ಕೆಲವರು ಗರ್ಭಕೋಶ ತೆಗೆಯಿಸಿ ಕೊಂಡರೆ ನನಗೆ ಆ ಸಮಸ್ಯೆ ಆಗಬಹುದು, ಈ ಸಮಸ್ಯೆ ಆಗಬಹುದು ಎಂಬ ತಪ್ಪುಕಲ್ಪನೆ ಹೊಂದಿರುತ್ತಾರೆ. ಆ ತಪ್ಪು ಕಲ್ಪನೆಗಳೇನು ಎಂದು ತಿಳಿದುಕೊಳ್ಳುವ ಮೊದಲು ಯಾವ ಸಂದರ್ಭದಲ್ಲಿ ಗರ್ಭಕೋಶ ನಿವಾರಣೆ ಮಾಡುವ ಅನಿವಾರ್ಯಸ್ಥಿತಿ ಉಂಟಾಗುತ್ತದೆ ಎಂಬುದನ್ನು ಅರಿಯಬೇಕು.
ಗರ್ಭಕೋಶ ಸಂತಾನೋತ್ಪತ್ತಿಯ ಪ್ರಮುಖ ಅಂಗ. ಪ್ರತಿಯೊಬ್ಬ ಹೆಣ್ಣಿಗೂ ಪ್ರತಿತಿಂಗಳು ಋತುಸ್ರಾವವಾಗಲು ಗರ್ಭಕೋಶವೇ ನೆರವಾಗುತ್ತದೆ. ಅಂಡಾಶಯದಿಂದ ಬಿಡುಗಡೆಯಾಗುವ ಅಂಡಾಣು ಗರ್ಭನಾಳದ ಮುಖಾಂತರ ಗರ್ಭಕೋಶಕ್ಕೆ ತಲುಪಿ, ಅಲ್ಲಿ ವೀರ್ಯಾಣುವಿನ ಸಂಪರ್ಕಕ್ಕೆ ಬಂದಾಗ ಭ್ರೂಣವನ್ನು ಹಿಡಿದಿಟ್ಟುಕೊಂಡು ಅದರ ಬೆಳವಣಿಗೆಗೆ ಸಹಕಾರ ನೀಡುತ್ತದೆ.
ಇಂತಹ ಮಹತ್ತರ ಕೆಲಸಕ್ಕೆ ನೆರವಾಗುವ ಗರ್ಭಕೋಶ ಒಮ್ಮೊಮ್ಮೆ ಯಾವುದೊ ಕಾರಣಗಳಿಂದ ರೋಗಗ್ರಸ್ಥವಾಗಿ ತನ್ನ ನಿಯಮಿತ ಕೆಲಸ-ಕಾರ್ಯಮಾಡಲು ಅಸಮರ್ಥವಾಗುತ್ತದೆ. ಅಂತಹ ಸ್ಥಿತಿಯಲ್ಲಿ ಅದನ್ನು ತೆಗೆಯುವುದೇ ದಾರಿ. ತಡೆದುಕೊಳ್ಳಲು ಆಗದಂತಹ ನೋವಿನ ಸಂದರ್ಭದಲ್ಲಿ ಅದನ್ನು ತೆಗೆಯಿಸಿ ಹಾಕುವುದರಲ್ಲಿ ಯಾವುದೇ ತಪ್ಪಿಲ್ಲ. ಆಗ ಜೀವಿತಾವಧಿಯ ಗುಣಮಟ್ಟವೂ ಉತ್ತಮಗೊಳ್ಳುತ್ತದೆ.
- ಗರ್ಭಕೋಶ ನಿವಾರಣೆ ಯಾವ ಸ್ಥಿತಿಯಲ್ಲಿ?
- ಗರ್ಭಕೋಶದಲ್ಲಿ ಫೈಬ್ರಾಯುಡ್ ಗೆಡ್ಡೆಗಳಿದ್ದಾಗ.
- ಎಂಡೊಮೆಟ್ರಿಯೋಸಿಸ್ ಆಗಿದ್ದಾಗ.
- ಅಡಿನೋಮಯೋಸಿಸ್ ಅಂದರೆ ಋತುಸ್ರಾವದ ಸಂದರ್ಭದಲ್ಲಿ ಅಸಾಧ್ಯ ಎನ್ನುವಂತಹ ನೋವಿನ ಸಂದರ್ಭದಲ್ಲಿ.
- ಬೇರೆಯಾವುದೇ ಸಮಸ್ಯೆ ಇರದೇ ಇದ್ದರೂ ರಕ್ತಸ್ರಾವದ ಸಮಸ್ಯೆ ಅತಿಯಾಗಿದ್ದಾಗ.
- ಕ್ರಾನಿಕ್ಪಿಐಡಿ ಅಂದರೆ ಗರ್ಭಕೋಶ, ಅಂಡಾಶಯ ಹಾಗೂ ಟ್ಯೂಬ್ಗ್ಳು ಪರಸ್ಪರ ಅಂಟಿಕೊಂಡ ಸಂದರ್ಭದಲ್ಲಿ. 40ವರ್ಷ ಮೇಲ್ಪಟ್ಟವರಲ್ಲಿ ಈ ಮೇಲ್ಕಂಡ ಸಮಸ್ಯೆಗಳಿದ್ದರೆ (ಊಥಿsಣeಡಿosಛಿoಠಿಥಿ) ಸೂಕ್ತ.
- ಮೇಲ್ಕಂಡವುಗಳಲ್ಲಿ ಯಾವುದಾದರೊಂದು ಸಮಸ್ಯೆಗೆ ಸಿಲುಕಿದ್ದರೂ ಕೆಲವರು ನೋವು ಸಹಿಸಿಕೊಳ್ಳುತ್ತಾರೆಯೇ ವಿನಃ ಗರ್ಭಕೋಶ ತೆಗೆಸಲು ಮನಸ್ಸು ಮಾಡುವುದಿಲ್ಲ. ಇದಕ್ಕೆ ಮುಖ್ಯಕಾರಣ ಅವರಲ್ಲಿರುವ ತಪ್ಪುಕಲ್ಪನೆಗಳು.
ಏನೇನು ತಪ್ಪುಕಲ್ಪನೆಗಳು? ಸಂತ್ಯಾಂಶವೇನು?
- ಗರ್ಭಕೋಶ ತೆಗೆಯಿಸಿದರೆ ಶಕ್ತಿಹೊರಟು ಹೋಗುತ್ತದೆ, ಜೀವನಾಸಕ್ತಿ ಇರುವುದಿಲ್ಲ.
ಹಾಗೇನೂ ಇಲ್ಲ. 50 ನೇವಯಸ್ಸಿನ ಆಸುಪಾಸಿನಲ್ಲಿ ಮಹಿಳೆಯರಿಗೆ ಮುಟ್ಟು ನಿಲ್ಲುತ್ತದೆ. ಆಗ ಅಂಡಾಶಯದಿಂದ ಬಿಡುಗಡೆಯಾಗುವ ಈಸ್ಟ್ರೊಜೆನ್ ಹಾಗೂ ಪ್ರೊಜೆಸ್ಟ್ರಾನ್ ಹಾರ್ಮೋನುಗಳ ಪ್ರಮಾಣ ಕಡಿಮೆಯಾಗುತ್ತದೆ. 35- 40 ರ ಆಸುಪಾಸಿನ ಮಹಿಳೆಯರ ಗರ್ಭಕೋಶ ತೆಗೆಯಿಸಬೇಕಾದ ಅನಿವಾರ್ಯ ಸ್ಥಿತಿ ಬಂದಾಗ ಅದರ ಜತೆಗೆ ಅಂಡಕೋಶವನ್ನು ತೆಗೆಯಲಾಗುವುದಿಲ್ಲ. ಹೀಗಾಗಿ ಅದು ಹಾರ್ಮೋನು ಬಿಡುಗಡೆ ಕೆಲಸವನ್ನು ಚಾಚುತಪ್ಪದೇ ಮಾಡುತ್ತಿರುತ್ತದೆ. ಆ ಕಾರಣದಿಂದ ಶಕ್ತಿಕಡಿಮೆಯಾಗುವ, ಜೀವನೋತ್ಸಾಹ ಕುಗ್ಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮೊದಲಿನ ಕ್ರಿಯಾಶೀಲತೆ ಹಾಗೆಯೇ ಉಳಿದಿರುತ್ತದೆ. - ಮೂಳೆಗಳು ದುರ್ಬಲಗೊಳ್ಳುತ್ತವೆ. ನೋವಿನಿಂದ ಕೂಡಿರುತ್ತವೆ.
ಅಂಡಾಶಯದಿಂದ ಬಿಡುಗಡೆಯಾಗುವ ಹಾರ್ಮೋನುಗಳು 50ನೇ ವಯಸ್ಸಿನ ತನಕವೂ ಮಹಿಳೆಯರನ್ನು ಹಾಗೆಯೇ ಕ್ರಿಯಾಶೀಲರಾಗಿ ಇಟ್ಟಿರುತ್ತವೆ. ಗರ್ಭಕೋಶ ನಿವಾರಣೆ ಮಾಡುವ ಸಂದರ್ಭದಲ್ಲಿ ಅವರ ಅಂಡಾಶಯವನ್ನು ತೆಗೆಯದೇ ಹಾಗೆಯೇ ರಕ್ಷಿಸಲ್ಪಡುವುದರಿಂದ ಅವರ ಮೂಳೆಗಳು ದುರ್ಬಲಗೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. - ಲೈಂಗಿಕ ಆಸಕ್ತಿ ಕುಗ್ಗುತ್ತದೆ.
ಗರ್ಭಕೋಶವನ್ನಷ್ಟೇ ತೆಗೆಸಿ ಹಾಕುವುದರಿಂದ ಲೈಂಗಿಕ ಕ್ರಿಯಾಶೀಲತೆ ಕಡಿಮೆ ಯಾಗುವುದಿಲ್ಲ. ಗರ್ಭಕೋಶದ ಕೆಳಭಾಗದಲ್ಲಿರುವ ವೆಜೈನಾದಲ್ಲಿ ಈಸ್ಟ್ರೊಜೆನ್ ಹಾಗೂ ಪ್ರೊಜೆಸ್ಟ್ರಾನ್ ಹಾರ್ಮೋನು ಮೊದಲಿನ ಹಾಗೆಯೇ ಕೆಲಸಮಾಡುತ್ತಿರುತ್ತದೆ. ಅದೇ ಸ್ನಿಗ್ದತೆ ಉಳಿದಿರುತ್ತದೆ. ಹಾಗಾಗಿ ಲೈಂಗಿಕ ಚಟುವಟಿಕೆಗೆ ಯಾವುದೇ ಬಾಧೆ ಉಂಟಾಗುವುದಿಲ್ಲ. - ತೂಕ ಹೆಚ್ಚಾಗುತ್ತದೆ ದಪ್ಪಗಾಗುತ್ತಾರೆ.
ಗರ್ಭಕೋಶ ನಿವಾರಣೆಗೂ ದೇಹ ದಪ್ಪಗಾಗುವುದಕ್ಕೂ ಯಾವುದೇ ಸಂಬಂಧ ಇಲ್ಲ. 40-45 ನೇ ವಯಸ್ಸಿನ ಬಳಿಕ ಬೇರೆಬೇರೆ ಕಾರಣಗಳಿಂದ ದೇಹದಪ್ಪಗಾಗುವುದು ಸಹಜ. ಆದರೆ ಗರ್ಭಕೋಶ ನಿವಾರಣೆ ಮಾಡಿದ ಬಳಿಕ ದೇಹತೂಕ ಹೆಚ್ಚುತ್ತದೆ ಎನ್ನುವುದು ತಪ್ಪುಕಲ್ಪನೆ. ಕ್ರಿಯಾಶೀಲ ಜೀವನಶೈಲಿ, ಸೂಕ್ತಆಹಾರ, ದೈನಂದಿನ ವ್ಯಾಯಾಮ, ನಡಿಗೆ ಮುಂತಾದವುಗಳಿಂದ ದೇಹತೂಕ ಹೆಚ್ಚಾಗದಂತೆ ನೋಡಿಕೊಳ್ಳಬೇಕು. - ಗರ್ಭಕೋಶ ತೆಗೆದು ಹಾಕಿದ ಬಳಿಕ ಒಂದರಿಂದ ಒಂದೂವರೆ ತಿಂಗಳು ಕಡ್ಡಾಯ ವಿಶ್ರಾಂತಿ ಮಾಡಬೇಕು.
ಇಂದಿನ ವೈದ್ಯಕೀಯ ತಂತ್ರಜ್ಞಾನ ಅದೆಷ್ಟು ವಿಕಾಸಗೊಂಡಿದೆ ಎಂದರೆ, ಕಡಿಮೆ ಸಮಯದಲ್ಲಿ, ಅತಿಸಣ್ಣ ರಂಧ್ರದ ಮೂಲಕ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ನಡೆಸಲಾಗುವುದರಿಂದ ರಕ್ತಸ್ರಾವದ ಪ್ರಮಾಣವೂ ಕಡಿಮೆ ಹಾಗೂ ಬಹುಬೇಗ ಗಾಯ ಗುಣವಾಗುವುದರಿಂದ 3-4 ದಿನಗಳಲ್ಲೇ ದೈನಂದಿನ ಚಟುವಟಿಕೆಗಳಿಗೆ ಮರಳಬಹುದು. ವಾರದಲ್ಲಿಯೇ ಉದ್ಯೋಗಸ್ಥ ಮಹಿಳೆಯರು ತಮ್ಮ ನೌಕರಿಗೆ ಹಾಜರಾಗಬಹುದು. ಹಾಗಾಗಿ ತಿಂಗಳು ಗಟ್ಟಲೆ ರಜೆ ತೆಗೆದುಕೊಂಡು ಮನೆಯಲ್ಲಿಯೇ ಇರಬೇಕಾಗುತ್ತದೆ ಎಂಬ ಭಾವನೆ ತಪ್ಪು.
6. 2-3 ಸಿಸೇರಿಯನ್ ಬಳಿಕ ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ.
ಆದರೆ ನುರಿತ ಶಸ್ತ್ರಚಿಕಿತ್ಸಾ ತಜ್ಞರಿಗೆ ಅದು ಕೂಡ ಒಂದು ಮಾಮೂಲು ಶಸ್ತ್ರಚಿಕಿತ್ಸೆಯೇ ಹೌದು.
ನೀವು ಗಮನಿಸಬೇಕಾಗಿರುವ ಅಂಶಗಳು:
ಗರ್ಭಕೋಶ ನಿವಾರಣೆ ಮಾಡಿಕೊಂಡ ಒಂದು ತಿಂಗಳತನಕ ಲೈಂಗಿಕ ಚಟುವಟಿಕೆಯಲ್ಲಿ ತೊಡಗಬಾರದು.
ಗರ್ಭಕೋಶ ನಿವಾರಣೆಯ ಪ್ರಕ್ರಿಯೆಯಲ್ಲಿ ಕೇವಲ ಗರ್ಭಕೋಶವನ್ನಷ್ಟೇ ತೆಗೆಯಲಾಗುತ್ತದೆ. ಅಂಡಕೋಶವನ್ನು ಹಾಗೆಯೇ ಉಳಿಸಲಾಗುತ್ತದೆ. ಹೀಗಾಗಿ ಹಾರ್ಮೋನು ಬಿಡುಗಡೆ ಪ್ರಕ್ರಿಯೆ ನಿರಾತಂಕವಾಗಿ ನಡೆಯುತ್ತಲೇ ಇರುತ್ತದೆ.
ಡಾ. ಬಿ. ರಮೇಶ್
ಆಲ್ಟಿಯಸ್ ಹಾಸ್ಪಿಟಲ್
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು-560098. Ph:o80-28606789/9663311128
ಶಾಖೆ: ರಾಜಾಜಿನಗರ:080-2315873/ 9900031842
E-mail : endoram2006@yahoo.co.in /altiushospital@yahoo.com