ಮಳೆಗಾಲದಲ್ಲಿ ಸ್ವಾಸ್ಥ್ಯ ರಕ್ಷಣೆ

ಮಳೆಗಾಲದಲ್ಲಿ ಸ್ವಾಸ್ಥ್ಯ ರಕ್ಷಣೆ ತುಂಬಾ ಅಗತ್ಯ. ಸುಲಭವಾಗಿ ಜೀರ್ಣವಾಗುವುದರೊಂದಿಗೆ ಅಗತ್ಯ ದೇಹಬಲವನ್ನು ನೀಡುವ ಹಾಗೂ ಹೆಚ್ಚಾಗಿರುವ ದೋಷದ ಬಲವನ್ನು ಸಮತೋಲನಗೊಳಿಸುವಂತಹ ಪೌಷ್ಟಿಕ ಆಹಾರದ ಸೇವನೆ ಅತ್ಯಗತ್ಯ. ನೀರಿನ ಸೋಂಕು ಹಾಗೂ ಆಹಾರದ ಸೋಂಕು ಸಾಮಾನ್ಯವಾಗಿದ್ದು, ಹಲವು ಸಾಂಕ್ರಾಮಿಕ ರೋಗಗಳಾದ ಜಾಂಡೀಸ್, ಕಾಲರಾ, ಫ್ಲ್ಯೂ, ಶೀತ, ಉದರ ವಿಕಾರಗಳಾದಂತಹ ಅಸೆಡಿಟಿ, ವಾಂತಿ, ಭೇದಿ, ಗಂಟುನೋವು, ನಿಶಕ್ತಿ ಕಾಣಿಸಿಕೊಳ್ಳುತ್ತದೆ.

ಮಳೆಗಾಲದಲ್ಲಿ ಸ್ವಾಸ್ಥ್ಯ ರಕ್ಷಣೆ

ವರ್ಷ ಋತು ಅಥವಾ ಮಳೆಗಾಲದಲ್ಲಿ, ಪಶ್ಚಿಮ ದಿಕ್ಕಿನಿಂದ ಬೀಸುವ ಗಾಳಿಯು (ವಾಯುವು) ಆಕಾಶದಲ್ಲಿ ಮೋಡವನ್ನು ಮೂಡಿಸುವುದರೊಂದಿಗೆ ಮಿಂಚು ಸಹಿತ ಮಳೆಯನ್ನು ತರುತ್ತದೆ. ಬೇಸಿಗೆಯಲ್ಲಿ ಅಧಿಕವಾಗಿದ್ದ ಬಿಸಿಲು (ಉಷ್ಣಾಂಶವು) ಮಳೆಗಾಲದ ಪ್ರಾರಂಭದೊಂದಿಗೆ ದೇಹದ ಹಾಗೂ ಭೂಮಿಯ ಉಷ್ಣತೆಯನ್ನು ಕಡಿಮೆಗೊಳಿಸುತ್ತದೆ. ಮಳೆಯ ಹನಿಗಳು ವಾತಾವರಣದ ಉಷ್ಣತೆಯನ್ನು ಅಧಿಕ ಪ್ರಮಾಣದಲ್ಲಿ ಕಡಿಮೆಗೊಳಿಸಿ ಭೂಮಿಯಲ್ಲಿನ ಹಾಗೂ ವಾತಾವರಣದಲ್ಲಿರುವ ತೇವಾಂಶವನ್ನು ಕ್ರಮೇಣ ಹೆಚ್ಚಿಸುತ್ತದೆ. ಆದ್ದರಿಂದ ಭೂಮಿಯು ಹಚ್ಚ ಹಸಿರಿನ ಮರಗಳಿಂದ, ಕದಂಬ, ಬೇವು, ಕುಟಜ ಮುಂತಾದ ಗಿಡಮೂಲಿಕೆಗಳಿಂದ ಕೂಡಿರುತ್ತದೆ.

ನೀರಿನ ಹಾಗೂ ಆಹಾರದ ಸೋಂಕು ಸಾಮಾನ್ಯ:

ಬೇಸಿಗೆಯಲ್ಲಿನ ಅತಿಯಾದ ಉಷ್ಣತೆಯಿಂದಾಗಿ ಕಡಿಮೆಯಾಗಿದ್ದ ದೇಹದ ಸ್ನಿಗ್ದತೆ ಹಾಗೂ ಜೀರ್ಣಶಕ್ತಿಯು ಮಳೆಗಾಲದಲ್ಲಿ ಮತ್ತಷ್ಟು ಕಡಿಮೆಗೊಳ್ಳುತ್ತದೆ. ಅಲ್ಲದೇ ಮಳೆಗಾಲದ ಪ್ರಾರಂಭದಲ್ಲಿ ಭೂಮಿಗೆ ಬಿದ್ದ ಮಳೆನೀರು ಭೂಮಿಯ ಅತಿಯಾದ ಉಷ್ಣದಿಂದಾಗಿ ಹವೆಯಾಗಿ ಪರಿವರ್ತನೆಗೊಂಡು ಮತ್ತೆ ಪುನಃ ಮಳೆಯಾಗಿ ಸುರಿಯುತ್ತದೆ. ಆದ್ದರಿಂದ ಈ ಕಾಲದ ಮಳೆ ನೀರಿನಲ್ಲಿ ಅಮ್ಲಗುಣ ಹೆಚ್ಚಾಗಿರುತ್ತದೆ ಹಾಗೂ ಆಹಾರ ಪಚನ ಕ್ರಿಯೆಯು ಸರಿಯಾಗಿ ಆಗದೆ ಆಹಾರ ದ್ರವ್ಯವು ಅಮ್ಲತೆಯನ್ನು ಹೂಂದುತ್ತದೆ. ಇದರ ಪರಿಣಾಮವಾಗಿ ಅಜೀರ್ಣ, ಹುಳಿತೇಗು, ಉದರ ವಿಕಾರಗಳು ಉಂಟಾಗಬಹುದು. ಅಲ್ಪ ಜೀರ್ಣ ಶಕ್ತಿಯಿಂದಾಗಿ ವಾತ ದೋಷವು ಹೆಚ್ಚಾಗುವುದಲ್ಲದೆ ಪಿತ್ತ, ಕಫ ದೋಷವನ್ನು ದೇಹದಲ್ಲಿ ವೃದ್ದಿಸುತ್ತದೆ.

ಆದುದ್ದರಿಂದ ಮಳೆಗಾಲದಲ್ಲಿ ಮಾನವನ ಆರೋಗ್ಯದಲ್ಲಿ ಬಹಳಷ್ಟು ಏರೊಪೇರು ಉಂಟಾಗುತ್ತದೆ. ನೀರಿನ ಸೋಂಕು ಹಾಗೂ ಆಹಾರದ ಸೋಂಕು ಸಾಮಾನ್ಯವಾಗಿದ್ದು, ಹಲವು ಸಾಂಕ್ರಾಮಿಕ ರೋಗಗಳಾದ ಜಾಂಡೀಸ್, ಕಾಲರಾ, ಫ್ಲ್ಯೂ, ಶೀತ, ಉದರ ವಿಕಾರಗಳಾದಂತಹ ಅಸೆಡಿಟಿ, ವಾಂತಿ, ಭೇದಿ, ಗಂಟುನೋವು, ನಿಶಕ್ತಿ ಕಾಣಿಸಿಕೊಳ್ಳುತ್ತದೆ. ಆರೋಗ್ಯಕ್ಕೆ ವೈಜ್ನಾನಿಕವಾಗಿ ಅಗತ್ಯವಿರುವ ಹಿತಕರ ಆಹಾರದ್ರವ್ಯಗಳ ಸೇವನೆ ಹಾಗೂ ಕೆಲವು ನಿಯಮಗಳ ಪಾಲನೆಯೊಂದಿಗೆ ವರ್ಷ ಋತುವಿನಲ್ಲಿ ಸ್ವಾಸ್ಥ್ಯ ರಕ್ಷಣೆ ಮಾಡಿಕೊಳ್ಳಬಹುದು.

Also Read: ಮಳೆಗಾಲದಲ್ಲಿ ಕಾಡುವ 9 ಅಪಾಯಕಾರಿ ಕಾಯಿಲೆಗಳಿವು

ಉಪಯೋಗಿಸಬೇಕಾದ ಆಹಾರ ಪದಾರ್ಥಗಳು

ಮಳೆಗಾಲದಲ್ಲಿ ದೇಹದ ಬಲ ಹಾಗೂ ಜೀರ್ಣಶಕ್ತಿಯು ಕಡಿಮೆಯಾಗಿರುವುದರಿಂದ ಸುಲಭವಾಗಿ ಜೀರ್ಣವಾಗುವುದರೊಂದಿಗೆ ಅಗತ್ಯ ದೇಹಬಲವನ್ನು ನೀಡುವ ಹಾಗೂ ಹೆಚ್ಚಾಗಿರುವ ದೋಷದ ಬಲವನ್ನು ಸಮತೋಲನಗೊಳಿಸುವಂತಹ ಪೌಷ್ಟಿಕ ಆಹಾರದ ಸೇವನೆ ಅತ್ಯಗತ್ಯ. ಆಯುರ್ವೇದ ಶಾಸ್ತ್ರವು ವಿಶೇಷವಾಗಿ ಈ ಕಾಲದಲ್ಲಿ ಜೇನುತುಪ್ಪದ ಸೇವನೆಯನ್ನು ವಿವರಿಸುತ್ತದೆ.

1. ಮಳೆಯಿಂದಾಗಿ ನೀರು ಕಲುಷಿತಗೊಳ್ಳುವುದರಿಂದ ಚೆನ್ನಾಗಿ ಕುದಿಸಿ ಆರಿಸಿದ ನೀರನ್ನು ಸೇವಿಸುವುದು ಉತ್ತಮ.

2. ಕೆಂಪು ಅಕ್ಕಿ, ಗೋಧಿ, ಹುರಿದ ಕಾಳುಗಳು, ಹೆಸರುಕಾಳು, ಹುರುಳಿಕಾಳು, ಜೀರಿಗೆ, ಹಿಂಗು, ಮೆಣಸು, ದನಿಯಾ, ಜೇನುತುಪ್ಪ, ಹಾಲು, ಮಜ್ಜಿಗೆ, ಬಿಸಿನೀರು, ಲಘು ಆಹಾರಗಳ ಸೇವನೆಯಿಂದಾಗಿ ಜೀರ್ಣಶಕ್ತಿಯು ಹೆಚ್ಚುತ್ತದೆ.

ಹಣ್ಣು ತರಕಾರಿಗಳು

ಬೆಂಡೆಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಒಣಶುಂಠಿ, ಸುವರ್ಣಗಡ್ಡೆ, ಕುಂಬಳಕಾಯಿ, ದಾಳಿಂಬೆ, ನಿಂಬೇಹಣ್ಣು, ನೆಲ್ಲಿಕಾಯಿ.

ಪಾಲಿಸಬೇಕಾದ ನಿಯಮಗಳು

ನಿಯಮಿತ ವ್ಯಾಯಾಮ, ಶುದ್ದ ವಸ್ತ್ರಗಳ ಧಾರಣೆ, ಮಳೆಯಿಂದ ರಕ್ಷಣೆ, ನೈರ್ಮಲ್ಯತೆಯ ಪರಿಪಾಲನೆ ಉತ್ತಮ.

ನಿಷೇಧಿತ ಆಹಾರ ಪದಾರ್ಥಗಳು.

ಅತಿಯಾದ ಹುಳಿ ಹಾಗೂ ಖಾರ ಪದಾರ್ಥಗಳ ಸೇವನೆ, ಹೊಸ ಅಕ್ಕಿ, ಜೋಳ, ಕಡಲೆಕಾಳು, ಬಟಾಣಿ, ಬಸಳೆ ಸೊಪ್ಪು, ಹಾಗಲಕಾಯಿ, ಕ್ಯಾರೆಟ್, ಆಲೂಗಡ್ಡೆ, ಸೌತೇಕಾಯಿ, ತಂಪುಪಾನೀಯ, ಒಣಮೀನು, ಮೊಸರು, ಅತಿಯಾದ ಸಿಹಿ ಪದಾರ್ಥ ಹಾಗೂ ಕರಿದ, ಜಿಡ್ಡಿನ ಪದಾರ್ಥಗಳ ಸೇವನೆಯನ್ನು, ಹಗಲಿನಲ್ಲಿ ನಿದ್ರಿಸುವುದನ್ನು ನಿಷೇಧಿಸಬೇಕು.

Also Read: Combating monsoon ailments — the Ayurveda way

Dr-Mahesh-Sharma-

ಡಾ. ಮಹೇಶ್ ಶರ್ಮಾ ಎಂ
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
ಮೊಬೈಲ್: 99640 22654
ಇಮೇಲ್: drsharmamysr@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!