ಡಯಾಬಿಟಿಸ್ 21ನೇ ಶತಮಾನದಲ್ಲಿ ಮನುಕುಲದ ಆರೋಗ್ಯಕ್ಕೆ ಆತಂಕ ಉಂಟು ಮಾಡುತ್ತಿರುವ ಮುಖ್ಯ ರೋಗಗಳಲ್ಲಿ ಒಂದು.ಭಾರತವು ವಿಶ್ವದಲ್ಲಿ ಅಧಿಕ ಮಧುಮೇಹಿಗಳನ್ನು ಹೊಂದಿರುವ ದೇಶವೆಂಬ ಕುಖ್ಯಾತಿಗೆ ಪಡೆದಿದೆ. ಡಯಾಬಿಟಿಸ್ ರೋಗಿಯಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟಗಳ ಏರಿಳಿತಗಳ ಮೇಲೆ ಗಮನಹರಿಸುವುದು ಸುಲಭ. ಆದರೆ, ಬ್ಲಡ್ ಷುಗರ್‍ನೊಂದಿಗೆ ಹೃದಯ ಮತ್ತು ರಕ್ತ ನಾಳಗಳ ಬಗ್ಗೆಯೂ ನಿಗಾ ವಹಿಸುವುದು ಮುಖ್ಯ. ಡಯಾಬಿಟಿಸ್‍ನ ತೊಡಕು ಹೃದಯಾಘಾತ ಮತ್ತು ಪಾಶ್ರ್ವವಾಯುವಿನ ಗಂಡಾಂತರವನ್ನು ಹೆಚ್ಚಿಸುತ್ತದೆ. ಡಯಾಬಿಟಿಸ್ ಇರುವ ಜನರಲ್ಲಿ ಸಾವಿಗೀಡಾಗುವ ಶೇಕಡ 50 ಮತ್ತು ಶೇಕಡ 80ರಷ್ಟು ನಡುವಿನ ಪ್ರಕರಣಕ್ಕೆ ಕಾರ್ಡಿಯೋವ್ಯಾಸ್ಕುಲರ್ ರೋಗವೇ ಕಾರಣ ಎಂಬುದು ಆತಂಕದ ಸಂಗತಿಯಾಗಿದೆ.
ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ನಿರ್ವಹಣೆ ಮಾಡುವ ಮೂಲಕ ಹೃದಯದ ಗಂಡಾಂತರವನ್ನು ಕಡಿಮೆ ಮಾಡಬಹುದು. ಕಂಟಿನ್ಯೂಯಸ್ ಗ್ಲುಕೋಸ್ ಮಾನಿಟರಿಂಗ್ ಸಿಸ್ಟಮ್ (ಸಿಜಿಎಂಎಸ್) ಎಂಬ ತಂತ್ರಜ್ಞಾನದ ಸಹಾಯದೊಂದಿಗೆ ಇದನ್ನು ಪರಿಣಾಮಕಾರಿಯಾಗಿ ಸಾಧಿಸಬಹುದು. ಮೆದುಳು ಮತ್ತು ಹೃದಯಕ್ಕೆ ರಕ್ತ ಪೂರೈಸುವ ಆರ್ಟರಿಗಳು ಸೇರಿದಂತೆ ರಕ್ತ ನಾಳಗಳಿಗೆ ಡಯಾಬಿಟಿಸ್ ಹಾನಿ ಉಂಟು ಮಾಡುತ್ತದೆ. ಈ ಹಾನಿಯು ಆರ್ಟರಿಗಳಲ್ಲಿ ಕೊಬ್ಬು ಶೇಖರಣೆ (ಪ್ಲಾಕ್ಸ್) ಆಗಲು ಸುಲಭವಾಗಿ ದಾರಿ ಮಾಡಿಕೊಡುತ್ತದೆ. ಆರ್ಟರಿಯಲ್ ಪ್ಲಾಕ್‍ಗಳು ನಿರ್ಮಾಣವಾಗುವ ಸ್ಥಿತಿಯನ್ನು ಆಥಿರೋಸ್ಕೆಲೋರಿಸಿಸ್ ಎಂದು ಕರೆಯಲಾಗುತ್ತದೆ. ಇದು ರಕ್ತ ಪೂರೈಕೆಗೆ ತಡೆಯೊಡ್ಡಿ ನಿಮ್ಮ ರಕ್ತದೊತ್ತಡವನ್ನು ಹೆಚ್ಚಾಗಿಸುತ್ತದೆ.
ಡಯಾಬಿಟಿಸ್ ರೋಗಿಗೆ ಗಂಡಾಂತರಗಳೇನು ?
• ಡಯಾಬಿಟಿಸ್ ಇರದ ವ್ಯಕ್ತಿಗಿಂತ ಹೃದಯಾಘಾತ ಅಥವಾ ಪಾಶ್ರ್ವವಾಯು ಸಾಧ್ಯತೆ ಎರಡರಿಂದ ನಾಲ್ಕು ಪಟ್ಟು ಹೆಚ್ಚು.
• ಡಯಾಬಿಟಿಸ್ ಇರದ ವ್ಯಕ್ತಿಗಿಂತ ಹೃದಯಾಘಾತದಿಂದ ಸಾವಿಗೀಡಾಗುವ ಸಾಧ್ಯತೆ ಹೆಚ್ಚು.
• ಈಗಾಗಲೇ ಹೃದಯಾಘಾತಕ್ಕೆ ಒಳಗಾಗಿರುವ ವ್ಯಕ್ತಿಗಿಂತ ಹಾರ್ಟ್ ಆಟ್ಯಾಕ್‍ನಿಂದ ಹಠಾತ್ ಸಾವನ್ನಪ್ಪುವ ಅಪಾಯ ಹೆಚ್ಚು.
• ಡಯಾಬಿಟಿಸ್‍ನನ್ನು ಹೃದ್ರೋಗಕ್ಕೆ ಸರಿಸಮವೆಂದು ಕರೆಯಲಾಗಿದೆ.
ಈ ಅಂಕಿಅಂಶಗಳ ನಡುವೆಯೂ, ಸಕ್ಕರೆ ರೋಗ ಹೊಂದಿರುವ ಶೇಕಡ 70ರಷ್ಟು ಜನರಿಗೆ ತಮಗೆ ಹೃದಯಾಘಾತ ಮತ್ತು ಪಾಶ್ರ್ವವಾಯುವಿನ ಸಾಧ್ಯತೆಯ ಅಪಾಯ ಹೆಚ್ಚಾಗಿದೆ ಎಂಬ ಬಗ್ಗೆ ತಿಳಿದಿಲ್ಲ. ಸಕ್ಕರೆ ರೋಗವಿರುವ ಅನೇಕ ಜನರಿಗೆ ಪಾದ ಅಥವಾ ಕಾಲು ಕಳೆದುಕೊಳ್ಳುವಿಕೆ ಅಥವಾ ಅಂಧತ್ವ ದೊಡ್ಡ ಅತಂಕಗಳೆಂದು ನಂಬಿದ್ದಾರೆ.
ಹೃದಯಾಘಾತದ ಲಕ್ಷಣಗಳ ಕೊರತೆ
ಡಯಾಬಿಟಿಸ್ ಇಲ್ಲದ ಬಹುತೇಕ ಜನರಿಗೆ ಹೃದ್ರೋಗ ಸ್ಪಷ್ಟವಾಗಿ ಗೋಚರಿಸುತ್ತದೆ. ಹೃದಯದ ಮಾಂಸಖಂಡಗಳಿಗೆ ಅಸಮರ್ಪಕ ರಕ್ತ ಪೂರೈಕೆಯಿಂದ ಎದೆ ನೋವು ಅಥವಾ ಒತ್ತಡ, ಹೃದಯ ಬಡಿತ ಹೆಚ್ಚಳ, ಉಸಿರಾಟ ತೊಂದರೆ, ದವಡೆ ಅಥವಾ ತೋಳು ನೋವು ಮತ್ತು ಬೆವರು ಕಂಡುಬರುತ್ತದೆ. ಇಂಥ ಲಕ್ಷಣ ಮತ್ತು ಚಿಹ್ನೆಗಳಿರುವ ಮಂದಿ ಏನೋ ದೋಷವಾಗಿದೆ ಎಂದು ತಿಳಿದು ವೈದ್ಯಕೀಯ ನೆರವು ಪಡೆಯುತ್ತಾರೆ.ಆದರೆ, ಡಯಾಬಿಟಿಸ್ ಇರುವ ಮಂದಿಯಲ್ಲಿ ಹೃದ್ರೋಗವು ಇಂಥ ಸುಳಿವುಗಳನ್ನು ನೀಡುವುದಿಲ್ಲ. ಹೀಗಾಗಿ ಮಧುಮೇಹಿಗಳು ಗಮನಾರ್ಹ ಲಕ್ಷಣಗಳು ಮತ್ತು ಚಿಹ್ನೆಗಳು ಕಂಡುಬರುವ ತನಕ ಹಾಗೂ ತೀವ್ರ ಗಂಭೀರ ತೊಡಕುಗಳು ಸಂಭವಿಸುವ ತನಕ ವೈದ್ಯಕೀಯ ಆರೈಕೆ ಪಡೆಯುವುದಿಲ್ಲ. ಡಯಾಬಿಟಿಸ್ ರೋಗಿಗಳಲ್ಲಿ ‘ಸೈಲೆಂಟ್’ ಹಾರ್ಟ್ ಆಟ್ಯಾಕ್ ಅಸಾಮಾನ್ಯವಲ್ಲ.
ಕಾರ್ಡಿಯೋವ್ಯಾಸ್ಕುಲರ್ ರೋಗದ ಅಪಾಯವನ್ನು ಹೇಗೆ ಕಡಿಮೆ ಮಾಡಬಹುದು?
ಪರಿಸ್ಥಿತಿ ಹದಗೆಡುವುದಕ್ಕೆ ಮುನ್ನವೆ ಸಮಸ್ಯೆಯನ್ನು ಗುರುತಿಸಲು ನಿಯತ ಪರೀಕ್ಷೆ ಸಹಾಯ ಮಾಡುತ್ತದೆ. ಆಂಜಿಯೋಪ್ಲಾಸ್ಟಿ ಬಂದ್ ಆಗಿರುವ ಆರ್ಟರಿಗಳಿಗೆ ಪರಿಣಾಮಕಾರಿ ಮತ್ತು ತ್ವರಿತ ಚಿಕಿತ್ಸೆಯಾಗಿದೆ. ಇಂದು ಈ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರ ದೊಡ್ಡ ಹೆಜ್ಜೆಯನ್ನಿಟ್ಟಿದೆ. ನೀವು ಇನ್ಸುಲಿನ್ ಆಧರಿತ ಮಧುಮೇಹಿ ಆಗಿದ್ದರೆ ನಿಮ್ಮ ಎಐಸಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅಗತ್ಯ. ಶೇಕಡ 1ರಷ್ಟು ಪ್ರಮಾಣದಲ್ಲಿ ಎಐಸಿಯನ್ನು ಕಡಿಮೆ ಮಾಡಿಕೊಳ್ಳುವುದರಿಂದ ನಿಮ್ಮ ಹೃದಯಾಘಾತದ ಅಪಾಯ ಶೇಕಡ 14ರಷ್ಟು ಮತ್ತು ಪಾಶ್ರ್ವವಾಯುವಿನ ಅಪಾಯ ಶೇಕಡ 12ರಷ್ಟು ಇಳಿಮುಖವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಎಐಸಿಯಲ್ಲಿ ಈ ಇಳಿಕೆಯಿಂದ ಮಾರಕ ಪೆರಿಫೆರಲ್ ವ್ಯಾಸ್ಕುಲರ್ ಡಿಸೀಸ್(ಪಿವಿಡಿ) ಕಾರಣದಿಂದ ಪಾದ ಅಥವಾ ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಬೇಕಾದ ಸಾಧ್ಯತೆಯನ್ನು ಶೇಕಡ 43ರಷ್ಟು ತಗ್ಗಿಸುತ್ತದೆ. ಇನ್ಸುಲಿನ್ ಅಗತ್ಯವಿರುವ ಡಯಾಬಿಟಿಸ್ ರೋಗಿಗಳಿಗೆ ಇನ್ಸುಲಿನ್ ನೀಡಲು ಬಳಸುವ ಇನ್ಸುಲಿನ್ ಪಂಪ್ ಥೆರಪಿಯು ಮಲ್ಟಿಪಲ್ ಡೈಲಿ ಇಂಜೆಕ್ಷನ್‍ಗಳು(ಎಂಡಿಐ) ವಿಧಾನಕ್ಕೆ ಹೋಲಿಸಿದಲ್ಲಿ ಎಐಸಿ ಮಟ್ಟಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ನಿಮ್ಮ ಬ್ಲಡ್ ಷುಗರ್ ಮಟ್ಟಗಳನ್ನು ನಿರ್ವಹಣೆ ಮಾಡಿ:
- ರಕ್ತನಾಳಗಳ ಹಾನಿ ತಡೆಗಟ್ಟಲು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ಬ್ಲಡ್ ಷುಗರ್ ಮಟ್ಟವನ್ನು ಮೌಲ್ಯ ಮಾಡುವ ಉತ್ತಮ ಮಾರ್ಗವೆಂದರೆ ಕಂಟಿನ್ಯೂಯಸ್ ಗ್ಲುಕೋಸ್ ಮಾನಿಟರಿಂಗ್ ಸಿಸ್ಟಮ್ (ಸಿಜಿಎಂಎಸ್).
- ಇನ್ಸುಲಿನ್ ಆಧರಿತ ಡಯಾಬಿಟಿಸ್ ರೋಗಿಗೆ ಇನ್ಸುಲಿನ್ ಪಂಪ್‍ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಏಕೆಂದರೆ, ನಿರಂತರವಾಗಿ ಇನ್ಸುಲಿನ್‍ನನ್ನು ಪೂರೈಸುವ ಸಾಮಥ್ರ್ಯ ಇದಕ್ಕೆ ಇರುತ್ತದೆ.
- ನಿಮ್ಮ ರಕ್ತದೊತ್ತಡವನ್ನು ನಿರ್ವಹಣೆ ಮಾಡಿ
- ಅಧಿಕ ರಕ್ತದೊತ್ತಡ (ಹೈಪರ್‍ಟೆನ್ಷನ್) ಕೇವಲ ಡಯಾಬಿಟಿಸ್ ಇರುವ ಮಂದಿಗೆ ಮಾತ್ರವಲ್ಲ ಯಾರಿಗಾದರೂ ವಿವಿಧ ರೀತಿಯ ಕಾರ್ಡಿಯೋವ್ಯಾಸ್ಕುಲರ್ ತೊಡಕುಗಳಿಗೆ ಎಡೆ ಮಾಡಿಕೊಡುತ್ತದೆ. ಆದರೆ ಮಧುಮೇಹಿಯಾಗಿದ್ದರೆ, ತೊಡಕುಗಳ ತೀವ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಅದು ಉಲ್ಬಣಗೊಳ್ಳಲು ಕಾರಣವಾಗುತ್ತದೆ.ಡಯಾಬಿಟಿಸ್ ಇರುವ ವಯಸ್ಕರರಲ್ಲಿ ಶೇಕಡ 73ರಷ್ಟು ಮಂದಿ ರಕ್ತದ ಏರೊತ್ತಡವನ್ನು ಹೊಂದಿರುತ್ತಾರೆ.
- ರಕ್ತದ ಒತ್ತಡ ಮಕ್ರ್ಯುರಿಯ 130/80 ಮಿಲಿಮೀಟರ್‍ಗಳಿಗಿಂತ ಕಡಿಮೆ ಇರಬೇಕು. ನಿಮ್ಮ ರಕ್ತದೊತ್ತಡವು ಹೆಚ್ಚಾಗಿದ್ದರೆ, ಅದನ್ನು ಕಡಿಮೆ ಮಾಡಲು ವೈದ್ಯರು ಔಷಧಿಗಳಿಗೆ ಸಲಹೆ ಮಾಡುತ್ತಾರೆ.
ಕೊಲೆಸ್ಟರಾಲ್ ಮತ್ತು ಟ್ರೈ-ಗ್ಲಿಸೆರೈಡ್‍ಗಳ ನಿರ್ವಹಣೆ - ರಕ್ತದಲ್ಲಿನ ಕೊಬ್ಬುಗಳು ಅಂದರೆ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸೆರೈಡ್‍ಗಳ ಅನಾರೋಗ್ಯಕರ ಮಟ್ಟಗಳು ಡಯಾಬಿಟಿಸ್ ಇರಲಿ ಅಥವಾ ಇಲ್ಲದಿರಲಿ ಯಾರಿಗೆ ಬೇಕಾದರೂ ಕಾರ್ಡಿಯೋವ್ಯಾಸ್ಕುಲರ್ ರೋಗಕ್ಕೆ ಸಹ ಕಾರಣವಾಗಬಹುದು. ಆದರೆ, ಅಧಿಕ ರಕ್ತದೊತ್ತಡದಂತೆ ಹಾನಿಯು ಸಾಮಾನ್ಯವಾಗಿ ತೀವ್ರವಾಗಿರುತ್ತದೆ ಹಾಗೂ ಡಯಾಬಿಟಿಸ್ ರೋಗಿಗಳಲ್ಲಿ ಇದು ಇನ್ನೂ ಕ್ಷಿಪ್ರವಾಗಿರುತ್ತದೆ.
- ಡಯಾಬಿಟಿಸ್ ಇರುವ ಜನರಲ್ಲಿ ತೀರಾ ಸಾಮಾನ್ಯವಾಗಿ ಟ್ರೈಗ್ಲಿಸೆರೈಡ್‍ಗಳ ಮಟ್ಟ ಹೆಚ್ಚಾಗಿರುತ್ತದೆ ಹಾಗೂ ಒಳ್ಳೆಯ ಕೊಲೆಸ್ಟರಾಲ್ ಎಂದು ಕರೆಯಲ್ಪಡುವ ಹೈ ಡೆನ್ಸಿಟಿ ಲಿಪೋಪ್ರೋಟಿನ್ (ಎಚ್‍ಡಿಎಲ್) ಕೊಲೆಸ್ಟರಾಲ್‍ನ ಪ್ರಮಾಣ ಕಡಿಮೆ ಇರುತ್ತದೆ. ಇದರೊಂದಿಗೆ, ಮಧುಮೇಹಿಗಳಲ್ಲಿ ಕೆಟ್ಟ ಕೊಲೆಸ್ಟರಾಲ್ ಎಂದೇ ಗುರುತಿಸಿಕೊಂಡಿರುವ ಲೋ ಡೆನ್ಸಿಟಿ ಲಿಪೋಪ್ರೋಟಿನ್ (ಎಲ್‍ಡಿಎಲ್) ಕೊಲೆಸ್ಟರಾಲ್ ಸಾಮಾನ್ಯವಾಗಿ ಸಣ್ಣಗಿದ್ದು ಸಾಂದ್ರತೆ ಉಳ್ಳದಾಗಿರುತ್ತದೆ. ಇದು ರಕ್ತನಾಳಗಳು ಬಂದ್ ಆಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
- ನಿಮಗೆ ಇತರೆ ಹೃದ್ರೋಗ ಅಪಾಯ ಅಂಶಗಳನ್ನು ಹೊಂದಿದ್ದರೆ ಎಲ್‍ಡಿಎಲ್ 100ಕ್ಕಿಂತ ಕಡಿಮೆ ಇರಬೇಕು ಮತ್ತು ಕೊಲೆಸ್ಟರಾಲ್ ತಗ್ಗಿಸುವ ಔಷಧಿಗಳನ್ನು ಸೇವಿಸಬೇಕು. ಮಹಿಳೆಯಲ್ಲಿ ಎಚ್‍ಡಿಎಲ್ 50ಕ್ಕಿಂತ ಮತ್ತು ಪುರುಷರಲ್ಲಿ 40ಕ್ಕಿಂತ ಹೆಚ್ಚಾಗಿದ್ದರೆ ಟೈಗ್ಲಿಸೆರೈಡ್ಸ್ 150ಕ್ಕಿಂತ ಕಡಿಮೆ ಇರಬೇಕು.
ಜೀವನಶೈಲಿ ಬದಲಾವಣೆಗಳು ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತವೆ:
ಬ್ಲಡ್ ಷುಗರ್, ಬ್ಲಡ್ ಪ್ರೆಷರ್ ಮತ್ತು ಬ್ಲಡ್ ಫ್ಯಾಟ್‍ಗಳು ಮಾತ್ರ ಕಾರ್ಡಿಯೋವ್ಯಾಸ್ಕುಲರ್ ರೋಗಕ್ಕೆ ಕಾರಣವಾಗುವುದಿಲ್ಲ. ಜೀವನಶೈಲಿಯ ಸಂಗತಿಗಳು ಕೂಡ ಗಂಡಾಂತರವನ್ನು ಹೆಚ್ಚಿಸುತ್ತದೆ. ಈ ಕೆಳಕಂಡ ಆಯ್ಕೆಗಳು ನಿಮ್ಮ ಡಯಾಬಿಟಿಸ್‍ನನ್ನು ನಿಯಂತ್ರಿಸಲು ಹಾಗೂ ಹೃದ್ರೋಗದ ಗಂಡಾಂತರಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ.• ಆರೋಗ್ಯಕರ ಆಹಾರ ಸೇವನೆ
- ಕ್ರಿಯಾಶೀಲವಾಗಿ ಇರುವಿಕೆ
- ಅಲ್ಕೋಹಾಲ್ ಬಳಕೆಯನ್ನು ನಿಲ್ಲಿಸಬೇಕು.
- ತಂಬಾಕು ಉತ್ಪನ್ನಗಳ ಬಳಕೆಯನ್ನು ನಿಲ್ಲಿಸಬೇಕು.
- ಆರೋಗ್ಯಕರ ತೂಕವನ್ನು ನಿರ್ವಹಣೆ ಮಾಡಬೇಕು.
ಆರೋಗ್ಯಕರ ಜೀವನಶೈಲಿಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಕಷ್ಟವಾದರೆ ಅಥವಾ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ, ರಕ್ತದೊತ್ತಡ ಹಾಗೂ ರಕ್ತದಲ್ಲಿನ ಕೊಬ್ಬಿನ ಪ್ರಮಾಣ ನಿಯಂತ್ರಣ ಸಾಧ್ಯವಾಗದಿದ್ದರೆ ವೈದ್ಯರು ಔಷಧಿಗಳಿಗೆ ಸಲಹೆ ಮಾಡುತ್ತಾರೆ.ಜೀವಕ್ಕೆ ಕಂಟಕ ತರುವ ತೊಡಕುಗಳನ್ನು ತಡೆಗಟ್ಟುವಲ್ಲಿ ಡಯಾಬಿಟಿಸ್ ಮತ್ತು ಕಾರ್ಡಿಯೋವ್ಯಾಸ್ಕುಲರ್ ರೋಗದ ನಡುವೆ ಇರುವ ದೃಢವಾದ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ ಹೆಜ್ಜೆಯಾಗಿರುತ್ತದೆ.
ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com