲ್ಲಿ ಉಸಿರಾಟದ ಸಮಸ್ಯೆ ಸರ್ವೇ ಸಾಮಾನ್ಯ.ಕರೋನ ವೈರಸ್ ಉಸಿರಾಟದ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುವುದು. ಉಸಿರಾಟದ ಕ್ರಿಯೆಗಳನ್ನು ತಜ್ಞರ ಸಲಹೆಯನ್ನು ಪಡೆದು ಅಭ್ಯಾಸಿಸುವುದು ಒಳ್ಳೆಯದು.
ಬೆಂಗಳೂರು, ಮುಂಬಯಿ, ಕಲ್ಕತ್ತಾ ಇತ್ಯಾದಿ ಮಹಾನಗರಗಳಲ್ಲಿ ಈ ಉಸಿರಾಟದ ಸಮಸ್ಯೆ ಸರ್ವೇ ಸಾಮಾನ್ಯ. ಸದಾ ವಾಹನಗಳ ಹೊಗೆಯಿಂದ ಕೂಡಿದ ಕಲುಷಿತವಾದ ಗಾಳಿಯನ್ನು ಸೇವಿಸುವುದರಿಂದಾಗಿ ಇಂತಹ ತೊಂದರೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಉಸಿರು ಕಟ್ಟುವಿಕೆ (ಡಿಸ್ನಿಯಾ) ಇದರಲ್ಲಿ ಪ್ರಮುಖವಾದುದು. ಈ ಉಸಿರು ಕಟ್ಟುವಿಕೆಯ ಸಮಸ್ಯೆಗೆ ಗುರಿಯಾದವರು ಉಸಿರಾಡಲು ಬಹಳ ಕಷ್ಟಪಡುತ್ತಾರೆ. ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿಯನ್ನುಂಟು ಮಾಡುವ ವೈರಸ್ ಆಗಿದ್ದು, ಇದು ಮನುಷ್ಯನ ಉಸಿರಾಟದ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ.
ಈ ವೈರಸ್ ನಿಂದಾಗಿ ಸಾಮಾನ್ಯ ಕೆಮ್ಮು ಮತ್ತು ಸೀನುಗಳು (ಶೀತ) ಕಾಣಿಸಿಕೊಳ್ಳುವುದರೊಂದಿಗೆ ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಕೆಟ್ಟ ಪರಿಣಾಮ ಬೀರುವುದು. Covid-19 ರೋಗಿಗಳಲ್ಲಿ ಕಂಡುಬರುವ ಉಸಿರಾಟದ ಸಮಸ್ಯೆಗಳ ಜೊತೆಗೆ, ಅನೇಕ ಸೋಂಕಿತ ರೋಗಿಗಳ ಹೃದಯ ಸಮಸ್ಯೆಗಳು ಹೃದಯ ಸ್ತಂಭನಕ್ಕೆ ಕಾರಣವಾಯಿತು ಎಂದು ವರದಿಗಳು ಬಂದಿವೆ
ಉಸಿರುಕಟ್ಟುವಿಕೆಯ ಶ್ರೇಣಿಗಳು/ದರ್ಜೆಗಳು:
1. ಸರಳ -> ದಿನನಿತ್ಯದ ಕೆಲಸ ಕಾರ್ಯಗಳಿಗಿಂತ ಜಾಸ್ತಿ ಕೆಲಸ ಮಾಡಿದರೆ ಉಸಿರುಕಟ್ಟುವಿಕೆ ಬರುತ್ತದೆ.
ಉದಾ: ಓಡುವುದು, ಆಟ ಆಡುವುದು.
2. ಮಧ್ಯಮ -> ಸಾಮಾನ್ಯವಾದ ಕೆಲಸ ಮಾಡುವಾಗಲೇ ಈ ತೊಂದರೆ ಉದ್ಭವಿಸುತ್ತದೆ.
ಉದಾ: ನಡಿಗೆ, ದಿನನಿತ್ಯದ ಕೆಲಸಗಳು
3. ಕ್ಲಿಷ್ಟಕರ -> ಸಾಮಾನ್ಯವಾದ ಕೆಲಸಕ್ಕಿಂತಲೂ ಕೆಳಮಟ್ಟದ ಕೆಲಸ ಮಾಡಿದಾಗಲೂ
ಉಸಿರುಕಟ್ಟುವಿಕೆ ಕಾಣಿಸಿಕೊಳ್ಳುತ್ತದೆ.
ಉದಾ: ನಿಧಾನವಾಗಿ ನಡೆಯುವುದು.
4. ಅತಿ ಕ್ಲ್ಲಿಷ್ಟಕರ-> ಏನನ್ನೂ ಮಾಡಲಾರದಂತಹ ಪರಿಸ್ಥಿತಿ.
ಉಸಿರು ಕಟ್ಟುವಿಕೆ /ಡಿಸ್ನಿಯಾಕ್ಕೆ ಕಾರಣಗಳುಃ
1. ಸಾಮಾನ್ಯ ಕೆಲಸ ಮಾಡುವಾಗಿನ ಉಸಿರು ಕಟ್ಟುವಿಕೆ : ರಕ್ತ ಹೀನತೆ, ಗರ್ಭಿಣಿ, ಹೃದಯದ ತೊಂದರೆಗಳು, ಅಸ್ತಮಾ, ಶ್ವಾಸಕೋಶದ ತೊಂದರೆಗಳು, ದಪ್ಪ ಶರೀರ, ಅತಿಯಾದ ಚಟುವಟಿಕೆ ಇತ್ಯಾದಿ.
2.ವಿಶ್ರಾಂತಿಯಲ್ಲಿನ ಉಸಿರು ಕಟ್ಟುವಿಕೆ : ಶ್ವಾಸಕೋಶವನ್ನು ನೀರುತುಂಬಿಕೊಳ್ಳುವುದು, ಗಂಭೀರ ಅಸ್ತಮಾ, ಹೃದಯ ತೊಂದರೆ, ಮಾನಸಿಕ ಒತ್ತಡ, ಇತ್ಯಾದಿ.
3. ರಾತ್ರಿ ಹೊತ್ತಿನಲ್ಲಿನ ಉಸಿರಾಟದ ಸಮಸ್ಯೆ : ಅಸ್ತಮಾ, ಹೃದಯಾಘಾತ
ತೊಂದರೆಗಳನ್ನು ತಿಳಿದುಕೊಳ್ಳುವುದು/ಪರೀಕ್ಷಿಸುವುದು:
1. ಉಸಿರುಕಟ್ಟುವಿಕೆ ಯಾವ ಸಮಯದಲ್ಲಿ ಮತ್ತು ಹೇಗೆ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.
2. ಉಸಿರುಕಟ್ಟುವಿಕೆಯು ಬೇರೆ ಯಾವ ಸಮಸ್ಯೆಯೊಟ್ಟಿಗಾದರೂ ಹೊಂದಿಕೊಂಡಿದೆಯೇ ನೋಡಬೇಕು.
3. ಜ್ವರ, ಸೋಂಕು ಇತ್ಯಾದಿ ಖಾಯಿಲೆಗಳಿವೆಯಾ ಎಂಬುದನ್ನು ತಿಳಿದುಕೊಳ್ಳಬೇಕು.
4. ಗೊರಕೆ ಹೊಡೆಯುವುದು ವಿಷಲ್ ಊದಿದಂತೆ ಶಬ್ದ ಹೊರಡಿಸುವುದು ಇದೆಯಾ ಎಂದು ತಿಳಿದುಕೊಳ್ಳಬೇಕು.
5. ಮಲಗಿದಾಗ, ಕೂತಾಗ, ಓಡಾಡುವಾಗ ಉಸಿರಾಡಲು ಕಷ್ಟವಾಗುತ್ತದೆಯೇ ಎಂಬುದನ್ನು ತಿಳಿದುಕೊಳ್ಳಬೇಕು.
ಪರಿಹಾರೋಪಾಯಗಳು:
1. ಹೃದಯದ, ಶ್ವಾಸಕೋಶದ ತೊಂದರೆಯಿದ್ದಲ್ಲಿ ತಜ್ಞವೈದ್ಯರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು.
2. ಸ್ವಚ್ಛವಾದ ಪರಿಸರದಲ್ಲಿ ಓಡಾಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.
3. ಮಲಗುವ, ಕೂಡುವ ಅಥವಾ ವಾಸಿಸುವ ಪ್ರದೇಶದಲ್ಲಿ ಚೆನ್ನಾಗಿ ಗಾಳಿಯಾಡುವಂತೆ ನೋಡಿಕೊಳ್ಳಬೇಕು.
4. ಬಿಸಿ ನೀರಿನ ಉಗಿಯನ್ನು ಮೂಗಿನಲ್ಲಿ ತೆಗೆದು ಬಾಯಿಯಲ್ಲಿ ಬಿಡಬೇಕು.
5. ಶ್ವಾಸಕೋಶ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಒತ್ತು ಬಿಂದುಗಳಲ್ಲಿ ಒತ್ತಡಕೊಡುವುದು (ಆಕ್ಯಪ್ರೆಶರ್)
6. ಸೂಜಿಗಳಿಂದ ಚುಚ್ಚಿಯೂ ಸಹ ಈ ಬಿಂದುಗಳನ್ನ ಉದ್ದೀಪನಗೊಳಿಸಬಹುದು. (ಆಕ್ಯುಪಂಚರ್)
7. ಅಸ್ತಮಾ ಅಥವಾ ಕಫದ ಸಮಸ್ಯೆ ಇದ್ದಾಗ ಎಳ್ಳೆಣ್ಣೆಗೆ ಸ್ವಲ್ಪ ನೀಲಗಿರಿ ತೈಲವನ್ನು ಮಿಶ್ರ ಮಾಡಿ ಎದೆ ಮತ್ತು ಬೆನ್ನಿಗೆ ಮೃದುವಾಗಿ ಮಸಾಜ್ ಮಾಡಿ ಬಿಸಿನೀರಿನ ಬ್ಯಾಗ್ ಮೂಲಕ ಶಾಖವನ್ನು ನೀಡಬೇಕು.
8. ಪ್ರತಿನಿತ್ಯ ಎರಡು ಚಮಚ ತಾಜಾ ಪುಡಿಮಾಡಿದ ಅಗಸೆ ಬೀಜವನ್ನು ಹಣ್ಣ್ಣುಗಳೊಂದಿಗೆ ಸೇವಿಸಬೇಕು.
9. ಉತ್ತಮ ಗುಣಮಟ್ಟದ ಒಮೆಗಾ-3 ಪುಡ್ ಸಪ್ಲಿಮೆಂಟ್‍ನ್ನು ಪ್ರತಿನಿತ್ಯ ಸೇವಿಸಿ.
10. ವಾಯುಮಾಲಿನ್ಯದಿಂದ ಉಸಿರಾಟದ ಸಮಸ್ಯೆಯಾದಲ್ಲಿ ಪ್ರತಿನಿತ್ಯ ಜಲನೇತಿಯ ಅಭ್ಯಾಸ ರೂಡಿಸಿಕೊಳ್ಳಿ.
ನಿಸರ್ಗಮನೆ, ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
www.nisargamane.com