ಚರ್ಮ ರೋಗಗಳಿಗೆ ಮುದ್ದಾರಶೃಂಗಿ ಬಾಹ್ಯ ಪ್ರಯೋಗಗಳನ್ನು ಕಾಣಬಹುದು. ಬ್ಯಾಟರಿಗಳ ತಯಾರಿಕೆಯಲ್ಲಿ, ಪೈಂಟ್ಗಳ ತಯಾರಿಕೆ, ಇಂಕ್ ಹಾಗೂ ಇತರೇ ಹಲವಾರು ಕರ್ಖಾನೆಗಳಲ್ಲಿ ಇದರ ಉಪಯೋಗ ಹೆಚ್ಚಾಗಿರುತ್ತದೆ.
ಮುದ್ದಾರಶೃಂಗಿಯು (ಮರದಾರಸಿಂಗಿ) ಹೊಳೆಯುವ, ಹರಳುಗಳ ರೂಪದ, ಪದರಗಳುಳ್ಳ, ಪ್ರಾಕೃತವಾಗಿ ದೊರೆಯುವ ಖನಿಜದ್ರವ್ಯ. ಇದು ಪ್ರಕೃತಿಯಲ್ಲಿ ಗೆಲೆನ ಎಂಬ ಸೀಸದ ಖನಿಜದೊಂದಿಗೆ ದೊರೆಯುತ್ತದೆ. ಗುಜರಾತ್, ರಾಜಸ್ಥಾನ, ಬಿಹಾರ, ಮಧ್ಯಪ್ರದೇಶ, ಬರ್ಮ ದೇಶಗಳಲ್ಲಿ, ಪ್ರಾಕೃತಿಕವಾಗಿ ದೊರೆಯುತ್ತದೆ.
ಮಡೆದಾರಶೃಂಗಿ ಎಂದು ಕನ್ನಡದಲ್ಲಿ, Litharge (ಲಿಥಾರ್ಜ್ monoxide of lead) ಎಂದು ಆಂಗ್ಲದಲ್ಲಿ, ಹಿಂದಿಯಲ್ಲಿ ಮೃದಂಗ ಸಿಂಗ ಎಂದು ಕರೆಯಲ್ಪಡುವ ಇದು ಲೆಡ್ ಆಕ್ಸೈಡ್ ಎಂಬ ಶಾಸ್ತ್ರಿಯ ನಾಮವನ್ನು ಹೊಂದಿದೆ ಹಾಗು ಇದನ್ನು PbO ಎಂದು ಸಂಭೋದಿಸಲಾಗುತ್ತದೆ. ಭೋದಾರ ಶೃಂಗ, ಮೃದಾಶಂಖ, ಮುದಾಶಂಖಕ ಎಂಬ ಪರ್ಯಾಯ ನಾಮಗಳನ್ನು ಸಂಸೃತಭಾಷೆಯಲ್ಲಿ ಹೊಂದಿದೆ.
ಪ್ರಾಕೃತವಾಗಷ್ಟೆ ಅಲ್ಲದೆ ಕೃತ್ರಿಮವಾಗಿ ಸಹ ಇದನ್ನು ತಯಾರಿಸಬಹುದು. 300 ಡಿಗ್ರಿ ಸೆಲ್ಸಿಯಸ್ನಲ್ಲಿ ಲೆಡ್ ಸುಟ್ಟಾಗ ಲೆಡ್ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳುತ್ತದೆ. ನಂತರ 870 ಡಿಗ್ರಿ ಸೆಲ್ಸಿಯಸ್ವರೆಗೆ ಬಿಸಿಯನ್ನು ಕೊಟ್ಟಾಗ ಅದು ಕರಗಿಹೊಗುತ್ತದೆ. ಮತ್ತೆ ಅದನ್ನು ಅಲ್ಲಿಂದ ತಂಪಾಗಿಸಿದಾಗ ಹರಳುಗಳ ರೂಪ ಪಡೆದುಕೊಳ್ಳುತ್ತದೆ, ಹೀಗೆ ಉಂಟಾದ ಹರಳುಗಳನ್ನು `ಲಿತರ್ಜೆ’ ಎಂದು ಕರೆಯುತ್ತಾರೆ.
ಮುದ್ದಾರಶೃಂಗಿಯನ್ನು ಬಣ್ಣಗಳಿಂದ ಎರಡು ವಿಧದಲ್ಲಿ ವಿಂಗಡಿಸಲಾಗಿದೆ. ಕೆಂಪು ಮಿಶ್ರಿತ ಹಳದಿ ಬಣ್ಣದ ಮುದ್ದಾರಶೃಂಗಿಯು ಪ್ರಕೃತ ಖನಿಜ ರೂಪದ್ದಾಗಿದ್ದು ಬಿಳಿ ಬಣ್ಣದ ಮುದ್ದಾರಶೃಂಗಿಯು ಕೃತ್ರಿಮ ರೂಪದ್ದಾಗಿದೆ .ಸುಲಭವಾಗಿ ಪುಡಿಗೊಳ್ಳುವ, ಮುದ್ದಾರಶೃಂಗಿಯು ನೀರಿನಲ್ಲಿ ಕರಗುವುದಿಲ್ಲ. ಇದು ಅತ್ಯಂತ ಮೃದುವಾಗಿದ್ದು ಗಟ್ಟಿತನವನ್ನು ಹೊಂದಿರುತ್ತದೆ.
ಬ್ಯಾಟರಿಗಳ ತಯಾರಿಕೆಯಲ್ಲಿ, ಪೈಂಟ್ಗಳ ತಯಾರಿಕೆ, ಇಂಕ್ ಹಾಗೂ ಇತರೇ ಹಲವಾರು ಕರ್ಖಾನೆಗಳಲ್ಲಿ ಇದರ ಉಪಯೋಗ ಹೆಚ್ಚಾಗಿರುತ್ತದೆ.
ಔಷಧಿಯಾಗಿ ಚರ್ಮರೊಗಗಳಲ್ಲಿ ಇದರ ಬಾಹ್ಯ ಪ್ರಯೋಗಗಳನ್ನು ಕಾಣಬಹುದು.
- ಔಷಧಿಯಾಗಿ ಫಿರಂಗ ಉಪದಂಶ, ವ್ರಣ, ರೋಗಗಳಲ್ಲಿ , ಕೇಶ ರಂಜನೆಗೆ, ಕಂಡು, ಭಗ್ನ ಸಂಧನಕ್ಕೆ, ವಾತ,ಕಫ ರೋಗಗಳಲ್ಲಿ ಬಳಸಲಾಗುತ್ತದೆ.
- ಆಯುರ್ವೇದೀಯ ರಸಶಾಸ್ತ್ರದಲ್ಲಿ ಚರ್ಮರೊಗಗಳಲ್ಲಿ ಹೆಚ್ಚಾಗಿ ಬಳಸಲ್ಪಡುವ ಇದು ಮೈಥುನದಿಂದ ಹರಡುವ ಚರ್ಮದ ತುರಿಕೆ, ಗಾಯಗಳಲ್ಲಿ ಹಾಗು ಇನ್ನಿತರ ಚರ್ಮಕಾಯಿಲೆಗಳಲ್ಲಿ ಉಪಯೋಗಿಸಲ್ಪಡುತ್ತದೆ.
- ಮೂಳೆ ಮುರಿತದಲ್ಲಿ ಪಟ್ಟು ಕಟ್ಟಲು ಇದನ್ನು ಬಳಸಲಾಗುತ್ತದೆ.
- ಸಂಶೋಧನೆಗಳಿಂದ ಚರ್ಮದ ತೊಂದರೆ ಉಂಟುಮಾಡುವ ರೋಗಾಣುಗಳ ಮೇಲೆ ಉತ್ತಮ ಪರಿಣಾಮ ಬೀರಬಲ್ಲದೆಂದು ತಿಳಿದುಬಂದಿದೆ.
- ಚರ್ಮದಲ್ಲಿ ಹರಡುವ ಸರ್ಪಸುತ್ತಿನ ರೋಗಾಣುಗಳಮೆಲೆ ಪರಿಣಾಮವನ್ನು ಬೀರಬಲ್ಲದು.
- ಬಹುಕಾಲದಿಂದಲೂ ಸರಿಪಡಿಸಲಾಗದ ದೃಷ್ಟವ್ರಣಗಳಲ್ಲಿ (ಕೊಳೆತ ಗಾಯಗಳಲ್ಲಿ) ಇದನ್ನು ಬಳಸಲಾಗುತ್ತದೆ.
- ಇದು ವಿಶದ್ರವ್ಯವಾದರೂ ಸಹ ಸರಿಯಾದ ಶೋಧನೆ, ಸದ್ಬಳಕೆಯಿಂದ ಚರ್ಮವ್ಯಾಧಿಗಳಲ್ಲಿ ಎಚ್ಚರಿಕೆಯಿಂದ ಬಳಸಬೇಕು.
ಡಾ. ಸುದರ್ಶನ್ ಕೆ. ಆಚಾರ್
ಉದ್ಗೀತಾ ಕ್ಲಿನಿಕ್, ಎಸ್ಎಲ್ಎನ್ ಟೆಂಪಲ್ ರೋಡ್, ಓಲ್ಡ್ ಟೌನ್, ಭದ್ರಾವತಿ
ಮೊ.: 9964278800 ; E mail: sudarshan.k.achar@gmail.com