ತೆಂಗಿನೆಣ್ಣೆಗೆ ಮರಳಿ ಬನ್ನಿ…..

ತೆಂಗಿನೆಣ್ಣೆಗೆ ಮರಳಿ ಬನ್ನಿ… ತೆಂಗಿನೆಣ್ಣೆಯಲ್ಲಿರುವ ವಿಶಿಷ್ಟ ಕೊಬ್ಬಿನಾಂಶವೇ ಮೋನೋಲೋರಿನ್. ತಾಯಿಯ ಎದೆಹಾಲಿನಲ್ಲಿ ಹಾಗೂ ತೆಂಗಿನೆಣ್ಣೆಯಲ್ಲಿ ಮಾತ್ರ ದೊರೆಯುವ ಮೋನೋಲೋರಿನ್ ಹರ್ಪಿಸ್, ಹೆಪಟೈಟಿಸ್, ಎಚ್ಐವಿ ಮುಂತಾದ ಗುರುತರ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ತೆಂಗಿನಕಾಯಿ, ತೆಂಗಿನೆಣ್ಣೆಯನ್ನು ಬಳಸಿ ಮಾಡಿದ ಅಡುಗೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

Teṅgineṇṇege maraḷi banni #cookingoil #coldpressedoil #woodified #prashantsunderesh #vydyaloka #healthvision

ಗುಣ ಹೆಚ್ಚಾಗುತ್ತಿದ್ದಂತೆ ಅದರ ಬೆಲೆಯೂ ಹೆಚ್ಚಾಗುತ್ತದೆಂಬುದು ಲೋಕರೂಢಿ. ಬೆಲೆಯನ್ನು ನೋಡಿ ಮಾರುಕಟ್ಟೆಯಲ್ಲಿ ದೊರೆಯುವ ಎಣ್ಣೆಗಳನ್ನು ವಿಂಗಡಿಸುವುದು ಅಪಾಯಕಾರಿಯಲ್ಲವೆ? ಅದರ ಒಳಿತನ್ನೂ ಪರಿಗಣಿಸಬೇಡವೆ? ತೆಂಗಿನೆಣ್ಣೆಯ ಅನೇಕ ಗುಣಗಳನ್ನು ಅರ್ಥಮಾಡಿಕೊಂಡರೆ ಅದು ಒಂದು ವರವೆಂದೇ ಹೇಳಬಹುದು. ತೆಂಗಿನೆಣ್ಣೆಯನ್ನು ಎದೆಹಾಲಿಗೆ ಹೋಲಿಸುತ್ತಾರೆ.

ಒಂದೇ ಎಣ್ಣೆಯನ್ನು ಹಲವು ಸಲ ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ. ಎಣ್ಣೆಗಳನ್ನು ಪುನಃ ಪುನಃ ಬಿಸಿ ಮಾಡುವುದರಿಂದ ಟ್ರಾನ್ಸ್ಫಾಟ್ಟಿ ಆಸಿಡ್ಗಳು ಹಾಗೂ ಆರೋಗ್ಯಕ್ಕೆ ಹಾನಿಕರವಾದ ಇನ್ನೂ ಅನೇಕ ವಸ್ತುಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ಎಣ್ಣೆಗಳನ್ನು ಪದೇ ಪದೇ ಬಿಸಿ ಮಾಡುವ ಫಾಸ್ಟ್ ಫುಡ್ ಸಂಪ್ರದಾಯಕ್ಕೆ ವಶವಾಗದೆ ತೆಂಗಿನಕಾಯಿ ಹಾಗೂ ಅದರ ಎಣ್ಣೆಯನ್ನೇ ಬಳಸುವುದು ಸೂಕ್ತ. ಅಷ್ಟೇ ರುಚಿಯಾಗಿಯೂ ಇರುತ್ತದೆಂಬುದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಫಾಸ್ಟ್ ಫುಡ್ ಕಾಯಿಲೆಗಳೂ ಸೂಪರ್ ಫಾಸ್ಟ್. ಫಾಸ್ಟ್ಫುಡ್ ಅತಿಸಮರ್ಥವಾದ ಒಂದು ಮಾಯಾಜಾಲ. ಅದು ಎಷ್ಟು ಬೇಗ ನಮ್ಮನ್ನು ಆಕರ್ಷಿಸಿ ಶರಣಾಗಿಸುತ್ತದೆ? ಮಾಯಾಜಾಲದಂತೆ ಫಾಸ್ಟ್ ಫುಡ್ನತ್ತ ನಾವಿಂದು ದೌಡಾಯಿಸಿದ್ದೇವೆ. ಪರಿಣಾಮ ವಾಗಿ ಸ್ಕೂಲಕಾಯ, ಮಧುಮೇಹ, ಬಿಪಿ – ಎಲ್ಲವೂ ಚಿಕ್ಕಂದಿನಲ್ಲಿಯೇ ಆರಂಭವಾಗುತ್ತದೆ. ಆದಷ್ಟು ಫಾಸ್ಟ್ ಫುಡ್ ನಿಂದ ದೂರವಿರುವುದು ಆರೋಗ್ಯದ ದೃಷ್ಟಿಯಿಂದ ಶ್ರೇಯಸ್ಕರ. ಅಲ್ಲದೆ ಕಲ್ಪವೃಕ್ಷದ ಫಲವಡಗಿದ ನಮ್ಮ ಪರಂಪರಾಗತ ಆಹಾರಕ್ರಮದತ್ತ ಮರಳಿಬರುವುದು ಸೂಕ್ತ.

ತೆಂಗಿನೆಣ್ಣೆಯಲ್ಲಿರುವ ವಿಶಿಷ್ಟ ಕೊಬ್ಬಿನಾಂಶವೇ ಮೋನೋಲೋರಿನ್. ಎದೆಹಾಲಿನಲ್ಲಿ ಹಾಗೂ ತೆಂಗಿನೆಣ್ಣೆಯಲ್ಲಿ ಮಾತ್ರ ದೊರೆಯುವ ಮೋನೋಲೋರಿನ್ ಹೆಪಟೈಟಿಸ್, ಎಚ್ಐವಿ ಮುಂತಾದ ಗುರುತರ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯುತ್ತ ಬಂದಿದೆ.

ನಾರುಗಳ ದೊಡ್ಡದೊಂದು ಸಂಗಮ ತೆಂಗಿನಕಾಯಿ. ಜೀರ್ಣಕ್ರಿಯೆಗೆ ಒಗ್ಗಬಲ್ಲ ಸಹಕಾರಿಯಾಗಬಲ್ಲ ನಾರುಗಳ ಸೇವನೆ ದೇಹಕ್ಕೆ ಉಪಯುಕ್ತ. ಪ್ರಮೇಹ, ಹೃದ್ರೋಗ ಮುಂತಾದವುಗಳಿಗೆ ನಾರುಗಳು ಉಪಯುಕ್ತ. ತೆಂಗಿನಕಾಯಿ, ತೆಂಗಿನೆಣ್ಣೆಯನ್ನು ಬಳಸಿ ಮಾಡಿದ ಅಡುಗೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

ನಾಳಿಕೇರವೆಂಬ ತೆಂಗಿನಕಾಯಿ ನಮಗೆ ಹಲವಾರು ರೀತಿಯಲ್ಲಿ ಗುಣಕಾರಿಯಾಗಿರುತ್ತದೆ. ಆಹಾರದ ಪ್ರಧಾನ ಘಟಕವಾಗಿ ಅಥವಾ ಅಲ್ಲದೆಯೋ ಇದನ್ನು ಉಪಯೋಗಿಸಬಹುದಾಗಿದೆ. ಅತ್ಯುತ್ತಮ ಆಹಾರವಾಗಿ, ಶುದ್ಧ ಪಾನೀಯವಾಗಿ ಇದು ಗುಣಕಾರಿ.

ಗಾಣದ ತೆಂಗಿನ ಎಣ್ಣೆಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಂತೆ ಹೆಚ್ಚಿನ ಪೋಷಕಾಂಶಗಳಿರುತ್ತದೆ. ಇದು ಲಾರಿಕ್ ಆಮ್ಲವನ್ನು ಹೊಂದಿದೆ, ಇದು ಆಂಟಿಮೈಕ್ರೊಬಿಯಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಪ್ರತಿರಕ್ಷಣಾ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
• ಇದು ಉತ್ತಮ HDL ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
• ಚಯಾಪಚಯವನ್ನು ಸುಧಾರಿಸುವ ಮೂಲಕ ತೂಕ ನಿರ್ವಹಣೆಗೆ ಇದು ಒಳ್ಳೆಯದು.
• ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಆಲ್ಝೈಮರ್ನಂತಹ(Alzheimer) ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
• ಇದರ ಉತ್ಕರ್ಷಣ ನಿರೋಧಕ ಹಾಗೂ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ವಯಸ್ಸಾಗುವಿಕೆ ಮತ್ತು ಚರ್ಮದ ಹಾನಿ, ಮೊಡವೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
• ತೆಂಗಿನ ಎಣ್ಣೆಯು ಪ್ರೋಟೀನ್ ಅನ್ನು ಪೋಷಿಸುತ್ತದೆ ಮತ್ತು ಕೂದಲನ್ನು ಹಾನಿಯಾಗದಂತೆ ರಕ್ಷಿಸುತ್ತದೆ. ಇದು ಕೂದಲನ್ನು ಬಲವಾಗಿ, ಆರೋಗ್ಯಕರವಾಗಿ ಮತ್ತು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ.
• ತೆಂಗಿನ ಎಣ್ಣೆಯು ಜೀರ್ಣಕ್ರಿಯೆಯ ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ಬಾಯಿಯ ಆರೋಗ್ಯಕ್ಕೆ ಒಳ್ಳೆಯದು.

ಪ್ರಶಾಂತ್ ಸುಂದರೇಶ್ ಲೇಖನಗಳನ್ನು  ಓದಲು ಇಲ್ಲಿ ಕ್ಲಿಕ್ ಮಾಡಿ

Prashanth Sundaresh - Co founder and operations head - Woodified Natura

ಪ್ರಶಾಂತ್ ಸುಂದರೇಶ್
ಸಹಸಂಸ್ಥಾಪಕರು ಮತ್ತು ಸಿಇಒ,
ವುಡಿಫೈಡ್ ನ್ಯಾಚುರಾ, 65/2, 6ನೇ ಅಡ್ಡರಸ್ತೆ ,
ಕಾವೇರಿಪುರ, ಬೆಂಗಳೂರು-560079
E-mail: prashanth@woodifiednatura.in
Ph: 91485 43303/ 9845764343
https://woodifiednatura.in

#woodified

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!