ಬೆಂಗಳೂರು: ಭಾರತದ ಪ್ರಮುಖ ಬೋನ್ ಮಾರೊ ಸ್ಟೆಮ್ ಸೆಲ್ ಕಸಿ ಘಟಕವಾದ ಮಜುಂದಾರ್ ಶಾ ಕ್ಯಾನ್ಸರ್ ಸೆಂಟರ್ ಕ್ರಮವಾಗಿ 9 ಮತ್ತು 11 ವರ್ಷ ವಯಸ್ಸಿನ ಕಾಂಬೋಡಿಯ ಸಹೋದರಿಯರ ಜೀವವನ್ನು ಉಳಿಸಿದ್ದು, ಅವರ 11 ತಿಂಗಳ ವಯಸ್ಸಿನ ಸೋದರ ಮತ್ತು ಭಾಗಶಃ ಎಚ್ಎಲ್ಎ ಹೋಲಿಕೆಯಾದ ಅವರ ತಂದೆಯೇ ದಾನಿಗಳಾಗಿದ್ದಾರೆ. ತಲಸ್ಸೇಮಿಯಾಗೆ ಬೋನ್ ಮಾರೊ ಕಸಿ ಚಿಕಿತ್ಸೆಯಷ್ಟೇ ಏಕಮಾತ್ರ ಚಿಕಿತ್ಸೆಯಾಗಿದ್ದು, ಇಂಥ ಪ್ರಕರಣದಲ್ಲಿ ಹೋಲಿಕೆಯಾಗುವ ದಾನಿಗಳ ಹುಡುಕಾಟವು ತುಂಬಾ ಕಷ್ಟದಾಯಕವಾದುದಾಗಿದೆ.
‘ಕಾಂಬೋಡಿಯಾದ ಸೋದರಿಯರಿಗೆ ಹೋಲಿಕೆಯಾಗುವ ದಾನಿಗಳನ್ನು ಗುರುತಿಸುವುದೇ ಕಷ್ಟವಾಗಿತ್ತು. ಏಕೆಂದರೆ ಕಾಂಬೋಡಿಯಾದ ದಾನಿಗಳು ಯಾರೂ ನೋಂದಾಯಿತರಾಗಿರಲಿಲ್ಲ. ನೋಂದಣಿ ಆದವರಲ್ಲಿಯೂ ಹೋಲಿಕೆ ಆಗುತ್ತಿರಲಿಲ್ಲ’ ಎಂದು ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಜುಂದಾರ್ ಶಾ ಕ್ಯಾನ್ಸರ್ ಸೆಂಟರ್ನ ಪಿಡಿಯಾಟ್ರಿಕ್ ಹೆಮಾಟಾಲಜಿ ಮತ್ತು ಬೋನ್ ಮಾರೋನ ಡಾ. ಸುನಿಲ್ ಭಟ್ ಹೇಳಿದರು.
ಕಾಂಬೋಡಿಯಾದ ದಂಪತಿಗೆ ತನ್ನ ಇಬ್ಬರು ಹೆಣ್ಣು ಮಕ್ಕಳು ತಲಸ್ಸೇಮಿಯಾದಿಂದ ಬಳಲುತ್ತಿರುವುದು ದೊಡ್ಡ ಆತಂಕ ಮೂಡಿಸಿತು. ಇಬ್ಬರು ಸೋದರಿಯರಿಗೆ ತಲಸ್ಸೇಮಿಯಾ ಇರುವುದು ಡಯಗ್ನೋಸಿಸ್ನಲ್ಲಿ ಪತ್ತೆಯಾಗಿತ್ತು. ಇದಕ್ಕಾಗಿ ಜೀವನವಿಡೀ ರಕ್ತ ಕಸಿಯನ್ನು ಮಾಡುವುದು ಅಗತ್ಯವಾಗಿತ್ತು. ಬಾಧಿತ ಬಹುತೇಕ ರೋಗಿಗಳು ಸಾಮಾನ್ಯವಾಗಿ ಜೀವನ ಎರಡು ಅಥವಾ ನಾಲ್ಕನೇ ದಶಕದಲ್ಲಿ ಮೃತರಾಗುತ್ತಾರೆ ಎಂದು ಡಾ.ಸುನಿಲ್ ಭಟ್ ಹೇಳಿದರು.
ಎರಡನೇ ಮಗು ಜನಿಸಿದ ಬಹುತೇಕ ಎಂಟು ವರ್ಷದ ಬಳಿಕ ದಂಪತಿಗೆ ಗಂಡು ಮಗು ಜನನವಾಗಿದ್ದು, ತಲಸ್ಸೇಮಿಯಾದಿಂದ ಬಳಲುತ್ತಿರಲಿಲ್ಲ. ತಂದೆಯೂ ಕೂಡಾ ವೃತ್ತಿಯಿಂದ ವೈದ್ಯರಾಗಿದ್ದು, ಇಬ್ಬರು ಬಾಧಿತ ಸೋದರಿಯರಿಗೆ ಉತ್ತಮ ಚಿಕಿತ್ಸೆ ನೀಡಲು ಒತ್ತು ನೀಡಿದ್ದರು. ಆದರೆ, ಕಾಂಬೋಡಿಯಾದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದು ಕಷ್ಟವಾಗಿತ್ತು. ಸುರಕ್ಷಿತ ಮತ್ತು ಪರಿಣಾಮಕಾರಿ ರಕ್ತ ಕಸಿ ಮಾಡುವುದು, ಕಬ್ಬಿಣಾಂಶ ಅಧಿಕವಾಗದಂತೆ ಎಚ್ಚರ ವಹಿಸುವುದು ಕುಟುಂಬಕ್ಕೆ ಸವಾಲಿನ ಕೆಲಸವೇ ಆಗಿತ್ತು. ಬೋನ್ಮಾರೊ ಕಸಿ ಚಿಕಿತ್ಸೆಯು ಈ ಹಂತದಲ್ಲಿ ಇದ್ದ ಏಕಮಾತ್ರ ಚಿಕಿತ್ಸಾ ಪರಿಹಾರವಾಗಿತ್ತು.
ಬೋನ್ ಮಾರೊ ಕಸಿ ಚಿಕಿತ್ಸೆಯು (ಬಿಎಂಟಿ) ಇಂಥ ಪ್ರಕರಣದಲ್ಲಿ ಲಭ್ಯವಿರುವ ಏಕಮಾತ್ರ ಚಿಕಿತ್ಸೆ ಎಂಬುದನ್ನು ಖಚಿತ ಪಡಿಸಿದ ಡಾ. ಸುನಿಲ್ ಭಟ್ ಅವರು, `’100ಕ್ಕೂ ಹೆಚ್ಚು ಜೀವಹಾನಿಯ ರೋಗಗಳಿಗೆ ಬೋನ್ ಮಾರೋ ಕಸಿ ಅಥವಾ ಬ್ಲಡ್ ಸ್ಟೆಮ್ ಸೆಲ್ ಕಸಿಯು ಏಕಮಾತ್ರ ಚಿಕಿತ್ಸೆಯಾಗಿದೆ. ಈ ರೋಗಗಳಲ್ಲಿ ಕ್ಯಾನ್ಸರ್ ಸ್ವರೂಪಗಳಾದ ಲ್ಯುಕೆಮಿಯಾ, ಲಿಂಪೋಮಾ, ಸಾಲಿಡ್ ಕ್ಯಾನ್ಸರ್, ವಂಶವಾಹಿ ಏರುಪೇರು, ರಕ್ತ ರೂಪಿಸುವ ಸೆಲ್ಗಳ ಅಂದರೆ ತಲಸ್ಸೇಮಿಯಾ, ಸಿಕ್ಕಲ್ ಸೆಲ್ ಅನೀಮಿಯಾ ಕೂಡಾ ಸೇರಿದೆ. ಹೆಮಾಲಾಜಿಕಲ್ ಪ್ರಕರಣಗಳು ಹೆಚ್ಚುತ್ತಿರುವಂತೆಯೇ, 1,00,000ಕ್ಕೂಅಧಿಕ ರೋಗಿಗಳು ರಕ್ತ ಏರುಪೇರು ಪ್ರಕರಣಗಳಿಂದ ಪ್ರತಿವರ್ಷ ಬಾಧಿತರಾಗುತ್ತಾರೆ. ಇಂಥ ಪ್ರಕರಣಗಳನ್ನು ಬಿಎಂಟಿ ಚಿಕಿತ್ಸೆಯಿಂದ ಗುಣಪಡಿಸಬಹುದು. ಬೋನ್ಮಾರೊ ಕಸಿ ಚಿಕಿತ್ಸೆ ಮತ್ತು ಸಾಲಿಡ್ ಆರ್ಗನ್ ಕಸಿ ಚಿಕಿತ್ಸೆ ಅಂದರೆ ಪಿತ್ತಜನಕಾಂಗ, ಮೂತ್ರಪಿಂಡ ಚಿಕಿತ್ಸೆಗೆ ಹೋಲಿಕೆಯಾಗುವ ದಾನಿಗಳ ಅಗತ್ಯವೂ ಇದೆ. ಪರಸ್ಪರ ಸರಿಯಾಗಿ ಹೋಲಿಕೆಯಾಗುವ ದಾನಿಗಳು ಕುಟುಂಬವಲಯದಲ್ಲಿಯೇ ಲಭ್ಯವಾಗುವುದು ಶೇ 25ರಿಂದ 30ರಷ್ಟು ಮಾತ್ರ. ಇನ್ನುಲಿದ ಶೇ 70ರಷ್ಟು ರೋಗಿಗಳಿಗೆ ಬಿಎಂಟಿ ಚಿಕಿತ್ಸೆಯ ಅವಶ್ಯಕತೆ ಇದೆ. ಆದರೆ ಅವರಿಗೆ ಹೊಂದಿಕೆಯಾಗುವ ದಾನಿಗಳ ಕೊರತೆಯಿದೆ.
ಈ ಪ್ರಕರಣದಲ್ಲಿ ಕಿರಿಯ ಸೋದರಿಗೆ ಅದೃಷ್ಟವಶಾತ್ ಆಕೆಯ ಸಹೋದರನ ಎಚ್ಎಲ್ಎ ಹೊಂದಿಕೆ ಆಗುತ್ತಿದ್ದು, ದಾನ ಮಾಡಲು ಶಕ್ತವಾಗಿತ್ತು. ಆದರೆ, ಆತ ಕೇವಲ 11 ತಿಂಗಳ ವಯಸ್ಸಿನವನಾಗಿದ್ದನು. ದಾನಿಯಿಂದ ಬೋನ್ಮಾರೊ ಸ್ಟೆಮ್ ಸೆಲ್ ಪಡೆಯುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ನಾರಾಯಣ ಹೆಲ್ತ್ ಸಿಟಿಯ ವೈದ್ಯರ ತಂಡ ಎರಡು ಭಿನ್ನ ಹಂತದಲ್ಲಿ ಬೋನ್ ಮಾರೊ ಪಡೆಯುವ ಯತ್ನಕ್ಕೆ ಕೈಹಾಕಿದರು. ಅಂದರೆ 4-6 ವಾರಗಳ ಹಂತದಲ್ಲಿ ಇದನ್ನು ಪಡೆಯುವುದು ಆಗಿತ್ತು. ಕಸಿ ಚಿಕಿತ್ಸೆಯನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಮಾಡಿದ್ದು, 11 ತಿಂಗಳ ವಯಸ್ಸಿನ ಮಗು ಅತಿ ಕಿರಿಯ ದಾನಿಯಾಗಿ ದಾಖಲಾಯಿತು. ಈ ಮಗು ಈಗ ಪೂರ್ಣವಾಗಿ ತಲಸ್ಸೇಮಿಯಾದಿಂದ ಚೇತರಿಸಿಕೊಂಡಿದ್ದಾರೆ.
ಆದರೆ, ಆಕೆಯ ಹಿರಿಯ ಸಹೋದರಿಗೆ ಪೂರ್ಣ ಹೊಂದಿಕೆಯಾಗುವ ದಾನಿಯ ಲಭ್ಯತೆ ಇರಲಿಲ್ಲ. ಈಕೆಗೆ ಚಿಕಿತ್ಸೆಯು ಇನ್ನೂ ಸವಾಲಿನದಾಗಿತ್ತು. ಆಕೆಯ ಕುಟುಂಬ ವ್ಯಾಪ್ತಿ ಅಥವಾ ಹೊರಗೆ ಸೂಕ್ತ ದಾನಿಯ ಲಭ್ಯತೆ ಇರಲಿಲ್ಲ. ಮುಂದಿನ ಹಂತವೆಂದರೆ ಹ್ಯಾಪ್ಲೊ ಐಡೆಂಟಿಕಲ್ ಕಸಿ. ವೈದ್ಯರು ಭಾಗಶಃ (ಅರ್ಧ) ಹೋಲಿಕೆಯಿರುವ ಬಾಲಕಿಯ ತಂದೆಯ ಸ್ಟೆಮ್ ಸೆಲ್ ಅನ್ನೇ ಬಳಸಲು ತೀರ್ಮಾನಿಸಿದರು. ಇದಕ್ಕಾಗಿ ಹ್ಯಾಪ್ಲೊ (ಭಾಗಶಃ ಹೊಂದಿಕೆ)ಕಸಿ ಕ್ರಮವನ್ನು ಅನುಸರಿಸಲಾಯಿತು. ಆಕೆಯ ಬ್ಲಡ್ ಸೆಲ್ ಅನ್ನು ಹೊರಗೆ ತೆಗೆದು ಟಿ.ಸಿ.ಆರ್ ಆಲ್ಫಾ ಬೆಟಾ ಡಿಪ್ಲೇಷನ್ ಮೂಲಕ ಪರಿಷ್ಕರಿಸಿ ಉತ್ತಮವಾದ ಬ್ಲಡ್ ಸೆಲ್ ಅನ್ನಷ್ಟೇ ನೀಡುವುದು ಈ ಚಿಕಿತ್ಸೆಯ ಕ್ರಮ’ ಎಂದು ಡಾ. ಸುನಿಲ್ ಭಟ್ ವಿವರಿಸಿದರು. ಇದು, ದಾನಿಯ ಸೆಲ್ಗಳು ರೋಗಿಯ ದೇಹದ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸಲಿದೆ’ ಎಂದು ವಿವರಿಸಿದರು.
ಈ ತಂತ್ರಜ್ಞಾನ ಮೇಲಿನ ಕಾರ್ಯತಂತ್ರದಲ್ಲಿ ಯಶಸ್ವಿಯಾದರೂ ಚೇತರಿಕೆ ಅವಧಿಯು ಕಡಿಮೆ. ರೋಗಿಯ ಇಮ್ಯುನಿಟಿ (ರೋಗ ನಿರೋಧಕ) ಚೇತರಿಕೆಯಲ್ಲಿ ವಿಳಂಬವಾಗುವುದು. ಇದು, ಅವರಲ್ಲಿ ತೀವ್ರ ಸೋಂಕು ತರಲು ಕಾರಣವಾಗಲಿದೆ. ವಿಳಂಬ ಚೇತರಿಕೆ ತಡೆಯಲು ಸಿ.ಡಿ.45ಆರ್.ಎ ಕ್ರಮವನ್ನು ಹೆಚ್ಚುವರಿ ಟೆಕ್ನಿಕ್ ಆಗಿ ಇತ್ತೀಚೆಗೆ ಬಳಸಲಾಯಿತು ಎಂದು ಡಾ. ಸುನಿಲ್ ಅವರು ಹೇಳಿದರು. `ಇದು, ನಮಗೆ ಮೆಮೊರಿ ಸೆಲ್ ನೀಡಲು, ಈ ಮೂಲಕ ರೋಗಿಗೆ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಲು ನೆರವಾಗಲಿದೆ’ ಎಂದರು. ಈ ತಂತ್ರಜ್ಞಾನವನ್ನು ಬಹುಶಃ ಇದೇ ಮೊದಲ ಬಾರಿಗೆ ಭಾರತದಲ್ಲಿ ತಲಸ್ಸೇಮಿಯಾ ಚಿಕಿತ್ಸೆಗೆ ಬಳಸಲಾಯಿತು.
ಈ ತಂತ್ರಜ್ಞಾನ ಬಳಸಿ ಹಿರಿಯ ಸೋದರಿಗೆ ಈ ವರ್ಷದ ಜೂನ್ ತಿಂಗಳಲ್ಲಿ ಚಿಕಿತ್ಸೆ ನೆರವೇರಿಸಿದ್ದು, ಆಕೆಯೂ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ. ಕುಟುಂಬವು ಈ ತಿಂಗಳ ಅಂತ್ಯದಲ್ಲಿ ಜೀವಿತಾವಧಿಯ ಉತ್ತಮ ನೆನಪುಗಳೊಂದಿಗೆ ತವರಿಗೆ ಮರಳಲಿದೆ.