ಹೃದ್ರೋಗ – ಒತ್ತಡವೇ ಮೂಲ…!?

ತೀವ್ರವಾದ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ತಜ್ಞ ವೈದ್ಯರ ಸಲಹೆ ಅಗತ್ಯ. ಮಿತಹಾರ ಸೇವನೆ, ಲಘು ಆಹಾರ ಅವಶ್ಯಕ. ನಿದ್ರಾಹೀನತೆ ಒಳ್ಳೆಯದಲ್ಲ. ಮದ್ಯಪಾನ, ಧೂಮಪಾನ ತ್ಯಜಿಸಬೇಕು. ವ್ಯಾಯಾಮ ಅತ್ಯಗತ್ಯ. ಯೋಗ, ಧ್ಯಾನ, ಸಾಹಿತ್ಯ, ಸಂಗೀತ ಬದುಕಾಗಬೇಕು. ಎಲ್ಲ ವಿಷಯಗಳಲ್ಲೂ ಸದಾ ಸಕಾರಾತ್ಮಕ ದೃಷ್ಟಿಕೋನ ಇರಲಿ, ನಕಾರಾತ್ಮಕ ಭಾವನೆ ಬೇಡ.

ಒತ್ತಡಕ್ಕೆ ಮತ್ತು ಹೃದ್ರೋಗಕ್ಕೆ ಅವಿನಾಭಾವ ಸಂಬಂಧ. ಯಾರ ಜೀವನದಲ್ಲಾದರೂ ಎಷ್ಟೋ ಅಷ್ಟು ಒತ್ತಡ ಇರುವುದು ಸಹಜ. ಅದನ್ನು ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಆ ಒತ್ತಡ ಒಂದೇ ಸಮನಾಗಿ ಏರುತ್ತಲಿದ್ದರೆ ಅದು ಉದ್ಯೋಗ ಸಮಸ್ಯೆಗಳಿಗೆ, ಮಾನಸಿಕ ಸಮಸ್ಯೆಗಳಿಗೆ ಸುಗಮ ಹಾದಿ ಮಾಡುತ್ತದೆ. ಜತೆಗೆ ಇತರೆ ಶಾರೀರಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ.ಒತ್ತಡದಿಂದ ಉಂಟಾಗುವ ಸಮಸ್ಯೆಗಳಲ್ಲಿ ಹೃದ್ರೋಗವೂ ಒಂದು. ಇದು ಒಮ್ಮೊಮ್ಮೆ ಪ್ರಮಾದವಾಗಿ ಪರಿವರ್ತನೆಯಾಗಿ ಹೃದಯಘಾತವೂ ಸಂಭವಿಸುತ್ತದೆ. ಹೀಗಾಗಿ ಒತ್ತಡ, ಹೃದ್ರೋಗ ಇವೆರಡಕ್ಕೂ ಇರುವ ಸಂಬಂಧ, ಅದನ್ನು ತಡೆಗಟ್ಟಲು ಕೆಲವು ಮುನ್ನಚ್ಚರಿಕೆಗಳನ್ನು ಕ್ರಮಗಳನ್ನು ಅನುಸರಿಬೇಕಾಗುತ್ತದೆ. ಒತ್ತಡ ಎನ್ನುವುದು ಒಂದೊಂದು ಸಾರಿ ನೇರವಾಗಿ ಹೃದ್ರೋಗಕ್ಕೆ ಕಾರಣವಾಗಬಹುದು. ಇಲ್ಲವೇ ಅದು ಹೃದ್ರೋಗವನ್ನು ಹೆಚ್ಚು ಮಾಡುವ ಅಥವಾ ಪ್ರೇರಪಿಸಲು ಸಹ ಕಾರಣಬಹುದು.
ದುಷ್ಪರಿಣಾಮಗಳು ಹೀಗೆ?
ನಮ್ಮಲ್ಲಿ ಒತ್ತಡ ಹೆಚ್ಚಾದಾಗ ಆಡ್ರಿನಲಿನ್ ಕಾರ್ಟಿಜಾಲ್‍ನಂತ ಹಾರ್ಮೋನ್ಸ್ ಹೆಚ್ಚಾಗಿ ಉತ್ಪಾದನೆಯಾಗುತ್ತದೆ. ಒತ್ತಡದೊಂದಿಗೆ ಉದ್ವೇಗ ಹೆಚ್ಚಲು ಈ ಹಾರ್ಮೋನ್ಸ್‍ಗಳೇ ಕಾರಣ. ಈ ಹಾರ್ಮೋನ್ಸ್ ಕಾರಣವಾಗಿ ನರಗಳಲ್ಲಿರುವ ನ್ಯೂರೋ ಕೆಮಿಕಲ್ ಬದಲಾವಣೆಗಳಿಗೆ ಹಾನಿ ಮಾಡುತ್ತದೆ. ಈ ಹಾನಿಯಿಂದ ರಕ್ತದೊತ್ತಡ ಹೆಚ್ಚುವುದು, ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶ ಅಧಿಕವಾಗುವುದು, ಸಕ್ಕರೆ ಅಂಶ ಏರುವುದು.
ಹೆಚ್ಚಾಗಿ ಆಹಾರ ಸೇವನೆ ಮಾಡುವುದು, ವ್ಯಾಯಾಮ ಮಾಡದಿರುವುದು ಇವು ದೇಹ ಮತ್ತು ಮನಸ್ಸಿನಲ್ಲಿ ರೂಪುಗೊಳ್ಳುತ್ತವೆ. ಅಲ್ಲದೆ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸ್ಮೋಕಿಂಗ್ (ಧೂಮಪಾನ) ಮಾಡುವುದು, ಮದ್ಯಪಾನ ಸೇವನೆಗೆ ಬಲಿಯಾಗುವುದು. ಒತ್ತಡದ ಕಾರಣವಾಗಿ ಕ್ರಮಬದ್ಧ ನಿದ್ರೆಗೂ ಚ್ಯುತಿ ಉಂಟಾಗುವುದು. ಹೀಗೆ ಇವೆಲ್ಲವೂ ಪರೋಕ್ಷವಾಗಿ ಹೃದಯಾಘಾತವನ್ನು ಪ್ರೇರೇಪಿಸುವ ಅಂಶಗಳು.
ಹೃದಯಾಘಾತ ಮೂಲ
ಪ್ರತ್ಯಕ್ಷವಾಗಿ ಕೂಡ ಒತ್ತಡದಿಂದ ಹೃದಯ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಆಗುತ್ತವೆ. ಒಮ್ಮೊಮ್ಮೆ ವಿಪರೀತವಾದ ಒತ್ತಡ ಏರುವುದರಿಂದ ಅವು ಹೃದಯದ ಮೇಲೆ ಭಾರ ಹೆಚ್ಚಿಸಿ, ಹೃದಯಾಘಾತಕ್ಕೆ ಮೂಲ ಕಾರಣವಾಗುತ್ತದೆ. ಒಂದು ಸಾರಿ ತೀವ್ರವಾದ ಒತ್ತಡ ಉಂಟಾದಾಗ ರಕ್ತನಾಳದೊಳಗಿರುವ ಒಳಗೋಡೆಗಳು ಹಾನಿಯಾಗಿ ಕ್ರಿಯಾಶೀಲತೆ ಕುಂದುತ್ತದೆ.
ಇದರಿಂದ ರಕ್ತವು ಹೃದಯನಾಳಗಳಲ್ಲಿ ಸರಾಗವಾಗಿ ಹರಿಯುವುದಕ್ಕೆ ಅಡ್ಡಿಯಾಗುತ್ತದೆ. ಹೀಗೆ ಹಾನಿಗೊಳಗಾದ ರಕ್ತನಾಳಗಳಲ್ಲಿ ರಕ್ತವು ಹರಿಯದೆ ಗಡ್ಡೆ ಕಟ್ಟೆ ಸ್ಥಗಿತವಾಗುತ್ತದೆ. ಈ ಗಡ್ಡೆಗಳು ರಕ್ತ ಪರಿಚಲನೆಗೆ ಮತ್ತಷ್ಟು ಅಡ್ಡಿಪಡಿಸುತ್ತದೆ. ಈ ಕ್ಲಾಟ್ಸ್ ಮತ್ತಷ್ಟು ಹೆಚ್ಚಾಗಿ ಸಕ್ರಮವಾಗಿ ಹೃದಯಕ್ಕೆ ಸರಬರಾಜಗಬೇಕಾದ ರಕ್ತವು ಸರಬರಾಜಾಗದೆ ಹೃದಯಾಘಾತಕ್ಕೆ ಸುಗಮ ಹಾದಿ ಮಾಡಿಕೊಡುತ್ತದೆ.
ಒತ್ತಡದ ಪರಿಣಾಮ….
ನಿದ್ರಾಹೀನತೆ, ಇಲ್ಲವೆ ದೀರ್ಘ ಸಮಯ ನಿದ್ರೆ ಹೋಗುವುದು. ಮೈ ನೋವು, ತಲೆನೋವು, ತೀವ್ರವಾದ ಬಳಲಿಕೆ. ಯಾವಾಗಲೂ ಹೆದರಿದಂತೆ ಭಯವಾಗುವುದು. ವ್ಯಾಕುಲತೆ, ಎಲ್ಲವುಗಳ ಬಗ್ಗೆಯೂ ನಿರಾಸೆ. ದೇಹವೆಲ್ಲ ನಿಶ್ಯಕ್ತಿಯಿಂದ ಬಳಲಿದಂತಾಗುವುದು. ತಟ್ಟನೇ ಮೂಡ್ ಔಟ್ ಆಗುವುದು. ಹೇರಳವಾಗಿ ತಿನ್ನುವ ಅಭ್ಯಾಸ ಅಥವಾ ಹಸಿವೇ ಇಲ್ಲದಿರುವುದು. ಇಂತಹ ಇನ್ನೂ ಅಸಂಖ್ಯಾತ ವರ್ತನೆಗಳು ಒತ್ತಡವನ್ನು ವ್ಯಕ್ತಪಡಿಸುತ್ತವೆ.
ವೈದ್ಯ ಶಾಸ್ತ್ರಜ್ಞರ ಪ್ರಕಾರ ಒತ್ತಡ ಎಂದರೆ ನಮ್ಮ ಉದ್ಯೋಗ ಹಾಗೂ ಕುಟುಂಬದಲ್ಲಿನ ದೈನಂದಿನ ಕಾರ್ಯ ಚಟುವಟಿಕೆಗಳು. ಇದರಿಂದಾಗಿ ಟೆನ್ಷನ್, ಇತರೆ ಸಮಸ್ಯೆಗಳು ಹಾಗೂ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ತಲೆದೋರುತ್ತವೆ. ಮಾನವ ಸಂಬಂಧಗಳು ಹಳಸಿಕೊಂಡು ಹೋಗುವುದು ಕೂಡಾ ಒತ್ತಡಕ್ಕೆ ಮೂಲ ಕಾರಣ. ಇದರಿಂದಾಗಿ ಪರೋಕ್ಷವಾಗಿ ಹೃದಯ ಮತ್ತು ನರಗಳಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಆದಷ್ಟೂ ಆಗಿಂದಾಗ್ಗೆ ಒತ್ತಡವನ್ನು ನಿಯಂತ್ರಿಸಿಕೊಳ್ಳುವುದು ಅತ್ಯಗತ್ಯ.

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!