ಆರೋಗ್ಯ ಜೀವನ – ರೋಗಮುಕ್ತರಾಗಲು ಏನು ಮಾಡಬೇಕು?

ಆರೋಗ್ಯ ಜೀವನ –  ನೀವು ಸಂಪೂರ್ಣ ರೋಗಮುಕ್ತರಾಗಲು ಏನು ಮಾಡಬೇಕು? ಬಿ.ಪಿ., ಶುಗರ್‌, ಹಾರ್ಟ್‌ ಅಟ್ಯಾಕ್‌, ಕಿಡ್ನಿ ಖಾಯಿಲೆ, ಲಿವರ್‌ ಖಾಯಿಲೆ, ಸ್ಟ್ರೋಕ್‌, ಕ್ಯಾನ್ಸರ್‌, ಈ ಮಾರಣಾಂತಿಕ ಖಾಯಿಲೆಗಳು ಬಡವರು, ಶ್ರೀಮಂತರು ಎನ್ನದೇ ಎಲ್ಲರನ್ನೂ ಸಾಮಾನ್ಯವಾಗಿ ಕಾಡುತ್ತಿವೆ.

ಆರೋಗ್ಯ ಜೀವನ

ಬಿ.ಪಿ., ಶುಗರ್‌, ಹಾರ್ಟ್‌ ಅಟ್ಯಾಕ್‌, ಕಿಡ್ನಿ ಖಾಯಿಲೆ, ಲಿವರ್‌ ಖಾಯಿಲೆ, ಸ್ಟ್ರೋಕ್‌, ಕ್ಯಾನ್ಸರ್‌, ಈ ಮಾರಣಾಂತಿಕ ಖಾಯಿಲೆಗಳು ಬಡವರು, ಶ್ರೀಮಂತರು ಎನ್ನದೇ ಎಲ್ಲರನ್ನೂ ಸಾಮಾನ್ಯವಾಗಿ ಕಾಡುತ್ತಿವೆ.  ಇಂದು ಇಲ್ಲವೆಂದರೆ ಮುಂದೆ ಬರಬಹುದು.  ಇಂದಿನ ಧಾವಂತ ಜೀವನದಲ್ಲಿ ಪ್ರತಿಯೊಂದು ಮನೆಯಲ್ಲೂ ಒಬ್ಬರು ಅಥವಾ ಇಬ್ಬರು ಬಿ.ಪಿ., ಶುಗರ್‌ ಮತ್ತು ಇತರೆ ಖಾಯಿಲೆಗಳಿಂದ ಬಳಲುತ್ತಿರುವವರನ್ನು ನೋಡಬಹುದು.  ಅನೇಕ ಆಸ್ಪತ್ರೆಗಳಿಗೆ ಅಲೆದರೂ, ಅನೇಕ ರೀತಿಯ ಔಷಧಿ ಪಡೆಯುತ್ತಿದ್ದರೂ ಗುಣಮುಖರಾಗದೇ ಬಳಲುತ್ತಿರುತ್ತಾರೆ.  ಯಾವುದೇ ದುಶ್ಚಟಗಳಿಲ್ಲದಿದ್ದರೂ, ಉತ್ತಮ ಆಹಾರ, ಉತ್ತಮ ಜೀವನಶೈಲಿ ಇದ್ದರೂ ರೋಗಮುಕ್ತರಾಗಿ ಜೀವಿಸಲು ಸಾಧ್ಯವಾಗುತ್ತಿಲ್ಲ.

ಹಾಗಿದ್ದಲ್ಲಿ ನಾವು ಎಲ್ಲಿ ತಪ್ಪುತ್ತಿದ್ದೇವೆ. ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು?  ನಮ್ಮ ಜೀವನಶೈಲಿ ಹೇಗಿರಬೇಕು? ಈಗಾಗಲೇ ಖಾಯಿಲೆ ಇದ್ದಲ್ಲಿ ಏನು ಮಾಡಬೇಕು?  ಯಾವುದೇ ಖಾಯಿಲೆ ಇಲ್ಲದಿದ್ದರೆ ಮುಂದೆ ಖಾಯಿಲೆಗಳು ಬರದಂತೆ ಏನು ಮಾಡಬೇಕು? ಜೀವನಪರ್ಯಂತ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯದಿಂದಿರಲು ಏನು ಮಾಡಬೇಕು?  ಇವು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಗಳು.  ನಿಮ್ಮ ಎಲ್ಲಾ ಪ್ರಶ್ನೆಗಳಿಗೂ, ಎಲ್ಲಾ ಖಾಯಿಲೆಗಳಿಗೂ ಸುಲಭ, ಸರಳ ಸರ್ವ ಶ್ರೇಷ್ಠ ಚಿಕಿತ್ಸೆ ಮತ್ತು ಔಷಧ ನಿಮಗೆ ತಿಳಿಸುತ್ತಿದ್ದೇನೆ.  ಇದರಿಂದ ನೀವು ಸಂಪೂರ್ಣ ರೋಗಮುಕ್ತರಾಗಲು ಸಾಧ್ಯವಿದೆ.  ಜೀವನದಲ್ಲಿ ಎಂದಿಗೂ ನೀವು ಆಸ್ಪತ್ರೆಗೆ ಅಲೆಯಬೇಕಿಲ್ಲ.  ಇದಕ್ಕಾಗಿ ನಿಮ್ಮ ಆಹಾರ ಪದ್ದತಿ ಮತ್ತು ಜೀವನಶೈಲಿಯನ್ನು ಸಂಪೂರ್ಣ ಬದಲಿಸಬೇಕು.

ದೃಢ ನಿರ್ಧಾರದ ಮೂಲಕ ಕಡ್ಡಾಯವಾಗಿ ಪಾಲಿಸಿದಲ್ಲಿ ಖಂಡಿತ ನೀವು ಕೆಲವೇ ದಿನಗಳಲ್ಲಿ ರೋಗಮುಕ್ತರಾಗುತ್ತೀರಿ ಮತ್ತು ಜೀವನದಲ್ಲಿ ಮುಂದೆ ನಿಮಗೆ ಯಾವುದೇ ಖಾಯಿಲೆ ಬರಲು ಸಾಧ್ಯವಿಲ್ಲ.    ಇದು 100ಕ್ಕೆ 100% ರಷ್ಟು ಸತ್ಯವೆಂದು ನಾನು ಧೈರ್ಯದಿಂದ ಹೇಳುತ್ತೇನೆ. ಬನ್ನಿ ನಿಮ್ಮಆಹಾರ ಪದ್ದತಿ ಮತ್ತು ಜೀವನಶೈಲಿ ಹೇಗಿರಬೇಕೆಂದು ನೋಡೋಣ.  ಅದಕ್ಕೂ ಮೊದಲು ನಿಮಗೊಂದು ವಿಷಯವನ್ನು ತಿಳಿಸುತ್ತೇನೆ.  ನಾನು ನಿಮಗೆ ಸರ್ವಶ್ರೇಷ್ಠ 6 ಆಹಾರ ಪದ್ದತಿ ಮತ್ತು ಜೀವನ ಶೈಲಿಯನ್ನು ತಿಳಿಸುತ್ತಿದ್ದೇನೆ.  ಇವುಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಯಾವುದನ್ನು ಬಿಡುವಂತಿಲ್ಲ.  ಅದಕ್ಕಾಗಿ ನೋಟ್‌ ಮಾಡಿಕೊಳ್ಳುವುದನ್ನು ಮರೆಯಬೇಡಿ.  ಎಲ್ಲವನ್ನೂ ಕಡ್ಡಾಯವಾಗಿ ಒಂದು ತಿಂಗಳು ಪಾಲಿಸಲೇಬೇಕು.  ತಿಂಗಳ ನಂತರ ಆಶ್ಚರ್ಯಕರ ಬದಲಾವಣೆ ನಿಮ್ಮಲ್ಲಿರುತ್ತದೆ.  ಇದು 100% ಸತ್ಯ.   ಇಂದಿನಿಂದಲೇ ಅನುಸರಿಸಲು ಪ್ರಾರಂಭಿಸಿ. ಸ್ವತಃ ಅನುಭವ ಪಡೆಯಿರಿ. ರೋಗಮುಕ್ತರಾಗಿ. ಆರೋಗ್ಯಕರ ಜೀವನ ನಡೆಸಿರಿ.

ಈಗ ನೀವು ಕಡ್ಡಾಯವಾಗಿ ಅನುಸರಿಸಬೇಕಾದ 6 ಆಹಾರ ಪದ್ಧತಿ ಮತ್ತು ಜೀವನ ಶೈಲಿಯ ಬಗ್ಗೆ ವಿವರವಾಗಿ ನೋಡೋಣ.  

  1. ಹಸಿವಾದಾಗ ಮಾತ್ರ ಊಟ ಮಾಡಬೇಕು.

ಭೂಮಿ ಮೇಲಿನ ಸಕಲ ಪ್ರಾಣಿ ಪಕ್ಷಿಗಳು ಹಸಿವಾದಾಗ ಮಾತ್ರ ಹೋರಾಟ ಮಾಡಿ ಆಹಾರ ಸೇವಿಸುತ್ತವೆ.  ಆಹಾರ ಸಿಗದಿದ್ದಲ್ಲಿ ಉಪವಾಸ ಮಾಡುತ್ತವೆ.  ಇದರಿಂದ ಅವುಗಳು ಅನೇಕ ರೋಗಗಳಿಂದ ಬಳಲುವುದಿಲ್ಲ.  ಪ್ರಾಣಿಗಳು ಖಾಯಿಲೆ ಬಂದಾಗ ಯಾವುದೇ ಆಹಾರವನ್ನು ಸೇವಿಸದೆ  ಉಪವಾಸವಿರುತ್ತವೆ.  ಇದರಿಂದ ಅವುಗಳು ಬೇಗನೇ ಗುಣಮುಖ ಹೊಂದುತ್ತವೆ.  ಆದರೆ, ಮನುಷ್ಯರಾದ ನಾವು ಹಸಿವೆ ಆದರೂ ಸರಿ, ಆಗದಿದ್ದರೂ ಸರಿ, ಖಾಯಿಲೆ ಇದ್ದರೂ ಸರಿ ಇಲ್ಲದಿದ್ದರೂ ಸರಿ ಪ್ರತಿ ದಿನ ಮೂರು ಹೊತ್ತು ಊಟ ಸಮಯಕ್ಕೆ ಸರಿಯಾಗಿ ಮಾಡುತ್ತಿದ್ದೇವೆ.  ಅಲ್ಲದೇ ಆಗಾಗ ಟೀ ಕಾಫಿ, ಇತರೆ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದೇವೆ.  ಇದರಿಂದಲೇ ಅನೇಕ ರೋಗಗಳು ನಮ್ಮನ್ನು ಬಾಧಿಸುತ್ತಿವೆ.

ಹಸಿವಾದಾಗ ಮಾತ್ರ ಆಹಾರ ಸೇವಿಸಿದಲ್ಲಿ ಆಹಾರ ಸಂಪೂರ್ಣ ಜೀರ್ಣವಾಗುತ್ತದೆ.  ಹಸಿವಾಗದೇ ಊಟ ಮಾಡುವುದರಿಂದ ಮಂದಾಗ್ನಿ ಉಂಟಾಗಿ ಆಹಾರ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ.  ಇದರಿಂದ ದೇಹದಲ್ಲಿ ಕಲ್ಮಷ ಉಂಟಾಗಿ ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ.   ಊಟದ ನಂತರ 4 ಗಂಟೆವರೆಗೆ ನೀರು ಬಿಟ್ಟು ಏನನ್ನೂ ಸೇವಿಸಬಾರದು.  ಟೀ ಕಾಫಿ, ಹಣ್ಣು ತರಕಾರಿ ಇತರೆ ಯಾವುದೇ ಆಹಾರವನ್ನೂ ಸೇವಿಸಬಾರದು.  ಎಷ್ಟು ಊಟ ಮಾಡಬೇಕು, ಎಷ್ಟು ನೀರು ಕುಡಿಯಬೇಕು ಎಂದು ಯೋಚಿಸಬೇಡಿ.  ಹಸಿವಾದಾಗ ಹಸಿವೆಗೆ ತಕ್ಕಂತೆ ಊಟ ಮಾಡಿ. ದಾಹಕ್ಕೆ ತಕ್ಕಂತೆ ನೀರು ಕುಡಿಯಿರಿ.  ಆದರೆ, ಯಾವುದೂ ಅತಿಯಾಗಬಾರದು. ಅತಿ ಕಡಿಮೆಯೂ ಆಗಬಾರದು.   ಇದನ್ನು ನೀವು ಪ್ರತಿದಿನ ಕಟ್ಟುನಿಟ್ಟಾಗಿ  ಕಡ್ಡಾಯವಾಗಿ ಪಾಲಿಸಬೇಕು.

ಇದರಿಂದ ನಿಮಗೆ ಅಜೀರ್ಣ, ಅಸಿಡಿಟಿ, ಗ್ಯಾಸ್ಟ್ರಿಕ್‌ ಉಂಟಾಗುವುದಿಲ್ಲ.  ದೇಹದಲ್ಲಿ ಕಲ್ಮಷ ಉಳಿಯುವುದಿಲ್ಲ.  4 ಗಂಟೆಗಳ ನಂತರ ನಿಮಗೆ ನಿಜವಾದ ಹಸಿವಿನ ಅನುಭವ ಆಗುತ್ತದೆ.  4 ಗಂಟೆಗಳ ನಂತರ ಹಸಿವೆಯಾಗದಿದ್ದರೆ ನಿಮ್ಮ ಊಟವನ್ನು 1 ರಿಂದ 2 ಗಂಟೆವರೆಗೆ ಮುಂದೂಡಿ.  ಊಟದ ಸಮಯವನ್ನು ನಿಗಧಿಪಡಿಸಬೇಡಿ.  ನೀವು ಉದ್ಯೋಗಿಗಳಾಗಿದ್ದಲ್ಲಿ ಮಾತ್ರ ಸಮಯಕ್ಕೆ ಸರಿಯಾಗಿ ಊಟ ಮಾಡಿ, ಆದರೆ, ಊಟಕ್ಕೆ 4 ಗಂಟೆಗಳ ಅಂತರ ಕಡ್ಡಾಯ.  ಮಧ್ಯದಲ್ಲಿ ಏನನ್ನೂ ಸೇವಿಸಬಾರದು.  ಟೀ ಕಾಫಿ ಇತರೆ ಯಾವುದನ್ನೂ ಸೇವಿಸಬೇಡಿ. ಹಸಿವೆಯಾದಾಗ ಮಾತ್ರ ಆಹಾರ ಸೇವಿಸಿ, ಆಗ ಯಾವುದೇ ಆಹಾರ ಸೇವಿಸಿದರೂ ರುಚಿ ಅದ್ಭುತವಾಗಿರುತ್ತದೆ.  ಆಹಾರ ಸಂಪೂರ್ಣ ದೇಹ ಸೇರುತ್ತದೆ.

  1. ಪ್ರತಿ ದಿನ ಒಂದು ಹೊತ್ತಿನ ಉಪವಾಸ ಮಾಡಬೇಕು.

ಸೃಷ್ಟಿಯಲ್ಲಿನ ಎಲ್ಲಾ ಜೀವಿಗಳು ಉಪವಾಸ ಮಾಡುತ್ತವೆ.  ಪ್ರಾಣಿಗಳು ಖಾಯಿಲೆ ಬಿದ್ದಾಗ ಉಪವಾಸ ಮಾಡುತ್ತವೆ.  ಕೆಲವೇ ದಿನಗಳಲ್ಲಿ ಆರೋಗ್ಯ ಪಡೆಯುತ್ತವೆ.  ಉಪವಾಸವು ಬಳಲಿಕೆಯನ್ನುಂಟು ಮಾಡುವುದಿಲ್ಲ.  ಉಪವಾಸವಿದ್ದಾಗ ನಿಮ್ಮ ಶರೀರದಲ್ಲಿ ವಿಶೇಷ ಶಕ್ತಿ ಇರುತ್ತದೆ.  ಮನಸ್ಸು ಪ್ರಸನ್ನವಾಗಿರುತ್ತದೆ.  ಉಪವಾಸವಿದ್ದಾಗ ನಿಮ್ಮ ಮನಸ್ಸು ಒತ್ತಡರಹಿತವಾಗಿರುತ್ತದೆ.  ಉಪವಾಸದಿಂದ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಲಾಭ ಪಡೆಯಲು ಸಾಧ್ಯವಿದೆ.  ಉಪವಾಸವು ಎಲ್ಲಾ ಖಾಯಿಲೆಗಳಿಗೂ ಒಂದು ಶ್ರೇಷ್ಠ ಚಿಕಿತ್ಸಾ ವಿಧಾನವಾಗಿದೆ.

 ಉಪವಾಸ ಮಾಡುವುದರಿಂದ ಅನೇಕ ರೋಗಗಳಿಂದ ಮುಕ್ತರಾಗಲು ಸಾಧ್ಯವಿದೆ.  ಉಪವಾಸವು ಶರೀರದ ಕಲ್ಮಷಗಳನ್ನು ಹೊರಹಾಕಲು ಅತೀ ಉತ್ತಮ ವಿಧಾನವಾಗಿದೆ.  ಉಪವಾಸವು ಕಿಡ್ನಿ, ಲಿವರ್‌, ಕರುಳುಗಳು, ಚರ್ಮ ಮತ್ತು ಶ್ವಾಸಕೋಶಗಳಲ್ಲಿರುವ ಕಲ್ಮಷಗಳನ್ನು ಸಂಪೂರ್ಣವಾಗಿ ಹೊರಹಾಕಿ ಸ್ವಾಸ್ಥ್ಯವಾಗಿರಿಸುತ್ತದೆ.  ಪ್ರತಿ ದಿನ ಒಂದು ಹೊತ್ತಿನ ಊಟದ ಉಪವಾಸ ಮಾಡಬೇಕು.  ಇದಕ್ಕಾಗಿ ನೀವು ಪ್ರತಿದಿನ ಒಂದು ಹೊತ್ತಿನ ಊಟ ಬಿಡಬೇಕಾಗುತ್ತದೆ. ಪ್ರತಿ ದಿನ ಮೂರು ಹೊತ್ತು ಊಟ ಮಾಡುತ್ತಿದ್ದಲ್ಲಿ ಬೆಳಿಗ್ಗೆ ಅಥವಾ ಮಧ್ಯಾಹ್ನದ ಒಂದು ಊಟವನ್ನು ಬಿಟ್ಟು, ಕೇವಲ ಹಣ್ಣುಗಳನ್ನು ಮಾತ್ರ ಸೇವಿಸಬೇಕು. ಹಣ್ಣುಗಳನ್ನು ಸೇವಿಸಲು ಸಾಧ್ಯವಾಗದಿದ್ದಲ್ಲಿ ನೀರನ್ನು ಮಾತ್ರ ಸೇವಿಸಿ ಉಪವಾಸ ಮಾಡಿ.

ನಿಮ್ಮ ಸುತ್ತಮುತ್ತಲೂ ಹೆಚ್ಚಾಗಿ ಸಿಗುವ ಯಾವುದೇ ಒಂದು ಅಥವಾ ಎರಡು ಬಗೆಯ ಹಣ್ಣುಗಳನ್ನು ಸೇವಿಸಿ. ಸಾಧ್ಯವಾದಷ್ಟು ಪಕ್ವವಾದ ಹಣ್ಣುಗಳನ್ನು ನೇರವಾಗಿ ಸೇವಿಸಿ, ಅಂದರೆ ಹಣ್ಣಿನೊಂದಿಗೆ ಸಕ್ಕರೆ, ಉಪ್ಪು ಇತರೆ ಏನನ್ನೂ ಸೇರಿಸದೇ ನೇರವಾಗಿ ಸೇವಿಸಿ.  ಹಣ್ಣುಗಳನ್ನು ಜ್ಯೂಸ್‌ ಮಾಡಿ ಸೇವಿಸಬೇಡಿ, ಕಚ್ಚಾ ಹಣ್ಣುಗಳನ್ನೇ ಸೇವಿಸಿ. ಪ್ರತಿ ದಿನ ಬೇರೆ ಬೇರೆ ಹಣ್ಣುಗಳನ್ನು ಸೇವಿಸಿ, ಇದರಿಂದ ಹಣ್ಣು ಸಂಪೂರ್ಣ ಜೀರ್ಣಗೊಂಡು ಎಲ್ಲಾ ಪೋಷಕಾಂಶಗಳು ದೊರೆಯುತ್ತವೆ.  ಒಣ ಹಣ್ಣುಗಳನ್ನು ಇಡೀ ರಾತ್ರಿ ಒಂದು ಗ್ಲಾಸ್‌ ನೀರಲ್ಲಿ ನೆನಸಿ, ಬೆಳಿಗ್ಗೆ ಅಥವಾ ಮಧ್ಯಾಹ್ನ ಉಪವಾಸದ ಸಮಯದಲ್ಲಿ ನೆನಸಿದ ಹಣ್ಣು ಮತ್ತು ನೀರನ್ನು ಸೇವಿಸಬಹುದು.

ಆದರೆ ಯಾವುದನ್ನು ಅತಿಯಾಗಿ ಸೇವಿಸಬೇಡಿ.  ನಿಮಗೆ ಸಮಯಕ್ಕೆ ಸರಿಯಾಗಿ ಹಸಿವೆ ಆಗಬೇಕು.  ನಿಮ್ಮ ತಟ್ಟೆಯಲ್ಲಿ ಆಹಾರ ಬಂದಾಗ ಅದನ್ನು ತಿನ್ನಬೇಕೆಂಬ ಆಸೆ, ಹಂಬಲ ಉಂಟಾಗಬೇಕು.  ಆಗ ಮಾತ್ರ ಊಟ ಮಾಡಿ.  ಆಗ   ಉಪವಾಸವು ಔಷಧದಂತೆ ಕೆಲಸ ಮಾಡುತ್ತದೆ.  ಉಪವಾಸದಿಂದ ಮಂದಾಗ್ನಿ ನಿವಾರಣೆಯಾಗಿ ಅನೇಕ ಜೀರ್ಣ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮಲಬದ್ಧತೆ ನಿವಾರಣೆಯಾಗುತ್ತದೆ. ಅಲ್ಲದೇ ಉಪವಾಸವು ದೇಹದ ಕೊಬ್ಬನ್ನು ಜೀರ್ಣಗೊಳಿಸಿ ತೂಕ ಇಳಿಕೆಗೆ ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯಕವಾಗುತ್ತದೆ. ಇಷ್ಟು ಮಾತ್ರವಲ್ಲ ಉಪವಾಸವು ಎಲ್ಲಾ ಖಾಯಿಲೆಗಳ ನಿಯಂತ್ರಣದಲ್ಲೂ ಔಷಧದಂತೆ ಕೆಲಸ ಮಾಡುತ್ತದೆ.  ತಡಬೇಡ ಇಂದಿನಿಂದಲೇ ಉಪವಾಸ ಮಾಡಿ ಸರ್ವರೋಗಮುಕ್ತಾರಾಗಿ.

  1. ಊಟದಲ್ಲಿ ತರಕಾರಿ ಸೊಪ್ಪುಗಳನ್ನು ಬಳಸಿ.

ಪ್ರಕೃತಿಯ ಅದ್ಭುತ ಔಷಧೀಯ ಆಹಾರವೇ ಹಣ್ಣು, ತರಕಾರಿ ಮತ್ತು ಸೊಪ್ಪುಗಳು.  ತರಕಾರಿಗಳು ಹಲವಾರು ರೀತಿಯ ಪೋಷಕಾಂಶಗಳನ್ನು, ಔಷಧೀಯ ಗುಣಗಳನ್ನು ಹೊಂದಿದ್ದು, ಅನೇಕ ರೀತಿಯ ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ.  ತರಕಾರಿಗಳ ಸೇವನೆಯಿಂದ ರಕ್ತನಾಳಗಳ ಶುದ್ದೀಕರಣವಾಗುತ್ತದೆ.  ಎಲ್ಲಾ ತರಕಾರಿ ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು.  ನಿಮ್ಮ ಮನೆಯ ಹತ್ತಿರ ಹೆಚ್ಚಾಗಿ ಸಿಗುವ ತರಕಾರಿ ಸೊಪ್ಪುಗಳನ್ನು ಬಳಸಿ.  ಹಸಿ ತರಕಾರಿಗಿಂತ ಬೇಯಿಸಿದ ತರಕಾರಿ ಉತ್ತಮ.  ಹಸಿ ತರಕಾರಿ ಸುಲಭವಾಗಿ ಜೀರ್ಣವಾಗುವುದಿಲ್ಲ.

ಹೊಟ್ಟೆನೋವು ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಕಾರಣವಾಗಬಹುದು. ಬೇಯಿಸಿದ ಆಹಾರವು ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಪೋಷಕಾಂಶಗಳನ್ನು ದೇಹವು ಸರಿಯಾಗಿ ಹೀರಿಕೊಳ್ಳುತ್ತದೆ.  ಆದ್ದರಿಂದ, ನಿಮ್ಮ ಎರಡು ಹೊತ್ತಿನ ಊಟಕ್ಕೆ ಬೇಯಿಸಿದ ತರಕಾರಿ ಸೊಪ್ಪಿನ ಪಲ್ಯಗಳನ್ನು ಹೆಚ್ಚಾಗಿ ಬಳಸಿ.  ನಿಮ್ಮ ತಟ್ಟೆಯಲ್ಲಿ ಒಂದು ಪ್ಲೇಟ್‌ ಅನ್ನವಿದ್ದರೆ, ಒಂದು ಪ್ಲೇಟ್‌ ಬೇಯಿಸಿದ ತರಕಾರಿ ಪಲ್ಯ ಇರಲಿ. ಅಂದರೆ, ನಿಮ್ಮ ಊಟದಲ್ಲಿ 50% ತರಕಾರಿ ಸೊಪ್ಪು ಇರಬೇಕು.  ಸಿರಿಧಾನ್ಯಗಳು ಕಠಿಣ ದೈಹಿಕ ಕೆಲಸ ಮಾಡುವವರಿಗೆ ಉತ್ತಮ.  ಸಿರಿಧಾನ್ಯಗಳು ಸುಲಭವಾಗಿ ಜೀರ್ಣವಾಗುವುದಿಲ್ಲ.  ಜೀರ್ಣವಾಗಲು ದೀರ್ಘ ಸಮಯ ತೆಗೆದುಕೊಳ್ಳುತ್ತದೆ.  ಅಲ್ಲದೇ ಸಿರಿಧಾನ್ಯಗಳಲ್ಲಿ ಕರಗದ ನಾರಿನಂಶವಿರುತ್ತದೆ.  ಇದು ಕೆಲವರಿಗೆ ಅನಾರೋಗ್ಯವನ್ನುಂಟು ಮಾಡುತ್ತದೆ.

 ಸಿರಿಧಾನ್ಯಗಳಿಂದ ಅನೇಕರಿಗೆ ಅಜೀರ್ಣ ಉಂಟಾಗುತ್ತದೆ. ಗ್ಯಾಸ್ಟ್ರಿಕ್‌ ಹೆಚ್ಚಾಗುತ್ತದೆ.    ಕಠಿಣ ಶ್ರಮಜೀವಿಗಳಿಗೆ ಸಿರಿಧಾನ್ಯಗಳು ಉತ್ತಮ.  ಆದ್ದರಿಂದ, ಸಿರಿಧಾನ್ಯಗಳನ್ನು ಅತೀ ಮಿತವಾಗಿ ಬಳಸಿ.  ನೆನಪಿರಲಿ, ನಿಮಗೆ ಖಾಯಿಲೆ ಇದ್ದಾಗ ಹುಳಿ, ಉಪ್ಪು, ಖಾರ, ಎಣ್ಣೆ, ಮಾಂಸ, ಧಾನ್ಯಗಳು, ಪ್ಯಾಕ್‌ ಮಾಡಿರುವ ಎಲ್ಲಾ ಆಹಾರ ಮತ್ತು ಪಾನೀಯಗಳು ಇವು ನಿಮ್ಮ ಪ್ರಥಮ ಶತೃಗಳು ಎಂದು ತಿಳಿಯಿರಿ.  ಇವುಗಳಿಂದ ದೂರ ಇರಿ.  ನಿಮಗೆ ಖಾಯಿಲೆ ಇದ್ದಾಗ ಮತ್ತು ಇಲ್ಲದಿದ್ದಾಗಲೂ ಹಣ್ಣು, ತರಕಾರಿ, ಸೊಪ್ಪುಗಳು ನಿಮ್ಮ ಮಿತ್ರರೆಂದು ತಿಳಿಯಿರಿ.  ಇವುಗಳನ್ನು ಹೆಚ್ಚಾಗಿ ಸೇವಿಸಿ.  ಇದು 100% ಸತ್ಯ.   ಇಂದಿನಿಂದಲೇ ಅನುಸರಿಸಲು ಪ್ರಾರಂಭಿಸಿ.  ಕೆಲವೇ ದಿನಗಳಲ್ಲಿ ಫಲಿತಾಂಶ ಸ್ವತಃ ಕಾಣುತ್ತೀರಿ.

  1. ಪ್ರತಿದಿನ 30 ನಿಮಿಷ ಸೂರ್ಯನ ಬಿಸಿಲಲ್ಲಿ ಕುಳಿತುಕೊಳ್ಳಬೇಕು.

ನಿಮಗೆ ಆಶ್ಚರ್ಯವಾಗಬಹುದು.  ಭೂಮಿಯಿಂದ ಸೂರ್ಯನು 15 ಕೋಟಿ ಕಿಲೋ ಮೀಟರ್‌ ದೂರದಲ್ಲಿದ್ದರೂ ಭೂಮಿ ಮೇಲಿನ ಸಕಲ ಜೀವ ಜಂತುಗಳ ವಿಕಾಸದಲ್ಲಿ ಸೂರ್ಯನ ಪ್ರಮುಖ ಪಾತ್ರವಿದೆ.  ದೇಶದ ಶೇ.10 ಜನರಿಗೆ ಮಾತ್ರ ಸೂರ್ಯನ ಕಿರಣಗಳಲ್ಲಿ ಅದ್ಭುತ ವಿಶೇಷ ಶಕ್ತಿ ಇರುವ ಬಗ್ಗೆ ಅರಿವಿದೆ.  ಭೂಮಿ ಮೇಲಿನ ಸಕಲ ಪ್ರಾಣಿ, ಪಕ್ಷಿ, ಗಿಡ ಮರಗಳಿಗೂ ಶಕ್ತಿಯ ಮೂಲ ಸೂರ್ಯ.  ಸಕಲ ಜೀವಿಗಳು ಸೂರ್ಯನ ಕಿರಣಗಳಿಂದ ಶಕ್ತಿ ಪಡೆಯುತ್ತವೆ. ಸೂರ್ಯನ ಕಿರಣಗಳು ಭೂಮಿಯ ಮೇಲೆ ಬಿದ್ದಂತೆ ಪ್ರಾಣಿ, ಪಕ್ಷಿಗಳು ಎಚ್ಚರಗೊಳ್ಳುತ್ತವೆ.

ಬೆಳಗಿನ ಸೂರ್ಯನ ಕಿರಣಗಳಲ್ಲಿ ಅದ್ಭುತ ಶಕ್ತಿ ಇದೆ.  ಎಲ್ಲಾ ಖಾಯಿಲೆಗಳನ್ನು ಗುಣಪಡಿಸುವ ವಿಶೇಷ ಶಕ್ತಿ ಸೂರ್ಯನ ಕಿರಣಗಳಲ್ಲಿದೆ. ಪ್ರತಿ ದಿನ ಸೂರ್ಯೋದವಾದ ಒಂದು ಗಂಟೆ ನಂತರ ಸೂರ್ಯನ ಎಳೆ ಬಿಸಿಲು ನಿಮ್ಮ ಶರೀರದ ಮೇಲೆ ಬೀಳುವಂತೆ ಮಾಡುವುದು.   ಬೆಳಗಿನ 7.00 ಗಂಟೆಯಿಂದ 12.00 ಗಂಟೆಯೊಳಗೆ ಸೂರ್ಯನ ಎಳೆ ಕಿರಣಗಳಿಗೆ ಮೈಯೊಡ್ಡಬೇಕು.   ಇದನ್ನು ಸೂರ್ಯಸ್ನಾನ ಎನ್ನುತ್ತಾರೆ.   ಸಾಧ್ಯವಾದರೆ ಮನೆ ಮಹಡಿ ಮೇಲೆ, ಮನೆಯ ಹೊರಗೆ, ಪಾರ್ಕ್‌ಗಳಲ್ಲಿ ನಿಮಗೆ ಅನುಕೂಲವಾದ ಸ್ಥಳದಲ್ಲಿ ತೆಳು ಅಲ್ಪ ಬಟ್ಟೆ   ಹಾಕಿಕೊಂಡು ಸೂರ್ಯನ ಕಿರಣಗಳಿಗೆ ಮೈಯೊಡ್ಡಬೇಕು. ಅಂಡರ್‌ವೇರ್‌ ಮಾತ್ರ ಹಾಕಿಕೊಂಡರೆ ಇನ್ನೂ ಉತ್ತಮ.  ಹೊಟ್ಟೆ, ಬೆನ್ನು, ಕೈ ಕಾಲುಗಳಿಗೆ ಬಿಸಿಲು ಬೀಲುವಂತೆ ನೋಡಿಕೊಳ್ಳಿ. ಸೂರ್ಯನ ಕಿರಣಗಳು ಮೈಮೇಲೆ ಬೀಳುವಂತೆ ನೇರವಾಗಿ ಕುಳಿತುಕೊಂಡು ಅಥವಾ ಮಲಗಿಕೊಂಡು ಸೂರ್ಯನ ಕಿರಣಗಳಿಗೆ ಮೈಯೊಡ್ಡಬೇಕು.

 ಮೂಳೆನೋವು, ತಲೆನೋವು ಹೃದಯರೋಗ, ಕ್ಯಾನ್ಸರ್‌, ಎಲ್ಲಾ ರೀತಿಯ ಚರ್ಮರೋಗ ನಿವಾರಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿದೆ. ಅಲ್ಲದೇ ಸೂರ್ಯನ ಕಿರಣಗಳು ಎಲ್ಲಾ ಖಾಯಿಲೆಗಳಲ್ಲೂ ಔಷಧದಂತೆ ಕೆಲಸ ಮಾಡುತ್ತದೆ.  ಬೆಳಗಿನ ಸೂರ್ಯನ ಬಿಸಿಲಿಗೆ ಮೈಯೊಡ್ಡಿ ನಿಲ್ಲುವುದರಿಂದ ನಮ್ಮ ದೇಹದಲ್ಲಿ ವಿಟಾಮಿನ್‌ ಡಿ ಉತ್ಪತ್ತಿಯಾಗುತ್ತದೆ.  ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಾಮಿನ್‌ ಡಿ ಬೇಕು. ನಮ್ಮ ದೇಶದ ಶೇ.90 ರಷ್ಟು ಜನರು ವಿಟಾಮಿನ್‌ ಡಿ ಮತ್ತು ಕ್ಯಾಲ್ಸಿಯಂ ಕೊರತೆಯಿಂದ ಅನೇಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.  ಶರೀರದ ಮೂಳೆಗಳನ್ನು ಸದೃಢವಾಗಿಡಲು ವಿಟಾಮಿನ್‌ ಡಿ ಬೇಕು.  ಕೀಲು ನೋವು ಒಳಗೊಂಡಂತೆ ಶರೀರದ ಎಲ್ಲಾ ನೋವುಗಳ ನಿವಾರಣೆ ಸೂರ್ಯನ ಕಿರಣಗಳಿಂದ ಸಾಧ್ಯವಿದೆ.  ಬೆಳಗಿನ ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದರಿಂದ ಚರ್ಮದಲ್ಲಿ ಅಧಿಕ ರಕ್ತ ಸಂಚಾರವಾಗಿ ಚರ್ಮ ಆರೋಗ್ಯಯುತವಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.  ಬಿ.ಪಿ. ಕಂಟ್ರೋಲ್‌ಗೆ ಬರುತ್ತದೆ.  ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ನಿದ್ರೆ ಸುಧಾರಿಸುತ್ತದೆ.  ಥೈರಾಯ್ಡ್‌ ಸಮಸ್ಯೆ ನಿವಾರಣೆಯಾಗುತ್ತದೆ. ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಸಹಾಯಕ.  ಅಸ್ತಮಾದಿಂದ ಗುಣಮುಖ ಹೊಂದುತ್ತೀರಿ.  ಸೂರ್ಯನ ಕಿರಣಗಳಿಂದ ಆರೋಗ್ಯ ಸುಧಾರಣೆಗೊಂಡು ಸದಾ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.  ಚಿರ ಯೌವನದ ಉತ್ಸಾಹವನ್ನು ತುಂಬುತ್ತದೆ.  ಪ್ರತೀ ದಿನ 30 ನಿಮಿಷ ಸೂರ್ಯನ ಬಿಸಿಲಿಗೆ ಕುಳಿತುಕೊಳ್ಳಬೇಕು.  ನಿಮ್ಮ ಕಣ್ಣುಗಳ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಸೂರ್ಯೋದಯವಾದ ತಕ್ಷಣವೇ ಬೆಳಗಿನ ಎಳೆ ಬಿಸಿಲಿನ ಸೂರ್ಯನನ್ನು ಬರಿಗಣ್ಣಿನಿಂದ ನೇರವಾಗಿ ನೋಡಲು ಪ್ರಯತ್ನಿಸಿ.  ಪ್ರಾರಂಭದಲ್ಲಿ 8 ಸೆಕೆಂಡ್‌ಗಳವರೆಗೆ ನೋಡಿ, ದಿನಗಳೆದಂತೆ ಸಮಯ ಹೆಚ್ಚಿಸುತ್ತಾ, 5 ನಿಮಿಷಗಳವರೆಗೆ ಸೂರ್ಯನನ್ನು ನೇರವಾಗಿ ನೋಡಲು ಪ್ರಯತ್ನಿಸಿ.

ಆದರೆ, ನೆನಪಿಡಿ. ಸೂರ್ಯನ ಕಿರಣಗಳು ಪ್ರಖರವಾಗಿದ್ದಲ್ಲಿ ಕಣ್ಣಿಗೆ ಅಪಾಯವಾಗಬಹುದು.   ಎಳೆ ಬಿಸಿಲಿನಲ್ಲಿ ಮಾತ್ರ ಪ್ರಯತ್ನಿಸಿ.   ಇದರಿಂದ ಕಣ್ಣಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.   ದೃಷ್ಟಿ ಮಂದವಾಗಿದ್ದಲ್ಲಿ ಕೆಲವೇ ದಿನಗಳಲ್ಲಿ ದೃಷ್ಟಿದೋಷ ನಿವಾರಣೆಯಾಗುತ್ತದೆ.  ಕಣ್ಣುಗಳು ಆರೋಗ್ಯಯುತವಾಗಿರುತ್ತವೆ.  ಜೀವನ ಪರ್ಯಂತ ಕನ್ನಡಕ ಧರಿಸುವ ಅವಶ್ಯಕತೆ ಬರುವುದಿಲ್ಲ.  ಸೂರ್ಯನ ಕಿರಣಗಳು ಕಣ್ಣುಗಳ ಮೂಲಕ ನೇರವಾಗಿ ಮೆದುಳಿಗೆ ತಲುಪಿ ಶರೀರದಲ್ಲಿ ಉತ್ಸಾಹವನ್ನು ತುಂಬುವ ಸಿರೊಟೋನಿನ್‌ ಮತ್ತು ಎಂಡಾರ್ಪಿನ್‌ ಹಾರ್ಮೋನು ಮೆದುಳಿನಲ್ಲಿ ಹೆಚ್ಚಳವಾಗುತ್ತದೆ.  ಮೆಲಟೋನಿನ್‌ ಸಕ್ರಿಯವಾಗುತ್ತದೆ.  ಆ ಮೂಲಕ ಸದಾ ಉತ್ಸಾಹ ನಿಮ್ಮಲಿರುತ್ತದೆ.

  1. ಪ್ರತಿದಿನ 20 ನಿಮಿಷ ವಾಕಿಂಗ್ ಮಾಡಬೇಕು.

ನೀವು ಜಿಮ್​ಗೆ ಹೋಗುವ ಅಗತ್ಯವಿಲ್ಲ.  ಭಾರವಾದ ತೂಕವನ್ನು ಎತ್ತುವ ಅಗತ್ಯವೂ ಇಲ್ಲ.  ವೇಗದ ನಡಿಗೆಯೂ ಬೇಡ.  ಪ್ರತಿದಿನ 20 ನಿಮಿಷಗಳ ನಿಧಾನ ನಡಿಗೆ ಸಾಕು.  ಈ ನಡಿಗೆ ನಿಮ್ಮ ಮನೆಯ ಮಹಡಿ ಮೇಲೆ ಅಥವಾ ಮನೆ ಮುಂದಿನ ರಸ್ತೆ ಮೇಲೆ, ಪಾರ್ಕ್‌ನಲ್ಲಿ ಮಾಡಬಹುದು.   ಎಲ್ಲಾ ವಯಸ್ಸಿನವರಿಗೂ ವಾಕಿಂಗ್ ಅತ್ಯುತ್ತಮ ವ್ಯಾಯಾಮ.  ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ವಾಕಿಂಗ್‌ ಮಾಡುವುದು ಉತ್ತಮ.  ಸಾಧ್ಯವಾದರೆ ಬರಿಗಾಲಲ್ಲಿ ನಡೆಯಿರಿ. ಬರಿಗಾಲಿನಲ್ಲಿ ನಡೆಯುವುದರಿಂದ ಕಾಲಿನಲ್ಲಿ ಅಕ್ಯುಪ್ರಶರ್ ಹೆಚ್ಚಿಸುತ್ತದೆ.   ಈ ನಡಿಗೆಯಿಂದ ನೀವು ಇಡೀ ದಿನ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ.

ರಾತ್ರಿ ಊಟದ ನಂತರದ ನಡಿಗೆ ಉತ್ತಮ ನಿದ್ರೆಗೆ ಸಹಾಯಕ.  ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.  ಊಟದ ನಂತರ ವಾಕ್ ಮಾಡುವುದು ನಿಮ್ಮ ದೇಹದಲ್ಲಿ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡುತ್ತದೆ.  ಊಟದ ಬಳಿಕ ವಾಕಿಂಗ್ ಮಾಡಿದರೆ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಇದರಿಂದ ಗ್ಯಾಸ್, ಆಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ.  ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕ. ಮೂಳೆ ಸ್ನಾಯು ಬಲಗೊಳ್ಳುತ್ತವೆ.  ಬಿ.ಪಿ. ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಹೃದಯದ ಆರೋಗ್ಯ ಸುಧಾರಿಸುತ್ತದೆ. ನಿದ್ರೆ ಸುಧಾರಿಸುತ್ತದೆ.  ಒತ್ತಡ ಕಡಿಮೆಯಾಗಿ, ಖಿನ್ನತೆ ತಡೆಯಲು ಸಹಾಯಮಾಡುತ್ತದೆ. ದಿನವಿಡೀ ಉಲ್ಲಾಸವಾಗಿರುವಂತೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.  ಮಲಬದ್ದತೆಯನ್ನು ತಡೆಯುತ್ತದೆ.  ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ.  ಆದ್ದರಿಂದ, ಪ್ರತಿ ದಿನ 20 ನಿಮಿಷ ತಪ್ಪದೇ ವಾಕಿಂಗ್‌ ಮಾಡಿ.

  1. ಪ್ರತಿ ದಿನ ಸೂರ್ಯೋದಯಕ್ಕಿಂತ ಮುಂಚೆ ಏಳಬೇಕು.

ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಪ್ರಕೃತಿಯಲ್ಲಿ ಅದ್ಭುತ ಶಕ್ತಿ ಇರುತ್ತದೆ.  ಇದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.    ಈ ಸಮಯದಲ್ಲಿ ಕೋಳಿ ಕೂಗುವುದನ್ನು ನೋಡಿರುತ್ತೀರಿ.  ಇದೇ ಸಮಯದಲ್ಲಿ ಪ್ರಾಣಿ, ಪಕ್ಷಿಗಳು ಎಚ್ಚರಗೊಳ್ಳುತ್ತವೆ. ಸೂರ್ಯಕಾಂತಿ ಗಿಡವನ್ನು ನೋಡಿ, ಸೂರ್ಯೋದಯಕ್ಕಿಂತ ಮುಂಚೆಯೇ ಸೂರ್ಯನ ದಿಕ್ಕಿಗೆ ಮುಖ ಮಾಡಿ ನಿಲ್ಲುತ್ತದೆ.  ಹಾಗೆಯೇ ಸಕಲ ಜೀವಿಗಳು ಸೂರ್ಯನ ಮೂಲಕ ಶಕ್ತಿ ಪಡೆಯುತ್ತವೆ.  ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯನ ಕಿರಣ ಮನೆ ಪ್ರವೇಶ ಶುಭ ಸಂಕೇತ, ಸುಖ ಶಾಂತಿ ಮನೆಯಲ್ಲಿರುತ್ತದೆ.  ಆಯುರ್ವೇದದ ಪ್ರಕಾರ ಮುಂಜಾನೆಯ ನಸುಕಿನ 3:00 ರಿಂದ 6:00 ರವರೆಗಿನ ಸಮಯ ಬ್ರಾಹ್ಮೀ ಮುಹೂರ್ತ.  ಈ ಸಮಯದಲ್ಲಿ ಬೀಸುವ ಗಾಳಿಗೆ ಅಮೃತದಂತಹ ಶಕ್ತಿಯಿರುತ್ತದೆ.  ಈ ಸಮಯದಲ್ಲಿ ವಾಯುಮಂಡಲ ಮಾಲಿನ್ಯದಿಂದ ವಿಮುಕ್ತವಾಗಿರುತ್ತದೆ. ಪ್ರಕೃತಿಯಲ್ಲಿ ವಿಶೇಷ ಶಕ್ತಿ ಸಂಚಯವಾಗಿರುತ್ತದೆ.  ಆಮ್ಲಜನಕದ ಪ್ರಮಾಣ ಶೇಕಡಾ 41ರಷ್ಟಿರುತ್ತದೆ. ಇದರಿಂದ ನಮ್ಮ ಶ್ವಾಸಕೋಶಗಳು ಶುದ್ಧಿಯಾಗುತ್ತದೆ.  ಶುದ್ಧವಾಯುವಿನಿಂದ ಮನಸ್ಸು ಹಾಗೂ ಬುದ್ಧಿ ಆರೋಗ್ಯವಾಗಿರುತ್ತವೆ.  ಸೂರ್ಯೋದಯಕ್ಕಿಂತ ಮುಂಚೆ ಏಳುವುದರಿಂದ ಇಡೀ ದಿನ ಚಟುವಟಿಕೆಯಿಂದಿರಲು ಸಾಧ್ಯ.  ಆದ್ದರಿಂದ, ಪ್ರತಿದಿನ ಬೆಳಿಗ್ಗೆ 6.00 ಗಂಟೆ ಮುಂಚೆ ಏಳುವುದನ್ನು ಕಡ್ಡಾಯವಾಗಿ ಪಾಲಿಸಿ.

suryakanth-s

ಸೂರ್ಯಕಾಂತ ಎಸ್.
ನಂ.261, 9ನೇ ಮುಖ್ಯರಸ್ತೆ,
ಶ್ರೀನಿವಾಸ ನಗರ,
ಬೆಂಗಳೂರು-560050.
ಮೊ: 9916022679

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!