ಸ್ತನ ಕ್ಯಾನ್ಸರ್ – ಪರೀಕ್ಷೆ ಮತ್ತು ಚಿಕಿತ್ಸಾ ವಿಧಾನ

ಸ್ತನ ಕ್ಯಾನ್ಸರ್ ಹೆಂಗಸರಲ್ಲಿ ಸರ್ವೇ ಸಾಮಾನ್ಯ. ಕರ್ನಾಟಕದಲ್ಲಿ ಸುಮಾರು 45000 ಕ್ಯಾನ್ಸರ್ ರೋಗಿಗಳಲ್ಲಿ 8000 ಸ್ತನದ ಕ್ಯಾನ್ಸರ್ ಆಗಿದೆ. ಫೆಬ್ರವರಿ 4ರಂದು ಪ್ರತಿ ವರ್ಷ ವಿಶ್ವ ಸ್ತನಕ್ಯಾನ್ಸರ್‌ ದಿನಾಚರಣೆ ಆಯೋಜಿಸಲಾಗಿದೆ.

ಸ್ತನದ ಕ್ಯಾನ್ಸರಿನ ಕೆಲವು ಕಠಿಣ ಸತ್ಯಗಳು:ಸ್ತನ ಕ್ಯಾನ್ಸರ್ - ಪರೀಕ್ಷೆ ಮತ್ತು ಚಿಕಿತ್ಸಾ ವಿಧಾನ

  • ಈ ಕ್ಯಾನ್ಸರಿನಿಂದ ಸಾಯುವವರು ಎರಡನೇ ಸ್ಥಾನ ಪಡೆದಿದೆ
  • ಹೆಂಗಸರು ಈ ಕ್ಯಾನ್ಸರಿಗೆ ತುತ್ತಾಗುತ್ತಾರೆ.
  • ವಯಸ್ಸು ಜಾಸ್ತಿ ಆದಷ್ಟು ಈ ಕ್ಯಾನ್ಸರ್ ಸಂಭವ ಹೆಚ್ಚು
  • ಸ್ತನದ ಕ್ಯಾನ್ಸರ್ ವಂಶಪಾರಂಪರಿಕ ವಾಗಿ ಬರಬಹುದು

ಕೆಲವು ಅಪಾಯಕಾರಿ ಸಂದರ್ಭಗಳು ಈ ಕ್ಯಾನ್ಸರಿಗೆ ತುತ್ತಾಗುವಂತೆ ಮಾಡುತ್ತದೆ

  • ವಯಸ್ಸು
  • ವಂಶಪಾರಂಪರಿಕ ಅಥವಾ ಅನುವಂಶಿಕ
  • ವಿಕಿರಣಗಳಿಂದ ಕೆಟ್ಟ ಪ್ರಭಾವ
  • ಅತಿಯಾದ ಬೊಜ್ಜು
  • ಮುಟ್ಟು ಆರಂಭದಲ್ಲಿ ವಿಳಂಬ
  • ವಯಸ್ಸು ಮೀರಿ ಮುಟ್ಟು ನಿಲ್ಲುವಿಕೆ
  • ವಯಸ್ಸು ಮೀರಿ ಮೊದಲನೇ ಮಗುವಿನ ಜನನ
  • ಮಕ್ಕಳಾಗದಂತೆ ಇರಲು ಗರ್ಭ ನಿರೋಧಕಗಳ ಉಪಯೋಗ
  • ತಂಬಾಕು ಸೇವನೆ, ಬೀಡಿ , ಸಿಗರೇಟು ಸೇದುವುದು
  • ಮಧ್ಯಪಾನ

ಸ್ತನ್ಯಪಾನದಿಂದ ಮಹಿಳೆಯರು ದೂರ

  • ಸೌಂದರ್ಯದ ನೆಪವೊಡ್ಡಿ ಮಹಿಳೆಯರು ಮಕ್ಕಳಿಗೆ ಸ್ತನ್ಯಪಾನ ಮಾಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಅಲ್ಲದೆ, ಉದ್ಯೋಗದಲ್ಲಿ ಅತಿಯಾಗಿ ನಿರತರಾಗಿರುವ ಮಹಿಳೆಯರು ಮಕ್ಕಳಿಗೆ ಸ್ತನ್ಯಪಾನ ಮಾಡಿಸುವುದರಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳು ಹುಟ್ಟಿದ ಒಂದು ವರ್ಷದವರೆಗೆ ನಿರಂತರವಾಗಿ ಹಾಲೂಡಿಸುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು ಎಂಬುದು ತಿಳಿದಿದ್ದರೂ ಮಹಿಳೆಯರು ಹಿಂಜರಿಯುತ್ತಿರುವುದು ಆತಂಕಾರಿ ಸಂಗತಿ. ಅತಿಯಾದ ನಗರೀಕರಣ, ಅವ್ಯವಸ್ಥಿತ ಜೀವನಶೈಲಿ ,ಆಹಾರ ಸೇವನೆಯಲ್ಲಿ ಮಾರ್ಪಾಡು ಇವೆ ಮೊದಲಾದವು ಕಾರಣವಾಗಿವೆ.

ಸ್ತನದ ಕ್ಯಾನ್ಸರಿನ ಲಕ್ಷಣಗಳು

  • ಸ್ತನಗಳಲ್ಲಿ ಯಾವುದೇ ವಿಧವಾದ ಗಂಟುಗಳು, ಬೆರಳಾಡಿಸಿದರೆ ಗಮನಕ್ಕೆ ಬರುವ ಗಂಟುಗಳುcancerday
  • ಸ್ತನದ ತೊಟ್ಟಿನಲ್ಲಿ ಯಾವುದೇ ವಿಧವಾದ ಸೋರುವಿಕೆ ಅಥವಾ ರಕ್ತ ಸ್ರಾವ
  • ಸ್ತನದ ಚರ್ಮದ ಬಣ್ಣದಲ್ಲಿ ಬದಲಾವಣೆ
  • ಕಂಕುಳಲ್ಲಿ ಗಂಟುಗಳು

ಸ್ತನದ ಕ್ಯಾನ್ಸರ್ ಕಂಡು ಹಿಡಿಯುವ ವಿಧಾನ

  • ಮಹಿಳೆಯರಲ್ಲಿ ಕ್ಯಾನ್ಸರ್ ಇದೆಯೇ ಎಂದು ವೈದ್ಯರು ಕೈಯಲ್ಲಿ ಪರೀಕ್ಷಿಸಿ ನೋಡುತ್ತಾರೆ.
  • ಅಲ್ಟ್ರಾಸೌಂಡ್ ಎಂಬ ಪರೀಕ್ಷೆ ಮಾಡಬೇಕು ಗಂಟುಗಳಲ್ಲಿ ಸೂಜಿ ಹಾಕಿ ಅದರಿಂದ ಬರುವ ಉತ್ಪನ್ನವನ್ನು ಲ್ಯಾಬ್‍ಗೆ ಕಳುಹಿಸಿ ಪರೀಕ್ಷಿಸುತ್ತಾರೆ
  • ಮಮೊಗ್ರಮ್ ಎಂಬ ಎಕ್ಸ್ರಯ್ ಯನ್ನು ಮಾಡಿಸಬೇಕು.
  • ಮಹಿಳೆಯರು ಮನೆಯಲ್ಲಿಯೇ ಆಗಾಗ ಸ್ತನದ ಸ್ವಯಂ ಪರೀಕ್ಷೆಮಾಡಿಕೊಂಡರೆ ಏನಾದರು ಗಂಟು ಇದ್ದಲ್ಲಿ ಶೀಘ್ರವೇ ವೈದ್ಯರ ಹತ್ತಿರ ಹೋಗಿ ಖಚಿತ ಗೊಳ್ಳಿಸ ಬಹುದು.
  • ಮಕ್ಕಳಿಗೆ ಮಹಿಳೆಯರು ಸ್ತನ್ಯಪಾನ ಮಾಡಿಸಬೇಕು,

ಸ್ತನದ ಸ್ವಯಂ ಪರೀಕ್ಷಾ ವಿಧಾನ

  • ಸ್ನಾನ ಮಾಡುವಾಗ ಸ್ತನ ಗಳನ್ನು ಪರೀಕ್ಷಿಸಿ ಕೊಳ್ಳಬೇಕು.
  • ಕನ್ನಡಿಯ ಮುಂದೆ ನಿಂತು ಸ್ತನಗಳನ್ನು ಪರೀಕ್ಷಿಸಿಕೊಳ್ಳಿ. ಕಂಕುಳಲ್ಲಿ ಏನಾದರು ಗಂಟು ಇದೆಯೇ ಎಂದು ನೋಡಿಕೊಳ್ಳಬೇಕು.
  • ನಿಂತು ಕೈಯಿಂದ ಸ್ತನಗಳ ಮೇಲೆ ಕೈ ಆಡಿಸಿ, ವೃತ್ತಾಕಾರವಾಗಿ ಕೈ ಆಡಿಸಿ ಏನಾದರು ಗಂಟು ಸಿಕ್ಕಿದರೆ ತಕ್ಷಣ ವೈದ್ಯರ ಹತ್ತಿರ ಹೋಗಿ ನೋಡಿಸಿಕೊಳ್ಳಿ
  • ಸ್ತನದ ತೊಟ್ಟಿನಿಂದ ಏನಾದರು ಸ್ರಾವ ಇದೆಯೇ ಎಂದು ನೋಡಬೇಕು. ಹಾಗಿದ್ದಲ್ಲಿ ವೈದ್ಯರ ಹತ್ತಿರ ತೋರಿಸಬೇಕು.
  • ಸ್ತನದ ಕ್ಯಾನ್ಸರ್ ಆರಂಭದಲ್ಲಿ ಪತ್ತೆ ಹಚ್ಚಿದರೆ ಸಂಪೂರ್ಣವಾಗಿ ಗುಣಪಡಿಸಬಹುದು.

ಚಿಕಿತ್ಸಾ ವಿಧಾನ

  • ಸರ್ಜರಿ ಅಥವಾ ಶಸ್ತ್ರ ಚಿಕಿತ್ಸೆ. ಇದರಲ್ಲಿ ಒಮ್ಮೆ ಗಂಟನ್ನು ಮಾತ್ರ ತೆಗೆಯುತ್ತಾರೆ. ದೊಡ್ಡ ಗಾತ್ರದಲ್ಲಿದ್ದರೆ ಸ್ಥಾನವನ್ನೇ ತೆಗೆದು ಹಾಕುತ್ತಾರೆ. ಜೊತೆಯಲ್ಲಿ ಕಂಕುಳಲ್ಲಿ ಗಂಟುಗಳನ್ನು ಸಹ ತೆಗೆದು ಹಾಕುವರು. ತದ ನಂತರ ವಿಕಿರಣ ಚಿಕಿತ್ಸೆ ಮತ್ತು ಹಾರ್ಮೋನ್ ಥೆರಪಿ ಹಾಗು ಕಿಮೊತೆರಪಿ ಕೊಡುತ್ತಾರೆ.
  • ಜೀವನ ಶೈಲಿಯಲ್ಲಿ ಮಾರ್ಪಾಡು.
  • ಮಧ್ಯಪಾನ ನಿಷೇದ.
  • ತೂಕವನ್ನು ಕಡಿಮೆ ಮಾಡುವುದು. ಬೊಜ್ಜು ಕರಗಿಸುವುದು.
  • ಸೊಪ್ಪು ಮಾತು ತರಕಾರಿಗಳ ಯಥೇಚ್ಛ ಸೇವನೆ.
  • ಕೀಟನಾಶಕಗಳಿಂದ ದೂರವಿರುವುದು.
  • ನಮ್ಮ ಎದೆಯ ಭಾಗದಲ್ಲಿ ಎರಡು ಸ್ತನಗಳಿವೆ. ಸ್ತನಗಳು ಲೋಬ್ ಮಾತು ಲೋಬಲ್ಸ್ ಇಂದ ತುಂಬಿದೆ. ಇದಕ್ಕೆ ಹಾಲೆ ಮಾತು ಸಣ್ಣ ಹಾಲೆ ಅನ್ನುವರು. ಇವುಗಳಿಂದ ಹಾಲು ಉತ್ಪತ್ತಿಯಾದ ನಂತರ ನಾಳದ ಮೂಲಕ ತೊಟ್ಟುಗಳಿಗೆ ಬರುವುದು. ಸ್ತನದ ತೊಟ್ಟು ಮಧ್ಯ ಭಾಗದಲ್ಲಿ ಚರ್ಮ ಕಂಡು ಬಣ್ಣವಾಗಿರುತ್ತದೆ. ಸಣ್ಣ ಹಾಲೆಗಳ ಮತ್ತು ನಾಳಗಳ ಮಧ್ಯೆ ಕೊಬ್ಬು ಇರುತ್ತದೆ.

ಡಾ. ಆರ್.ಎಂ. ಲಲಿತ 68, 201, ಆರ್‍ವಿ ಅಪಾರ್ಟ್‍ಮೆಂಟ್ಸ್, 15ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, ಮಲ್ಲೇಶ್ವರಂ, ಬೆಂಗಳೂರು-55 Email: drrmlalitha@gmail.com

ಡಾ. ಆರ್.ಎಂ. ಲಲಿತ
68, 201, ಆರ್‍ವಿ ಅಪಾರ್ಟ್‍ಮೆಂಟ್ಸ್, 15ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, ಮಲ್ಲೇಶ್ವರಂ, ಬೆಂಗಳೂರು-55
Email: drrmlalitha@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!