ಡಯಾಬಿಟಿಸ್ ನಿಯಂತ್ರಣಕ್ಕಾಗಿ ನೀವೇನು ಸೇವಿಸುತ್ತೀರಿ ಎಂಬುದು ಮಾತ್ರ ಮುಖ್ಯವಲ್ಲ; ನೀವು ಎಷ್ಟು ಪ್ರಮಾಣದಲ್ಲಿ ತಿನ್ನುತ್ತೀರಿ ಎಂಬುದೂ ಸಹ ಮುಖ್ಯವಾಗಿರುತ್ತದೆ. ಬಿರುಸು ನಡಿಗೆ, ಜಾಗಿಂಗ್, ವಾಯುವಿಹಾರ ಇತ್ಯಾದಿ ವ್ಯಾಯಾಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕ್ಷಿಪ್ರವಾಗಿ ಕಡಿಮೆ ಮಾಡುತ್ತದೆ.
ನೀವೇನು ಮಾಡಬೇಕು?
1. ಸಮ ಪ್ರಮಾಣದ ದೇಹ ತೂಕವನ್ನು ನಿರ್ವಹಣೆ ಮಾಡಿ
2. ಆರೋಗ್ಯಕರ ಪೌಷ್ಠಿಕಾಂಶ ಆಹಾರ ಸೇವನೆ ಅಭ್ಯಾಸ ಮಾಡಿಕೊಳ್ಳಿ.
3. ಮದ್ಯಪಾನ ಮತ್ತು ಧೂಮಪಾನವನ್ನು ನಿಯಂತ್ರಿಸಿ
4. ಅಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ
5. ನಿಯತ ವ್ಯಾಯಾಮ ಮಾಡಿ
ಬಿರುಸು ನಡಿಗೆ, ಜಾಗಿಂಗ್, ವಾಯುವಿಹಾರ ಇತ್ಯಾದಿ ವ್ಯಾಯಾಮ ಹೇಗೆ ನೆರವಾಗುತ್ತದೆ ?
1. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕ್ಷಿಪ್ರವಾಗಿ ಕಡಿಮೆ ಮಾಡುತ್ತದೆ.
2. ಇನ್ಸುಲಿನ್‍ನನ್ನು ಬಳಸಿಕೊಳ್ಳುವ ದೇಹದ ಸಾಮಥ್ರ್ಯವನ್ನು ಸುಧಾರಿಸುತ್ತದೆ.
3. ಇನ್ಸುಲಿನ್ ಅಗತ್ಯವನ್ನು ಕಡಿಮೆ ಮಾಡುತ್ತದೆ.
4. ಡಯಾಬಿಟಸ್‍ನನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸುತ್ತದೆ
5. ಹೃದ್ರೋಗ ಗಂಡಾಂತರವನ್ನು ಕಡಿಮೆ ಮಾಡುತ್ತದೆ.
ಆರೋಗ್ಯಕರ ಆಹಾರ ಸೇವನೆಯು ಡಯಾಬಿಟಿಸ್ ನಿಯಂತ್ರಣಕ್ಕೆ ಸಹಕಾರಿ
1. ಸಣ್ಣ ಪ್ರಮಾಣದಿಂದ ಮಧ್ಯಮ ಪ್ರಮಾಣದ ವೈವಿಧ್ಯಮಯ ಅಹಾರಗಳನ್ನು ಆಯ್ಕೆ ಮಾಡಿಕೊಳ್ಳಿ.
2. ಪ್ರತಿ ದಿನ ಅದೇ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ.
3. ಪ್ರತಿದಿನ ಅದೇ ಪ್ರಮಾಣದ ಆಹಾರ ಸೇವಿಸಿ.
4. ಆಹಾರ ಸೇವನೆಯನ್ನು ತಪ್ಪಿಸಬೇಡಿ.
5. ಶರ್ಕರಪಿಷ್ಠ ಆಹಾರ ಸೇವಿಸಿ
6. ಬ್ರೌನ್ ಬ್ರೆಡ್
7. ಆಲೂಗಡ್ಡೆಗಳು
8. ಅನ್ನ
9. ಚಪಾತಿಗಳು
10. ಬೇಳೆ ಕಾಳುಗಳು
ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ
1. ಸೊಪ್ಪುಗಳು, ಹಾಗಲಕಾಯಿ, ಲೆಟಿಸ್ ತರಕಾರಿ ಸೊಪ್ಪುಗಳು, ಬದನೆಕಾಯಿ, ಬೆಂಡೇಕಾಯಿ, ಎಲೆಕೋಸು, ಹೂ ಕೋಸು, ಕ್ಯಾರೆಟ್, ಸೋಯಾ ಬೀನ್ಸ್, ನುಗ್ಗೆಕಾಯಿ ಉತ್ತಮ
2. ಸೇಬು, ಜಾಮೂನ್ ಇತ್ಯಾದಿ ಹಣ್ಣುಗಳನ್ನು ಸೇವಿಸಬಹುದು.
3. ಅಧಿಕ ನಾರಿನಂಶವಿರುವ ಆಹಾರವನ್ನು ಹೆಚ್ಚಾಗಿ ಆಯ್ಕೆ ಮಾಡಿ
4. ಹಣ್ಣುಗಳು, ತರಕಾರಿಗಳು, ಆಲೂಗಡ್ಡೆಗಳು, ಎಲ್ಲ ಧಾನ್ಯಗಳು, ಓಟ್ಸ್ ಬೇಳೆಕಾಳುಗಳು, ಬ್ರೌನ್ ಬ್ರೇಡ್, ಬ್ರೆಡ್ ಇತ್ಯಾದಿ
ಪ್ರಾಣಿಜನ್ಯ ಅಥವಾ ಸ್ಯಾಚುರೇಟೆಡ್ ಕೊಬ್ಬು ಸೇವನೆಯನ್ನು ಕಡಿಮೆ ಮಾಡಿ
1. ಆಹಾರ ತಯಾರಿಸುವಾಗ ಕಡಿಮೆ ಎಣ್ಣೆಯನ್ನು ಬಳಸಿ
2. ಕಡಿಮೆ ಕೊಬ್ಬಿನ ಹಾಲನ್ನು ಉಪಯೋಗಿಸಿ
3. ಬೆಣ್ಣೆ ಬದಲು ಕಡಿಮೆ ಕೊಬ್ಬನ್ನು ಬಳಸಿ
4. ಸ್ಯಾಚುರೇಟೆಡ್ ಅಲ್ಲದ ಕೊಬ್ಬನ್ನು ಬಳಸಿ. ಉದಾಹರಣೆಗೆ ಆಲಿವ್ ಅಯಿಲ್.
5. ಪುರಿಯಂಥ ಉರಿದ ಆಹಾರ ಪದಾರ್ಥಗಳು ಮತ್ತು ಬೀದಿ ಬದಿಯ ತಿನಿಸುಗಳನ್ನು ತಪ್ಪಿಸಬೇಕು.
6. ಉಪ್ಪು ಸೇವನೆಯನ್ನು ಮಿತಿಗೊಳಿಸಿ
7. ಸಕ್ಕರೆಯುಕ್ತ ಆಹಾರ ಬಳಕೆಯನ್ನು ಕಡಿಮೆ ಮಾಡಿ
8.ಸಿಹಿ ತಿಂಡಿಗಳು, ಐಸ್‍ಕ್ರೀಂ, ಚಾಕೋಲೇಟ್‍ಗಳು, ಕ್ಯಾಂಡಿಗಳು ಇತ್ಯಾದಿಯಲ್ಲಿರುವ ಯಾವುದೇ ರೂಪದ ಸಕ್ಕರೆಯನ್ನು ತಪ್ಪಿಸಿ.
9. ಸಕ್ಕರೆ ಅಂಶ ಅಧಿಕವಾಗಿರುವ ಬಾಳೆಹಣ್ಣು, ಸಪೋಟಾ, ದ್ರಾಕ್ಷಿ, ಮಾವಿನಹಣ್ಣು ಇತ್ಯಾದಿಯಂಥ ಹಣ್ಣುಗಳ ಬಳಕೆಯನ್ನು ತಪ್ಪಿಸಬೇಕು.
ಡಾ.ವಸುಂಧರಾ ಭೂಪತಿ
ಸಿದ್ಧಾರ್ಥ ಆಯುರ್ವೇದ ಕ್ಲಿನಿಕ್
ನಂ.222, 2ನ `ಇ’ ಕ್ರಾಸ್, 3ನೇ ಬ್ಲಾಕ್, 3ನೇ ಸ್ಟೇಜ್, ಬಸವೇಶ್ವರನಗರ,
ಬೆಂಗಳೂರು – 560 079, ಮೊ: 94803 34750