ಕೆಲವು ಆರೋಗ್ಯ ಸಂಬಂಧಿತ ಮಾಹಿತಿಗಳು – ನಿಮಗಿದು ತಿಳಿದಿರಲಿ..

ಕೆಲವು ಆರೋಗ್ಯ ಸಂಬಂಧಿತ ಮಾಹಿತಿಗಳು ಇಲ್ಲಿ ನೀಡಲಾಗಿದೆ. ತಪ್ಪು ಮಾಹಿತಿಗಳನ್ನು ತಪ್ಪಿಸಲು ಮತ್ತು ಆಹಾರ ಮತ್ತು ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯಲು ದಯವಿಟ್ಟು ಕೆಳಗಿನ ಅಂಶಗಳನ್ನು ಓದಿ.

ಕೆಲವು ಆರೋಗ್ಯ ಸಂಬಂಧಿತ ಮಾಹಿತಿಗಳು - ನಿಮಗಿದು ತಿಳಿದಿರಲಿ..

1. ಫೀನಾಲ್ ಅಂಶವು ತಂಬಾಕು ಹೊಗೆಯಲ್ಲಿ (ಧೂಮಪಾನ) ಅಡಕವಾಗಿರುವುದು. ನವಜಾತಶಿಶುಗಳಲ್ಲಿನ ನ್ಯೂನತೆಗಳು ಗರ್ಭಿಣಿಯರಿದ್ದಾಗ ಇದಕ್ಕೆ ತೆರೆದುಕೊಂಡವರಲ್ಲಿ ಕಾಣಿಸಿಕೊಂಡಿದೆ. ಸೂಕ್ಷ್ಮಾಣುನಾಶಕ ದ್ರವರೂಪದ ಫೀನಾಲ್ ಸೇವನೆಯಿಂದ ಮಕ್ಕಳಲ್ಲಿ ವಾಂತಿ ಹಾಗೂ ಮಂಕುತನ ಕಾಣಿಸಿಕೊಳ್ಳುವುದು.

2. ಸಕ್ಕರೆ ಅಥವಾ ಸಂಸ್ಕರಿತ ರೂಪದ ಸಿಹಿತಿಂಡಿಗಳನ್ನು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ಹಠಾತ್ತಾಗಿ ಏರುವುದು. ಅಲ್ಲದೆ, ರಕ್ತದಲ್ಲಿ ಕೊಬ್ಬಿನ ಮಟ್ಟವೂ ಅಧಿಕಗೊಳ್ಳುವುದು.

3. ಬೆಲ್ಲದಲ್ಲಿ ಕಬ್ಬಿಣದ ಅಂಶ ಇರುವುದರಿಂದ ಸಕ್ಕರೆಗಿಂತ ಬೆಲ್ಲ ಶ್ರೇಷ್ಠ. ಸಕ್ಕರೆಯಲ್ಲಿನ ಫಾಸ್ಪಾರಿಕ್ ಆಸಿಡ್ ದೇಹದಲ್ಲಿನ ವಿಟಮಿನ್ ಬಿ ಜೀವಸತ್ವವನ್ನು ನಷ್ಟಗೊಳಿಸುವುದು.

4. ಸಸ್ಯಜನ್ಯ ಪದಾರ್ಥಗಳಲ್ಲಿ ನಾರಿನಂಶ ಹೆಚ್ಚು. ಕರುಳಿನ ಕ್ಯಾನ್ಸರಿನ ಪ್ರಮಾಣ ಸಸ್ಯಾಹಾರಿಗಳಾದ ಭಾರತೀಯರಿಗಿಂತ, ನಾರಿನಂಶ ಕಡಿಮೆ ಸೇವಿಸುವ ವಿದೇಶೀಯರಲ್ಲಿ ಹೆಚ್ಚು.

5. ನಾರಿನಂಶ ಹೆಚ್ಚಾಗಿರುವ ಆಹಾರವು (ತರಕಾರಿ, ಹಣ್ಣು) ಕರುಳಿನ ಚಲನೆಯನ್ನು ಉತ್ತೇಜಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಪಿತ್ತರಸದಲ್ಲಿನ ಅಂಶಗಳು ಮರಳಿ ರಕ್ತಗತವಾಗುವುದನ್ನು ತಡೆಗಟ್ಟುವುದರ ಮೂಲಕ ರಕ್ತದ ಕೊಲೆಸ್ಟರಾಲ್ ಮಟ್ಟವನ್ನು ತಗ್ಗಿಸುತ್ತದೆ. ತೂಕ ಕಳೆದು ಕೊಳ್ಳಬಯಸುವ ವ್ಯಕ್ತಿಗಳಲ್ಲಿ ನಾರಿನಂಶದ ಸೇವನೆಯಿಂದ ಹೊಟ್ಟೆ ತುಂಬಿದ ಅನುಭವವಾಗುವುದರಿಂದ ಹೊಟ್ಟೆಬಾಕತನ ಕಡಿಮೆಯಾಗುವುದು.

6. ತರಕಾರಿಗಳು, ಧಾನ್ಯಗಳು, ಬೇಳೆಕಾಳುಗಳಲ್ಲಿ ಕೊಲೆಸ್ಟರಾಲ್ ಇಲ್ಲ. ತರಕಾರಿಗಳಲ್ಲಿನ ಸ್ಟೆರಾಲ್ ಅಂಶವು ಕರುಳಿನಲ್ಲಿ ಕೊಲೆಸ್ಟರಾಲ್‍ನ ಹೀರುವಿಕೆಯನ್ನು ತಡೆಗಟ್ಟುತ್ತದೆ. ಜಲಜನಕೀಕೃತ ಕೊಬ್ಬು ಮತ್ತು ಹೈನು ಉತ್ಪನ್ನಗಳಲ್ಲಿ ಟ್ರಾನ್ಸ್ ಕೊಬ್ಬಿನಂಶ ಅಧಿಕ. ಇವು ರಕ್ತನಾಳಗಳು ಪೆಡಸುಗಟ್ಟಲು ಕಾರಣ. ಉತ್ಪನ್ನಗಳನ್ನು ಕೆಡದೇ ಇಡಲು ಆಹಾರೋದ್ಯಮದಲ್ಲಿ ಅಧಿಕವಾಗಿ ಬಳಕೆಯಾಗುತ್ತದೆ. ಫಾಸ್ಟ್ ಫುಡ್‍ಗಳಲ್ಲಿ ಗರಿಷ್ಠಮಟ್ಟದಲ್ಲಿದೆ. ಸಂಸ್ಕರಿತ ಆಹಾರ, ಬೇಕರಿ ತಿಂಡಿಗಳಲ್ಲಿ ಹೆಚ್ಚು ಇರುವುದರಿಂದ ಡಯಾಬಿಟಿಸ್‍ಗೂ, ರಕ್ತನಾಳಗಳ ಒಳಗೋಡೆಗಳಿಗೆ ಹಾನಿ ಉಂಟು ಮಾಡುವುದರಿಂದ ಹೃದಯಾಘಾತ, ಪಕ್ಷಾಘಾತಗಳಿಗೆ ಕಾರಣ.

Dr-R.P.-Bangaradka-Prasadini-Ayurnikethana.

7. ಗರ್ಭನಿರೋಧಕ ಗುಳಿಗೆಗಳ ನಿರಂತರ, ಅಧಿಕ ಸೇವನೆಯಿಂದ ಗರ್ಭಕೋಶ ಹಾಗೂ ಸ್ತನಕ್ಯಾನ್ಸರ್‍ನ ಸಾಧ್ಯತೆ ಹೆಚ್ಚು; ಋತುಚಕ್ರ ನಿಂತವರಲ್ಲಿ ಅಂಡಾಶಯದ ಕ್ಯಾನ್ಸರ್ ತರಬಹುದು; ರಕ್ತದೊತ್ತಡ, ಮೈಗ್ರೇನ್ ಉಲ್ಬಣಗೊಳ್ಳಬಹುದು. ದೀರ್ಘಕಾಲೀನ ಹೃದ್ರೋಗ, ಮೆದುಳಿನ ರಕ್ತಪರಿಚಲನೆಯ ನ್ಯೂನತೆ ಇರುವವರಲ್ಲಿ ಹಾನಿ ತಂದೊಡ್ಡಬಹುದು. ರಕ್ತದಲ್ಲಿ ಟ್ರೈಗ್ಲಿಸರೈಡ್ ಕೊಬ್ಬಿನಂಶ ಅಧಿಕಗೊಳಿಸಬಹುದು; ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚು.

8. ಏಳು ಸಾವಿರ ರೋಗಿಗಳಲ್ಲಿನ ಎಪ್ಪತ್ತೆರಡು ಅಧ್ಯಯನಗಳ ಪ್ರಕಾರ “ಲ್ಯಾನ್ಸೆಟ್” ಪತ್ರಿಕೆಯ ವರದಿ – ಸಂಗೀತವು ಶಸ್ತ್ರಕ್ರಿಯೆಯ ನಂತರ ನೋವನ್ನು ಶಮನಗೊಳಿಸಿ ಗುಣಮುಖವಾಗಿಸುವಲ್ಲಿ ಸಹಕಾರಿ. ಸಂಗೀತ ಆಲಿಸುವುದರಿಂದ ನೋವು, ಆತಂಕ ಕಡಿಮೆಯಾಗಿದ್ದು, ನೋವು ನಿವಾರಕಗಳ ಅಗತ್ಯವನ್ನು ಕಡಿಮೆಗೊಳಿಸಿದೆ.

Also Read: What is music therapy? Know its healing power 

9. ದಿನದ ಆರು ಗಂಟೆಗಿಂತ ಹೆಚ್ಚು ಅವಧಿಯನ್ನು ಕುಳಿತುಕೊಂಡೇ ಕಳೆಯುವ ಮಹಿಳೆಯರಲ್ಲಿ ಯಾವುದೇ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು; ಸ್ತನ ಕ್ಯಾನ್ಸರ್ (10%), ಅಂಡಾಶಯ ಕ್ಯಾನ್ಸರ್(43%) ಹೆಚ್ಚಾಗಿದೆ ಎಂದು “ಕ್ಯಾನ್ಸರ್ ಎಪಿಡಿಮಿಯಾಲಜಿ” ವೈದ್ಯ ಪತ್ರಿಕೆ ವರದಿ ಮಾಡಿದೆ.

10. ಮಕ್ಕಳಲ್ಲಿ ಆಂಟಿಬಯೋಟಿಕ್‍ಗಳ ಅತಿಸೇವನೆಯು ಸಂಧಿವಾತ ಕಾಯಿಲೆಯ ಸಾಧ್ಯತೆಯನ್ನು ಹೆಚ್ಚಿಸುವುದು. ಇದು ಶ್ವಾಸನಾಳದ ಸೋಂಕಿಗೆ ಬಳಸಿದಾಗ ಹೆಚ್ಚು ಸಂಬಂಧಿಸಿದೆ. ರೋಗ ನಿರೋಧಕ ವ್ಯವಸ್ಥೆ ಕುಸಿಯುವ ಕಾರಣದಿಂದ ಗಂಭೀರ ಸೂಕ್ಷ್ಮಾಣು ಸೋಂಕಿನ ಅಪಾಯ ಹೆಚ್ಚು – ಎಂದು “ಪೆಡಿಯಾಟ್ರಿಕ್” ವೈದ್ಯ ಪತ್ರಿಕೆ ಪ್ರಕಟಿಸಿದೆ.

dr-prasad-bangaradka

ಡಾ. ಆರ್.ಪಿ.ಬಂಗಾರಡ್ಕ.
ಆಯುರ್ವೇದ ತಜ್ಞ ವೈದ್ಯರು
ಪ್ರಸಾದಿನೀ ಆಯುರ್ನಿಕೇತನ
ಆಯುರ್ವೇದ ಆಸ್ಪತ್ರೆ,
ನರಿಮೊಗರು ,ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್,
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ.
E-mail: rpbangaradka@gmail.com
Mob:89044 74122/ 97405 45979
website:www.prasadini.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!