ಆರೋಗ್ಯ ಆನಂದಮಯ ಬದುಕಿಗೆ ರಹದಾರಿ

ಆರೋಗ್ಯ ಆನಂದಮಯ ಬದುಕಿಗೆ ರಹದಾರಿ. ಇಂದಿನ ಆಧುನಿಕ ಜೀವನದಲ್ಲಿ ಒತ್ತಡ ನಿಭಾಯಿಸುವುದು ಅನಿವಾರ್ಯ. ಬದುಕಿನ ಪ್ರತಿ ಹಂತದಲ್ಲೂ ಒತ್ತಡ ಇದ್ದೇ ಇರುತ್ತದೆ. ಪ್ರತಿಯೊಬ್ಬರು ಸಂತೋಷವಾಗಿರಲು ಮತ್ತು ಆ ಮೂಲಕ ಆರೋಗ್ಯ ಹೊಂದಲು ಅನುಕೂಲವಾಗುವಂತೆ ಇಲ್ಲಿ ಅನುಸರಿಸಬಹುದಾದ ಕೆಲವು ಸರಳ ವಿಧಾನಗಳನ್ನು ನೀಡಲಾಗಿದೆ.

ಆರೋಗ್ಯ ಆನಂದಮಯ ಬದುಕಿಗೆ ರಹದಾರಿ

ಸಂತೋಷಕ್ಕೂ ಮತ್ತು ಆರೋಗ್ಯಕ್ಕೂ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ. ಇತ್ತೀಚಿನ ದಿನಗಳಲ್ಲಿ ಈ ಮಾತು ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಸಂತೋಷವು ಆರೋಗ್ಯವರ್ಧನೆಗೆ ಸಹಕಾರಿ ಹಾಗೆಯೇ ಆರೋಗ್ಯವು ಸಂತೋಷದ ಜೀವನಕ್ಕೆ ರಹದಾರಿ ಎಂಬುದು ಅನೇಕ ಅಧ್ಯಯನ ಮತ್ತು ಸಂಶೋಧನೆಗಳಿಂದ ದೃಢಪಟ್ಟಿದೆ. ಪೂರಕ ಆರೋಗ್ಯದೊಂದಿಗೆ ಸಂತೋಷ ಹೊಂದಲು ಬಹು ಮಾರ್ಗಗಳು ಇವೆ. ಓರ್ವ ವ್ಯಕ್ತಿಯು ಸಂತೋಷವಾಗಿರಬೇಕಾದರೆ ಉತ್ತಮ ಆರೋಗ್ಯ ಹೊಂದಿರಬೇಕು.

ಆರೋಗ್ಯವಾಗಿರಬೇಕಾದರೆ ಪೌಷ್ಠಿಕಾಂಶ, ಸಂತುಲಿತ ಆಹಾರವನ್ನು ಸೇವಿಸಬೇಕು. ವ್ಯಕ್ತಿ ಆರೋಗ್ಯವಾಗಿದ್ದರೆ ಆದು ಆತನ ವೈಯಕ್ತಿಕ ಸಂತೋಷ ಮತ್ತು ಕೌಟುಂಬಿಕ ಆನಂದಕ್ಕೂ ಕಾರಣವಾಗುತ್ತದೆ. ಪರಿಪೂರ್ಣ ಸಂತೋಷ ಹೊಂದಲು ತಾದಾತಾನ್ಮುಭೂತಿಯ ಭಾವನೆ ಹೊಂದಿರಬೇಕು. ಸಂತೋಷವಾಗಿರುವುದು ವ್ಯಕ್ತಿಯ ಜವಾಬ್ದಾರಿಯಾಗಿರುತ್ತದೆ. ಈ ಹೊಣೆಗಾರಿಕೆಗೆ ಅನುಗುಣವಾಗಿ ಸಂತೋಷವು ಜೀವನದ ಸಾರ್ಥಕತೆಗೆ ಅನುವು ಮಾಡಿಕೊಡುತ್ತದೆ. ಸಂತೋಷ-ಸಂತಸ-ಆನಂದವು ನಮ್ಮ ಶಕ್ತಿಯಾಗಿದ್ದು, ನಮ್ಮ ಬದುಕಿನ ಯಶಸ್ಸಿನಲ್ಲಿ ಬಹು ಮಹತ್ವಪೂರ್ಣ ಪಾತ್ರ ವಹಿಸುತ್ತದೆ.

ಸಂತೋಷವು ನಮ್ಮನ್ನು ಸದೃಢಗೊಳಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ನಾವು ಸಂತಸ ಹೊಂದಬೇಕಾದರೆ ಆಂತರಿಕ ಮತ್ತು ಬಾಹ್ಯ ಆಲೋಚನೆಗಳ ಶುದ್ಧವಾಗಿರಬೇಕು. ನಿಮ್ಮ ಬುದ್ಧಿಶಕ್ತಿಗಳನ್ನು ನೀವು ಸದ್ಭಾವದೊಂದಿಗೆ ಕಾರ್ಯರೂಪಕ್ಕೆ ತಂದಾಗ ಸಂತೋಷ ಉದ್ಭವವಾಗುತ್ತದೆ. ಸಂತೋಷವು ಒಂದು ರೀತಿಯಲ್ಲಿ ಸಮತೋಲನೆ ಮತ್ತು ಸೌಹಾರ್ದತೆಯ ವಿಷಯ.

ಭಗವದ್ಗೀತೆಯಲ್ಲಿ ಸಂತೋಷದ ಬಗ್ಗೆ  ಉಲ್ಲೇಖ:

ಭಗವದ್ಗೀತೆಯಲ್ಲಿಯೂ ಸಂತೋಷದ ಬಗ್ಗೆ ವಿವರವಾದ ಉಲ್ಲೇಖವಿದೆ. ಸಂತೋಷವನ್ನು ಅಕ್ಷಯಸುಖಂ ಎಂದು ಬಣ್ಣಿಸಲಾಗಿದೆ. ಇದು ನಾಶವಿಲ್ಲದ ಆನಂದ. ಹಾಗೆಯೇ ಇದಕ್ಕೆ ಆರಂಭ ಅಥವಾ ಅಂತ್ಯವಿಲ್ಲ. ಸಂತೋಷವು ಕೆಲವೊಮ್ಮೆ ದಿಢೀರ್ ಉದ್ಭವಿಸುತ್ತದೆ. ಪ್ರತಿಯೊಬ್ಬ ಮನುಷ್ಯನು ಸದಾ ಸಂತೋಷವಾಗಿರಬೇಕು. ಸದಾ ನಗುನಗುತಾ ಇರಬೇಕು. ಚಿಂತೆ ಮಾಡಬಾರದು. ಚಿಂತೆ ನಿರರ್ಥಕ ಮತ್ತು ಅನಿಷ್ಟ ಉಂಟು ಮಾಡುವಂಥದ್ದು. ಚಿಂತಿಸಿ ಫಲವಿಲ್ಲ ಎಂದು ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನು ಬೋಧಿಸಿದ್ದಾನೆ.

Also read: ಶ್ರೀ ಕೃಷ್ಣ ಜನ್ಮಾಷ್ಟಮಿ:ಮಕ್ಕಳಿಗು ಬೆಣ್ಣೆಗೂ ಯಾವ ಸಂಬಂಧ ? 

1. ಸಂತೃಪ್ತಿಯ ಬದುಕು : ಇದ್ದುದರಲ್ಲೇ ಸು:ಖ ಸಂತೋಷ ಹೊಂದುವುದು ಯಶಸ್ವಿ ಜೀವನದ ಒಂದು ಕಲೆ. ಆಸೆಯೇ ದು:ಖಕ್ಕೆ ಮೂಲ ಎಂದು ಭಗವಾನ್ ಬುದ್ಧ ಹೇಳಿದ್ದಾನೆ. ಮನುಷ್ಯನ ಆಸೆಗೆ ಮಿತಿ ಇಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬ ಗಾದೆ ಮಾತು ಎಲ್ಲ ಕಾಲಕ್ಕೂ ಅನ್ವಯಿಸುತ್ತದೆ. ಇರುವುದರಲ್ಲೇ ತೃಪ್ತಿ ಕಾಣುವುದರಿಂದ ಸಂತೋಷ ಲಭಿಸುತ್ತದೆ.

2. ಇತರರನ್ನು ಪ್ರೀತಿಸಿ : ಸಹಬಾಳ್ವೆಯಿಂದ, ಪ್ರೀತಿ-ವಿಶ್ವಾಸ-ಸೌಹಾರ್ದತೆಯಿಂದ ಸಂತೋಷ ಲಭಿಸುತ್ತದೆ. ಇತರರಿಗೆ ಕೈಲಾದಷ್ಟು ಸಹಾಯ ಮಾಡುವುದರಿಂದ ಆತ್ಮ ತೃಪ್ತಿ ಜೊತೆಗೆ ಮನಸ್ಸಂತೋಷ ನಿಮ್ಮದಾಗುತ್ತದೆ.

3. ಉತ್ತಮ ಬಾಂಧವ್ಯ ಬೆಸುಗೆ : ಯಾವುದೇ ಯಶಸ್ವಿ ವ್ಯಕ್ತಿಯನ್ನು ಉದಾಹರಣೆಗೆ ತೆಗೆದುಕೊಂಡರೂ ಇತರರೊಂದಿಗೆ ಉತ್ತಮ ಸಂಬಂಧ ಸುಧಾರಣೆ ಹೊಂದಿರುವುದರಿಂದ ಅವರ ಜೀವನದಲ್ಲಿ ಸಂತೋಷ-ಸಫಲತೆಗಳು ಕಂಡುಬರುತ್ತವೆ. ಇದರಿಂದ ವೈಯಕ್ತಿಕ ಸಂತೋಷದ ಜೊತೆಗೆ ಆರೋಗ್ಯಕರ ಸಾಮಾಜಿಕ ಸಂಪರ್ಕವೂ ವೃದ್ಧಿಸುತ್ತದೆ. ಉತ್ತಮ ಬಾಂಧವ್ಯ ಬೇಸುಗೆಯಿಂದ ಸಂತೋಷ ಮತ್ತು ಪರಸ್ಪರ ಅಭಿವೃದ್ಧಿ ಸಾಧ್ಯ.

4. ಕ್ರಿಯಾಶೀಲತೆ : ದೇಹ ಮತ್ತು ಮನಸ್ಸು ಸಂತೋಷದಿಂದ ಇರಬೇಕಾದರೆ ಪ್ರತಿಯೊಬ್ಬರೂ ಕ್ರಿಯಾಶೀಲರಾಗಿರಬೇಕು. ವ್ಯಾಯಾಮ, ಧಾನ್ಯ, ಯೋಗ, ಅರೋಗ್ಯಕರ ಜೀವನ ಶೈಲಿ, ಉತ್ತಮ ಹವ್ಯಾಸಗಳಂಥ ಕ್ರಿಯಾಶೀಲನೆಗಳು ದೇಹಕ್ಕೆ ಆರೋಗ್ಯ ಮತ್ತು ಮನಸ್ಸಿಗೆ ಸಂತೋಷ ನೀಡುತ್ತವೆ.

5. ಒತ್ತಡ ನಿಭಾಯಿಸುವ ಕಲೆ : ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ರೀತಿಯ ಒತ್ತಡ ಇದ್ದೇ ಇರುತ್ತದೆ. ಅದರೆ ಒತ್ತಡವನ್ನೇ ವಿನಾಕಾರಣ ಬೃಹದಾಕಾರವಾಗಿ ಮಾಡಿಕೊಳ್ಳುವುದರಿಂದ ಚಿಂತೆ ಹೆಚ್ಚಾಗಿ ಸಂತೋಷ ದೂರವಾಗುತ್ತದೆ. ಸಂತೋಷ ದೂರವಾದಾಗ ರೋಗ ಹತ್ತಿರವಾಗುತ್ತದೆ. ಒತ್ತಡವು ಆನಂದ ಮತ್ತು ಆರೋಗ್ಯಕ್ಕೆ ವೈರಿ. ಆದ್ದರಿಂದ ಅನಗತ್ಯವಾಗಿ ಒತ್ತಡಕ್ಕೆ ಒಳಗಾಗುವುದರಲ್ಲಿ ಅರ್ಥವಿಲ್ಲ. ಒತ್ತಡವಿಲ್ಲದ ಜೀವನವಿಲ್ಲ. ಒತ್ತಡಕ್ಕೆ ಒಳಗಾಗುವುದರಿಂದ ವೈಯಕ್ತಿಕ ಆರೋಗ್ಯ ಹದಗೆಡುತ್ತದೆ. ಒತ್ತಡವು ಕುಟುಂಬದ ಆರೋಗ್ಯಕರ ವಾತಾವರಣದ ಮೇಲೂ ಪರಿಣಾಮ ಬೀರುತ್ತದೆ. ಸಮಸ್ಯೆ ಸೃಷ್ಟಿಯಾದಾಗ ಅದಕ್ಕೊಂದು ಪರಿಹಾರ ಇದ್ದೇ ಇರುತ್ತದೆ. ಸಮಸ್ಯೆಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಒತ್ತಡವನ್ನು ನಿಭಾಯಿಸುವ ಜಾಣ್ಮೆಯನ್ನು ಪ್ರತಿಯೊಬ್ಬರೂ ಕಲಿಯಬೇಕು.

Also Read: ಮನಸ್ಸು ಮತ್ತು ದೇಹದ ಮೇಲೆ ಒತ್ತಡ – ಪರಿಣಾಮಗಳು ಯಾವುವು? ನಿರ್ವಹಣೆ ಹೇಗೆ? 

6.ಕೃತಜ್ಞತೆ : ಕೃತಜ್ಞತೆ ಮತ್ತು ಉಪಕಾರ ಸ್ಮರಣೆಯೂ ವ್ಯಕ್ತಿಯ ಜೀವನದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಬಲ್ಲದು. ಬೇರೊಬ್ಬರಿಂದ ನಾವು ಯಾವುದೇ ರೀತಿಯ ಸಹಾಯ ಮತ್ತು ನೆರವು ಪಡೆದಾಗ ಅವರಿಗೆ ಧನ್ಯವಾದ ಹೇಳಿದರೆ ನಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ನೆರವು ನೀಡಿದವರು ಸಂತೋಷಪಡುತ್ತಾರೆ. ಇದರಿಂದ ಪರಸ್ಪರ ಉತ್ತಮ ಸಂಬಂಧ ವೃದ್ಧಿಯಾಗುತ್ತದೆ.

Mustafa-Nadim-Kirmani.

ಡಾ. ಮುಸ್ತಫಾ ನದೀಂ ಕಿರ್ಮಾನಿ
ಅಸೋಸಿಯೇಟ್ ಪ್ರೊಫೆಸರ್ ಮತ್ತು ಕ್ಲಿನಿಕಲ್ ಫಿಸಿಯೋಲಾಜಿ ಮುಖ್ಯಸ್ಥರು,
ಇನ್ಸ್‍ಟಿಟ್ಯೂಟ್ ಅಫ್ ಬಿಹೇವಿಯರಲ್ ಸೈನ್ಸಸ್,
ಎಸ್‍ಜಿಟಿ ಮೆಡಿಕಲ್ ಯೂನಿವರ್ಸಿಟಿ, ಗುರ್‍ಗಾಂವ್, ಹರಿಯಾಣ,
nadeemcpnimhans@gmail.com
ದೂ.: 07426871886 / 08267871886

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!