
- ಅಡುಗೆ ಮನೆಯಲ್ಲಿ ಗಾಳಿ ಬೆಳಕು ಧಾರಾಳವಾಗಿ ಬರುವಂತಿರಬೇಕು.
- ಒಂದು “ಎಕ್ಸಾಟ್ ಫ್ಯಾನ್”ಇರುವುದು ಒಳ್ಳೆಯದು.
- ಅಡುಗೆ ಮನೆಯಲ್ಲಿ ಬಿಸಿ ನೀರು ಹಾಗೂ ತಣ್ಣೀರು ಬರುವಂತಹ ಒಂದು “ವಾಷ್ ಬೇಸಿನ್” ಇರಬೇಕು. ಬಿಸಿ ನೀರಿಗಾಗಿ ಸೌರಶಕ್ತಿಯನ್ನು ಬಳಸಿಕೊಳ್ಳುವುದು ಒಳ್ಳೆಯದು. ಹತ್ತಿರದಲ್ಲಿ ಸೋಪಿರಬೇಕು. ಮೊಣಕೈಯಿಂದ ನೀರನ್ನು ತಿರುಗಿಸಲು ಬರುವಂತಹ ನಲ್ಲಿಯಿರಬೇಕು.
- ಅಡುಗೆ ಮನೆಯ ಬೇಸಿನ್/ ಸಿಂಕ್ ರೋಗ ಕ್ರಿಮಿಗಳ ಗೂಡಾಗಿರುತ್ತದೆ. ಇದನ್ನು ಸ್ವಚ್ಛಗೊಳಿಸಲು ಸೂಕ್ತ ಕ್ರಿಮಿನಾಶಕವನ್ನು ನಿಯಮಿತವಾಗಿ ಬಳಸಬೇಕು.
- ಅಡುಗೆ ಮಾಡುವ ಕಟ್ಟೆಯನ್ನು ಒರೆಸಲು 4-5 ಶುಭ್ರ ಬಟ್ಟೆ/ ಸ್ಪಾಂಜ್ ಇರಬೇಕು. ಒಂದು ಸಲ ಒರೆಸಲು ಬಳಸಿದ ಬಟ್ಟೆ,ಸ್ಪಾಂಜನ್ನು ಮತ್ತೆ ಒರೆಸಲು ಬಳಸಬಾರದು. ಅದನ್ನು ತೊಳೆಯಲು ಹಾಕಬೇಕು.
- ಅಡುಗೆ ಮಾಡುವಾಗ ಉಳಿಯುವ ನಾರು, ಸಿಪ್ಪೆ ಇತ್ಯಾದಿಗಳನ್ನು ಹಾಕಲು ಹಾಗೂ ಕಸಮುಸುರೆಯನ್ನು ಹಾಕಿಡಲು ಕಾಲಿನಿಂದ ಒತ್ತಿ ಮುಚ್ಚಳ ತೆಗೆಯಬಹುದಾದ ಒಂದು ಬಕೆಟನ್ನು ಇಟ್ಟುಕೊಳ್ಳಬೇಕು. ಎಲ್ಲ ಕಸವನ್ನು ಅದರೊಳಗೆ ಹಾಕಿಡಬೇಕು. ದಿನಕ್ಕೆ ಒಂದು ಸಲ ಅದರೊಳಗಿರುವುದನ್ನೆಲ್ಲ ಖಾಲಿ ಮಾಡಬೇಕು.
- ರಾತ್ರಿಯಲ್ಲಿ ಕಿಟಕಿ ಬಾಗಿಲನ್ನು ಭದ್ರವಾಗಿ ಮುಚ್ಚಿಡಬೇಕು. ಹಲ್ಲಿ, ಜಿರಲೆ, ಇಲಿಗಳು ಒಳಗೆ ಬರುವಂತಿರಬಾರದು. ವಾಶ್ ಬೇಸಿನ್ ಒಳಗೊಂಡಂತೆ ಅಡುಗೆ ಮನೆಯಲ್ಲಿ ಎಲ್ಲಿಯೂ ಆಹಾರದ ಚೂರು ಪಾರು ಉಳಿದಿರಬಾರದು. ಇವೂ ಜಿರಲೆಗಳನ್ನು ಆಹ್ವಾನಿಸುತ್ತವೆ.
- ಹಸಿ ತರಕಾರಿಗಳನ್ನು ಪ್ರತ್ಯೇಕವಾಗಿಡಬೇಕು. ಇವು ಸಿದ್ಧಪಡಿಸಿದ ಆಹಾರದ ಸಂಪರ್ಕಕ್ಕೆ ಬರುವಂತಿರಬಾರದು.
- ಹಸಿ ತರಕಾರಿಗಳನ್ನು ತೊಳೆದು ಹೆಚ್ಚಲು ಬಳಸುವ ಪಾತ್ರೆ ಹಾಗೂ ಅಡುಗೆ ಮಾಡಲು ಬಳಸುವ ಪಾತ್ರೆಗಳು ಬೇರೆ ಬೇರೆಯಾಗಿರಬೇಕು. ಇವನ್ನು ಅದಲು ಬದಲು ಮಾಡಬಾರದು.
- ತರಕಾರಿ ಹೆಚ್ಚಿದ ಚಾಕುವಿನಿಂದ ಹಣ್ಣನ್ನು ಹೆಚ್ಚಬಾರದು. ಹಣ್ಣು ಹಾಗೂ ತರಕಾರಿ ಹೆಚ್ಚಲು ಬಳಸಿದ ಉಪಕರಣಗಳನ್ನು ಕೆಲಸ ಮುಗಿದ ಕೂಡಲೇ ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಎತ್ತಿಡಬೇಕು. ಈ ಮಾತು ಹೆಚ್ಚಲು ಬಳಸಿದ ಮಣೆಗಳಿಗೂ ಅನ್ವಯಿಸುತ್ತದೆ.
- ಹೊರಗಡೆ ಸುತ್ತಾಡಿದ ಕೊಳಕು ಕಾಲುಗಳನ್ನು ತೊಳೆಯದೇ ಅಡುಗೆ ಮನೆಯನ್ನು ಪ್ರವೇಶಿಸಬೇಡಿ. ಚಪ್ಪಲಿ ಶೂ ಹಾಕಿಕೊಂಡು ಖಂಡಿತ ಅಡುಗೆ ಮನೆ ಪ್ರವೇಶಿಸಲು ಯಾರಿಗೂ ಅವಕಾಶ ಕೊಡಬೇಡಿ.
- ಅನಗತ್ಯ ಉಪಯುಕ್ತವಲ್ಲದ ವಸ್ತುಗಳನ್ನು ಅಡುಗೆ ಮನೆಯಲ್ಲಿಡಬೇಡಿ.
error: Content is protected !!